Just In
- 1 hr ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 2 hrs ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 2 hrs ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
- 2 hrs ago
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
Don't Miss!
- Movies
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
- News
ಉದ್ಯೋಗ ನೀಡುತ್ತೇನೆ ಎಂದು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಬೆಂಗಳೂರಿನಲ್ಲಿ ಟೆಕ್ಕಿ ಬಂಧನ
- Sports
ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ
- Technology
ಹರಾಜಿನಲ್ಲಿರುವ ಈ ಹಳೆಯ ಐಫೋನ್ ಬೆಲೆ ಅರ್ಧಕೋಟಿ ದಾಟಿದ್ರೂ ಅಚ್ಚರಿಯಿಲ್ಲ!
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಷಾರಾಮಿ ಎಲೆಕ್ಟ್ರಿಕ್ ಕಾರಿನಲ್ಲಿ ಎಂಟ್ರಿ ಕೊಟ್ಟು ಜಿ20 ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದ ಪ್ರಧಾನಿ ಮೋದಿ
ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ವಿಶ್ವ ನಾಯಕರು ಒಟ್ಟುಗೂಡಿದ್ದರು. ಇದರಲ್ಲಿ 20 ದೇಶಗಳ ಉನ್ನತ ನಾಯಕರು ಭಾಗವಹಿಸಿದ್ದರು. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಿ-20 ಶೃಂಗಸಭೆಯ ಎರಡನೇ ದಿನದಂದು ಜೆನೆಸಿಸ್ ಎಲೆಕ್ಟ್ರಿಫೈಡ್ ಜಿ80 ನಲ್ಲಿ ಬಾಲಿಯ ಮ್ಯಾಂಗ್ರೋವ್ ಅರಣ್ಯವಾದ ತಮನ್ ಹುತಾನ್ ರಾಯ ನ್ಗುರಾ ರೈಗೆ ಆಗಮಿಸಿದರು. ಜಿ-20 ನಾಯಕರು ಮ್ಯಾಂಗ್ರೋವ್ ಅರಣ್ಯದಲ್ಲಿ ಪ್ರವಾಸ ಮಾಡಿದರು ಮತ್ತು ಶೃಂಗಸಭೆಯಲ್ಲಿ ಭಾಗವಹಿಸಿದ ಇತರ ವಿಶ್ವ ನಾಯಕರೊಂದಿಗೆ ಮರಗಳನ್ನು ನಟ್ಟು ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಬೈಡನ್ ಹಾಗೂ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮಕ್ರಾನ್ ಜತೆ ಸಂವಾದಿಸುವುದು ಚಿತ್ರ ವೈರಲ್ ಆಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆಗೆ ಮೋದಿ ಅವರು ಮಾತುಕತೆ ನಡೆಸಿದ್ದಾರೆ.

ಶೃಂಗಸಭೆಯ ಕೊನೆಯ ದಿನ ಇಂಡೋನೇಷ್ಯಾ ಅಧ್ಯಕ್ಷರು ಮುಂದಿನ ಜಿ-20 ಶೃಂಗ ಅಧ್ಯಕ್ಷತೆ ವಹಿಸುತ್ತಿರುವ ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡಿದರು. ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೋಡೋ ಅವರು ಪ್ರಧಾನಿ ಮೋದಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಶೃಂಗಸಭೆಗೆ ಮೋದಿ ಅವರು ಹ್ಯುಂಡೈನ ಐಷಾರಾಮಿ ಬ್ರಾಂಡ್ ಜೆನೆಸಿಸ್‌ನ ಪ್ರಮುಖ ಆಲ್-ಎಲೆಕ್ಟ್ರಿಕ್ ಸೆಡಾನ್ ಜೆನೆಸಿಸ್ ಎಲೆಕ್ಟ್ರಿಫೈಡ್ G80 ಕಾರಿನಲ್ಲಿ ಆಗಮಿಸಿದ್ದರು. ಈ ಎಲೆಕ್ಟ್ರಿಫೈಡ್ G80 ಕಪ್ಪು ಬಣ್ಣವನ್ನು ಹೊಂದಿದೆ. ಇದರ ಜೊತೆ ಹ್ಯುಂಡೈ Ioniq 5 ಬೆಂಗಾವಲು ಪಡೆ ಇತ್ತು, ಇದು 2022 ರಲ್ಲಿ ವರ್ಷದ ಅಂತರರಾಷ್ಟ್ರೀಯ ಕಾರು ಪ್ರಶಸ್ತಿಯನ್ನು ಪಡೆಯಿತು.

