ಬರೋಬ್ಬರಿ 10 ವರ್ಷಗಳ ಕಾಲ ನಿರ್ಮಾಣವಾದ ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗದ ವಿಶೇಷತೆ ಏನು?

ರೋಹ್ಟಾಂಗ್‌ನಲ್ಲಿರುವ ರೂ.3,300 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ಉದ್ದದ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿರವರು ಇಂದು ಉದ್ಘಾಟಿಸಿದರು. ರೋಹ್ಟಾಂಗ್‌ನಲ್ಲಿ ಸುರಂಗವನ್ನು ನಿರ್ಮಿಸುವ ಐತಿಹಾಸಿಕ ನಿರ್ಧಾರವನ್ನು 2000ರ ಜೂನ್ 3ರಂದು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ತೆಗೆದುಕೊಳ್ಳಲಾಗಿತ್ತು.

ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ

ಈ ಸುರಂಗ ಮಾರ್ಗ ನಿರ್ಮಾಣ ಕಾರ್ಯಕ್ಕೆ 2002ರಲ್ಲಿ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಕಳೆದ ಹತ್ತು ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಈ ಸುರಂಗ ಮಾರ್ಗವು ಈಗ ಸಿದ್ಧವಾಗಿದೆ. ಈ ಸುರಂಗವು ಸಮುದ್ರ ಮಟ್ಟದಿಂದ ಸುಮಾರು 3100 ಮೀಟರ್ ಎತ್ತರದಲ್ಲಿದೆ. ಈ ಮಾರ್ಗವನ್ನು ಹಿಮಾಚಲ ಪ್ರದೇಶದ ಮನಾಲಿ ಹಾಗೂ ಲಡಾಖ್‌ನ ಲೇಹ್ ಪ್ರದೇಶದ ನಡುವೆ ನಿರ್ಮಿಸಲಾಗಿದೆ. ಇದರ ಉದ್ದ 9.02 ಕಿ.ಮೀಗಳಾಗಿದೆ.

ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ

ಅಟಲ್ ಬಿಹಾರಿ ವಾಜಪೇಯಿರವರು ನೀಡಿದ ಕೊಡುಗೆಯನ್ನು ಗೌರವಿಸಲು ರೋಹ್ಟಂಗ್ ಸುರಂಗ ಮಾರ್ಗಕ್ಕೆ ಅಟಲ್ ಸುರಂಗ ಎಂದು ಹೆಸರಿಡಲು ಕೇಂದ್ರ ಸಚಿವ ಸಂಪುಟ 2019ರಲ್ಲಿ ತೀರ್ಮಾನಿಸಿತ್ತು. ಈ ಸುರಂಗವನ್ನು ರೋಹ್ಟಾಂಗ್ ಎಂದೂ ಸಹ ಕರೆಯಲಾಗುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ

ಪರ್ಷಿಯನ್ ಭಾಷೆಯಲ್ಲಿ ರೋಹ್ಟಾಂಗ್ ಎಂದರೆ ಮೃತ ದೇಹಗಳ ರಾಶಿ. ಅಟಲ್ ಸುರಂಗದ ಕಾರ್ಯಸಾಧ್ಯತೆಯ ಅಧ್ಯಯನವನ್ನು 1990ರಲ್ಲಿ ಆರಂಭಿಸಲಾಯಿತು. ಡ್ರಿಲ್ ಹಾಗೂ ಬ್ಲಾಸ್ಟ್ ಎನ್ಎಟಿಎಂ (ನ್ಯೂ ಆಸ್ಟ್ರಿಯಾ ಟನೆಲಿಂಗ್ ವಿಧಾನ) ತಂತ್ರಗಳನ್ನು ಬಳಸಿ ಈ ಸುರಂಗವನ್ನು ನಿರ್ಮಿಸಲಾಗಿದೆ.

ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ

9.02 ಕಿ.ಮೀ ಉದ್ದದ ಈ ಸುರಂಗವು ವರ್ಷಪೂರ್ತಿ ಮನಾಲಿಗೆ ಲಾಹೌಲ್-ಸ್ಪಿತಿ ಕಣಿವೆಯೊಂದಿಗೆ ಸಂಪರ್ಕ ನೀಡುತ್ತದೆ. ಹಿಮಪಾತದಿಂದಾಗಿ ಪ್ರತಿವರ್ಷ ಸುಮಾರು ಆರು ತಿಂಗಳ ಕಾಲ ಈ ರಸ್ತೆಯ ಮೇಲೆ ಪರಿಣಾಮ ಉಂಟಾಗುತ್ತಿತ್ತು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ

ಹಿಮಾಲಯದ ಪಿರ್ ಪಂಜಾಲ್ ಪರ್ವತ ಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ 3100 ಮೀಟರ್ (10,000 ಅಡಿ) ಎತ್ತರದಲ್ಲಿ ಅಲ್ಟ್ರಾ-ಆಧುನಿಕ ವಿಶೇಷತೆಗಳೊಂದಿಗೆ ಈ ಸುರಂಗವನ್ನು ನಿರ್ಮಿಸಲಾಗಿದೆ.

ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ

ಹಾರ್ಸ್ ಶೂ ಶೇಪಿನಲ್ಲಿರುವ ಸಿಂಗಲ್ ಟ್ಯೂಬ್ ಡಬಲ್ ಲೇನ್ ನ ಈ ಈ ಸುರಂಗವು 8 ಮೀಟರ್ ಗಳ ರಸ್ತೆಯನ್ನು ಹೊಂದಿದೆ. ಈ ಸುರಂಗವು 5.525 ಮೀಟರ್ ಓವರ್ ಹೆಡ್ ಕ್ಲಿಯರೆನ್ಸ್ ಹೊಂದಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ

ಈ ಸುರಂಗವು 10.5 ಮೀಟರ್ ಅಗಲವಿದ್ದು, 3.6 x 2.25 ಮೀಟರ್ ಅಗ್ನಿ ನಿರೋಧಕ ತುರ್ತು ಪ್ರಗತಿ ಸುರಂಗವನ್ನು ಮುಖ್ಯ ಸುರಂಗದಲ್ಲಿ ನಿರ್ಮಿಸಲಾಗಿದೆ. ಯಾವುದೇ ದುರಂತ ಸಂಭವಿಸಿದರೆ ಜನರನ್ನು ರಕ್ಷಿಸಲು ಪ್ರತಿ 500 ಮೀಟರ್ ಗಳಿಗೆ ಎಮರ್ಜೆನ್ಸಿ ಎಕ್ಸಿಟ್ ಗಳನ್ನು ನೀಡಲಾಗಿದೆ.

ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ

ಈ ಸುರಂಗ ಮಾರ್ಗವು ಮನಾಲಿ - ಲೇಹ್ ನಡುವಿನ ರಸ್ತೆ ದೂರವನ್ನು 46 ಕಿ.ಮೀಗಳವರೆಗೆ ಹಾಗೂ ಪ್ರಯಾಣ ಅವಧಿಯನ್ನು ನಾಲ್ಕರಿಂದ ಐದು ಗಂಟೆಗಳವರೆಗೆ ಕಡಿಮೆಗೊಳಿಸುತ್ತದೆ. 10 ವರ್ಷಗಳ ಅವಧಿಯಲ್ಲಿ ಬಾರ್ಡರ್ ರೋಡ್ಸ್ ಸಂಸ್ಥೆಯು ಈ ಸುರಂಗವನ್ನು ನಿರ್ಮಿಸಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ

ಅಟಲ್ ಸುರಂಗದ ದಕ್ಷಿಣ ಪೋರ್ಟಲ್ (ಸೌತ್ ಪೋರ್ಟಲ್) ಮನಾಲಿಯಿಂದ 25 ಕಿ.ಮೀ ದೂರದಲ್ಲಿ 3,060 ಮೀಟರ್ ಎತ್ತರದಲ್ಲಿದ್ದರೆ, ಸುರಂಗದ ಉತ್ತರ ಪೋರ್ಟಲ್ (ನಾರ್ತ್ ಪೋರ್ಟಲ್) ಲಾಹೌಲ್ ಕಣಿವೆಯಲ್ಲಿರುವ ಸಿಸ್ಸು ಎಂಬ ಹಳ್ಳಿಯ ಟೆಲ್ಲಿಂಗ್ ಬಳಿ 3,071 ಮೀಟರ್ ಎತ್ತರದಲ್ಲಿದೆ.

ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ

ಅಟಲ್ ಸುರಂಗವನ್ನು ದಿನಕ್ಕೆ 3000 ಕಾರುಗಳು, 1,500 ಟ್ರಕ್‌ಗಳು ಗರಿಷ್ಠ 80 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸುರಂಗವು ಸೆಮಿ ಟ್ರಾನ್ಸ್ ವರ್ಸ್ ವೆಂಟಿಲೇಷನ್ ಸಿಸ್ಟಂ ಸೇರಿದಂತೆ ಅತ್ಯಾಧುನಿಕ ಎಲೆಕ್ಟ್ರೋಮೆಕಾನಿಕಲ್ ಸಿಸ್ಟಂ ಅನ್ನು ಸಹ ಹೊಂದಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ

ಈ ಸುರಂಗದಲ್ಲಿ ಭದ್ರತೆಗಾಗಿ ಪ್ರತಿ 60 ಮೀಟರ್‌ಗೆ ಒಂದರಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಸುರಂಗವನ್ನು ಎಲ್ಲಾ ರೀತಿಯ ಹವಾಮಾನವನ್ನು ತಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ

ಈ ಸುರಂಗದ ಎರಡೂ ಕಡೆ ಪಾದಚಾರಿಗಳಿಗಾಗಿ ಸುಮಾರು 1 ಮೀಟರ್ ನ ಕಾಲುದಾರಿಗಳನ್ನು ನಿರ್ಮಿಸಲಾಗಿದೆ. ಈ ಸುರಂಗ ಮಾರ್ಗದಿಂದ ಸಾಕಷ್ಟು ಇಂಧನ ಹಾಗೂ ಸಮಯ ಉಳಿಸಬಹುದು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ

ಹೊಸದಾಗಿ ನಿರ್ಮಿಸಲಾದ ಈ ಸುರಂಗ ಮಾರ್ಗವು ಈ ಮೊದಲು ಬಳಕೆಯಲ್ಲಿದ್ದ ಪರ್ವತ ಮಾರ್ಗಕ್ಕಿಂತ ಹೆಚ್ಚು ಸುರಕ್ಷಿತವಾಗಿದೆ. ಸಾಮಾನ್ಯವಾಗಿ ಪರ್ವತ ರಸ್ತೆ ಅಪಾಯಕಾರಿಯಾಗಿರುತ್ತದೆ. ಅದರಲ್ಲೂ ಲಡಾಖ್‌ಗೆ ಹೋಗುವ ಪರ್ವತ ರಸ್ತೆ ಇನ್ನೂ ಅಪಾಯಕಾರಿಯಾಗಿದೆ.

ಪ್ರಪಂಚದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ

ಈ ಪರ್ವತ ರಸ್ತೆಯಲ್ಲಿ ಹೆಚ್ಚು ತಿರುವುಗಳಿರುವ ಕಾರಣಕ್ಕೆ ಈ ಮಾರ್ಗವು ಹೆಚ್ಚು ಅಪಾಯಕಾರಿಯಾಗಿದೆ. ಈ ಕಾರಣಕ್ಕೆ ಸಮಯ ಹಾಗೂ ಹಣವನ್ನು ಉಳಿಸಲು ಹೊಸ ಸುರಂಗವನ್ನು ನಿರ್ಮಿಸಲಾಗಿದೆ.

Most Read Articles

Kannada
English summary
PM inaugurates worlds longest tunnel built between Manali and Leh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X