ಕೋವಿಡ್ 19 ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಪೆಟ್ರೋಲ್

ಕರೋನಾ ವೈರಸ್‌ ಎರಡನೇ ಅಲೆಯ ಆರ್ಭಟ ಭಾರತದಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದೆ. ಎರಡನೇ ಅಲೆ ಪೂರ್ತಿಯಾಗಿ ಮರೆಯಾಗುವ ಮುನ್ನವೇ ತಜ್ಞರು ಮೂರನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಕರೋನಾ ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಪೆಟ್ರೋಲ್

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚು ಹೆಚ್ಚು ಜನರಿಗೆ ಲಸಿಕೆ ನೀಡುವ ಮೂಲಕ ಮೂರನೇ ಅಲೆಯ ಪರಿಣಾಮಗಳನ್ನು ಕಡಿಮೆ ಮಾಡಲು ನಿರ್ಧರಿಸಿವೆ. ಆದರೆ ಸರ್ಕಾರಿ ಅಧಿಕಾರಿಗಳು, ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಜಾಗೃತಿ ಮೂಡಿಸಿದ ನಂತರವೂ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣಕ್ಕೆ ಲಸಿಕೆ ಪಡೆಯುವವರಿಗೆ ವಿಭಿನ್ನ ಉಡುಗೊರೆಗಳನ್ನು ನೀಡಲಾಗುತ್ತಿದೆ.

ಕರೋನಾ ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಪೆಟ್ರೋಲ್

ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಲಸಿಕೆ ಪಡೆಯುವವರಿಗೆ ಲಕ್ಕಿ ಡ್ರಾ ಮೂಲಕ ಹೊಸ ಕಾರನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಘೋಷಿಸಲಾಗಿದೆ. ಪ್ರತಿ ವಾರ 5 ಜನರನ್ನು ಆಯ್ಕೆ ಮಾಡಿ ವಿಜೇತಶಾಲಿಗೆ ಹೊಸ ಕಾರನ್ನು ಉಡುಗೊರೆಯಾಗಿ ನೀಡಲಾಗುವುದು.

ಕರೋನಾ ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಪೆಟ್ರೋಲ್

ಈಗ ಪಾಂಡಿಚೆರಿಯಲ್ಲಿಯೂ ಕರೋನಾ ಲಸಿಕೆ ಪಡೆಯುವವರಿಗೆ ಉಡುಗೊರೆ ಘೋಷಿಸಲಾಗಿದೆ. ಕರೋನಾ ಲಸಿಕೆ ಮೊದಲ ಡೋಸ್ ಪಡೆಯುವವರಿಗೆ ಒಂದು ಲೀಟರ್ ಪೆಟ್ರೋಲ್ ನೀಡಲಾಗುವುದು ಎಂದು ಘೋಷಿಸಲಾಗಿದೆ.

ಕರೋನಾ ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಪೆಟ್ರೋಲ್

ಪಾಂಡಿಚೆರಿಯ ವಿಲಿಯನೂರ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆ ಕೇಂದ್ರದಲ್ಲಿ ಜೂನ್ 26ರಂದು ಲಸಿಕೆ ಅಭಿಯಾನ ಆಯೋಜಿಸಲಾಗಿದೆ. ಈ ಅಭಿಯಾನದಲ್ಲಿ ಭಾಗವಹಿಸಿ ಕರೋನಾ ಲಸಿಕೆ ಪಡೆಯುವವರಿಗೆ ಉಚಿತ ಪೆಟ್ರೋಲ್ ನೀಡಲಾಗುವುದು ಎಂದು ಖಾಸಗಿ ಪೆಟ್ರೋಲ್ ಬಂಕ್'ವೊಂದು ಘೋಷಿಸಿದೆ.

ಕರೋನಾ ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಪೆಟ್ರೋಲ್

ಜೂನ್ 26ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಲಸಿಕೆ ಪಡೆಯುವ ಎಲ್ಲರಿಗೂ ಅರ್ಧ ಲೀಟರ್ ಪೆಟ್ರೋಲ್ ಉಚಿತವಾಗಿ ನೀಡಲಾಗುವುದು. ಈ ಉಡುಗೊರೆಯು ಮೊದಲ ಡೋಸ್ ಪಡೆಯುವವರಿಗೆ ಲಭಿಸಲಿದೆ.

ಕರೋನಾ ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಪೆಟ್ರೋಲ್

ಆಟೋ ಚಾಲಕರು ಸೇರಿದಂತೆ ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದರೆ ಉಚಿತವಾಗಿ 1 ಲೀಟರ್ ಪೆಟ್ರೋಲ್ ನೀಡಲಾಗುವುದು. ಉಚಿತವಾಗಿ ಪೆಟ್ರೋಲ್ ಲಭಿಸುವುದರಿಂದ ಹೆಚ್ಚು ಜನರು ಲಸಿಕೆ ಪಡೆಯುವ ನಿರೀಕ್ಷೆಗಳಿವೆ.

ಕರೋನಾ ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಪೆಟ್ರೋಲ್

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿದಿನ ಏರಿಕೆಯಾಗುತ್ತಲೇ ಇದೆ. ದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ರೂ.100ರ ಗಡಿ ದಾಟಿದೆ. ಇದರಿಂದ ವಾಹನ ಸವಾರರು ಆತಂಕಕ್ಕೀಡಾಗಿದ್ದಾರೆ.

ಕರೋನಾ ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಪೆಟ್ರೋಲ್

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ವಾಹನ ಸವಾರರು ಮಾತ್ರವಲ್ಲದೇ ಗೃಹಿಣಿಯರು ಸಹ ಚಿಂತಿತರಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದೇ ಈ ಚಿಂತೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲು ಮುಂದಾಗುತ್ತಿಲ್ಲ.

ಕರೋನಾ ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಪೆಟ್ರೋಲ್

ಈ ಬಗ್ಗೆ ಇತ್ತೀಚಿಗೆ ಮಾತನಾಡಿದ್ದ ಕೇಂದ್ರ ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಪ್ರಧಾನ್, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಸದ್ಯಕ್ಕೆ ಕಡಿಮೆ ಮಾಡಲು ಸಾಧ್ಯವಿಲ್ಲವೆಂದು ಹೇಳಿದ್ದರು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Petrol bunk in Puducherry offers free petrol for people taking first dose of Covid 19 vaccine. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X