1 ಲೀಟರ್ ಪೆಟ್ರೋಲ್ 15 ರೂಪಾಯಿ.. ಕೇಂದ್ರ ಸಚಿವರ ಮಹತ್ವದ ಹೇಳಿಕೆ

ಪೆಟ್ರೋಲ್ ದರ ಏರಿಕೆಯಾಗಿರುವುದು ವಾಹನ ಸವಾರರಿಗೆ ದೊಡ್ಡ ತಲೆನೋವಾಗಿದೆ. ಮುಂಬರುವ ವರ್ಷಗಳಲ್ಲಿ ಇಂಧನ ದರ ತೀವ್ರ ಕುಸಿತ ಕಾಣಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ, ಒಂದು ಲೀಟರ್ ಪೆಟ್ರೋಲ್ 15 ರೂಪಾಯಿಗೆ ಸಿಗಲಿದೆ.

ಬರಲಿರುವ ವರ್ಷಗಳಲ್ಲಿ ದೇಶಾದ್ಯಂತ ರಸ್ತೆಗಳಲ್ಲಿ ಎಲ್ಲ ವಾಹನಗಳು ಎಥನಾಲ್ ಇಂಧನ ಆಧಾರಿತವಾಗಿ ಒಡಲಿವೆ. ಒಂದೊಮ್ಮೆ ಬಹುತೇಕ ಜನರು ಇಂತಹ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿದರೇ ಒಂದು ಲೀಟರ್ ಪೆಟ್ರೋಲ್ 15 ರೂಪಾಯಿಗೆ ಕುಸಿಯಲಿದೆ ಎಂಬುದು ಸಚಿವರ ಲೆಕ್ಕಾಚಾರವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿ ಮಾಡುತ್ತದೆ.

1 ಲೀಟರ್ ಪೆಟ್ರೋಲ್ 15 ರೂಪಾಯಿ ಸಿಗುತ್ತೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ

ರಾಜಸ್ಥಾನದ ಪ್ರತಾಪಗಢದಲ್ಲಿ ಮಂಗಳವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, 'ಅನ್ನದಾತರಾಗಿರುವ ರೈತರು, ಇನ್ಮುಂದೆ ಶಕ್ತಿದಾತರಾಗಲಿದ್ದಾರೆ. ಮುಂಬರುವ ವರ್ಷಗಳಲ್ಲಿ ಎಲ್ಲ ವಾಹನಗಳು ರೈತರು ಉತ್ಪಾದಿಸುವ ಎಥೆನಾಲ್ ಮೂಲಕ ಚಲಿಸಲಿವೆ. ಸರಾಸರಿ 60% ಎಥೆನಾಲ್ ಹಾಗೂ 40% ಎಲೆಕ್ಟ್ರಿಸಿಟಿ ಪಡೆದರೆ, ಆಗ 1 ಲೀಟರ್ ಪೆಟ್ರೋಲ್ ದರ 15 ರೂಪಾಯಿಗೆ ಇಳಿಕೆಯಾಗಲಿದೆ' ಎಂದು ಹೇಳಿದ್ದಾರೆ.

