ನುಚ್ಚುನೂರಾದ ಪಿಕ್-ಅಪ್ ಟ್ರಕ್ ವಿಶ್ವ ದಾಖಲೆ ಕನಸು
ಪಿಕ್-ಅಪ್ ಟ್ರಕ್‌ಗಳನ್ನು ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಈ ಟ್ರಕ್‌ಗಳನ್ನು ಕೆಲವೊಮ್ಮೆ ಕಾರುಗಳನ್ನು ಸಾಗಿಸಲು ಬಳಸಿದರೆ, ಇನ್ನೂ ಕೆಲವೊಮ್ಮೆ ಸಾಮಗ್ರಿಗಳನ್ನು ಸಾಗಿಸಲು ಬಳಸಲಾಗುತ್ತದೆ. ಪಿಕ್-ಅಪ್ ಟ್ರಕ್‌ಗಳು ವಿದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಅಮೆರಿಕಾದಂತಹ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ.

ಆ ದೇಶಗಳಲ್ಲಿ ಜನರು ತಮ್ಮದೇ ಆದ ಪಿಕ್ ಅಪ್ ಟ್ರಕ್‌ಗಳನ್ನು ಹೊಂದಿರುತ್ತಾರೆ. ಈ ಟ್ರಕ್‌ಗಳಿಗಾಗಿಯೇ ಕ್ರೀಡಾ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಇವುಗಳಲ್ಲಿ ಆಫ್ ರೋಡ್ ಡ್ರೈವಿಂಗ್, ಹಿಲ್ ಕ್ಲೈಂಬಿಂಗ್ ಹಾಗೂ ಸ್ಟಂಟ್‌ಗಳಂತಹ ವಿಭಿನ್ನ ಬಗೆಯ ಕಾರ್ಯಕ್ರಮಗಳಿರುತ್ತವೆ. ಅಮೆರಿಕಾದಲ್ಲಿ ಫೋರ್ಡ್ ಕಂಪನಿಯ ಪಿಕ್-ಅಪ್ ಟ್ರಕ್‌ಗಳನ್ನು ಪಿಕ್-ಅಪ್ ಟ್ರಕ್‌ಗಳ ಸೂಪರ್ ಕಾರುಗಳೆಂದು ಕರೆಯಲಾಗುತ್ತದೆ.

ಪಿಕ್-ಅಪ್ ಟ್ರಕ್‌ಗಳ ಮಾಲೀಕರು ತಮ್ಮ ಟ್ರಕ್‌ಗಳನ್ನು ತಮ್ಮದೇ ಆದ ರೀತಿಯಲ್ಲಿ ಮಾಡಿಫೈಗೊಳಿಸುತ್ತಾರೆ. ಈ ಕಾರಣಕ್ಕೆ ಪಿಕ್-ಅಪ್ ಟ್ರಕ್‌ಗಳು ಒಂದಕ್ಕಿಂತ ಒಂದು ಭಿನ್ನವಾಗಿ ಕಾಣುತ್ತವೆ. ಪಿಕ್ ಅಪ್ ಟ್ರಕ್‌ಗೆ ದೊಡ್ಡ ವ್ಹೀಲ್ ಗಳನ್ನು ಅಳವಡಿಸಲಾಗಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಈ ವ್ಹೀಲ್ ಗಳು ಸಾಮಾನ್ಯವಾದ ವ್ಹೀಲ್ ಗಳಲ್ಲ. ಬದಲಿಗೆ 20 ಅಡಿ ಎತ್ತರದ ವ್ಹೀಲ್ ಗಳು. ಈ ಮಾಡಿಫಿಕೇಷನ್ ಅನ್ನು ಕೇವಲ ಮನರಂಜನೆಗಾಗಿ ಮಾಡಲಾಗಿದೆ ಎಂದು ಈ ವೀಡಿಯೊದಲ್ಲಿ ಹೇಳಲಾಗಿದೆ. ಈ ಕಾರಿನಲ್ಲಿ 20 ಅಡಿ ಎತ್ತರದ ತೆಳ್ಳಗಿರುವ ನಾಲ್ಕು ಮರದ ಚಕ್ರಗಳನ್ನು ಅಳವಡಿಸಲಾಗಿದೆ.

ವ್ಹೀಲ್ ಗಳ ಶೇಪ್ ದುಂಡಾಗಿಲ್ಲ. ಅವುಗಳನ್ನು ಕಾರಿಗಳಿಗೆ ಮಾತ್ರ ಅಳವಡಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ವ್ಹೀಲ್ ಗಳನ್ನು ಕಾರಿನಲ್ಲಿ ಅಳವಡಿಸುವ ಮೊದಲು, 10 ಅಡಿ ಗುಂಡಿ ತೆಗೆಯಲಾಗುತ್ತದೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ
ಎಲ್ಲಾ ನಾಲ್ಕು ಮರದ ವ್ಹೀಲ್ ಗಳನ್ನು ಕ್ರೇನ್‌ಗಳ ಸಹಾಯದಿಂದ ಜೋಡಿಸಲಾಗಿದೆ. ವ್ಹೀಲ್ ಗಳನ್ನು ಅಳವಡಿಸಿದ ನಂತರ ಕಾರಿನ ಆಕ್ಸಲ್ ಗಳನ್ನು ಸೇರಿಸಲಾಗುತ್ತದೆ. ನಂತರ ಕಾರು ಸ್ಟಾರ್ಟ್ ಆಗಿ ನಿಧಾನವಾಗಿ ಚಲಿಸುವುದನ್ನು ವೀಡಿಯೊದಲ್ಲಿ ಕಾಣಬಹುದು. ಕಾರನ್ನು ಈ ರೀತಿಯಾಗಿ ಚಾಲನೆ ಮಾಡಿ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಲಾಗಿತ್ತು.

ಆದರೆ ಸ್ವಲ್ಪ ದೂರ ಚಲಿಸಿದ ನಂತರ, ಕಾರಿನ ಆಕ್ಸಲ್ ಇದ್ದಕ್ಕಿದ್ದಂತೆ ಹೊಡೆದು ಕೊಂಡು ವಿಶ್ವ ದಾಖಲೆ ಗುರಿ ನುಚ್ಚುನೂರಾಗಿದೆ. ಕಾರು ಚಾಲನೆ ಮಾಡುತ್ತಿದ್ದವರು ವೆಲ್ಡಿಂಗ್ ಮಿಷಿನ್ ಹೊಂದಿಲ್ಲದ ಕಾರಣ ಮತ್ತೊಂದು ಕಾರಿನ ಸಹಾಯದಿಂದ ಈ ಕಾರನ್ನು ಹೊರಕ್ಕೆ ಎಳೆಯುತ್ತಾರೆ. ಕಾರು ಸ್ವಲ್ಪ ದೂರ ಚಲಿಸಿದ ನಂತರ ಅದರ ಎಲ್ಲಾ ವ್ಹೀಲ್ ಗಳು ಒಂದೊಂದಾಗಿ ಹೊಡೆದುಕೊಂಡು, ಕಾರು ಕೆಳಕ್ಕೆ ಬೀಳುತ್ತದೆ.


Click it and Unblock the Notifications