ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

By Nagaraja

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಳಿಕ ಅತ್ಯಂತ ಹೆಚ್ಚು ಅಪಾಯ ಆಹ್ವಾನಿತ ಭಾರತ ಪ್ರಧಾನ ಮಂತ್ರಿ ಎಂದೆನಿಸಿಕೊಂಡಿರುವ ನರೇಂದ್ರ ಮೋದಿ ಅವರನ್ನು ಶೀಘ್ರದಲ್ಲೇ ಹೈ ಸೆಕ್ಯೂರಿಟಿ ವಲಯ ಆವರಿಸಿಕೊಳ್ಳಲಿದೆ. ಹೌದು, ಸದಾ ವಿದೇಶ ಪ್ರವಾಸಗಳಲ್ಲಿ ತಲ್ಲೀನವಾಗಿರುವ ಪ್ರಧಾನಿ ಮೋದಿ ಅವರು ಸ್ವದೇಶಿ ನಿರ್ಮಿತ ದೇಸಿ ಏರ್ ಫೋರ್ಸ್ ಓನ್ ವಿಮಾನವನ್ನು ಪಡೆದುಕೊಳ್ಳಲಿದ್ದಾರೆ.

ಒಬಾಮಾ ವಿಮಾನ ಏರ್ ಫೋರ್ಸ್ ಒನ್ ಸ್ಪೆಷಾಲಿಟಿ ಏನು?

