ಮುಂಬೈನಲ್ಲಿ ಐಷಾರಾಮಿ ಕಾರುಗಳ ಹಬ್ಬ
ದೇಶದ ಏಕಮಾತ್ರ ಐಷಾರಾಮಿ, ಕ್ರೀಡಾ ಹಾಗೂ ಸೂಪರ್ ಕಾರ್ ಪರೇಡ್ ಆಗಿರುವ ಪಾರ್ಕ್ಸ್ ಸೂಪರ್ ಕಾರು ಶೋ ಇದೇ ಬರುವ ಜನವರಿ 12ರಂದು ಜಗರಲಿದೆ. ಈ ಸಂದರ್ಭದಲ್ಲಿ ಮುಂಬೈ ನಗರ ಬೀದಿಗಳಲ್ಲಿ ಸೂಪರ್ ಕಾರುಗಳ ಪ್ರದರ್ಶನವಾಗಲಿದ್ದು, ಬಹುತೇಕ ಎಲ್ಲ ಐಷಾರಾಮಿ ಕಾರುಗಳ ಪರೇಡ್ ನಡೆಯಲಿದೆ. ಈ ಆದ್ಧೂರಿ ಮೇಳದಲ್ಲಿ ಐಷಾರಾಮಿ ಕಾರು ಮಾಲಿಕರೂ ಭಾಗವಹಿಸಲಿದ್ದಾರೆ.
ಆರನೇ ಬಾರಿ ಮುಂಬೈನಲ್ಲಿ ಇಂತಹದೊಂದು ಐಷಾರಾಮಿ ಶೋ ನಡೆಯುತ್ತಿದೆ. ಇದರಲ್ಲಿ ಆಡಿ, ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು, ಆಸ್ಟನ್ ಮಾರ್ಟಿನ್, ಲಂಬೊರ್ಗಿನಿ, ಪೋರ್ಷೆ, ಫೆರಾರಿ, ಬೆಂಟ್ಲಿ ಹಾಗೂ ರೋಲ್ಸ್ ರಾಯ್ಸ್ ಸೇರಿದಂತೆ ಎಲ್ಲ ದುಬಾರಿ ಕಾರುಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಕಳೆದ ವರ್ಷ ವೈ2ಕೆ ಟರ್ಬೈನ್ ನಿಯಂತ್ರಿತ ಸೂಪರ್ ಬೈಕ್ ಪ್ರಮುಖ ಆಕರ್ಷಣೆಯಾಗಿತ್ತು. ಇದು ಜಗತ್ತಿನ ಅತಿ ವೇಗದ ಸೂಪರ್ ಬೈಕ್‌ಗಳಲ್ಲಿ ಒಂದಾಗಿದೆ. ಅಂತೆಯೇ ಈ ಬಾರಿ ಅಮೆರಿಕದ ರೆಬೆಲ್ ಪ್ರಮುಖ ಆಕರ್ಷಣೆಯಾಗಿರಲಿದೆ. ಇದೇ ಮೊದಲ ಬಾರಿಗೆ ಭಾರತದ ರಸ್ತೆಗೆ ರೆಬೆಲ್ ಪ್ರವೇಶಿಸುತ್ತಿದೆ.

ನರಿಮನ್ ಪಾಯಿಂಟ್‌ನ ವಿಧಾನ್ ಭವನ್ ಪಾರ್ಕಿಂಗ್ ಪಾಯಿಂಟ್‌ನಿಂದ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿರುವ ಮೆರವಣಿಗೆ ಭಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಜಂಕ್ಷನ್ ಹಾದಿಯಾಗಿ ಸ್ಟಾರ್ಟಿಂಗ್ ಪಾಯಿಂಟ್‌ಗೆ ಹಿಂತುರುಗಲಿದೆ.

ಪ್ರಸ್ತುತ ರಾಲಿ ನೋಡುಗರಿಗೆ ಐಷಾರಾಮಿ, ಸೂಪರ್ ಹಾಗೂ ಸ್ಪೋರ್ಟ್ಸ್ ಕಾರುಗಳ ಅತ್ಯಾಕರ್ಷಕ ಕಾರುಗಳ ಅನುಭವ ನೀಡಲಿದೆ. ಬರ ಬರುತ್ತಾ ಐಷಾರಾಮಿ ಕಾರುಗಳ ಕ್ರೇಜ್ ಕೂಡಾ ದೇಶದಲ್ಲಿ ಹೆಚ್ಚುತ್ತಿರುವುದು ಸಹ ಆಯೋಜಕರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಪರೇಡ್ ಮಾರ್ಗ
ವಿಧಾನ್ ಭವನ್ ಪಾರ್ಕಿಂಗ್ ಲಾಟ್ - ನರಿಮನ್ ಪಾಯಿಂಟ್ - ಮರೈನ್ ಡ್ರೈವ್ - ವಾಲ್ಕೇಶ್ವರ್ - ಮಲಬಾರ್ ಹಿಲ್ - ಕಮ್ಲ ನೆಹ್ರು ಪಾರ್ಕ್ - ಕೆಂಪ್ಸ್ ಕಾರ್ನರ್ - ಬೀಚ್ ಕ್ಯಾಂಡಿ - ಹಜಿ ಆಲಿ - ವರ್ಲಿ ಸೀ ಫೇಸ್ - ವರ್ಲಿ ಸೀ ಲಿಂಕ್ - ಬಿಕೆಸಿ ಜಂಕ್ಷನ್ (ಯು ಟರ್ನ್) - ವರ್ಲಿ ಸೀ ಲಿಂಕ್ - ವರ್ಲಿ ಸೀ ಫೇಸ್ - ಹಜಿ ಆಲಿ - ಪೆಡ್ಡರ್ ರೋಡ್ - ಮರೈನ್ ಡ್ರೈವ್ - ನರಿಮಾನ್ ಪಾಯಿಂಟ್.


Click it and Unblock the Notifications








