ಅಪಾಯಕಾರಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ಮುಂದಾಗುತ್ತಿರುವ ಜನ

ಇತ್ತೀಚಿಗೆ ಕೇರಳದ ವ್ಯಕ್ತಿಯೊಬ್ಬರು ಟೊಯೊಟಾ ಇನೋವಾ ಕಾರನ್ನು ಸಣ್ಣ ಜಾಗದಲ್ಲಿ ಪಾರ್ಕ್ ಮಾಡಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೊ ವೈರಲ್ ಆದ ನಂತರ ಸಾಕಷ್ಟು ಜನರು ತಮ್ಮ ಚಾಲನಾ ಕೌಶಲ್ಯವನ್ನು ಪರೀಕ್ಷಿಸಲು ಮುಂದಾಗಿದ್ದಾರೆ.

ಅಪಾಯಕಾರಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ಮುಂದಾಗುತ್ತಿರುವ ಜನ

ಚಿಕ್ಕ ಪಾರ್ಕಿಂಗ್ ಸ್ಥಳದಲ್ಲಿ ಇನೋವಾ ಕಾರನ್ನು ಪಾರ್ಕ್ ಮಾಡಬಹುದು ಎಂಬುದನ್ನು ಯಾರು ನಿರೀಕ್ಷಿಸಿರಲಿಲ್ಲ. ಆದರೂ ಸಹ ವೀಡಿಯೊದಲ್ಲಿರುವ ವ್ಯಕ್ತಿ ತನ್ನ ಚಾಣಾಕ್ಷತನದಿಂದ ಕಾರನ್ನು ಪಾರ್ಕ್ ಮಾಡುತ್ತಾನೆ. ಈಗ ಬೇರೆಯವರು ಸಹ ಈ ಜಾಗದಲ್ಲಿಯೇ ತಮ್ಮ ಕಾರುಗಳನ್ನು ಪಾರ್ಕ್ ಮಾಡಲು ಮುಂದಾಗಿದ್ದಾರೆ.

ಅಪಾಯಕಾರಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ಮುಂದಾಗುತ್ತಿರುವ ಜನ

ಈ ಸ್ಥಳ ಕೇರಳದ ಮಹೇ ಟೌನ್ ರೈಲ್ವೆ ನಿಲ್ದಾಣ ರಸ್ತೆಯಲ್ಲಿದೆ ಎಂದು ವರದಿಯಾಗಿದೆ. ಈಗ ಅಪ್ ಲೋಡ್ ಮಾಡಲಾಗಿರುವ ವೀಡಿಯೊದಲ್ಲಿ ಕಪ್ಪು ಕಾರೊಂದು ಈ ಸ್ಥಳದಲ್ಲಿ ನಿಂತಿರುವುದನ್ನು ಕಾಣಬಹುದು. ಆದರೆ ಆ ಕಾರಿನಲ್ಲಿದ್ದ ವ್ಯಕ್ತಿಗೆ ಈ ಜಾಗದಲ್ಲಿ ಕಾರು ನಿಲುಗಡೆ ಮಾಡಲು ಸಾಧ್ಯವಾಗಿಲ್ಲ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಅಪಾಯಕಾರಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ಮುಂದಾಗುತ್ತಿರುವ ಜನ

ಆ ವ್ಯಕ್ತಿ ಟೊಯೊಟಾ ಇನೋವಾ ಕಾರಿನಂತೆಯೇ ತನ್ನ ಕಾರನ್ನು ಹಿಂದಕ್ಕೆ ಹಾಗೂ ಮುಂದಕ್ಕೆ ಚಲಿಸಿ ನಿಲ್ಲಿಸಲು ಪ್ರಯತ್ನಿಸುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ. ಈ ಜಾಗದ ಎರಡೂ ಬದಿಗಳಲ್ಲಿ ರೇಲಿಂಗ್ ಅಳವಡಿಸಲಾಗಿದೆ. ಈ ಕಾರಣಕ್ಕೆ ಇಲ್ಲಿ ವಾಹನ ನಿಲುಗಡೆ ಮಾಡುವುದು ಕಷ್ಟವಾಗುತ್ತದೆ.

ಅಪಾಯಕಾರಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ಮುಂದಾಗುತ್ತಿರುವ ಜನ

ವೈರಲ್ ಆಗಿದ್ದ ವೀಡಿಯೊದಲ್ಲಿ ನಿಲುಗಡೆ ಮಾಡಲಾಗಿದ್ದ ಇನೋವಾ ಕಾರನ್ನು ವ್ಯಕ್ತಿಯೊಬ್ಬ ಹೊರ ತೆಗೆಯುತ್ತಿದ್ದ. ಆ ವ್ಯಕ್ತಿಯನ್ನು ವಯನಾಡು ಮೂಲದ ಪಿಜೆ ಬಿಜು ಎಂದು ಗುರುತಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಅಪಾಯಕಾರಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ಮುಂದಾಗುತ್ತಿರುವ ಜನ

ಪಿಜೆ ಬಿಜು ಕಾರನ್ನು ಹೊರತೆಗೆಯುವ ವೀಡಿಯೊ ವೈರಲ್ ಆಗಿತ್ತು. ಕಾರನ್ನು ಹೊರತೆಗೆಯುವಾಗ ಅವರು ಕೂಲ್ ಆಗಿಯೇ ಕಾಣುತ್ತಾರೆ. ಫೋನ್‌ನಲ್ಲಿ ಮಾತನಾಡುವುದನ್ನು ಸಹ ವೀಡಿಯೊದಲ್ಲಿ ಕಾಣಬಹುದು. ಬಿಜು ಕಾರನ್ನು ಹಿಂದಕ್ಕೆ ಚಲಿಸಿ, ನಂತರ ಮುಂದಕ್ಕೆ ಚಲಿಸಿ ಹೊರಗೆ ತರುತ್ತಾರೆ. ಮತ್ತೊಂದು ವೀಡಿಯೊದಲ್ಲಿ ಇದೇ ಅಪಾಯಕಾರಿ ಸ್ಥಳದಲ್ಲಿಯೇ ಟೊಯೊಟಾ ಇನೋವಾ ಕಾರನ್ನು ಪಾರ್ಕ್ ಮಾಡಲಾಗುತ್ತದೆ.

ಅಪಾಯಕಾರಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ಮುಂದಾಗುತ್ತಿರುವ ಜನ

ದೇಶಾದ್ಯಂತ ವಾಹನ ನಿಲುಗಡೆ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ. ಈ ಕಾರಣಕ್ಕೆ ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಪಿಜೆ ಬಿಜು ಅವರ ಚಾಲನಾ ಕೌಶಲ್ಯವನ್ನು ಶ್ಲಾಘಿಸಲಾಗುತ್ತಿದೆ. ಬಹುತೇಕ ನಗರಗಳಲ್ಲಿ ಕಾರುಗಳನ್ನು ರಸ್ತೆ ಬದಿ ಪಾರ್ಕ್ ಮಾಡಲಾಗುತ್ತದೆ. ಈ ರೀತಿಯ ಪಾರ್ಕಿಂಗ್ ಕೆಲವೊಮ್ಮೆ ಅಪಾಯಕಾರಿಯಾಗಲೂ ಬಹುದು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಅಪಾಯಕಾರಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ಮುಂದಾಗುತ್ತಿರುವ ಜನ

ಬಿಜುರವರು ಕಾರನ್ನು ಪಾರ್ಕ್ ಮಾಡಿದ್ದ ಸ್ಥಳವು ತುಂಬಾ ಅಪಾಯಕಾರಿಯಾಗಿದೆ. ಜನರು ಈ ರೀತಿಯ ಪ್ರಯತ್ನಕ್ಕೆ ಮುಂದಾಗದಿದ್ದರೆ ಒಳಿತು. ದೇಶಾದ್ಯಂತದ ಸಾಮಾಜಿಕ ಜಾಲತಾಣಗಳಲ್ಲಿ ಈ ಜಾಗಕ್ಕೆ ತೆರಳಿ ತಮ್ಮ ಚಾಲನಾ ಕೌಶಲ್ಯವನ್ನು ಪರೀಕ್ಷಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

Most Read Articles

Kannada
English summary
People trying to test their parking skill in dangerous parking spot. Read in Kannada.
Story first published: Wednesday, September 9, 2020, 15:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X