ಇಂಧನ ಬೆಲೆ ತೀರ್ವವಾಗಿ ಇಳಿಯಲಿದೆ... ಕೇಂದ್ರದ ಮಾಸ್ಟರ್ ಪ್ಲಾನ್‌ಗೆ ಸ್ಟನ್ ಆಗ್ತೀರ!
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ನಿರಂತರವಾಗಿ ಬದಲಾಗುತ್ತದೆ. ಆದ್ರೂ ಭಾರತದಲ್ಲಿ ಕಳೆದ ಕೆಲ ತಿಂಗಳುಗಳಿಂದ ಇಂಧನ ಬೆಲೆಗಳಲ್ಲಿ ದೊಡ್ಡ ಬದಲಾವಣೆ ಆಗದಿರುವುದನ್ನು ಎಷ್ಟು ಮಂದಿ ಗಮನಿಸಿದ್ದೀರಾ? ಮುಂದಿನ ಕೆಲವು ತಿಂಗಳುಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಬೆಲೆ ತೀವ್ರವಾಗಿ ಇಳಿದರೂ ಆಶ್ಚರ್ಯವಿಲ್ಲ. ಹೇಗೆ ಅಂತೀರಾ!
ಇದಕ್ಕೆ ಕಾರಣ ಇತ್ತೀಚೆಗೆ ಭಾರತ ಸರ್ಕಾರ ತೆಗೆದುಕೊಂಡಿರುವ ರಾಜತಾಂತ್ರಿಕ ನಿರ್ಧಾರ ಎನ್ನಲಾಗಿದೆ. ಒಂದು ವೇಳೆ ಇದು ನಿಜವಾದ್ರೆ ಖಂಡಿತ ಇಂಧನ ಬೆಲೆ ಇಳಿಕೆಯಾಗಲಿದೆ. ವಿವರವಾಗಿ ಹೇಳುವುದಾದ್ರೆ, ಕೇಂದ್ರ ಸರ್ಕಾರವು ರಷ್ಯಾದಿಂದ ತನ್ನ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸಲು ನಿರ್ಧರಿಸಿದರೆ ಇದು ಖಂಡಿತ ಸಾಧ್ಯ.

ವಿಶ್ವದ ಕಚ್ಚಾ ತೈಲದ ಪ್ರಮುಖ ರಫ್ತುದಾರರಲ್ಲಿ ರಷ್ಯಾ ಕೂಡ ಒಂದಾಗಿದೆ. ಆದ್ರೆ ಉಕ್ರೇನ್-ರಷ್ಯಾ ಯುದ್ಧದ ಸಂದರ್ಭದಲ್ಲಿ ಹಲವು ದೇಶಗಳು ರಷ್ಯಾದೊಂದಿಗೆ ಆರ್ಥಿಕ ಸಂಬಂಧಗಳನ್ನು ಕಡಿತಗೊಳಿಸಿದರೂ ಭಾರತ ಮಾತ್ರ ಸ್ನೇಹವನ್ನು ಮುಂದುವರೆಸಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೇ ವೇಳೆ ರಷ್ಯಾದಿಂದ ಕಚ್ಚಾ ತೈಲವನ್ನು ಭಾರತ ಹೊರತುಪಡಿಸಿ ವಿದೇಶಗಳಿಗೆ ರಫ್ತು ಮಾಡುವುದು ರಷ್ಯಾಗೆ ಕಷ್ಟಕರವಾಗಿತ್ತು.
ಆ ಸಮಯದಲ್ಲಿ, ಭಾರತವು ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ಖರೀದಿಸಲು ರಷ್ಯಾದೊಂದಿಗೆ ಮಾತುಕತೆ ನಡೆಸಿರುವುದು ಕೂಡ ಸುದ್ದಿಯಾಗಿತ್ತು. ಭಾರತವು ತನ್ನ ಕಚ್ಚಾ ಸಾಮಗ್ರಿಗಳಿಗಾಗಿ ಸಂಪೂರ್ಣವಾಗಿ ವಿದೇಶಗಳ ಮೇಲೆ ಅವಲಂಬಿತವಾಗಿರುವುದರಿಂದ, ಈ ವಿಷಯದಲ್ಲಿ ಯಾವುದೇ ದೇಶವನ್ನು ವಿರೋಧಿಸಲು ಸಾಧ್ಯವಿಲ್ಲ. ಆದ್ದರಿಂದ ನಾವು ಎಲ್ಲಾ ದೇಶಗಳೊಂದಿಗೆ ಸ್ನೇಹವನ್ನು ಕಾಪಾಡಿಕೊಳ್ಳಬೇಕು.

ಹಾಗಾಗಿಯೇ ಭಾರತವು ಪ್ರಸ್ತುತ ಸೌದಿ ಅರೇಬಿಯಾದಿಂದ ಪ್ರತಿ ಬ್ಯಾರೆಲ್‌ಗೆ USD 86.96 ಕ್ಕೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದರ ಜೊತೆಜೊತೆಗೆ USD 68.21 ಪಾವತಿಸುವ ಮೂಲಕ ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇದರರ್ಥ ಭಾರತವು ರಷ್ಯಾದ ಕಚ್ಚಾ ತೈಲದಿಂದ ಪ್ರತಿ ಬ್ಯಾರೆಲ್‌ಗೆ USD 18.75 ಲಾಭವನ್ನು ಪಡೆಯುತ್ತಿದೆ.
ಸದ್ಯ ಕೇಂದ್ರ ಸರ್ಕಾರದ ಪ್ರಮುಖ ಸಚಿವರು ಭಾರತದಲ್ಲಿ ಇಂಧನ ಮತ್ತು ಗ್ಯಾಸ್ ಬೆಲೆ ಇಳಿಕೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಪ್ರಸ್ತುತ ರಷ್ಯಾದಿಂದ ಖರೀದಿಸುತ್ತಿರುವ ಕಚ್ಚಾ ತೈಲದ ಪ್ರಮಾಣವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಬಹುದು ಎನ್ನುವ ಮಾತುಗಳು ಕೇಳಿಬಂದಿವೆ.

ಈಗಿರುವ ಶೇ.46ರ ಮಟ್ಟವನ್ನು ಶೇ.50ಕ್ಕೆ ಹೆಚ್ಚಿಸಲು ಭಾರತ ನಿರ್ಧರಿಸಿರುವಂತಿದೆ. ಅದು ಸಂಭವಿಸಿದಲ್ಲಿ ಪ್ರಸ್ತುತ ಮಾರಾಟವಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 10 ರೂ. ಇಳಿಕೆಯಾಗುವ ಸಾಧ್ಯತೆ ಇದೆ. ಭಾರತವು ರಷ್ಯಾದಿಂದ ಎಷ್ಟು ಕಚ್ಚಾ ತೈಲವನ್ನು ಖರೀದಿಸುತ್ತದೆ ಎಂಬುದರ ಮೇಲೆ ಇಲ್ಲಿನ ಪ್ರತಿ ಲೀಟರ್ ಮೇಲೆ ಬೆಲೆ ಕಡಿಮೆಯಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications