ನವದಂಪತಿಗಳಿಗೆ ಸೈಕಲ್ ಗಿಫ್ಟ್ ನೀಡಿದ ಫ್ರೆಂಡ್ಸ್ ಉದ್ದೇಶವಾದ್ರು ಏನು ಗೊತ್ತಾ?

ಮದುವೆ ಮನೆಗಳಲ್ಲಿ ನವದಂಪತಿಗಳಿಗೆ ಶುಭ ಹಾರೈಸುವಾಗ ಏನಾದ್ರು ಗಿಫ್ಟ್ ಕೊಡುವುದು ಕಾಮನ್. ಕೆಲವರು ದುಬಾರಿ ಗಿಫ್ಟ್ ನೀಡಿದ್ರೆ ಇನ್ನು ಕೆಲವರು ತಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸಣ್ಣಪುಟ್ಟ ಗಿಫ್ಟ್ ನೀಡಿ ಶುಭ ಕೋರುವುದನ್ನು ನಾವೆಲ್ಲಾ ನೋಡಿಯೇ ಇರುತ್ತೆವೆ. ಆದ್ರೆ ಇಲ್ಲೊಂದು ಮದುವೆ ಮನೆಯಲ್ಲಿ ಗೆಳೆಯರು ಸೈಕಲ್ ಗಿಫ್ಟ್ ನೀಡುವ ಮೂಲಕ ಮದುಮಕ್ಕಳಿಗೆ ಸರ್ಫೈಸ್‌ ಕೊಟ್ಟಿದ್ದಾರೆ.

ನವದಂಪತಿಗಳಿಗೆ ಸೈಕಲ್ ಗಿಫ್ಟ್ ನೀಡಿದ ಫ್ರೆಂಡ್ಸ್ ಉದ್ದೇಶವಾದ್ರು ಏನು ಗೊತ್ತಾ?

ಹೌದು, ತಮಿಳುನಾಡಿನ ನಾಗಪಟ್ಟಿನಂ ಎಂಬಲ್ಲಿ ನಡೆದ ಮದುವೆ ಮನೆಯೊಂದರಲ್ಲಿ ನವದಂಪತಿಗಳಿಗೆ ಅವರ ಗೆಳೆಯರು ನೀಡಿರುವ ಸ್ಪೆಷಲ್ ಗಿಫ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಸೈಕಲ್ ಕೊಟ್ಟ ಕಾರಣವನ್ನು ಕೇಳಿ ಮದುವೆ ಮನೆಯಲ್ಲಿದ್ದವರಿಗೆ ಒಂದು ನಿಮಿಷ ಗಲಿಬಿಲಿಗೊಂಡಿದ್ದಾರೆ.

ನವದಂಪತಿಗಳಿಗೆ ಸೈಕಲ್ ಗಿಫ್ಟ್ ನೀಡಿದ ಫ್ರೆಂಡ್ಸ್ ಉದ್ದೇಶವಾದ್ರು ಏನು ಗೊತ್ತಾ?

ಮೊದಮೊದಲು ಗೆಳೆಯನ ಮದುವೆಯಲ್ಲಿ ಬೈಕ್ ಒಂದನ್ನು ಗಿಫ್ಟ್ ಕೊಡುವ ಯೋಜನೆಯಲ್ಲಿದ್ದ ಯುವಕರು, ತದನಂತರ ಹೆಚ್ಚುತ್ತಿರುವ ಇಂಧನ ಬೆಲೆಗಳಿಂದಾಗಿ ಬೈಕ್ ಗಿಫ್ಟ್ ನೀಡುವ ಪ್ಲ್ಯಾನ್ ಬೇಡ ಅಂತಾ ಕೈಬಿಟ್ಟಿದ್ದಾರಂತೆ.

ನವದಂಪತಿಗಳಿಗೆ ಸೈಕಲ್ ಗಿಫ್ಟ್ ನೀಡಿದ ಫ್ರೆಂಡ್ಸ್ ಉದ್ದೇಶವಾದ್ರು ಏನು ಗೊತ್ತಾ?

ಆಗ ತಲೆಯಲ್ಲಿ ಆ ಯುವಕರ ತಲೆಯಲ್ಲಿ ಬಂದಿದ್ದೆ ಬೈಕ್ ಬದಲಾಗಿ ಸೈಕಲ್ ಗಿಫ್ಟ್ ಮಾಡುವುದು. ಹೌದು, ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಗಳಿಂದಾಗಿ ಸಾಮಾನ್ಯ ವರ್ಗದ ಜನರು ಬೆಸತ್ತು ಹೋಗಿದ್ದು, ಸರ್ಕಾರದ ಗಮನ ಸೆಳೆಯಲು ಈ ರೀತಿ ಮಾಡಿದ್ದಾಗಿ ಗಿಫ್ಟ್ ಕೊಟ್ಟ ಯುವಕರು ಹೇಳಿಕೊಂಡಿದ್ದಾರೆ.

