ಬೆಂಗಳೂರಿನಲ್ಲಿ ಮಸಲ್ ಕಾರುಗಳನ್ನು ನೋಡಲು ಮುಗಿಬಿದ್ದ ಜನ: ಫುಲ್ ಟ್ರಾಫಿಕ್ ಜಾಮ್

ಇತರ ದೇಶಗಳಿಂದ ಆಮದು ಮಾಡಿಕೊಳ್ಳಲಾದ ಅಪರೂಪದ ಸೂಪರ್ ಕಾರುಗಳ ವೀಡಿಯೊ ಅಗಾಗ ವೈರಲ್ ಆಗುತ್ತದೆ. ಇತ್ತೀಚೆಗೆ, ಜನರು ಹೊಸ ಕಾರನ್ನು ಆಮದು ಮಾಡಿಕೊಳ್ಳುವುದಕ್ಕಿಂತ ಹೆಚ್ಚು ಸುಲಭವಾಗಿರುವುದರಿಂದ ಕಾರ್ನೆಟ್ ಮೂಲಕ ಭಾರತಕ್ಕೆ ಕಾರನ್ನು ತರಲು ಬಯಸುತ್ತಾರೆ. ಸಾಮಾನ್ಯವಾಗಿ ಜನರು ದುಬಾರಿ ಎಸ್‍ಯುವಿ ಮತ್ತು ಸ್ಪೋರ್ಟ್ಸ್ ಕಾರುಗಳನ್ನು ತರಲು ಬಯಸುತ್ತಾರೆ.

ಬಹಳ ಅಪರೂಪವಾಗಿ ಜನರು ಸರಿಯಾದ ಮಸಲ್ ಕಾರನ್ನು ತರುವುದನ್ನು ನಾವು ನೋಡಿದ್ದೇವೆ. ಇಲ್ಲಿ ನಾವು ಬೆಂಗಳೂರಿನಲ್ಲಿ ಡಾಡ್ಜ್ ಚಾರ್ಜರ್ ಎಸ್‌ಆರ್‌ಟಿ ಮತ್ತು ಚಾಲೆಂಜರ್ ಎಸ್‌ಆರ್‌ಟಿಯ ವೀಡಿಯೊಂದು ಇತ್ತೀಚೆಗೆ ಭಾರೀ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಜನರು ಕಾರುಗಳನ್ನು ನೋಡಲು ತುಂಬಾ ಉತ್ಸುಕರಾಗಿದ್ದರು, ರಸ್ತೆಯಲ್ಲಿ ಜನರು ತುಂಬಿ ತುಳುಕಿರುವುದರಿಂದ ರಸ್ತೆಯು ಬ್ಲಾಕ್ ಆಗಿದೆ. ಈ ವಿಡಿಯೋವನ್ನು SPOTTER INDIA ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ.

ಬೆಂಗಳೂರಿನಲ್ಲಿ ಮಸಲ್ ಕಾರುಗಳನ್ನು ನೋಡಲು ಮುಗಿಬಿದ್ದ ಜನ

ನಮಗೆಲ್ಲರಿಗೂ ತಿಳಿದಿರುವಂತೆ ಬೆಂಗಳೂರು ಪ್ರಮುಖ ಸಮಸ್ಯೆಗಳಲ್ಲಿ ಟ್ರಾಫಿಕ್ ಜಾಮ್ ಕೂಡ ಒಂದಾಗಿದೆ. ಬೆಂಗಳೂರಿನಲ್ಲಿ ಸಾಕಷ್ಟು ಕಾರು ಪ್ರಿಯರು ಇದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಲ್ಯಾಂಬೋರ್ಗಿನಿಯಂತಹ ಸೂಪರ್ ಕಾರ್ ಗಳು ಹೆಚ್ಚು ಮಾರಾಟವಾಗುತ್ತಿದೆ. ನಾವು ಬೆಂಗಳೂರಿನಲ್ಲಿ ಸಾಮಾನ್ಯ ಕಾರಿನಿಂದ ದುಬಾರಿ ಐಷಾರಾಮಿ ಕಾರುಗಳು ಕೂಡ ನೋಡಬಹುದು. ಇನ್ನು ಸೂಪರ್ ಕಾರುಗಳು, ಸ್ಪೋರ್ಟ್ಸ್ ಕಾರುಗಳು ಮತ್ತು ವಿಂಟೇಜ್ ಕಾರುಗಳನ್ನು ಬೆಂಗಳೂರಿನಲ್ಲಿ ಕಾಣಸಿಗುತ್ತದೆ. ಡಾಡ್ಜ್ ಚಾಲೆಂಜರ್ ಮತ್ತು ಚಾರ್ಜರ್ ಎರಡೂ ಬೆಂಗಳೂರಿನ ಕಿರಿದಾದ ಶಾಪಿಂಗ್ ಸ್ಟ್ರೀಟ್‌ನಲ್ಲಿ ಇತ್ತೀಚೆಗ ಕಾಣಿಸಿಕೊಂಡಿದೆ.

