300ಕ್ಕೂ ಹೆಚ್ಚು ವಾಹನಗಳನ್ನು ಕಳುವು ಮಾಡಿ ಸಿಕ್ಕಿ ಬಿದ್ದ ಪಿಹೆಚ್‌ಡಿ ಪದವೀಧರ

ಕಾರುಗಳ ಕಳ್ಳತನವಾಗುವುದನ್ನು ತಡೆಯಲು ಕಾರುಗಳಲ್ಲಿ ಆಧುನಿಕ ಸುರಕ್ಷತಾ ಫೀಚರ್'ಗಳನ್ನು ಅಳವಡಿಸಲಾಗುತ್ತಿದೆ. ಎಷ್ಟೇ ಆಧುನಿಕ ಫೀಚರ್'ಗಳನ್ನು ಅಳವಡಿಸಿದರೂ ಕಾರುಗಳ್ಳರು ಆಧುನಿಕ ಉಪಕರಣಗಳ ಸಹಾಯದಿಂದ ಕಾರುಗಳನ್ನು ಕಳುವು ಮಾಡುತ್ತಿದ್ದಾರೆ.

300ಕ್ಕೂ ಹೆಚ್ಚು ವಾಹನಗಳನ್ನು ಕಳುವು ಮಾಡಿ ಸಿಕ್ಕಿ ಬಿದ್ದ ಪಿಹೆಚ್‌ಡಿ ಪದವೀಧರ

ಇದರಿಂದ ಕಾರು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ದೆಹಲಿ ಪೊಲೀಸರು ಇತ್ತೀಚಿಗೆ ಕಾರು ಕಳ್ಳತನದಲ್ಲಿ ಭಾಗಿಯಾಗಿದ್ದ ಇಬ್ಬರು ಖದೀಮರನ್ನು ಬಂಧಿಸಿದ್ದಾರೆ. ಬಂಧಿತರಿಬ್ಬರೂ ಉನ್ನತ ಶಿಕ್ಷಣ ಪಡೆದವರು ಎಂಬುದು ಗಮನಾರ್ಹ. ಅವರಲ್ಲಿ ಒಬ್ಬ ಪಿಹೆಚ್‌ಡಿ ಪದವೀಧರನಾದರೆ ಮತ್ತೊಬ್ಬ ದೆಹಲಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ.

300ಕ್ಕೂ ಹೆಚ್ಚು ವಾಹನಗಳನ್ನು ಕಳುವು ಮಾಡಿ ಸಿಕ್ಕಿ ಬಿದ್ದ ಪಿಹೆಚ್‌ಡಿ ಪದವೀಧರ

ಬಂಧಿತರಿಂದ ಕಳುವು ಮಾಡಲಾದ ಮಣಿಪುರದ 12 ದುಬಾರಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ಪೈಕಿ ಒಬ್ಬಾತನ ಹೆಸರು ಮೆಹ್ತಾಬ್ ಎಂದು ತಿಳಿದುಬಂದಿದೆ. ಆತ ಪಿಹೆಚ್‌ಡಿ ಪದವೀಧರನಾಗಿದ್ದು, ನ್ಯಾಷನಲ್ ಎಲಿಜಬಿಲಿಟಿ ಟೆಸ್ಟ್'ನಲ್ಲಿ ತೇರ್ಗಡೆಯಾಗಿದ್ದ.

300ಕ್ಕೂ ಹೆಚ್ಚು ವಾಹನಗಳನ್ನು ಕಳುವು ಮಾಡಿ ಸಿಕ್ಕಿ ಬಿದ್ದ ಪಿಹೆಚ್‌ಡಿ ಪದವೀಧರ

ಮತ್ತೊಬ್ಬನ ಹೆಸರು ತದ್ರಿಶ್ ಎಂದು ತಿಳಿದುಬಂದಿದೆ. ಆತ ದೆಹಲಿ ವಿಶ್ವವಿದ್ಯಾಲಯಕ್ಕೆ ಸೇರಿರುವ ಪ್ರತಿಷ್ಠಿತ ಕಾಲೇಜಿನಿಂದ ಪದವಿ ಪಡೆದಿದ್ದಾನೆ. ಆತ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿದ್ದ ಎಂದು ತಿಳಿದು ಬಂದಿದೆ.

300ಕ್ಕೂ ಹೆಚ್ಚು ವಾಹನಗಳನ್ನು ಕಳುವು ಮಾಡಿ ಸಿಕ್ಕಿ ಬಿದ್ದ ಪಿಹೆಚ್‌ಡಿ ಪದವೀಧರ

ದೆಹಲಿಯಲ್ಲಿ ದುಬಾರಿ ಬೆಲೆಯ ಕಾರುಗಳು ಕಳುವಾಗುತ್ತಿರುವ ಬಗ್ಗೆ ದೂರುಗಳು ದಾಖಲಾಗುತ್ತಿದ್ದವು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದ್ದಾರೆ.