ನವದಂಪತಿಗಳಿಗೆ ಸೈಕಲ್ ಗಿಫ್ಟ್ ನೀಡಿದ ಫ್ರೆಂಡ್ಸ್ ಉದ್ದೇಶವಾದ್ರು ಏನು ಗೊತ್ತಾ?

ಜೊತೆಗೆ ಮದುವೆ ಮನೆಯಲ್ಲಿ ಬಂದಿದ್ದ ಮದುಮಕ್ಕಳ ಸಂಬಂಧಿಕರಿಗೂ ಅರಿವು ಮೂಡಿಸಿದ ಮುರಗನ್ ಮತ್ತು ಶೈಲಾ ದಂಪತಿಗಳ ಗೆಳೆಯರು, 'ಅನಗತ್ಯವಾಗಿ ವಾಹನ ಬಳಕೆ ಬಿಡಿ ಸೈಕಲ್ ಉಪಯೋಗಿಸಿ ಇಂಧನ ಉಳಿಸಿ' ಅಂತಾ ಮನವಿ ಮಾಡಿದ್ದಾರೆ.

ನವದಂಪತಿಗಳಿಗೆ ಸೈಕಲ್ ಗಿಫ್ಟ್ ನೀಡಿದ ಫ್ರೆಂಡ್ಸ್ ಉದ್ದೇಶವಾದ್ರು ಏನು ಗೊತ್ತಾ?

ಸದ್ಯ ದೇಶದಲ್ಲಿ ಇಂಧನ ಬೆಲೆಗಳು ಇಳಿಮುಖದಲ್ಲಿದ್ದರೂ ಕೂಡಾ ಚುನಾವಣೆಗಳು ಮುಗಿದ ನಂತರ ಮತ್ತೆ ಹೆಚ್ಚುವ ಎಲ್ಲಾ ಸಾಧ್ಯತೆಗಳಿದ್ದು, ಪರಿಸರ ಪ್ರೇಮಿ ವಾಹನವಾದ ಸೈಕಲ್ ಬಳಕೆ ಮಾಡುವುದೇ ಸದ್ಯದ ಪರಿಸ್ಥಿತಿಗೆ ಬೆಸ್ಟ್ ಆಯ್ಕೆ ಅಂದ್ರೆ ತಪ್ಪಾಗುವುದಿಲ್ಲ.

ನವದಂಪತಿಗಳಿಗೆ ಸೈಕಲ್ ಗಿಫ್ಟ್ ನೀಡಿದ ಫ್ರೆಂಡ್ಸ್ ಉದ್ದೇಶವಾದ್ರು ಏನು ಗೊತ್ತಾ?

ಈ ಬಗ್ಗೆ ನವದಂಪತಿಗಳು ಕೂಡಾ ಮಾತನಾಡಿದ್ದು, ಮೊದಲಿಗೆ ನನ್ನ ಗೆಳೆಯರು ನೀಡುತ್ತಿರುವ ಸೈಕಲ್ ಗಿಫ್ಟ್ ಬಗ್ಗೆ ಗೊಂದಲವಾಗಿತ್ತು. ತದನಂತರ ಮೂಡಿಸಿದ ಜಾಗೃತಿಯು ಆ ಉಡುಗೊರೆಯ ಮೌಲ್ಯವನ್ನು ಹೆಚ್ಚಿಸಿತು ಅಂತಾ ಹೇಳಿಕೊಂಡಿದ್ದಾರೆ.

ನವದಂಪತಿಗಳಿಗೆ ಸೈಕಲ್ ಗಿಫ್ಟ್ ನೀಡಿದ ಫ್ರೆಂಡ್ಸ್ ಉದ್ದೇಶವಾದ್ರು ಏನು ಗೊತ್ತಾ?

ಇದೊಂದೆ ಅಲ್ಲಾ, ತಮಿಳುನಾಡಿನ ಕಡಲೂರಿನಲ್ಲೂ ಕೂಡಾ ನಡೆದ ಮದುವೆ ಮನೆಯೊಂದರಲ್ಲಿ ನವದಂಪತಿಗಳಿಗೆ ಅವರ ಗೆಳೆಯರು ನೀಡಿರುವ ಸ್ಪೆಷಲ್ ಗಿಫ್ಟ್‌ ಬಗ್ಗೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ. ಪೆಟ್ರೋಲ್ ತುಂಬಿರುವ ಕ್ಯಾನ್ ಅನ್ನು ಗಿಫ್ಟ್ ಆಗಿ ನೀಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ನವದಂಪತಿಗಳಿಗೆ ಸೈಕಲ್ ಗಿಫ್ಟ್ ನೀಡಿದ ಫ್ರೆಂಡ್ಸ್ ಉದ್ದೇಶವಾದ್ರು ಏನು ಗೊತ್ತಾ?

ಮೊದಲೇ ಬೆಲೆ ಏರಿಕೆಯಿಂದ ದೇಶದ ಜನತೆ ರೋಷಿ ಹೋಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹಿಡಿತಕ್ಕೆ ಸಿಗದಿರುವುದು ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಇದರಿಂದಾಗಿ ವಧು-ವರರಿಗೆ ನೀಡಿದ ಪೆಟ್ರೋಲ್ ಗಿಫ್ಟ್ ಸುದ್ದಿಯು ಮತ್ತಷ್ಟು ಚರ್ಚೆಯಾಗುವಂತೆ ಮಾಡಿದೆ.

