ಇತ್ತ ಕಾರಿನಲ್ಲಿ ನೀರು, ಗಾಳಿಯಿಲ್ಲದೆ ನಾಯಿಮರಿ ಉಸಿರುಗಟ್ಟಿ ಪ್ರಾಣ ಬಿಟ್ಟಾಗ ಅತ್ತ ತಾಜ್‌ಮಹಲ್‌ ಸೌಂದರ್ಯ ಸವಿದ ಭೂಪ

ಹಲವು ಬಾರೀ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸಬೇಕಾಗುವುದು ನಿಜಕ್ಕೂ ಕಠೋರ. ಇದು ನಮ್ಮ ಸಾಕು ಪ್ರಾಣಿಗಳ ವಿಷಯದಲ್ಲೂ ಅನ್ವಯವಾಗುತ್ತದೆ. ಹಲವು ಬಾರೀ ಅದರ ಮಾಲೀಕ ಮಾಡಿದ ತಪ್ಪಿಗೆ ಅವರು ಸಾಕಿದ ನಾಯಿ ಅಥವಾ ಬೆಕ್ಕು ಅಥವಾ ಇನ್ನಾವುದೇ ಪ್ರಾಣಿ ಶಿಕ್ಷೆ ಅನುಭವಿಸಬೇಕಾದ ನಿದರ್ಶನಗಳು ಹಲವಾರು.

ಇಲ್ಲೊಂದು ಕಡೆ ಮಾಲೀಕನೊಬ್ಬ ಮಾಡಿದ ತಪ್ಪಿಗೆ ಆತನ ಸಾಕು ನಾಯಿಯೊಂದು (Pet Dog) ಪ್ರಾಣ ಬಿಟ್ಟ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಈ ಕುರಿತಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಪ್ರಾಣ ಬಿಟ್ಟ ನಾಯಿಯ ಮಾಲೀಕನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡುತ್ತಿದ್ದಾರೆ.

Pet Dog Passes Away Due

ಹರ್ಯಾಣ ಮೂಲದ ಕುಟುಂಬವೊಂದು ತಾಜ್‌ ಮಹಲ್‌ ನೋಡಲು ಆಗ್ರಾಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ತಮ್ಮ ಸಾಕು ನಾಯಿಯನ್ನು ಸಹ ತಮ್ಮೊಂದಿಗೆ ಕಾರಿನಲ್ಲಿ ಕರೆ ತಂದಿದ್ದರು. ಸಾಕು ಪ್ರಾಣಿಗಳನ್ನು ಕರೆತರುವಂತೆ ನಿಯಮ ಇಲ್ಲದಿದ್ದರೂ ಅದನ್ನು ಲೆಕ್ಕಿಸದ ಕುಟುಂಬವು ತಮ್ಮೊಂದಿಗೆ ಕಾರಿನಲ್ಲಿ ತಮ್ಮ ಸಾಕು ನಾಯಿಯನ್ನು ಕರೆತಂದಿದ್ದಾರೆ.

ಇನ್ನು ತಾಜ್‌ ಮಹಲ್‌ ನೋಡುವ ಸಂಧರ್ಭದಲ್ಲಿ ಆ ಕುಟುಂಬವು ತಮ್ಮ ಸಾಕು ನಾಯಿಯನ್ನು ಕಾರಿನಲ್ಲಿಯೇ ಇರಿಸಿ ಡೋರ್‌ ಲಾಕ್‌ ಮಾಡಿ ಹೊರ ಹೋಗಿದ್ದಾರೆ. ಈ ಸಂಧರ್ಭದಲ್ಲಿ ಸಾಕು ನಾಯಿಗೆ ಕಾರಿನೊಳಗೆ ನೀರು, ಗಾಳಿಯ ಅಭಾವವದಿಂದ ಅದು ಕಾರಿನಲ್ಲಿಯೇ ಪ್ರಾಣ ಬಿಟ್ಟಿದೆ ಎಂದು ವರದಿಗಳು ತಿಳಿಸಿವೆ.

