ಐಷಾರಾಮಿ ಕಾರು ಖರೀದಿಸಿದ 'ಪಂಚಾಯತ್' ಖ್ಯಾತಿಯ ನಟ ಜಿತೇಂದ್ರ ಕುಮಾರ್
ಸಿನಿಮಾ ರಂಗದ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍ಗಳಿವೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಸೆಲಬ್ರಿಟಿಗಳು ಪೈಪೋಟಿಗೆ ಬಿದ್ದ ರೀತಿಯಲ್ಲಿ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತಿ ದುಬಾರಿ ಕಾರುಗಳನ್ನು ಖರೀದಿಸುತ್ತಾರೆ.

ಇತ್ತೀಚೆಗೆ ಪಂಚಾಯತ್ ವೆಬ್ ಸೀರಿಸ್ ಖ್ಯಾತಿಯ ನಟ ಜಿತೇಂದ್ರ ಕುಮಾರ್ ಅಕಾ 'ಜೀತು ಭಯ್ಯಾ' ಹೊಚ್ಚ ಹೊಸ ಮಿನಿ ಕಂಟ್ರಿಮ್ಯಾನ್ ಖರೀದಿಸಿದ್ದಾರೆ. ಈ ಮಿನಿ ಕಂಟ್ರಿಮ್ಯಾನ್ ಕಾರಿನ ಬೆಲೆಯು ಭಾರತದಲ್ಲಿ ಎಕ್ಸ್ ಶೋರೂಂ ಪ್ರಕಾರ ರೂ. 42 ಲಕ್ಷದಿಂದ ಪ್ರಾರಂಭವಾಗುತ್ತವೆ. ನಟ ಖರೀದಿಸಿದ ಮಿನಿ ಕಂಟ್ರಿಮ್ಯಾನ್ ಅನ್ನು ವೈಟ್ ಸಿಲ್ವರ್ ಬಣ್ಣವನ್ನು ಹೊಂದಿದೆ. ನಟ ಜಿತೇಂದ್ರ ಕುಮಾರ್ ಅವರು ಈ ಕಾರನ್ನು ಮಿನಿ ಮತ್ತು ಬಿಎಂಡಬ್ಲ್ಯುನ ಡೀಲರ್‌ಶಿಪ್ ಇನ್ಫಿನಿಟಿ ಕಾರ್ಸ್‌ನಿಂದ ಖರೀದಿಸಿದ್ದಾರೆ.

ಪಂಚಾಯತ್ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ ವೆಬ್ ಸೀರಿಸ್ ಆಗಿದೆ. ನಟ ಜಿತೇಂದ್ರ ಕುಮಾರ್ ಅವರು ನೆಟ್‌ಫ್ಲಿಕ್ಸ್ ಮುಂಬರುವ ಚಲನಚಿತ್ರ ಜಾದುಗರ್ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಮಿನಿ ಕಂಟ್ರಿಮ್ಯಾನ್ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರನ್ನು ಎಸ್‌ಎವಿ (ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್) ಎಂದು ಕರೆಯಲಾಗುತ್ತದೆ. ಈ ಮಿಮಿನಿ ಕಂಟ್ರಿಮ್ಯಾನ್ ನಿ ಕಂಟ್ರಿಮ್ಯಾನ್ ಕೂಪರ್ ಎಸ್ ಮತ್ತು ಕಂಟ್ರಿಮ್ಯಾನ್ ಕೂಪರ್ ಎಸ್ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ಎಂಬ ಎರಡೂ ವೆರಿಯೆಂಟ್ ಗಳಲ್ಲಿ ಲಭ್ಯವಿರುತ್ತದೆ.

ಹೊಸ ಮಿನಿ ಕಂಟ್ರಿಮ್ಯಾನ್ ಒಂದೇ ರೀತಿಯ ವಿನ್ಯಾಸ ಮತ್ತು ಸಿಲೂಯೆಟ್ ಅನ್ನು ಸಾಗಿಸುವುದರ ಜೊತೆಗೆ ಹಲವಾರು ರಿಫ್ರೆಶ್ ಸ್ಟೈಲಿಂಗ್ ನವೀಕರಣಗಳನ್ನು ಕೂಡ ಪಡೆದುಕೊಂಡಿದೆ. ಕಂಟ್ರಿಮ್ಯಾನ್‌ನಲ್ಲಿನ ಹೊಸ ಸ್ಟೈಲಿಂಗ್ ವೈಶಿಷ್ಟ್ಯಗಳು ಯೂನಿಯನ್ ಜ್ಯಾಕ್ ವಿನ್ಯಾಸದೊಂದಿಗೆ ನವೀಕರಿಸಿದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳು, ಹೊಸ ರೇಡಿಯೇಟರ್ ಗ್ರಿಲ್ ಮತ್ತು ವ್ಯತಿರಿಕ್ತ ರೂಫ್ ಅನ್ನು ಒಳಗೊಂಡಿವೆ.