ನವದಂಪತಿಗಳಿಗೆ ಸೈಕಲ್ ಗಿಫ್ಟ್ ನೀಡಿದ ಫ್ರೆಂಡ್ಸ್ ಉದ್ದೇಶವಾದ್ರು ಏನು ಗೊತ್ತಾ?

ತಮಿಳುನಾಡಿನ ಕಡಲೂರು ಜಿಲ್ಲೆಯ ಕುಮಾಚ್ಚಿ ಗ್ರಾಮದಲ್ಲಿ ಇಂತದೊಂದು ಅಪರೂಪದ ಘಟನೆ ನಡೆದಿದ್ದು, ಎಲ್ಚೆಂಜಿಯನ್ ಮತ್ತು ಕಣಿಮೊಝಿ ವಿವಾಹ ಸಮಾರಂಭದಲ್ಲಿ ಸ್ನೇಹಿತರು 5 ಲೀಟರ್ ಪೆಟ್ರೋಲ್‍ ಕ್ಯಾನ್ ಅನ್ನು ಉಡುಗೊರೆಯಾಗಿ ನೀಡಿ ನೆರೆದಿದ್ದ ಸಂಬಂಧಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

MOST READ: ದೀಪಾವಳಿ ಹಬ್ಬಕ್ಕಾಗಿ ಉದ್ಯೋಗಿಗಳಿಗೆ 1600 ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ..!

ನವದಂಪತಿಗಳಿಗೆ ಸೈಕಲ್ ಗಿಫ್ಟ್ ನೀಡಿದ ಫ್ರೆಂಡ್ಸ್ ಉದ್ದೇಶವಾದ್ರು ಏನು ಗೊತ್ತಾ?

ವೇದಿಕೆಯ ಮೇಲೆ ನಿಂತಿದ್ದ ವಧು-ವರಿಗೆ ಅತಿಥಿಗಳು ಶುಭಾಶಯವನ್ನು ತಿಳಿಸುತ್ತಿದ್ದರು. ಈ ವೇಳೆ ಅವರ ಸ್ನೇಹಿತರು ಒಟ್ಟಾಗಿ ಬಂದು 5 ಲೀಟರ್ ನ ಪೆಟ್ರೋಲ್ ಕ್ಯಾನೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವೇಳೆ ಸ್ನೇಹಿತರು ಗಿಫ್ಟ್ ಕೊಟ್ಟಾಗ ನಗುತ್ತಲೇ ವಧು-ವರ ಸ್ವೀಕರಿಸಿದ್ದಾರೆ.

ನವದಂಪತಿಗಳಿಗೆ ಸೈಕಲ್ ಗಿಫ್ಟ್ ನೀಡಿದ ಫ್ರೆಂಡ್ಸ್ ಉದ್ದೇಶವಾದ್ರು ಏನು ಗೊತ್ತಾ?

ಏರಿಕೆಯಾಗುತ್ತಿರುವ ಇಂಧನ ಬೆಲೆಗಳು ಜನಸಾಮಾನ್ಯರಿಗೆ ಹೊರೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದುಬಾರಿ ದುನಿಯಾದಲ್ಲಿ ವಿವಾಹವಾಗುತ್ತಿರುವ ಜೋಡಿಗೆ ಅವರ ಗೆಳೆಯರು ಪೆಟ್ರೋಲ್ ಗಿಫ್ಟ್ ನೀಡಿ ಕೇಂದ್ರ ಸರ್ಕಾರದ ಗಮನಸೆಳೆಯುವ ಪ್ರಯತ್ನ ಮಾಡಲಾಗಿದೆಯೆಂತೆ.

MOST READ: ಭಾರತದಲ್ಲಿ ಓಮ್ನಿ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ ಮಾರುತಿ..!

ನವದಂಪತಿಗಳಿಗೆ ಸೈಕಲ್ ಗಿಫ್ಟ್ ನೀಡಿದ ಫ್ರೆಂಡ್ಸ್ ಉದ್ದೇಶವಾದ್ರು ಏನು ಗೊತ್ತಾ?

ಒಟ್ಟಿನಲ್ಲಿ ವಿವಾಹ ಸಮಾರಂಭದಲ್ಲಿ ಹೀಗೆ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಲು ಜನ ಹೊಸ ಹೊಸ ಐಡಿಯಾಗಳನ್ನು ಮಾಡುತ್ತಿದ್ದು, ಮುಂದೆ ನಿಮ್ಮ ಮದುವೆಯಲ್ಲೂ ಹೀಗೆ ಯಾರಾದ್ರು ಸರ್ಫೈಸ್‌ ಗಿಫ್ಟ್ ಕೊಟ್ರು ಅಚ್ಚರಿ ಇಲ್ಲ

Article Published On: Monday, November 5, 2018, 19:36 [IST]
English summary
Petrol and Diesel Price hike: friends gives bicycle as a gift.
Read more on off beat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+