ದೇಶಾದ್ಯಂತ ಎಥನಾಲ್ ಚಾಲಿತ ವಾಹನಗಳನ್ನು ಮುಂಬರುವ ವರ್ಷಗಳಲ್ಲಿ ಹೇರಳವಾಗಿ ಬಳಕೆ ಮಾಡುವುದರಿಂದ ವಾಯುವಾಲಿನ್ಯ ಕಡಿಮೆಯಾಗುತ್ತದೆ. ಕಚ್ಚಾ ತೈಲಕ್ಕಾಗಿ ವಿದೇಶಗಳಿಗೆ ಅವಲಂಬನೆಯಾಗುವುದು ಇಳಿಮುಖವಾಗುತ್ತದೆ. ಇಂಧನ ಆಮದು ಮಾಡಿಕೊಳ್ಳಲು ಖರ್ಚಾಗುತ್ತಿರುವ ಸರಿ ಸುಮಾರು ರೂ.16 ಲಕ್ಷ ಕೋಟಿ ಹಣ, ದೇಶದ ರೈತರಿಗೆ ಸಿಗುತ್ತದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಕೃಷಿ ತ್ಯಾಜ್ಯ (ಉದಾಹರಣೆಗೆ ಭತ್ತದ ಹುಲ್ಲು), ಅಕ್ಕಿಯಿಂದ ಎಥನಾಲ್ ಫ್ಯುಯೆಲ್ ತಯಾರಿಸಲಾಗುತ್ತದೆ. ಇಂತಹ ವಾಹನಗಳ ಬಳಕೆ ಹೆಚ್ಚಾದಾಗ ಎಥನಾಲ್ ಇಂಧಕ್ಕೆ ಭರ್ಜರಿ ಬೇಡಿಕೆ ಬಂದು, ಆ ಹಣ ನೇರವಾಗಿ ರೈತರಿಗೆ ಸಿಗುತ್ತದೆ. ಸದ್ಯ, ವಿವಿಧ ದ್ವಿಚಕ್ರ ಹಾಗೂ ಕಾರು ತಯಾರಕ ಕಂಪನಿಗಳು E20 (80% ಪೆಟ್ರೋಲ್ ಹಾಗೂ 20% ಎಥನಾಲ್) ಆಧಾರಿತ ಎಂಜಿನ್ ಹೊಂದಿರುವ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ.

ಇತ್ತೀಚೆಗೆ ನಿತಿನ್ ಗಡ್ಕರಿ ಅವರೇ ಟೊಯೊಟಾ ಕ್ಯಾಮ್ರಿ ಫ್ಲೆಕ್ಸ್ ಫ್ಯೂಯಲ್ ಆವೃತ್ತಿ ಆಗಸ್ಟ್ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತದೆ ಎಂದು ಘೋಷಣೆ ಮಾಡಿದ್ದರು. ಫ್ಲೆಕ್ಸ್ ಫ್ಯೂಯಲ್ ಕಾರುಗಳು, ಎಥೆನಾಲ್‌ನಂತಹ ಪರ್ಯಾಯ ಇಂಧನಗಳ ನೆರವಿನಿಂದ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ. ಇದಿಷ್ಟೇ ಅಲ್ಲದೆ, ಬಜಾಜ್, ಟಿವಿಎಸ್ ಮತ್ತು ಹೀರೋ ಕಂಪನಿಗಳ ದ್ವಿಚಕ್ರ ವಾಹನಗಳು 100% ಎಥೆನಾಲ್‌ನಲ್ಲಿ ಚಲಿಸುವ ತಂತ್ರಜ್ಞಾನದೊಂದಿಗೆ ಬರಲಿವೆ ಎಂದು ಸಚಿವರು ಹೇಳಿದ್ದರು.

ಇನ್ನು, ದೇಶದಲ್ಲಿ ಎಥೆನಾಲ್‌ ಇಂಧನದಲ್ಲಿ ಚಲಿಸುವಂತೆ ಎಂಜಿನ್ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ವಾಹನ ತಯಾರಕ ಕಂಪನಿಗಳು ನಿರತವಾಗಿವೆ. ಎಲ್ಲವು ಅಂದುಕೊಂಡಂತೆ ನಡೆದರೆ, ಮುಂಬರುವ ದಿನಗಳಲ್ಲಿ ಎಥೆನಾಲ್‌ ಚಾಲಿತ ವಾಹನಗಳೇ ರಸ್ತೆ ಮೇಲೆ ಇರಲಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿರುವಂತೆ ಪೆಟ್ರೋಲ್ ದರಗಳು ತೀರಾ ಕಡಿಮೆಯಾದರೂ ಅಚ್ಚರಿಪಡುವ ಅಗತ್ಯವಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, July 5, 2023, 14:39 [IST]
English summary
Petrol price rs15 per litre if nitin gadkari details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+