300ಕ್ಕೂ ಹೆಚ್ಚು ವಾಹನಗಳನ್ನು ಕಳುವು ಮಾಡಿ ಸಿಕ್ಕಿ ಬಿದ್ದ ಪಿಹೆಚ್‌ಡಿ ಪದವೀಧರ

ಅವರು ಕಾರುಗಳನ್ನು ಮಾತ್ರವಲ್ಲದೆ ದುಬಾರಿ ಬೆಲೆಯ ಬೈಕ್'ಗಳನ್ನು ಕಳುವು ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಕಳುವು ಮಾಡಲು ಅವರು ಮಣಿಪುರದಿಂದ ದೆಹಲಿಗೆ ವಿಮಾನದಲ್ಲಿ ಬರುತ್ತಿದ್ದರು. ಈ ಗ್ಯಾಂಗ್ ಇದುವರೆಗೂ 300ಕ್ಕೂ ಹೆಚ್ಚು ವಾಹನಗಳನ್ನು ಕಳುವು ಮಾಡಿರುವುದು ತಿಳಿದು ಬಂದಿದೆ.

300ಕ್ಕೂ ಹೆಚ್ಚು ವಾಹನಗಳನ್ನು ಕಳುವು ಮಾಡಿ ಸಿಕ್ಕಿ ಬಿದ್ದ ಪಿಹೆಚ್‌ಡಿ ಪದವೀಧರ

ಕದ್ದ ವಾಹನಗಳಿಗೆ ನಕಲಿ ದಾಖಲೆಗಳನ್ನು ಸಿದ್ಧಪಡಿಸಿ ಮಣಿಪುರದಲ್ಲಿ ಮಾರಾಟ ಮಾಡಿದ್ದಾರೆ. ವಾಹನಗಳನ್ನು ಖರೀದಿಸಿರುವವರಲ್ಲಿ ಸಮಾಜ ಘಾತುಕರು ಸಹ ಸೇರಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ಘಟನೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳೂ ಸಹ ಭಾಗಿಯಾಗಿರಬಹುದು ಎಂದು ಶಂಕಿಸಲಾಗಿದೆ.

300ಕ್ಕೂ ಹೆಚ್ಚು ವಾಹನಗಳನ್ನು ಕಳುವು ಮಾಡಿ ಸಿಕ್ಕಿ ಬಿದ್ದ ಪಿಹೆಚ್‌ಡಿ ಪದವೀಧರ

ಸದ್ಯಕ್ಕೆ ವಾಹನ ಕಳ್ಳತನದ ಗ್ಯಾಂಗ್‌ನ ಇಬ್ಬರು ಸದಸ್ಯರು ಮಾತ್ರ ಸಿಕ್ಕಿಬಿದ್ದಿದ್ದಾರೆ. ಗ್ಯಾಂಗ್‌ನ ಇತರ ಸದಸ್ಯರನ್ನು ಬಂಧಿಸಲು ಮಣಿಪುರದ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ದೆಹಲಿ ಪೊಲೀಸರು ಮಣಿಪುರ ಪೊಲೀಸರೊಂದಿಗೆ ಕೈಜೋಡಿಸಿದ್ದಾರೆ.

300ಕ್ಕೂ ಹೆಚ್ಚು ವಾಹನಗಳನ್ನು ಕಳುವು ಮಾಡಿ ಸಿಕ್ಕಿ ಬಿದ್ದ ಪಿಹೆಚ್‌ಡಿ ಪದವೀಧರ

ಪೊಲೀಸರು ಬಿಡುಗಡೆಗೊಳಿಸಿರುವ ಫೋಟೋಗಳಲ್ಲಿ ಟೊಯೊಟಾ ಫಾರ್ಚೂನರ್, ಹ್ಯುಂಡೈ ಕ್ರೆಟಾ, ಮಹೀಂದ್ರಾ ಸ್ಕಾರ್ಪಿಯೋ, ಮಾರುತಿ ಸುಜುಕಿ ವಿಟಾರಾ ಬ್ರೆಝಾ ಸೇರಿದಂತೆ ಹಲವು ಕಾರುಗಳನ್ನು ಕಾಣಬಹುದು. ಈ ಎಲ್ಲಾ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಕಾರುಗಳಾಗಿವೆ ಎಂಬುದು ಗಮನಾರ್ಹ.

Most Read Articles

Kannada
English summary
Phd holder arrested for stealing more than 300 vehicles. Read in Kannada.
Story first published: Friday, July 2, 2021, 20:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X