ಘಟನೆಗೆ ಸಂಭಧಿಸಿದಂತೆ ಟ್ವಿಟ್ಟರ್‌ನಲ್ಲಿ ವಿಡಿಯೋ ಒಂದು ಹರಿದಾಡುತ್ತಿದ್ದು ವಿಡಿಯೋದಲ್ಲಿ ನಾಯಿ ಸತ್ತು ಹೋಗಿರುವುದನ್ನು ಕಾಣಬಹುದಾಗಿದೆ. ಹರ್ಯಾಣ ರಿಜಿಸ್ಟ್ರೇಷನ್‌ ಇರುವ ಹ್ಯುಂಡೈ ಕಾರಿನ ಒಳಗಡೆ ಹಿಂಬಸಿ ಸೀಟ್‌ ಕೆಳಗೆ ನಾಯಿ ಉಸಿರುಗಟ್ಟಿ ಸತ್ತಿರುವುದನ್ನು ಕಾಣಬಹುದಾಗಿದೆ. ಮಾಹಿತಿಗಳ ಪ್ರಕಾರ ನಾಯಿಯು ಬಿಸಿಲಿಗೆ ಕಾರಿನೊಳಗೆ ಸೆಕೆ ಹೆಚ್ಚಾಗಿ ನೀರು ಸಿಗದೆ ಉಸಿರುಗಟ್ಟಿ ಅಸುನೀಗಿದೆ ಎಂದು ತಿಳಿದು ಬಂದಿದೆ.

ಅಲ್ಲೇ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಇದರ ವಿಡಿಯೋವನ್ನು ತನ್ನ ಮೊಬೈಲ್‌ ಫೋನ್‌ನ್ಲಿ ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಈತನ ವಿಡಿಯೋಗೆ ಭಾರೀ ಸ್ಪಂದನೆ ದೊರೆತಿದ್ದು ನೆಟ್ಟಿಗರು ಆ ನಾಯಿಯ ಮಾಲೀಕನ ಮೇಲೆ ಕಿಡಿ ಕಾರುತ್ತಿದ್ದಾರೆ. ಒಬ್ಬ ಸಾಕು ಪ್ರಾಣಿಯನ್ನು ಇಷ್ಟೊಂದು ಅಮಾನುಷವಾಗಿ ಸಾಯುವಂತೆ ಮಾಡಿದ ಆತನ ವಿರುದ್ದ ಪ್ರಾಣಿ ದಯಾ ಸಂಘಕ್ಕೆ ಅರ್ಜಿ ಸಲ್ಲಿಸಿ ತಕ್ಕ ಶಿಕ್ಷೆ ನೀಡುವಂತೆ ಆಗ್ರಸಿದ್ದಾರೆ.

ಇನ್ನು ಆಮಿರ್‌ ಖಾದ್ರಿ ಎಂಬಾತ ಘಟನೆಯ ವಿಡಿಯೋ ತೆಗೆದು ಟ್ವೀಟ್‌ ಮಾಡಿಬದ್ದು ಅದರಲ್ಲಿ ಆಗ್ರಾ ಮತ್ತು ಉತ್ತರ ಪ್ರದೇಶ ಪೊಲೀಸರನ್ನು ಸಹ ಟ್ಯಾಗ್‌ ಮಾಡಿದ್ದಾನೆ. ತಾಜ್‌ಮಹಲ್‌ನ ವೆಸ್ಟ್‌‌ ಗೇಟ್‌ ಬಳಿ ಈ ಕಾರನ್ನು ಪಾರ್ಕ್‌ ಮಾಡಿದ್ದು ವಿಡಿಯೋದಲ್ಲಿ ಕಾರಿನ ನಂಬರ್‌ ಅನ್ನು ಸಹ ಸೆರೆ ಹಿಡಿದಿದ್ದು, ಪೊಲೀಸರ ತನಿಖೆಗೆ ಇದು ಸಹಕಾರಿಯಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, July 4, 2023, 19:30 [IST]
English summary
Pet dog passes away due to suffocation in car while owner explores taj mahal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+