ವೀಡಿಯೊದಲ್ಲಿ ನಿಯಾನ್ ಗ್ರೀನ್ ಶೇಡ್‌ನಲ್ಲಿರುವ ಚಾಲೆಂಜರ್ ಮತ್ತು ರೆಡ್ ಶೇಡ್‌ನಲ್ಲಿರುವ ಚಾರ್ಜರ್ ಕಾರುಗಳು ನಿಧಾನವಾಗಿ ರಸ್ತೆಯಲ್ಲಿ ಸಾಗುತ್ತಿದೆ.ರಸ್ತೆಯಲ್ಲಿರುವ ಜನರು ಕಾರನ್ನು ಮುಖ್ಯವಾಗಿ ಕಾರಿನ ಬಣ್ಣ ಮತ್ತು ಜೋರಾಗಿ ಹೊರಹಾಕುವ ಸೌಂಡ್ ಕಾರಣದಿಂದ ಗಮನಿಸುತ್ತಾರೆ. ರಸ್ತೆಯಲ್ಲಿರುವ ಜನರು ತಕ್ಷಣವೇ ಕಾರಿನ ಸುತ್ತಲೂ ಸೇರಲು ಪ್ರಾರಂಭಿಸುತ್ತಾರೆ ಮತ್ತು ಚಿತ್ರಗಳನ್ನು ಕ್ಲಿಕ್ ಮಾಡಲು ಪ್ರಾರಂಭಿಸಿದ್ದಾರೆ. ಕಾರಿನ ಸುತ್ತ ಜಮಾಯಿಸಿದ ಕೆಲವರಿಗೆ ಕಾರಿನ ಬ್ರಾಂಡ್ ಕೂಡ ಗೊತ್ತಿಲ್ಲ. ಅವರಲ್ಲಿ ಕೆಲವರು ಕಾರುಗಳನ್ನು ಫೆರಾರಿ ಎಂದೂ ಕರೆಯುತ್ತಾರೆ ಎಂದು ವೀಡಿಯೊದಲ್ಲಿ ಹೇಳಿದ್ದಾರೆ.

ವೀಡಿಯೊದಲ್ಲಿ ನೋಡಿದಂತೆ, ರಸ್ತೆಯಲ್ಲಿ ಎರಡೂ ಬದಿಗಳಲ್ಲಿ ಹೆಚ್ಚಾಗಿ ಎಲ್ಲರೂ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ಚಿತ್ರಗಳನ್ನು ಕ್ಲಿಕ್ ಮಾಡುತ್ತಿದ್ದರು ಅಥವಾ ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಿದ್ದಾರೆ. ಜನಸಂದಣಿಯು ರಸ್ತೆಗೆ ಬರಲು ಪ್ರಾರಂಭಿಸಿದಾಗ, ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಯಿತು. ಅಲ್ಲದೇ ಆ ರಸ್ತೆಯು ಬ್ಲಾಕ್ ಆಯ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರನ್ನು ಬೇರೆಡೆಗೆ ತೆರಳುವಂತೆ ವಾಹನ ಮಾಲೀಕರಿಗೆ ಸೂಚಿಸಿದರು. ಸಂಚಾರ ಸಹಜವಾಗುವಂತೆ ಜನರು ಹಿಂತಿರುಗುವಂತೆ ಅವರು ಕೇಳಿಕೊಂಡರು.