ಏರ್ ಫೋರ್ಸ್ ಒನ್ ಎಂಬುದು ಅಮೆರಿಕ ಅಧ್ಯಕ್ಷರು ಪಯಣಿಸುವ ಅಧಿಕೃತ ವಿಮಾನವಾಗಿದೆ. ಇದಕ್ಕಾಗಿ ಪ್ರತ್ಯೇಕ ಟ್ರಾಫಿಕ್ ಸಹ ಬಳಕೆ ಮಾಡಲಾಗುತ್ತದೆ. ಈಗ ಮೋದಿ ಅವರು ಇದಕ್ಕೆ ಸಮಾನವಾದ ದೇಸಿ ಏರ್ ಫೋರ್ಸ್ ಒನ್ ವಿಮಾನ ಪಡೆಯಲಿದ್ದಾರೆ.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಕೇವಲ ನರೇಂದ್ರ ಮೋದಿ ಮಾತ್ರವಲ್ಲದೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೂ ದೇಸಿ ಏರ್ ಫೋರ್ಸ್ ಒನ್ ವಿಮಾನದ ಸೇವೆ ನೀಡಲಾಗುವುದು.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಇದರೊಂದಿಗೆ ಮೋದಿ ಆಕಾಶದಲ್ಲೂ ಅತ್ಯಂತ ಸುರಕ್ಷಿತ ಎನಿಸಿಕೊಳ್ಳಲಿದ್ದಾರೆ. ಇದು ಮುಂದುವರಿಯದ ಸ್ವಯಂ ರಕ್ಷಣೆಯ ತಂತ್ರಗಾರಿಕೆಗಳಿಂದ ಹಿಡಿದು ಸ್ಯಾಟಲೈಟ್ ಸಂಪರ್ಕ, ಒಳನುಗ್ಗುವ ಮಿಸೈಲ್ ಗಳನ್ನು ತಪ್ಪಿಸುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪಡೆದುಕೊಂಡಿದೆ.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ರಕ್ಷಣಾ ಮಂತ್ರಿ ಮನೋಹರ್ ಪರಿಕ್ಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂತಹದೊಂದು ತೀರ್ಮಾಣ ಕೈಗೊಳ್ಳಲಾಗಿದ್ದು, ಎರಡು ಬೋಯಿಂಗ್ 777-300 (ವ್ಯಾಪ್ತಿ ವಿಸ್ತರಿಸಬಹುದಾದ) ಬೋಯಿಂಗ್ ವಿಮಾನ ಖರೀದಿಗೆ ಆದೇಶ ನೀಡಲಾಗಿದೆ.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಈ ಎರಡು ಬೋಯಿಂಗ್ 777-300 (ವ್ಯಾಪ್ತಿ ವಿಸ್ತರಿತ) ಹೈ ಸೆಕ್ಯೂರಿಟಿ ವಿಮಾನಗಳನ್ನು ಏರ್ ಇಂಡಿಯಾದಿಂದ ಖರೀದಿ ಮಾಡಲಾಗುವುದು.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಅತಿ ವಿಶಿಷ್ಟ ಗಣ್ಯ ವ್ಯಕ್ತಿಗಳ ( VVIP) ಪಯಣಕ್ಕಾಗಿ ಈ ವಿಶೇಷ ವಿಮಾನವನ್ನು ತಯಾರಿಸಲಾಗುತ್ತಿದೆ.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಅತ್ಯಾಧುನಿಕ ಸ್ವಯಂ ರಕ್ಷಣೆ ಕೋಣೆಗಳು ಈ ಬೋಯಿಂಗ್ ವಿಮಾನದ ವಿಶಿಷ್ಟತೆಯಾಗಿದೆ.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಇದು 'ಏರ್ ಇಂಡಿಯಾ ಒನ್' ಅಡಿಯಲ್ಲಿ ವಿವಿಐಪಿ ಸೇವೆಗಾಗಿ ಬಳಕೆ ಮಾಡಲಾಗುತ್ತಿದ್ದ ಬೋಯಿಂಗ್ 747 'ಜಂಬೋ ಜೆಟ್ಸ್' ವಿಮಾನಗಳ ಬದಲಿಯಾಗಿರಲಿದೆ.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಈ ಹಳೆಯ ವಿಮಾನಗಳಲ್ಲಿ ವಿರೋಧಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಕೊರತೆ ಕಾಡುತ್ತದೆ. ಇದರಂತೆ ವಾಯುಯಾನ ತಜ್ಞರು, ವಿಶೇಷ ರಕ್ಷಣಾ ಪಡೆ, ಸಚಿವ ಸಂಪುಟ ಹಾಗೂ ಕಾರ್ಯದರ್ಶಿಗಳ ಸಮಿತಿಯ ನಿರ್ಧಾರದಂತೆ ತೀರ್ಮಾಣ ಕೈಗೊಳ್ಳಲಾಗಿದೆ.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಕಳೆದ ವರ್ಷ ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿ ಫ್ರಾಂಕ್ ಫರ್ಟ್ ನಿಂದ ನವದಹೆಲಿಗೆ 747-400 ವಿಮಾನದಲ್ಲಿ ಮರಳುತ್ತಿದ್ದ ವೇಳೆ ಅದೇ ವಾಯು ವಲಯದಲ್ಲಿ ಮಲೇಷ್ಯಾ ಏರ್ ಲೈನ್ಸ್ ನ ಎಂಎಚ್ 17 ಉಕ್ರೇನ್ ನಲ್ಲಿ ಪತನಗೊಂಡ ಘಟನೆಯ ಬೆನ್ನಲ್ಲೇ ದೇಶದ ಪ್ರಧಾನಿ ಭದ್ರತೆಯ ಬಗ್ಗೆ ಆತಂಕ ಮೂಡಿತ್ತು.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಇದಾದ ಬೆನ್ನಲ್ಲೇ ಕಳೆದ ತಿಂಗಳಿನಲ್ಲಷ್ಟೇ ಮೂರು ದೇಶಗಳ ಯುರೋಪ್ ಪ್ರವಾಸದಲ್ಲಿದ್ದ ಮೋದಿ ಸಂಚರಿಸಿದ್ದ 747-400 ವಿಮಾನದ ಎಂಜಿನ್ ನಲ್ಲಿ ತೊಂದರೆ ಕಾಣಿಸಿಕೊಂಡಿದ್ದ ಹಿನ್ನಲೆಯಲ್ಲಿ ಮಗದೊಂದು ವಿಮಾನವನ್ನು ಕಳುಹಿಸಿಕೊಡಲಾಗಿತ್ತು. ಈ ಎಲ್ಲ ಘಟನೆಗಳು ಹೊಸ ವಿಮಾನದ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿತ್ತು.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಈಗ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಗತ್ಯಗಳಿನುಸಾರವಾಗಿ ವಿಶೇಷ ರಕ್ಷಣಾ ವ್ಯವಸ್ಥೆಯನ್ನು ನೂತನ 777-300 ವಿಮಾನದಲ್ಲಿ ರೂಪಿಸಲಾಗುವುದು.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಅಲ್ಲದೆ ಅಮೆರಿಕ ಅಧ್ಯಕ್ಷೀಯ ವಿಮಾನಕ್ಕೆ ಸಮಾನವಾಗಿ ಅತಿ ವಿಶಿಷ್ಟ ದೇಸಿ ಏರ್ ಫೋರ್ಸ್ ಒನ್ ಎಂದು ಗುರುತಿಸಿಕೊಳ್ಳಲಿದೆ. ಇದು ಪ್ರಧಾನಿ ಅವರ ಆಕಾಶದಲ್ಲಿ ತಿರುಗಾಡುವ ಕಚೇರಿಯಾಗಿರಲಿದೆ.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ರಾಡಾರ್ ವಾರ್ನಿಂಗ್ ರಿಸೀವರ್, ಸೌಂಡ್ ಅಲರ್ಟ್, ಹೀಟ್ ಸೀಕಿಂಗ್ ಮಿಸೈಲ್, ಮಿಸೈಲ್ ದಾಳಿ ಅಲರ್ಟ್, ಡೈರೆಕ್ಷನಲ್ ಎಲೆಕ್ಟ್ರಾನಿಕ್ ಕೌಂಟರ್ ಮೆಶರ್, ಅತ್ಯಾಧುನಿಕ ನೇವಿಗೇಷನ್ ಸಹಾಯ, ಸ್ಯಾಟಲೈಟ್ ಸಂಪರ್ಕದ ಜೊತೆಗೆ ಶತ್ರುವಿನ ರಾಡಾರ್ ಗಳನ್ನು ಜಾಮ್ ಮಾಡುವ ಶಕ್ತಿಯನ್ನು ಇದು ಹೊಂದಿರಲಿದೆ.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಒಬಾಮಾ ಅವರ ತರಹನೇ ಇದು ಮೋದಿ ಅವರ ಹಾರಾಡುವ ಕಚೇರಿ ಎನಿಸಿಕೊಳ್ಳಲಿದೆ. ಅಲ್ಲದೆ ಆರಾಮಕ್ಕಾಗಿ ಅತ್ಯಾಧುನಿಕ ಬೆಡ್ ರೂಂ ಮುಂತಾದ ವ್ಯವಸ್ಥೆಗಳನ್ನು ಒದಗಿಸಲಾಗಿದೆ.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಸಾವಿರ ಕೋಟಿ ರು.ಗಿಂತಲೂ ಹೆಚ್ಚು ಖರ್ಚು ಮಾಡಿಕೊಂಡು ಮೋದಿಗೆ ಅತ್ಯಂತ ಸುರಕ್ಷಾ ವಲಯವನ್ನು ರೂಪಿಸಲಾಗುತ್ತದೆ. ಇನ್ನೊಂದೆಡೆ ಇಂತಹದೊಂದು ನಡೆ ಟೀಕೆಗೆ ಗುರಿಯಾಗುತ್ತಿದೆ.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಒಂದೆಡೆ ದೇಶದ ರೈತರು ಆತ್ಮಹತ್ಮೆ ಪ್ರಕರಣ ಜಾಸ್ತಿಯಾಗಿರುವಂತೆಯೇ ಮೋದಿ ವಿದೇಶಿ ಪ್ರವಾಸಗಳಲ್ಲಿ ತಲ್ಲೀನರಾಗಿದ್ದು, ಭದ್ರತೆಗಾಗಿ ಇಷ್ಟೊಂದು ದೊಡ್ಡ ಮೊತ್ತ ಖರ್ಚು ಮಾಡುವ ಅಗತ್ಯವಿತ್ತೇ ಎಂಬುದು ಆರೋಪಕ್ಕೀಡುಮಾಡಿದೆ.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಈ ಹಿಂದೆ ಪ್ರಧಾನಿ ಗದ್ದುಗೇರಿದ್ದ ಪ್ರಧಾನಿ ಮೋದಿ, ತಮ್ಮ ಬಳಿಯಿದ್ದ ಸ್ಕಾರ್ಪಿಯೊ ಕಾರನ್ನು ಬದಲಾಯಿಸಿಕೊಂಡಿದ್ದರು. ಅಲ್ಲದೆ ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ ಎಡಿಷನ್ ತಮ್ಮದಾಗಿಸಿಕೊಂಡಿದ್ದರು.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ದೇಶದ ಅತ್ಯಂತ ಸುರಕ್ಷಿತ ವಾಹನ ಎಂದು ಗುರುತಿಸಿಕೊಂಡಿರುವ ಪ್ರಧಾನಿ ಅವರ ಬಿಎಂಡಬ್ಲ್ಯು 7 ಸಿರೀಸ್, ಬಾಂಬ್, ಗುಂಡಿನ ದಾಳಿ ಹಾಗೂ ರಾಸಾಯನಿಕ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ. ಇದೀಗ ದೇಶಿ ಏರ್ ಫೋರ್ಸ್ ಒನ್ ಇದೇ ಕರ್ತವ್ಯವನ್ನು ವಹಿಸಲಿದೆ.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಇದರ ಗ್ಯಾಸ್ ಫ್ರೂಪ್ ಚೇಂಬರ್ ನಿರಂತರ ಆಮ್ಲಜನಕ ಒದಗಿಸಲಿದೆ. ಇನ್ನು ವಿಶೇಷ ತರಬೇತಿ ಪಡೆದ ಪೈಲಟ್ ಗಳು ಇದರಲ್ಲಿರಲಿದ್ದಾರೆ.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ವೈಯಕ್ತಿಕರಣಗೊಳಿಸಿದ ಮೋದಿ ವಿಮಾನ ಅತ್ಯಧಿಕ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಉಪಗ್ರಹ ದೂರವಾಣಿ ಮತ್ತು ಜಾಮ್ಮರ್‌ಗಳಲ್ಲಿ ಹೊಸ ಗುಪ್ತಚರ ಹಾಗೂ ಸಂವಹನ ವೈಶಿಷ್ಟ್ಯಗಳ ಸ್ಥಾಪನೆಯಾಗಲಿದೆ.

ಮೋದಿಗೆ ಹೈ ಸೆಕ್ಯೂರಿಟಿ ವಲಯ 'ದೇಸಿ ಏರ್ ಫೋರ್ಸ್ ಒನ್' ವಿಮಾನ

ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿಗೆ ಹೈ ಸೆಕ್ಯೂರಿಟಿ ವಿಮಾನದ ಅಗತ್ಯವಿತ್ತೇ? ಎಂಬುದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
English summary
PM Narendra Modi to get a 'Desi Air Force One'
Story first published: Tuesday, May 12, 2015, 13:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X