50 ಲೀಟರ್‌ ಸಾಮರ್ಥ್ಯದ ಜಡ್ಜ್ ಕಾರಿಗೆ 57 ಲೀಟರ್‌ ಪೆಟ್ರೋಲ್ ತುಂಬಿ ಗೋಲ್‌ಮಾಲ್: ಪೆಟ್ರೋಲ್ ಬಂಕ್ ಸೀಲ್

ಪೆಟ್ರೋಲ್‌ಬಂಕ್‌ ಗೋಲ್‌ಮಾಲ್‌ಗಳೇನೂ ನಮಗೆ ಹೊಸತಲ್ಲ. ದಿನ ಬೆಳಗಾದರೆ ಪೆಟ್ರೋಲ್‌‌ ಹಾಕುವುದರಲ್ಲಿ ಗೋಲ್‌ ಮಾಲ್‌ ಮಾಡಿದ್ದಾರೆ ಎಂಬ ಸುದ್ದಿಗಳು ದಿನ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತದೆ. ಇದರಲ್ಲಿ ಬಹಳಷ್ಟು ಬಾರಿ ಪೆಟ್ರೋಲ್‌ ಬಂಕ್‌ಗಳು ಒಂದಲ್ಲಾ ಒಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಲೇ ಇರುತ್ತವೆ.

ಆದರೆ ಇಲ್ಲೊಂದು ಕಡೆ ಪೆಟ್ರೋಲ್‌ ಬಂಕೊಂದು ಇದೇ ರೀತಿ ಮೋಸ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡ ಪರಿಣಾಮ ಪೆಟ್ರೋಲ್‌ ಬಂಕೇ ಸೀಜ್ ಆದ ಘಟನೆಯೊಂದು ನಡೆದಿದೆ. ಹೌದು, ಮಧ್ಯ ಪ್ರದೇಶದ ಭೋಪಾಲ್‌ ಎಂಬಲ್ಲಿ ಘಟನೆ ನಡೆದಿದ್ದು, ವರದಿಗಳ ಪ್ರಕಾರ ಜಡ್ಜ್‌ ವಾಹನಕ್ಕೆ ಮೋಸ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡ ಪೆಟ್ರೋಲ್‌ ಬಂಕ್‌ ಬಳಿಕ ಸೀಲ್‌ ಆಗಿದೆ ಎಂದು ತಿಳಿದು ಬಂದಿದೆ.

50 ಲೀಟರ್‌ ಸಾಮರ್ಥ್ಯದ ಜಡ್ಜ್ ಕಾರಿಗೆ 57 ಲೀಟರ್‌ ಪೆಟ್ರೋಲ್

ವರದಿಗಳ ಪ್ರಕಾರ, ಹೈಕೋರ್ಟ್‌ ಜಡ್ಜ್‌ ಒಬ್ಬರ ಕಾರು ಇಂಧನ ತುಂಬಿಸುವುದಕ್ಕಾಗಿ ಮೇಲೆ ತಿಳಿಸಿದ ಪೆಟ್ರೋಲ್‌ ಬಂಕ್‌ಗೆ ಬಂದಿದೆ. ಕಾರಿನ ಪೆಟ್ರೋಲ್‌ ಟ್ಯಾಂಕ್‌ನ ಒಟ್ಟು ಸಾಮರ್ಥ್ಯವೇ 50 ಲೀಟರ್‌ಗಳು. ಆದರೆ ಪೆಟ್ರೋಲ್‌ ಬಂಕ್‌ನ ಸಿಬ್ಬಂದಿಗಳಿಗೆ ಇದು ತಿಳಿದಿರಲಿಲ್ಲ. ಅವರು ಇತರರನ್ನು ವಂಚಿಸುವಂತೆ 50 ಲೀಟರ್‌ನ ಟ್ಯಾಂಕ್‌ನಲ್ಲಿ ಸುಮಾರು 57 ಲೀಟರ್‌ನಷ್ಟು ಇಂಧನವನ್ನು ತುಂಬಿಸಿದ್ದಾರೆ. ಕಾರಿನ ಹಿಂದುಗಡೆ ಸೀಟ್‌ನಲ್ಲಿ ಕೂತಿದ್ದ ಜಡ್ಜ್‌, ಕಾರಿಗೆ 57 ಲೀಟರ್‌ ಇಂಧನ ತುಂಬಿರುವುದನ್ನು ಕಂಡು ಶಾಕ್ ಆಗಿದ್ದಾರೆ.

