ವಿಮಾನದ ಆಕಾಶದಲ್ಲಿರುವಾಗಲೇ ಸೀಟ್‌ನಲ್ಲಿ ಮಲ-ಮೂತ್ರ ವಿಸರ್ಜನೆ: ಇಳಿದಾಗ ಭದ್ರತಾ ಸಿಬ್ಬಂದಿ ಮಾಡಿದ್ದೇನು?

ಏರ್‌ ಇಂಡಿಯಾ ವಿಮಾನದಲ್ಲಿ ವ್ಯಕ್ತಿಯೊಬ್ಬನ ಅನುಚಿತ, ಕಲ್ಮಶ ವರ್ತನೆಯಿಂದ ಜೈಲು ಪಾಲಾದ ಘಟನೆಯೊಂದು ವರದಿಯಾಗಿದೆ. ಮುಂಬೈ ಯಿಂದ ದೆಹಲಿಗೆ ಹಾರುತ್ತಿದ್ದ ವಿಮಾನದ ಸೀಟ್‌ ರೋ ನಲ್ಲಿ ಮಲ, ಮೂತ್ರ ವಿಸರ್ಜನೆ ಮತ್ತು ಉಗುಳು ಮಾಡಿದರ ಪರಿಣಾಮ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಏರ್ ಇಂಡಿಯಾ (Air India) AIC 866 ವಿಮಾನ ಮುಂಬೈಯಿಂದ ದೆಹಲಿಗೆ ಜೂನ್‌ 24 ರಂದು ಹಾರುತ್ತಿತ್ತು. ವಿಮಾನ ಟೇಕ್‌ ಆಫ್‌ ಆದ ನಂತರ ಸೀಟ್‌ ನಂಬರ್‌ 17F‌ ನಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ವಿಮಾನದ ಸೀಟ್‌ ನ ಒಂಬತ್ತನೇ ಸಾಲಿನಲ್ಲಿ ಅಕ್ರಮವಾಗಿ ಮಲ, ಮೂತ್ರ ವಿಸರ್ಜನೆ ಮಾಡಿ ಉಗುಳಿದ್ದು ಕಂಡು ಬಂದಿದೆ.

Air India Flight

ಇದರಿಂದಾಗಿ ವ್ಯಕ್ತಿಯ ಮೇಲೆ ಸಿಬ್ಬಂದಿಗಳು ಕ್ರಮ ಕೈಗೊಂಡಿದ್ದು ವರದಿಗಳ ಪ್ರಕಾರ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಮಾಹಿತಿಗಳ ಪ್ರಕಾರ ಕೃತ್ಯವೆಸಗಿದ ಪ್ರಯಾಣಿಕ ಆಫ್ರಿಕಾದಲ್ಲಿ ಅಡುಗೆ ಕೆಲಸದ ವೃತ್ತಿಯನ್ನು ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನು ಎಫ್‌ಐಆರ್‌ನಲ್ಲಿ ದಾಖಲಿಸಿರುವಂತೆ ವ್ಯಕ್ತಿಯು ಈ ಕೃತ್ಯವನ್ನು ಎಸಗಲಿದ್ದಾನೆ ಎಂದು ತಿಳಿದಾಗಲೇ ವಿಮಾನದ ಸಿಬ್ಬಂದಿಗಳು ಈತನಿಗೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ವ್ಯಕ್ತಿ ಅದನ್ನು ತಲೆಗೆ ಹಾಕಿಕೊಂಡಿಲ್ಲ. ನಂತರದಲ್ಲಿ ವಿಮಾನ ಕ್ಯಾಬಿನ್‌ ಸೂಪರ್ ‌ವೈಸರ್‌ ಸಹ ಬಂದು ವಾರ್ನಿಂಗ್‌ ನೀಡಿದ್ದರು ಎಂದು ಹೇಳಲಾಗಿದೆ.

Air India Flight

ವ್ಯಕ್ತಿ ವಿಮಾನದಲ್ಲಿ ಈ ಹೇಯ ಕೃತ್ಯ ಮಾಡುತ್ತಿದ್ದಂತೆ ವಿಮಾನ ಸಿಬ್ಬಂದಿಗಳು ದೆಹಲಿ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ. ಮಾಹಿತಿ ಪಡೆದು ಕೂಡಲೇ ಎಚ್ಚೆತ್ತ ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿಗಳು ವ್ಯಕ್ತಿ ವಿಮಾನದಲ್ಲಿ ಬಂದಿಳಿದ ಕೂಡಲೇ ಆತನನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿದ ದೆಹಲಿ ಪೊಲೀಸ್‌, ವಿಮಾನದ ಕ್ಯಾಪ್ಟನ್‌ ನೀಡಿದ ದೂರಿನ ಪ್ರಕಾರ ನಾವ ಪ್ರಕರಣವನ್ನು ದಾಖಸಿಕೊಂಡಿದ್ದೇವೆ. ಇನ್ನು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ, ವಿಮಾನದಲ್ಲಿ ಇಂತಹ ಕೃತ್ಯ ಎಸಗಿದ್ದಕ್ಕೆ ತಕ್ಕ ಶಾಸ್ತಿ ಮಾಡಲಿದ್ದೇವೆ ಎಂದು ಈ ಸಂಧರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹೇಳಿದ್ದಾರೆ.

ವಿಮಾನದಲ್ಲಿ ಆಗಲಿ ಅಥವಾ ಇತರ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಇರುವವರೇ ಆಗಲಿ. ಆಯಾ ಸ್ಥಳಕ್ಕೆ ಅನುಗುಣವಾಗಿ ಇತರರಿಗೆ ತೊಂದರೆಯಾಗದಂತೆ ಮತ್ತು ಆ ಜಾಗದ ನಿಯಮವನ್ನು ಮೀರದಂತೆ ನಡೆದುಕೊಳ್ಳಬೇಕಿದೆ. ಒಂದೊಮ್ಮೆ ಅಲ್ಲಿನ ನಿಯಮವನ್ನು ಉಲ್ಲಂಘಿಸಿ ಇತರರಿಗೆ ತೊಂದರೆಯಾಗುವಂತೆ ನಡೆದುಕೊಂಡರೆ ಯಾರಾದರೂ ಕೂಡಲೇ ಹತ್ತಿರದ ಪೊಲೀಸ್‌ ಠಾಣೆಗೆ ವಿಷಯ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, June 27, 2023, 19:21 [IST]
English summary
Passenger of air india flight arrested making trouble details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+