ಕೂಪರ್ ಎಸ್ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ವೆರಿಯೆಂಟ್ ನಲ್ಲಿ 18 ಇಂಚಿನ ಅಲಾಯ್ ವ್ಹೀಲ್ ಗಳು ರನ್-ಫ್ಲಾಟ್ ಟೈರ್ ಮತ್ತು ಹೆಚ್ಚುವರಿ ಏರೋಡೈನಾಮಿಕ್ ಅನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿದೆ. ಮಿನಿ ಕಂಟ್ರಿಮ್ಯಾನ್ ಕೂಪರ್ ಎಸ್ ಮಾದರಿಯಲ್ಲಿ ಒಳಭಾಗದಲ್ಲಿ ಕಾರ್ಬನ್ ಬ್ಲ್ಯಾಕ್ ಲೆಥೆರೆಟ್ ಅಪ್ಹೋಲ್ಸ್ಟರಿಯೊಂದಿಗೆ ಬರುತ್ತದೆ,

ಆದರೆ ಸರಣಿಯಲ್ಲಿ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ಟ್ರಿಮ್ ಸಿಲ್ವರ್ ಟ್ರಿಮ್ ಜೊತೆಗೆ ಪ್ರೀಮಿಯಂ ಲೆದರ್ ಯ್ಕೆಯನ್ನು ಒಳಗೊಂಡಿದೆ. ಹೊಸ ಮಿನಿ ಕಂಟ್ರಿಮ್ಯಾನ್ ಕಾರಿನಲ್ಲಿ ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ರ್ಮನ್ ಕಾರ್ಡನ್ ಆಡಿಯೊ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೆಡ್ಸ್-ಅಪ್ ಡಿಸ್ ಪ್ಲೇ, ಆಂಬಿಯೆಂಟ್ ಲೈಟಿಂಗ್ ಮತ್ತು ಇನ್ನೂ ಹಲವು ಫೀಚರ್ ಗಳನ್ನು ಒಳಗೊಂಡಿವೆ.

ಈ ಮಿನಿ ಕಂಟ್ರಿಮ್ಯಾನ್ ಕಾರಿನ ಎರಡೂ ವೆರಿಯೆಂಟ್ ಗಳಲ್ಲಿ ಒಂದೇ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 189 ಬಿಹೆಚ್‍ಪಿ ಪವರ್ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ವೆರಿಯೆಂಘ್ ಪ್ಯಾಡಲ್ ಶಿಫ್ಟರ್ ಅನ್ನು ಹೊಂದಿದೆ.

ಈ ಐಷಾರಾಮಿ ಮಿನಿ ಕಂಟ್ರಿಮ್ಯಾನ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಮಿನಿ ಕಂಟ್ರಿಮ್ಯಾನ್ ಹಲವಾರು ಫೀಚರ್ ಗಳು ಮತ್ತು ಹಲವಾರು ತಂತ್ರಜ್ಙಾನಗಳನ್ನು ಒಳಗೊಂಡಿದೆ. ಇದು ತನ್ನ ವಿಭಾಗದಲ್ಲಿ ಅತ್ಯಂತ ಆಕರ್ಷಕ ಆಯ್ಕೆಯಾಗಿದೆ.

ಇನ್ನು ಮಿನಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಕೂಪರ್ ಎಸ್‌ಇ ಎಂಬ ಹೊಸ ಎಲೆಕ್ಟ್ರಿಕ್ ಕಾರನ್ನು 2022ರ ಫೆಬ್ರವರಿ ತಿಂಗಳ ಕೊನೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಮಿನಿ ಇಂಡಿಯಾ ಕಂಪನಿಯು ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿಗಾಗಿ ಬುಕ್ಕಿಂಗ್ ಅನ್ನು ಮತ್ತೊಮ್ಮೆ ಪ್ರಾರಂಭಿಸಿದೆ. ಮಿನಿ ಇಂಡಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ 40 ಯುನಿಟ್‌ಗಳಿಗೆ ಬುಕ್ಕಿಂಗ್‌ಗಳು ಆನ್‌ಲೈನ್‌ನಲ್ಲಿ ಪುನಾರರಂಭಿಸಿದೆ. ಈ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.50.90 ಲಕ್ಷವಾಗಿದೆ.

ಈ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರನ್ನು ಭಾರತಕ್ಕೆ ಸಿಬಿಯು ಮಾದರಿಯಾಗಿ ಭಾರತಕ್ಕೆ ತರಲಾಗಿದೆ. ಹೊಸ ಮಿನಿ ಕೂಪರ್ ಎಸ್‌ಇ ಬಿಎಂಡಬ್ಲ್ಯು ಗ್ರೂಪ್‌ನಿಂದ ಭಾರತದಲ್ಲಿ ಮಾರಾಟವಾಗುವ ಮೊದಲ ಆಲ್-ಎಲೆಕ್ಟ್ರಿಕ್ ಮಾದರಿಯಾಗಿದೆ. ಕೂಪರ್ ಎಸ್‌ಇ 3-ಡೋರಿನ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ. ಈ ಹೊಸ ಮಿನಿ ಎಲೆಕ್ಟ್ರಿಕ್ ಕಾರು ಒಂದೇ ರೂಪಾಂತರದಲ್ಲಿ ಲಭ್ಯವಿರುತ್ತದೆ. ಈ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು 32.6 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದರ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಎಲೆಕ್ಟ್ರಿಕ್ ಪವರ್‌ಟ್ರೇನ್ 181 ಬಿಹೆಚ್‍ಪಿ ಪವರ್ ಮತ್ತು 270 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರು 7.3 ಸೆಕೆಂಡುಗಳಲ್ಲಿ 0-100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ನಟ ಜಿತೇಂದ್ರ ಕುಮಾರ್ ಅವರು ಖರೀದಿಸಿದ ಮಿನಿ ಕಂಟ್ರಿಮ್ಯಾನ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಈ ಅಷಾರಾಮಿ ಮಿನಿ ಕಂಟ್ರಿಮ್ಯಾನ್ ಕಾರಿನಲ್ಲಿ ಅತ್ಯಾಧುನಿಕ ಫೀಚರ್ ಗಳು ಮತ್ತು ಹಲವಾರು ತಂತ್ರಜ್ಙಾನಗಳನ್ನು ಒಳಗೊಂಡಿದೆ. ಇದು ತನ್ನ ವಿಭಾಗದಲ್ಲಿ ಅತ್ಯಂತ ಆಕರ್ಷಕ ಆಯ್ಕೆಯಾಗಿದೆ.


Click it and Unblock the Notifications