ಆಂಧ್ರ ರಾಜಕೀಯದಲ್ಲಿ ಸಂಚಲನ: ಮಿಲಿಟರಿ ವಾಹನದಂತೆ ಕಾಣುವ ವಾರಾಹಿಯಲ್ಲಿ ಪವರ್ ಸ್ಟಾರ್ ಪ್ರಚಾರ

ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಸಿನಿಮಾ ಬಿಟ್ಟು ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ವಾರಾಹಿ ( ವಿಜಯ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಅಧಿಕಾರ ತರಲು ಹೊಸ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಆಂಧ್ರ ಪ್ರದೇಶದ್ಯಾಂತ ಪವನ್ ಕಲ್ಯಾಣ್ ಇದೀಗ ಯಾತ್ರೆ ಮಾಡುತ್ತಿದ್ದಾರೆ. ನಿನ್ನೆ ಅವರು ಅನ್ನವರಂ ಸತ್ಯದೇವ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಯಾತ್ರೆ ಪ್ರಾರಂಭಿಸಿದ್ದಾರೆ. ಈ ಯಾತ್ರೆಗೆ ತೆಲುಗು ಚಿತ್ರರಂಗದ ಹಲವರು ಬೆಂಬಲ ಘೋಷಿಸಿದ್ದಾರೆ. ಪವನ್ ಕಲ್ಯಾಣ್ ಯಾತ್ರೆಗೆ ವರಾಹಿ ಯಾತ್ರೆ ಎಂದು ಹೆಸರಿಟ್ಟಿದ್ದಾರೆ. ಯಾತ್ರೆಗೆ ಚಿತ್ರರಂಗದ ನಟರ, ನಿರ್ಮಾಪಕರು, ನಿರ್ದೇಶಕರು ಮತ್ತು ಇತರರು ಅವರನ್ನು ಭೇಟಿಯಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

Pawan Kalyan Varahi Campaign Truck

ತೆಲುಗು ಚಿತ್ರರಂಗದ ಸಿನಿಮಾ ನಿರ್ಮಾಪಕ ಬಿವಿಎಸ್​ಎನ್ ಪ್ರಸಾದ್ ಪವನ್ ಕಲ್ಯಾಣ್​ರ ಜನಸೇನಾ ಪVarahi)ಕ್ಷ ಸೇರಿದ್ದಾರೆ. ವರಾಹಿ ಯಾತ್ರೆಯಲ್ಲಿ ಪವನ್ ಕಲ್ಯಾಣ್ ಸಾರ್ವಜನಿಕ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಜನರೊಂದಿಗೆ ಜನಸೇನಾ ಪಕ್ಷದ ನಾಯಕ ಸಭೆ ನಡೆಸಲಿದೆ. ರಾಜ್ಯದ ಜನರ ಕಷ್ಟ ತಿಳಿದುಕೊಳ್ಳಲು 'ಜನವಾಣಿ' ಕಾರ್ಯಕ್ರಮ ಕೈಗೊಂಡಿದ್ದಾರೆ.

ವರಾಹಿ ಯಾತ್ರೆಗಾಗಿ ವಿಶೇಷ ವಾಹನವೊಂದನ್ನು ಕೆಲವು ತಿಂಗಳುಗಳ ಮುಂಚೆಯೇ ಪವನ್ ಕಲ್ಯಾಣ್ ವಿಶೇಷವಾಗಿ ರೆಡಿ ಮಾಡಿಸಿಕೊಂಡಿದ್ದಾರೆ. ಟಾಟಾ ಕ್ಯಾಂಪೈರ್ ವಾಹನವು ವಿಶೇಷವಾಗಿ ಮಾಡಿಫೈಗೊಂಡಿದೆ. ಈ ವಾಹನ ನೋಡಲು ಮಿಲಿಟರಿ ಪಡೆಗಳು ಬಳಕೆ ಮಾಡುವ ರೀತಿಯಲ್ಲಿ ಕಾಣುತ್ತದೆ. ಈ ವಾಹನಕ್ಕೆ ವಾರಾಹಿ ಎಂದು ಹೆಸರಿಡುವುದರ ಹಿಂದೆಯೂ ಒಂದು ಕಥೆಯಿದೆ. ವಾರಾಹಿ ಎಂದರೆ ದುರ್ಗಾ ದೇವಿ ಎಂದರ್ಥ. ರಾಕ್ಷಸ ರಕ್ತಬೀಜಸೂರನನ್ನು ವಧೆ ಮಾಡಿದಳು.

Pawan Kalyan Varahi Campaign Truck

ಇದನ್ನು ಗಮನದಲ್ಲಿಟ್ಟುಕೊಂಡು ಈ ವಾಹನಕ್ಕೆ ವಾರಾಹಿ ಎಂದು ಹೆಸರಿಡಲಾಗಿದೆ. ಅಲ್ಲದೇ ತಾವು ನಡೆಸುತ್ತಿರುವ ಯಾತ್ರೆಗೂ ಇದೆ ಹೆಸರನ್ನು ನೀಡಲಾಗಿದೆ. ಈ ವರಾಹಿ ವಾಹನದಲ್ಲಿ ಸಭೆಗೆ ಸ್ಥಳ, ವಿಶ್ರಾಂತಿಗೆ ವ್ಯವಸ್ಥೆ, ಶೌಚಾಲಯ, ಮೇಕಪ್ ರೂಂ, ಟಿವಿ, ಟೆಲಿಫೋನ್, ವೈಫೈ ಸೌಲಭ್ಯ, ವಾಹನದ ಸುತ್ತ ಕ್ಯಾಮೆರಾಗಳು, ವಾಹನಕ್ಕೆ ಮೈಕ್ ಹಾಗೂ ಸ್ಪೀಕರ್ ಅನ್ನು ಅಳವಡಿಸಲಾಗಿದೆ. ಈ ವಾಹನದ ಮೇಲೆ ನಿಂತು ಭಾಷಣ ಮಾಡಲು ವ್ಯವಸ್ಥೆ ಇದೆ.

ಪವನ್ ಕಲ್ಯಾಣ್ ಅವರು ತಮ್ಮ ಕಂಪನಿಯ ಹೆಸರಿನಲ್ಲಿ 'ವರಾಹಿ' ಅನ್ನು ನೋಂದಾಯಿಸಿಲ್ಲ. ಬದಲಾಗಿ 'ದಿ ಹ್ಯಾಂಡ್ಸ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್' ಹೆಸರಿನಲ್ಲಿ ಪ್ರಚಾರ ವಾಹನವಾಗಿ ನೋಂದಣಿಯಾಗಿದೆ. ಇನ್ನು ಸೆಲೆಬ್ರಿಟಿಗಳ ಒಡೆತನದ ಸಾಮಾನ್ಯ ಐಷಾರಾಮಿ ವ್ಯಾನಿಟಿ ವ್ಯಾನ್‌ಗಳಂತೆ, ಪವನ್ ಕಲ್ಯಾಣ್ ಬಳಸುವ 'ವಾರಾಹಿ' ಹಲವಾರು ಆಧುನಿಕ ಸೌಕರ್ಯಗಳೊಂದಿಗೆ ಅಡುಗೆ ಸಲಕರಣೆಗಳು, ಹಾಸಿಗೆ, ರೆಫ್ರಿಜರೇಟರ್, ಫ್ಯಾನ್‌ಗಳು ಮತ್ತು ವಾಶ್‌ರೂಮ್‌ಗಳನ್ನು ಹೊಂದಿದೆ.

Pawan Kalyan Varahi Campaign Truck

ಟ್ರಕ್‌ನ ಚಾಸಿಸ್ ಅನ್ನು ಆಧರಿಸಿ, ಅದರ ವಿವರಗಳು ಇನ್ನೂ ತಿಳಿದಿಲ್ಲ. ಚಲನಚಿತ್ರ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ಪ್ರೀಮಿಯಂ ಐಷಾರಾಮಿ ಕಾರುಗಳ ಆಯ್ಕೆಗೆ ಹೆಸರುವಾಸಿಯಾಗಿದ್ದರೂ, ಅವರಲ್ಲಿ ಕೆಲವರು ತಮ್ಮ ಚಿತ್ರೀಕರಣದ ಸ್ಥಳಗಳಲ್ಲಿ ಅವರೊಂದಿಗೆ ಅತ್ಯಂತ ಐಷಾರಾಮಿ ವ್ಯಾನಿಟಿ ವ್ಯಾನ್‌ಗಳು ಮತ್ತು ಬಸ್‌ಗಳನ್ನು ಹೊಂದಿದ್ದಾರೆ. ಆದರೆ ಇವರು ರಾಜಕೀಯ ಪ್ರಚಾರಕ್ಕೆ ಆಗಿರುವುದಕ್ಕೆ ಆ ರೀತಿಯ ವಾಹನವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಪವರ್ ಸ್ಟಾರ್ ಪವನ್ ಕಲ್ಯಾಣ್ ಬಳಿ ಈ ಕ್ಯಾಂಪರ್ ವ್ಯಾನ್ ಜೊತೆಗೆ ಮರ್ಸಿಡಿಸ್ ಬೆಂಝ್ G63 AMG, ಬಿಎಂಡಬ್ಲ್ಯು 5-Series, ಜಾಗ್ವಾರ್ XJ, ಮರ್ಸಿಡಿಸ್ ಬೆಂಝ್ R-Class, ಆಡಿ Q7 ಮತ್ತು ಜೀಪ್ ರಾಂಗ್ಲರ್‌ನಂತಹ ಕೆಲವು ಐಷಾರಾಮಿ ಎಸ್‍ಯುವಿಗಳನ್ನು ಹೊಂದಿದ್ದಾರೆ. ಚುನಾವಣೆ ವೇಳೆಗೆ ಪವನ್ ಕಲ್ಯಾಣ್ ಅವರ ಎರಡು ಸಿನಿಮಾಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದೆ.

Article Published On: Thursday, June 15, 2023, 19:54 [IST]
English summary
Pawan kalyan varahi yatra campaign vehicle all details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+