ಕದ್ದ ಕಾರು ಖರೀದಿಸುವವರೇ ಎಚ್ಚರ, ನಿಮ್ಮ ಮನೆ ಮೇಲೂ ನಡೆಯಬಹುದು ಪೊಲೀಸರ ದಾಳಿ

ಚಂಡೀಗಢ ಪೊಲೀಸರು ಬಹು ದೊಡ್ಡ ಕಾರುಗಳ್ಳರ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಈ ದಂಧೆ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳಿಂದ ಪೊಲೀಸರು ಒಟ್ಟು 18 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರುಗಳ ಒಟ್ಟು ಮೌಲ್ಯ ಸುಮಾರು ರೂ.3 ಕೋಟಿ ಎಂದು ಹೇಳಲಾಗಿದೆ. ಈ ಗ್ಯಾಂಗ್ ಕದ್ದ ಕಾರುಗಳನ್ನು ದೇಶದ ವಿವಿಧ ನಗರಗಳಲ್ಲಿ ಮಾರಾಟ ಮಾಡುತ್ತಿತ್ತು.

ಕದ್ದ ಕಾರು ಖರೀದಿಸುವವರೇ ಎಚ್ಚರ, ನಿಮ್ಮ ಮನೆ ಮೇಲೂ ನಡೆಯಬಹುದು ಪೊಲೀಸರ ದಾಳಿ

ಚಂಡೀಗಢ ಪೊಲೀಸರು ಕೆಲವು ದಿನಗಳ ಹಿಂದೆ 39 ವರ್ಷದ ರಮೇಶ್ ಎಂಬಾತನನ್ನು ಬಂಧಿಸಿ ಹ್ಯುಂಡೈ ಕ್ರೆಟಾ ಕಾರನ್ನು ವಶಪಡಿಸಿಕೊಂಡಿದ್ದರು. ಈ ಕಾರಿನ ಎಂಜಿನ್ ಹಾಗೂ ಚಾಸಿಸ್ ನಂಬರ್‌ಗಳನ್ನು ಬದಲಿಸಿರುವುದು ತನಿಖೆಯಿಂದ ತಿಳಿದುಬಂದಿತ್ತು. ಈತ ಕಾರು ಕಳ್ಳತನದ ದಂಧೆ ನಡೆಸುತ್ತಿರುವ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿತ್ತು.

ಕದ್ದ ಕಾರು ಖರೀದಿಸುವವರೇ ಎಚ್ಚರ, ನಿಮ್ಮ ಮನೆ ಮೇಲೂ ನಡೆಯಬಹುದು ಪೊಲೀಸರ ದಾಳಿ

ತನಿಖೆಯಲ್ಲಿ ರಮೇಶ್ ತನ್ನ ಸಹಚರ ಅಮಿತ್ ಎಂಬಾತನ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ಅಮಿತ್‌ನನ್ನು ಬಂಧಿಸಿದ್ದಾರೆ. ಇಬ್ಬರೂ ಉತ್ತರ ಪ್ರದೇಶದ ಮೀರತ್‌ನಲ್ಲಿ ಕದ್ದ ಕಾರುಗಳನ್ನು ಮಾರಾಟ ಮಾಡುತ್ತಿದ್ದ ವಿಷಯ ತನಿಖೆಯಿಂದ ತಿಳಿದುಬಂದಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕದ್ದ ಕಾರು ಖರೀದಿಸುವವರೇ ಎಚ್ಚರ, ನಿಮ್ಮ ಮನೆ ಮೇಲೂ ನಡೆಯಬಹುದು ಪೊಲೀಸರ ದಾಳಿ

ವಾಹನದ ರಿಜಿಸ್ಟ್ರೇಷನ್ ಹಾಗೂ ಚಾಸಿಸ್ ನಂಬರ್‌ಗಳನ್ನು ಬದಲಿಸುವ ಮೂಲಕ ಇಬ್ಬರೂ ಹರಿಯಾಣ ಆರ್‌ಟಿಒದಿಂದ ಹೊಸ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಪಡೆಯುತ್ತಿದ್ದರು. ನಂತರ ಈ ಕಾರುಗಳನ್ನು ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರು.