ಕೂಡಲೇ ಸಿಬ್ಬಂದಿ ಬಳಿ ಬಿಲ್ ತರಿಸಿದ ಜಡ್ಜ್‌, ಬಿಲ್‌ ಅನ್ನು ಸರಿಯಾಗಿ ಪರಿಶೀಲಿಸಿದ್ದಾರೆ. ಅದರಲ್ಲು ಕೂಡ 57 ಲೀಟರ್‌ ಇಂಧನ ತುಂಬಿರುವುದು ಎಂಟ್ರಿಯಾಗಿತ್ತು. ಕೂಡಲೇ ಅವರು ನನ್ನ ಕಾರಿನ ಇಂಧನ ಟ್ಯಾಂಕ್‌ನ ಸಾಮರ್ಥ್ಯ 50 ಲೀಟರ್‌. ಅದರಲ್ಲಿ ಹೆಚ್ಚುವರಿ ಏಳು ಲೀಟರ್‌ನಷ್ಟು ಇಂಧನ ತುಂಬಲು ಸಾಧ್ಯವೇ ಇಲ್ಲ. ಖುದ್ದಾಗಿ ಜಡ್ಜ್‌ ಅವರೇ ಪ್ರಾಥಮಿಕ ತನಿಖೆಗಳನ್ನು ನಡೆಸಿದ ನಂತರ ಹೆಚ್ಚಿನ ತನಿಖೆಗಾಗಿ ಅಲ್ಲಿನ ಸ್ಥಳೀಯ ಪೋಲೀಸ್‌ ಸ್ಟೇಷನ್‌ನ ಅಧಿಕಾರಿಗಳನ್ನು ಕರೆಸಿದ್ದಾರೆ.

ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸಿ ಪೆಟ್ರೋಲ್‌ ಬಂಕ್‌ ಗೋಲ್‌ಮಾಲ್‌ ಮಾಡಿರುವುದನ್ನು ಖಾತರಿ ಪಡಿಸಿಕೊಂಡು ಪೆಟ್ರೋಲ್‌ ಬಂಕನ್ನು ಸೀಲ್‌ ಮಾಡಿದ್ದಾರೆ. ಇನ್ನು ಪರಿಸರದ ಎಲ್ಲಾ ಪೆಟ್ರೋಲ್‌ ಪಂಪನ್ನು ಅಲ್ಲಿನ ಜಿಲ್ಲಾ ಆಡಳಿತವು ನೇಮಕ ಮಾಡುವ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ ನಂತರವಷ್ಟೇ ಈಗ ವಂಚನೆ ಮಾಡಿರುವ ಪೆಟ್ರೋಲ್‌ ಬಂಕನ್ನು ಎಂದಿನಂತೆ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.