ವೀಡಿಯೋದಲ್ಲಿ ಚಾಲೆಂಜರ್ ಮತ್ತು ಚಾರ್ಜರ್ ಎರಡರ ಸೌಂಡ್ ಕೂಡ ಕೇಳಿಬರುತ್ತದೆ. ಈ ಎರಡೂ ಕಾರುಗಳನ್ನು ಕೇರಳದ ಮಾಲೀಕರು ಭಾರತಕ್ಕೆ ತಂದಿದ್ದಾರೆ ಮತ್ತು ಅವರು ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ ಎಂದು ಮತ್ತೊಂದು ವೀಡಿಯೊದಲ್ಲಿ ಕಾರ್ ಸ್ಪಾಟರ್ ಉಲ್ಲೇಖಿಸಿದ್ದಾರೆ. ಕಾರ್ನೆಟ್ ಸರಕುಗಳಿಗೆ ತಾತ್ಕಾಲಿಕ ಪಾಸ್‌ಪೋರ್ಟ್ ಆಗಿದೆ. ಕಾರ್ನೆಟ್ ಬಳಸಿ, ಒಬ್ಬ ವ್ಯಕ್ತಿಯು ಆಮದು ತೆರಿಗೆ ಮತ್ತು ನಿರ್ದಿಷ್ಟ ವಾಹನದ ಮೇಲಿನ ಸುಂಕವನ್ನು ಪಾವತಿಸದೆ ಭಾರತಕ್ಕೆ ಕಾರನ್ನು ಆಮದು ಮಾಡಿಕೊಳ್ಳಬಹುದು.

ಕಾರನ್ನು ಸಾಮಾನ್ಯವಾಗಿ 6 ರಿಂದ 12 ತಿಂಗಳ ಅವಧಿಗೆ ಆಮದು ಮಾಡಿಕೊಳ್ಳಲಾಗುತ್ತದೆ ದಕ್ಕಾಗಿಯೇ ಆಮದು ತೆರಿಗೆ ಮತ್ತು ಸುಂಕದಿಂದ ವಿನಾಯಿತಿ ನೀಡಲಾಗುತ್ತದೆ. ಇಲ್ಲಿ ಕಾಣುವ ಡಾಡ್ಜ್ ಚಾಲೆಂಜರ್ ಮೂರನೇ ತಲೆಮಾರಿನ SRT ರೂಪಾಂತರದಂತೆ ಕಾಣುತ್ತದೆ. ಇದು 2 ಡೋರ್ ಮಸಲ್ ಕಾರ್ ಆಗಿದ್ದು, 6.4 ಲೀಟರ್ V8 ಎಂಜಿನ್‌ನೊಂದಿಗೆ 485 ಬಿಹೆಚ್‍ಪಿ ಪವರ್ ಮತ್ತು 644 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

ಡಾಡ್ಜ್ ಚಾರ್ಜರ್ ಇಲ್ಲಿ ಕಂಡುಬರುವ ಮತ್ತೊಂದು ಐಕಾನಿಕ್ ಮಸಲ್ ಕಾರನ್ನು 2015 ರಲ್ಲಿ ಮತ್ತೆ ಬಿಡುಗಡೆ ಮಾಡಲಾದ ಫೇಸ್‌ಲಿಫ್ಟ್ ಮಾಡೆಲ್ ಆಗಿದೆ. ಅಂತಹ ಕಾರುಗಳನ್ನು ಭಾರತಕ್ಕೆ ತರುವುದು ಖಂಡಿತವಾಗಿಯೂ ಈ ಮಾಲೀಕರು ಕಾರುಗಳನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ಭಾರತೀಯ ರಸ್ತೆಯಲ್ಲಿ ಇಂತಹ ಕಾರನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಸಾರ್ವಜನಿಕರಿಂದ ಬಂದ ಪ್ರತಿಕ್ರಿಯೆ ನೋಡಿ ಇನ್ನಷ್ಟು ಜನರನ್ನು ಇಂತಹ ಕಾರುಗಳನ್ನು ಖರೀದಿಸಲು ಪ್ರೇರೇಪಿಸಬಹುದು ಎಂದು ಹೇಳಲಾಗುತ್ತಿದೆ.

Article Published On: Monday, December 19, 2022, 15:56 [IST]
English summary
People excited to see dodge charger srt and challenger srt in bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+