ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದಲ್ಲಿ ಪೌಲ್ ವಾಕರ್ ಬಳಸಿದ್ದ ಐಕಾನಿಕ್ ಕಾರು ರೂ.4.07 ಕೋಟಿಗೆ ಹರಾಜು

ಹಾಲಿವುಡ್‌ನ ಫಾಸ್ಟ್ ಅಂಡ್ ಫ್ಯೂರಿಯಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಷ್ಟು ಕ್ರೇಜ್ ಸೃಷ್ಠಿ ಮಾಡಿದ್ದ ಚಿತ್ರ ಅದು. ಈ ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದಲ್ಲಿ ಪೌಲ್ ವಾಕರ್ ಬಳಸಿದ್ದ ಟೊಯೊಟಾ ಸುಪ್ರಾ ಕಾರು ದಾಖಲೆಯ ಮೊತ್ತಕ್ಕೆ ಹರಾಜು ಮಾಡಲಾಗಿದೆ.

ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದಲ್ಲಿ ಪೌಲ್ ವಾಕರ್ ಬಳಸಿದ್ದ ಐಕಾನಿಕ್ ಕಾರು ರೂ.4.07 ಕೋಟಿಗೆ ಹರಾಜು

ಟೊಯೊಟಾ ಸುಪ್ರಾ ಕಾರು ಬರೊಬ್ಬರಿ 550,000 ಯುಎಸ್ಡಿಗಳಿಗೆ ಹರಾಜಿಗಿದೆ, ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು ರೂ.4.07 ಕೋಟಿ ಆಗಿದೆ. ಈ ಕಾರನ್ನು ಲಾಸ್ ವೇಗಾಸ್‌ನಲ್ಲಿ ಹರಾಜು ಮಾಡಿ ಈ ದೊಡ್ಡ ಮೊತ್ತವನ್ನು ಪಡೆಯಲಾಯಿತು. ಟೊಯೊಟಾ ಸುಪ್ರಾ ಕಾರನ್ನು ಜನಪ್ರಿಯ ನಟ ಪೌಲ್ ವಾಕರ್ ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದ ಮೊದಲ ಮತ್ತು ಎರಡನೇ ಸೀರಿಸ್ ಚಿತ್ರದಲ್ಲಿ ಬಳಿಸಿದ್ದರು.

ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದಲ್ಲಿ ಪೌಲ್ ವಾಕರ್ ಬಳಸಿದ್ದ ಐಕಾನಿಕ್ ಕಾರು ರೂ.4.07 ಕೋಟಿಗೆ ಹರಾಜು

ನಿರೀಕ್ಷೆಯಂತೆ, ಆಸಿಡ್ ಆರೇಂಜ್ ಬಣ್ಣದ ಟೊಯೊಟಾ ಸುಪ್ರಾ ಕಾರು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಅಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಲು ಕೆಲವು ಕಾರಣಗಳಿದೆ. ಈ ನಿರ್ದಿಷ್ಟ ಟೊಯೊಟಾ ಸುಪ್ರಾ ಕಾರು ನಟ ಪೌಲ್ ವಾಕರ್ ವಾಕರ್‌ಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದೆ.

ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದಲ್ಲಿ ಪೌಲ್ ವಾಕರ್ ಬಳಸಿದ್ದ ಐಕಾನಿಕ್ ಕಾರು ರೂ.4.07 ಕೋಟಿಗೆ ಹರಾಜು

ಅಲ್ಲದೇ ನಟ ಪೌಲ್ ವಾಕರ್ ಮೃತಪಟ್ಟಿದರೂ ಆವರಿಗೆ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳಿವೆ. ಇನ್ನು ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದ ಪ್ರತಿ ಸೀರಿಸ್ ನಲ್ಲಿಯು ನಟ ಪೌಲ್ ವಾಕರ್ ಸುಬಾರು ಇಂಪ್ರೆಜಾ ಮತ್ತು ನಿಸ್ಸಾನ್ ಜಿಟಿ-ಆರ್ ನಂತಹ ಅನೇಕ ಕಾರುಗಳನ್ನು ಬಳಸಿದ್ದರು, ಆದರೆ ಈ ಆಸಿಡ್ ಆರೇಂಜ್ ಬಣ್ಣದ ಟೊಯೊಟಾ ಸುಪ್ರಾ ಕಾರು ಹೆಚ್ಚು ಜನರ ಗಮನಸೆಳೆದಿದೆ.

ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದಲ್ಲಿ ಪೌಲ್ ವಾಕರ್ ಬಳಸಿದ್ದ ಐಕಾನಿಕ್ ಕಾರು ರೂ.4.07 ಕೋಟಿಗೆ ಹರಾಜು

ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದಲ್ಲಿ ನಟ ಪೌಲ್ ವಾಕರ್ ಬಳಸಿದ್ದ ಟೊಯೊಟಾ ಸುಪ್ರಾ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರು ಕ್ವಾರ್ಟರ್ ಮೈಲಿ ಅನ್ನು ಕೇವಲ 10 ಸೆಕೆಂಡುಗಳಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದಲ್ಲಿ ಪೌಲ್ ವಾಕರ್ ಬಳಸಿದ್ದ ಐಕಾನಿಕ್ ಕಾರು ರೂ.4.07 ಕೋಟಿಗೆ ಹರಾಜು

ಈ ಟೊಯೊಟಾ ಸುಪ್ರಾ ಕಾರಿನಲ್ಲಿ, ಬಹುತೇಕ ಸ್ಟಾಕ್ 3.0-ಲೀಟರ್, ಇನ್ ಲೈನ್-6-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಟಾಕ್ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದಲ್ಲಿ ಪೌಲ್ ವಾಕರ್ ಬಳಸಿದ್ದ ಐಕಾನಿಕ್ ಕಾರು ರೂ.4.07 ಕೋಟಿಗೆ ಹರಾಜು

ಚಿತ್ರದಲ್ಲಿ ನಟ ಪೌಲ್ ವಾಕರ್ ಮ್ಯಾನುವಲ್ ಆಗಿ ಈ ಕಾರಿನ ಗೇರ್ ಅನ್ನು ಬದಲಾಯಿಸುವ ದೃಶ್ಯ ಹೆಚ್ಚು ಜನಪ್ರಿಯವಾಗಿತ್ತು. ಈ ಚಿತ್ರವನ್ನು ನೋಡಿದ ಹೆಚ್ಚಿನ ಜನರಿಗೆ ಅವರು ಗೇರ್ ಅನ್ನು ಬದಲಾಯಿಸುವ ಸ್ಟೈಲ್ ನೆನಪಿನಲ್ಲಿರುತ್ತದೆ. ಇವರ ಡ್ರೈವಿಂಗ್ ಸ್ಟೈಲ್ ನೋಡಿ ಹಲವು ಜನರಿಗೆ ಕಾರು ಡ್ರೈವ್ ಕ್ರೇಜ್ ಹೆಚ್ಚಾಗಿದೆ.

ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದಲ್ಲಿ ಪೌಲ್ ವಾಕರ್ ಬಳಸಿದ್ದ ಐಕಾನಿಕ್ ಕಾರು ರೂ.4.07 ಕೋಟಿಗೆ ಹರಾಜು

ಟೊಯೊಟಾ ಸುಪ್ರಾ ಕಾರಿನ ಸ್ಟೈಲಿಂಗ್ ವಿಷಯದಲ್ಲಿ, ಇದು ಸ್ಟ್ಯಾಂಡ್ ಬೊಮೆಕ್ಸ್ ಬಾಡಿ ಕಿಟ್, ಟಿಆರ್ಡಿ-ಶೈಲಿಯ ಬಾನೆಟ್, ಎಪಿಆರ್ ಅಲ್ಯೂಮಿನಿಯಂ ರಿಯರ್ ಸ್ಪಾಯ್ಲರ್ ಮತ್ತು 19 ಇಂಚಿನ ಡ್ಯಾಜ್ ಮೋಟಾರ್ಸ್ಪೋರ್ಟ್ ರೇಸಿಂಗ್ ಹಾರ್ಟ್ ಎಂ 5 ವ್ಹೀಲ್ ಗಳನ್ನು ಹೊಂದಿವೆ.

ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದಲ್ಲಿ ಪೌಲ್ ವಾಕರ್ ಬಳಸಿದ್ದ ಐಕಾನಿಕ್ ಕಾರು ರೂ.4.07 ಕೋಟಿಗೆ ಹರಾಜು

ಕ್ಯಾಲಿಫೋರ್ನಿಯಾದ ಎಲ್ ಸೆಗುಂಡೋದಲ್ಲಿನ ದಿ ಶಾರ್ಕ್ ಶಾಪ್ ನಲ್ಲಿ ಈ ಐಕಾನಿಕ್ ಕಾರನ್ನು ನಿರ್ಮಿಸಿದ್ದಾರೆ. ನಿರೀಕ್ಷೆಯಂತೆ ನಟ ಪೌಲ್ ವಾಕರ್ ಬಳಿಸಿದ್ದ ಟೊಯೊಟಾ ಸುಪ್ರಾ ಕಾರು ದಾಖಲೆಯ ಮೊತ್ತಕ್ಕೆ ಹರಾಜಿಗಿದೆ. ಇದು ಅವರ ಅಭಿಮಾನಿಗಳಿಗೆ ಸಂತಸ ತರಬಹುದು.

Image Courtesy: Barrett-Jackson

Most Read Articles

Kannada
English summary
Fast & Furious Toyota Supra Auctioned For Rs 4.07 Crore. Read In Kannada.
Story first published: Monday, June 21, 2021, 19:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X