ಇನ್ನು ವಂಚನೆ ನಡೆಸಿರುವ ಪೆಟ್ರೋಲ್‌ ಪಂಪ್‌ ಮತ್ತು ಪ್ರದೇಶದಲ್ಲಿ ಇರುವ ಪೆಟ್ರೊಲ್‌ ಪಂಪ್‌ಗಳೆಲ್ಲದರ ಪೆಟ್ರೋಲ್‌ ಹಾಕಲು ಬಳಸುವ ಪರಿಕರಗಳನ್ನು ಜಿಲ್ಲಾ ಆಡಳಿತವು ನೇಮಿಸಲಿರುವ 14 ಅಧಿಕಾರಿಗಳ ಮೇಲ್ವಿಚಾರಣಾ ಸಂಘವು ಕೂಲಂಕುಷವಾಗಿ ಪರಿಶೀಲನೆ ನಡೆಸಲಿದ್ದು, ಇದರಲ್ಲಿ ಆಯಾ ಪೆಟ್ರೋಲ್‌ ಬಂಕ್‌ಗಳು ಗ್ರಾಹಕರಿಗೆ ಮೋಸ ಅಥವಾ ವಂಚನೆ ಮಾಡುತ್ತಿರುವುದು ಸಾಬೀತಾದರೆ ಅಂತಹ ಪೆಟ್ರೋಲ್‌ ಬಂಕ್‌ಗಳ ಮೇಲೆ ಕಾನೂನು ಬದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು 2021 ರಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಇದೇ ರೀತಿ ಒಂದು ಪೆಟ್ರೋಲ್‌ ಬಂಕನ್ನು ಸೀಲ್‌ ಮಾಡಲಾಗಿತ್ತು. ಪ್ರಕರಣದಲ್ಲಿ ಪೆಟ್ರೋಲ್‌ ಬಂಕ್‌ ಮೋಸ ಮಾಡಲು ಹೋಗಿ ರಾಜ್ಯದ ಕೃಷಿ ಮಂತ್ರಿಯಾಗಿದ್ದಂತಹ ಮುಖೇಶ್‌ ಪಟೇಲ್‌ ಅವರ ಕೈಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿ ಹಾಕಿಕೊಂಡಿತ್ತು. ಸೂರತ್‌ ನಗರದ ಜೇಹಾಂಗಿಪುರದಲ್ಲಿದ್ದಂತಹ ಪೆಟ್ರೋಲ್‌ ಬಂಕ್‌ ನಯಾರ ಎಂಬ ಖಾಸಗಿ ಕಂಪನಿಯ ಒಡೆತನದಲ್ಲಿತ್ತು.

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ:

ಇದೇ ರೀತಿಯ ಪ್ರಕರಣ ಇದೇ ಮೊದಲೇನಲ್ಲ. ಇದಕ್ಕಿಂತ ಹಿಂದೆಯೂ ರೀತಿಯಾದಂತಹ ಹಲವಾರು ಪ್ರಕರಣಗಳು ದಾಖಲಾಗಿವೆ. ಸಾಮಾನ್ಯವಾಗಿ ಪೆಟ್ರೋಲ್ ಅಥವಾ ಡೀಸೆಲ್‌ ಖರೀದಿಸಲು ಬರುವ ಗ್ರಾಹಕರಿಗೆ ರೀತಿಯ ಒಂದು ಮೋಸಕ್ಕೆ ತಾವು ಒಳಗಾಗುತ್ತಿದ್ದೇವೆ ಎಂದು ತಿಳಿಯುವುದೇ ಇಲ್ಲ. ಹಾಗಾಗಿ ಪೆಟ್ರೋಲ್‌ ಬಂಕ್‌ ಮಾಲೀಕರು ತಮ್ಮ ಕೆಲಸಗಾರರೊಂದಿಗೆ ಸೇರಿ ರೀತಿಯಾದಂತಹ ಕೃತ್ಯಗಳಲ್ಲಿ ತೊಡಗುತ್ತಾರೆ. ಇಂತಹ ಸಂಧರ್ಭದಲ್ಲಿ ಗ್ರಾಹಕರು ಕೊಂಚ ಜಾಗರೂಕರಾಗಿದ್ದರೆ ಇಂತಹ ವಂಚನೆಗಳಿಂದ ತಪ್ಪಿಸಿಕೊಳ್ಳಬಹುದು.

Article Published On: Tuesday, February 14, 2023, 19:00 [IST]
English summary
Petrol bunk was sealed after an attempt to defraud a high court judge
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+