ಕದ್ದ ಕಾರು ಖರೀದಿಸುವವರೇ ಎಚ್ಚರ, ನಿಮ್ಮ ಮನೆ ಮೇಲೂ ನಡೆಯಬಹುದು ಪೊಲೀಸರ ದಾಳಿ

8 ಟೊಯೊಟಾ ಫಾರ್ಚೂನರ್, 3 ಟೊಯೊಟಾ ಇನ್ನೋವಾ, 5 ಹ್ಯುಂಡೈ ಕ್ರೆಟಾ ಹಾಗೂ 2 ಮಾರುತಿ ವಿಟಾರಾ ಬ್ರೆಝಾ ಸೇರಿದಂತೆ ಒಟ್ಟು 18 ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕದ್ದ ಕಾರುಗಳನ್ನು ಖರೀದಿಸಿದವರ ಮನೆಗಳ ಮೇಲೂ ಪೊಲೀಸರು ದಾಳಿ ನಡೆಸಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕದ್ದ ಕಾರು ಖರೀದಿಸುವವರೇ ಎಚ್ಚರ, ನಿಮ್ಮ ಮನೆ ಮೇಲೂ ನಡೆಯಬಹುದು ಪೊಲೀಸರ ದಾಳಿ

ವಾಹನಗಳನ್ನು ಕದ್ದು, ಅದರಲ್ಲಿರುವ ಎಂಜಿನ್ ಹಾಗೂ ಚಾಸೀಸ್ ನಂಬರ್‌ಗಳನ್ನು ಬದಲಿಸುವುದು ಕಳ್ಳರ ಸಾಮಾನ್ಯ ವಿಧಾನವಾಗಿದೆ. ಇದರಿಂದಾಗಿ ಪೊಲೀಸರಿಗೆ ಕದ್ದ ಕಾರುಗಳನ್ನು ಟ್ರ್ಯಾಕ್ ಮಾಡುವುದಕ್ಕೆ ಕಷ್ಟವಾಗುತ್ತದೆ. ಇನ್ನು ಕೆಲ ಕಾರು ಕಳ್ಳತನದ ಗ್ಯಾಂಗ್‌ಗಳು ಕದ್ದ ಕಾರುಗಳ ಭಾಗಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುತ್ತವೆ.

ಕದ್ದ ಕಾರು ಖರೀದಿಸುವವರೇ ಎಚ್ಚರ, ನಿಮ್ಮ ಮನೆ ಮೇಲೂ ನಡೆಯಬಹುದು ಪೊಲೀಸರ ದಾಳಿ

ಕಾರು ಕಳ್ಳತನವಾಗುವುದನ್ನು ತಪ್ಪಿಸಲು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಹೊಸ ಕಾರುಗಳಲ್ಲಿ ಇಮೊಬೈಲೈಸರ್ ಅಳವಡಿಸಲಾಗುತ್ತಿದೆ. ಇದರಿಂದ ಡುಪ್ಲಿಕೇಟ್ ಕೀಯಿಂದ ಕಾರನ್ನು ತೆರೆಯಲು ಅಸಾಧ್ಯವಾಗುತ್ತದೆ. ಕಾರಿನಲ್ಲಿ ಅಳವಡಿಸುವ ಜಿಪಿಎಸ್ ಟ್ರ್ಯಾಕರ್‌ನಿಂದಾಗಿ ಕಾರು ಕಳುವಾದ ಸಂದರ್ಭದಲ್ಲಿ ಕಾರು ಇರುವ ಸ್ಥಳವನ್ನು ಪತ್ತೆಹಚ್ಚಬಹುದು.

Article Published On: Wednesday, June 10, 2020, 16:41 [IST]
English summary
Parking lot with Rs 3 crore worth stolen SUVs seized by cops in Chandigarh. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+