ಎಲೆಕ್ಟ್ರಿಫೈಡ್ ಜಿ80 ಜೆನೆಸಿಸ್‌ನ ಮೊದಲ ಪ್ರಯತ್ನವಾಗಿದ್ದು, ಗಣ್ಯ ವ್ಯಕ್ತಿಗಳಿಗಾಗಿ ಆಲ್-ಎಲೆಕ್ಟ್ರಿಕ್ ಕಾರನ್ನು ತಯಾರಿಸಲಾಗಿದೆ. ಸಾಮಾನ್ಯ G80 ಫ್ಲ್ಯಾಗ್‌ಶಿಪ್ ಸೆಡಾನ್ ಆಧರಿಸಿ, ಎಲೆಕ್ಟ್ರಿಫೈಡ್ G80 ಡ್ಯುಯಲ್ ಮೋಟಾರ್ ಸೆಟಪ್‌ನಿಂದ ಚಾಲಿತವಾಗಿದೆ,

ಈ ಜೆನೆಸಿಸ್ ಜಿ80 ಎಲೆಕ್ಟ್ರಿಕ್ ಕಾರು ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳಲ್ಲಿ 136 kW ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಈ ಡ್ಯುಯಲ್ ಮೋಟಾರ್ ಸೆಟಪ್‌ನ ಸಂಯೋಜಿತ 370 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಔಟ್‌ಪುಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದು 87.2 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಇದು ಗರಿಷ್ಠ 520 ಕಿಮೀ ರೇಂಜ್ ಅನ್ನು ನೀಡುತ್ತದೆ. ಜೆನೆಸಿಸ್ ಎಲೆಕ್ಟ್ರಿಫೈಡ್ G80 ಒಳಗೆ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಲೋಡ್ ಆಗಿದೆ.

ಸೆಡಾನ್ ಹೊರಭಾಗದಲ್ಲಿ, ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು, ಸೋಲಾರ್ ವಿಂಡೋ ಪ್ಯಾನೆಲ್ ಗಳು ಮತ್ತು 19-ಇಂಚಿನ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ.

ಈ ಜೆನೆಸಿಸ್ ಜಿ80 ಎಲೆಕ್ಟ್ರಿಫೈಡ್ G80 ನ ಕ್ಯಾಬಿನ್ ಉನ್ನತ ದರ್ಜೆಯ ಉಪಕರಣಗಳನ್ನು ಹೊಂದಿದೆ, ಇವುಗಳ ಪಟ್ಟಿಯು 8-ಇಂಚಿನ TFT ಇನ್ಸ್ ಟ್ರೂಮೆಂಟ್ ಕನ್ಸೋಲ್, ಅಂಬೈನಡ್ ಲೈಟ್, ಮಲ್ಟಿ-ಝೋನ್ ಕ್ಲೈಮೆಂಟ್ ಕಂಟ್ರೋಲ್ ಗಾಗಿ ಟಚ್-ನಿಯಂತ್ರಿತ ಪ್ಯಾನೆಲ್, 14.5-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.

ಇದರೊಂದಿಗೆ 17-ಸ್ಪೀಕರ್ ಲೆಕ್ಸಿಕಾನ್ ಆಡಿಯೊ ಸಿಸ್ಟಮ್, ಹಿಟೀಂಗ್ ವೆಂಟಿಲೇಷನ್ ಕಾರ್ಯಗಳೊಂದಿಗೆ 12-ವೇ ಪವರ್-ಹೊಂದಾಣಿಕೆ ಮುಂಭಾಗದ ಸೀಟುಗಳು, ಹಿಟಿಂಗ್ ಸ್ಟೀರಿಂಗ್ ವೀಲ್ ಮತ್ತು ಹಿಂದಿನ ಸೀಟುಗಳನ್ನು ಹೊಂದಿವೆ.

ಹ್ಯುಂಡೈ ತನ್ನ ಐಷಾರಾಮಿ ಬ್ರಾಂಡ್ ಜೆನೆಸಿಸ್ ಅನ್ನು ಭಾರತಕ್ಕೆ ತರಲು ಇನ್ನೂ ಸಿದ್ಧವಾಗಿಲ್ಲ, ಆದರೆ ಜೆನೆಸಿಸ್‌ನ ಕೆಲವು ಮಾದರಿಗಳು ಭಾರತೀಯ ರಸ್ತೆಗಳಲ್ಲಿ ಚಾಲನೆ ಮಾಡಲಾಗುತ್ತಿದೆ. ಈ ಜೆನೆಸಿಸ್ ಕಾರುಗಳನ್ನು ಭಾರತದ ಹ್ಯುಂಡೈನ ಉನ್ನತ ಅಧಿಕಾರಿಗಳು ತಮ್ಮ ದೈನಂದಿನ ಪ್ರಯಾಣವಾಗಿ ಬಳಸುತ್ತಿದ್ದಾರೆ ಎಂದು ಹೇಳಲಾಗುತ್ತದೆ.

ಕೆಲವು ತಿಂಗಳ ಹಿಂದೆ, ಹ್ಯುಂಡೈ ಜೆನೆಸಿಸ್ ಬ್ರಾಂಡ್ ಅನ್ನು ಭಾರತದ ತೀರಕ್ಕೆ ತರಲು ಯೋಚಿಸುತ್ತಿದೆ ಎಂಬ ವದಂತಿಗಳಿವೆ. ಹುಂಡೈ ಈ ವದಂತಿಗಳ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳು ಬಹಿರಂಗವಾಗಿಲ್ಲ. ಸದ್ಯಕ್ಕೆ, ಹ್ಯುಂಡೈ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮೆಚ್ಚುಗೆ ಪಡೆದ Ioniq 5 ಆಲ್-ಎಲೆಕ್ಟ್ರಿಕ್ ಕ್ರಾಸ್‌ಒವರ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಜನವರಿಯಲ್ಲಿ 2023 ಆಟೋ ಎಕ್ಸ್‌ಪೋದಲ್ಲಿ ಭಾರತದಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ.