Petrol - diesel Price: ಪ್ರಧಾನಿ ಮೋದಿ ಸರ್ಕಾರದಿಂದ ಸಿಹಿಸುದ್ದಿ.. ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಇಳಿಕೆ?

ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರ (Central Government) ಶೀಘ್ರದಲ್ಲೇ ದೊಡ್ಡದಾದ ಸಿಹಿಸುದ್ದಿ ನೀಡುವ ನೀರಿಕ್ಷೆಯಿದೆ. ಪೆಟ್ರೋಲ್ (Petrol) ಮತ್ತು ಡಿಸೇಲ್ (diesel) ದರವನ್ನು ಒಂದಷ್ಟು ಕಡಿಮೆಗೊಳಿಸಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಭಾರತದಲ್ಲಿ ಕಳೆದೊಂದು ವರ್ಷದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗದೆ ಹಾಗೆಯೇ ಇದ್ದು, ಶೀಘ್ರದಲ್ಲಿ ಇಳಿಕೆಯಾಗುವ ಸಾದ್ಯತೆಯಿದೆ. 'ಇಟಿ ನೌ' ವರದಿಯ ಪ್ರಕಾರ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ದರಗಳು ಕಡಿಮೆಯಾಗಿದ್ದು, ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕೇಂದ್ರ ಸರ್ಕಾರ ಸಿದ್ದವಾಗುತ್ತಿದೆ ಎನ್ನಲಾಗಿದೆ. 2024ರ ಲೋಕಸಭಾ ಚುನಾವಣೆಗೂ ಮುನ್ನ ಇಂಧನ ಬೆಲೆಗಳು ಇಳಿಕೆಯಾಗಬಹುದು.

Petrol - diesel Price: ಪ್ರಧಾನಿ ಮೋದಿ ಸರ್ಕಾರದಿಂದ ಸಿಹಿಸುದ್ದಿ.. ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಇಳಿಕೆ?

ರಷ್ಯಾ - ಉಕ್ರೇನ್ ಯುದ್ಧ ಸೇರಿದಂತೆ ನಾನಾ ಕಾರಣಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆ ಏರಿಕೆಯಾದ ಪರಿಣಾಮ ದೇಶೀಯ ತೈಲ ಮಾರಾಟ ಕಂಪನಿಗಳು (Oil Marketing Companies - OMCs), 2022 ರಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ.17 ಮತ್ತು ಡೀಸೆಲ್‌ಗೆ ರೂ.35 ಗರಿಷ್ಠ ನಷ್ಟ ಅನುಭವಿದವು. ಈಗ, 1 ಲೀಟರ್ ಪೆಟ್ರೋಲ್‌ಗೆ ರೂ.8-ರೂ.10 ಹಾಗೂ ಡೀಸೆಲ್‌ಗೆ ರೂ.3-ರೂ.4 ಲಾಭವನ್ನು ಮಾಡುತ್ತಿವೆ.

ಪ್ರಸ್ತುತ, ತೈಲ ಮಾರಾಟ ಕಂಪನಿಗಳು (OMCs) ಉತ್ತಮ ಲಾಭ ಗಳಿಸುತ್ತಿರುವುದರಿಂದ, ಅದನ್ನು ಕೊಂಚ ಪ್ರಮಾಣ ಜನರಿಗೆ ವರ್ಗಾಯಿಸಲು ಕೇಂದ್ರ ಸರ್ಕಾರದ ಪ್ರತಿನಿಧಿಗಳು ತೈಲ ಮಾರಾಟ ಕಂಪನಿ ಅಧಿಕಾರಿಗಳೊಂದಿಗೆ ಚರ್ಚೆ ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ. ಕಳೆದ ಮೂರು ತ್ರೈಮಾಸಿಕಗಳಲ್ಲಿ ತೈಲ ಮಾರಾಟ ಕಂಪನಿಗಳ ನಷ್ಟ ಗಣನೀಯವಾಗಿ ಕಡಿಮೆಯಾಗಿದ್ದು, ಐಒಸಿ, ಹೆಚ್‌ಪಿಸಿಎಲ್, ಬಿಪಿಸಿಎಲ್ ಕಂಪನಿಗಳು ರೂ.28,000 ಕೋಟಿ ಲಾಭವನ್ನು ಮಾಡಿವೆ.

Petrol - diesel Price: ಪ್ರಧಾನಿ ಮೋದಿ ಸರ್ಕಾರದಿಂದ ಸಿಹಿಸುದ್ದಿ.. ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಇಳಿಕೆ?

ಸದ್ಯ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.96.72, ಪ್ರತಿ ಲೀಟರ್ ಡೀಸೆಲ್‌ಗೆ ರೂ.89.62 ಇದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ.106.31 ಹಾಗೂ 1 ಲೀಟರ್ ಡೀಸೆಲ್‌ಗೆ ರೂ.94.27 ದರವಿದೆ. ಕೋಲ್ಕತ್ತಾದಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.106.03, ಪ್ರತಿ ಲೀಟರ್ ಡೀಸೆಲ್‌ಗೆ ರೂ.92.76 ಬೆಲೆಯಿದೆ.

ಕರ್ನಾಟಕದಲ್ಲಿ ಇಂಧನ ದರಗಳು ಎಷ್ಟಿದೆ ಎಂದು ತಿಳಿಯುವುದಾದರೆ, ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ.101.94 ಮತ್ತು 1 ಲೀಟರ್ ಡೀಸೆಲ್‌ಗೆ ರೂ.87.89 ದರವಿದೆ. ಮೈಸೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.101.63, ಪ್ರತಿ ಲೀಟರ್ ಡೀಸೆಲ್‌ಗೆ ರೂ.87.61 ಬೆಲೆಯಿದೆ. ಧಾರವಾಡದಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.101.71, ಪ್ರತಿ ಲೀಟರ್ ಡೀಸೆಲ್‌ಗೆ ರೂ.87.71 ಇದೆ.

Petrol - diesel Price: ಪ್ರಧಾನಿ ಮೋದಿ ಸರ್ಕಾರದಿಂದ ಸಿಹಿಸುದ್ದಿ.. ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಇಳಿಕೆ?

ಇನ್ನು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳ ಇಳಿಕೆ ಹಾಗೂ ಲೋಕಸಭಾ ಚುನಾವಣಾ ಹಿನ್ನೆಲೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಕಡಿಮೆಗೊಳಿಸಲು ಹೊರಟಿದೆ ಎನ್ನುವುದು ಖುಷಿಯ ವಿಚಾರವಾಗಿದೆ. ಆದರೆ, ಈ ದರ ಇಳಿಕೆ ಎಂದಿನಿಂದ ಜಾರಿಗೆ ಬರಲಿದೆ. ಎಷ್ಟು ಬೆಲೆ ಕಡಿಮೆಯಾಗಲಿದೆ ಎಂಬುದರ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿಯಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, December 12, 2023, 10:22 [IST]
English summary
Petrol diesel prices get cheaper pm modi government give soon good news report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+