ಹರ್ಕ್ಯುಲಸ್ ಸಿ 130ಜೆ ಮಿಲಿಟರಿ ವಿಮಾನದ ಮೂಲಕ ಎಕ್ಸ್‌ಪ್ರೆಸ್‌ವೇಗೆ ಬಂದಿಳಿದ ಪ್ರಧಾನಿ

341 ಕಿ.ಮೀ ಉದ್ದದ ಹೊಸ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶಕ್ಕೆ ಆಗಮಿಸಿದ್ದರು. ಅವರು ಭಾರತೀಯ ವಾಯುಪಡೆಯ ಹರ್ಕ್ಯುಲಸ್ ಸಿ 130ಜೆ ಮಿಲಿಟರಿ ಸಾರಿಗೆ ವಿಮಾನವನ್ನು ಬಳಸಿ ಸುಲ್ತಾನ್‌ಪುರ ಬಳಿ ಬಂದಿಳಿದರು. ಈ ಎಕ್ಸ್ ಪ್ರೆಸ್ ವೇ ಉದ್ಘಾಟನಾ ಸಮಾರಂಭವನ್ನು ಸುಲ್ತಾನ್ ಪುರದಲ್ಲಿ ಆಯೋಜಿಸಲಾಗಿತ್ತು.

ಹರ್ಕ್ಯುಲಸ್ ಸಿ 130ಜೆ ಮಿಲಿಟರಿ ವಿಮಾನದ ಮೂಲಕ ಎಕ್ಸ್‌ಪ್ರೆಸ್‌ವೇಗೆ ಬಂದಿಳಿದ ಪ್ರಧಾನಿ

ಹರ್ಕ್ಯುಲಸ್ ಸಿ 130ಜೆ ವಿಮಾನದಲ್ಲಿ ಮೋದಿ ಆಗಮಿಸಿದ ನಂತರ ಐಎಎಫ್ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿತ್ತು. ಈ ವೇಳೆ ಈ ಎಕ್ಸ್‌ಪ್ರೆಸ್‌ವೇಯನ್ನು ವಿಮಾನ ಹಾರಾಟಕ್ಕೂ ಬಳಸಲಾಯಿತು. ಲಕ್ನೋ ಜಿಲ್ಲೆಯ ಚೌಡಸರಾಯ್‌ನಿಂದ ಶುರುವಾಗುವ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶ - ಬಿಹಾರ ಗಡಿ ಸಮೀಪವಿರುವ ಹೈದರಿಯಾ ಗ್ರಾಮದಲ್ಲಿ ಕೊನೆಯಾಗುತ್ತದೆ.

ಹರ್ಕ್ಯುಲಸ್ ಸಿ 130ಜೆ ಮಿಲಿಟರಿ ವಿಮಾನದ ಮೂಲಕ ಎಕ್ಸ್‌ಪ್ರೆಸ್‌ವೇಗೆ ಬಂದಿಳಿದ ಪ್ರಧಾನಿ

ಆರು ಪಥಗಳನ್ನು ಹೊಂದಿರುವ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯನ್ನು ಭವಿಷ್ಯದಲ್ಲಿ ವಾಹನ ದಟ್ಟಣೆ ಹೆಚ್ಚಾದರೆ ಎಂಟು ಪಥಗಳಿಗೆ ವಿಸ್ತರಿಸಬಹುದು. ಅಧಿಕೃತ ಅಂಕಿ ಅಂಶಗಳ ಪ್ರಕಾರ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯನ್ನು ಅಂದಾಜು ರೂ. 22,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ತುರ್ತು ಸಂದರ್ಭದಲ್ಲಿ ವಿಮಾನಗಳನ್ನು ಲ್ಯಾಂಡಿಂಗ್ ಸ್ಟ್ರಿಪ್ ಆಗಿ ಬಳಸಲು ಈ ಎಕ್ಸ್‌ಪ್ರೆಸ್‌ವೇಯನ್ನು ವಿನ್ಯಾಸಗೊಳಿಸಲಾಗಿದೆ.

ಹರ್ಕ್ಯುಲಸ್ ಸಿ 130ಜೆ ಮಿಲಿಟರಿ ವಿಮಾನದ ಮೂಲಕ ಎಕ್ಸ್‌ಪ್ರೆಸ್‌ವೇಗೆ ಬಂದಿಳಿದ ಪ್ರಧಾನಿ

ಈ ಎಕ್ಸ್ ಪ್ರೆಸ್ ವೇ ಮೇಲೆ ವಿಮಾನಗಳು ಸುರಕ್ಷಿತವಾಗಿ ಇಳಿಯುವುದನ್ನು ಖಚಿತಪಡಿಸಿಕೊಳ್ಳಲು ಯಾವುದಾದರೂ ವಿಶೇಷ ವಿನ್ಯಾಸವನ್ನು ಅಳವಡಿಸಲಾಗಿದೆಯೇ ಎಂಬುದು ತಿಳಿದು ಬಂದಿಲ್ಲ. ಆಕ್ಸೆಸ್ ಕಂಟ್ರೋಲ್ ಆಗಿರುವ ಈ ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರಿಂದ ಮುಕ್ತವಾಗಿದ್ದು, ಹೆಚ್ಚಿನ ವೇಗದಲ್ಲಿ ಚಲಿಸುವ ವಾಹನಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

ಹರ್ಕ್ಯುಲಸ್ ಸಿ 130ಜೆ ಮಿಲಿಟರಿ ವಿಮಾನದ ಮೂಲಕ ಎಕ್ಸ್‌ಪ್ರೆಸ್‌ವೇಗೆ ಬಂದಿಳಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಈ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ಮಾಡಿದ ಮೂರು ವರ್ಷಗಳ ನಂತರ ವಿಮಾನದಲ್ಲಿ ಇಳಿಯುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ ಎಂದು ಹೇಳಿದರು. ವಾಯುಪಡೆಯ ಪೈಲಟ್‌ಗಳು ಈ ಎಕ್ಸ್‌ಪ್ರೆಸ್‌ವೇನಲ್ಲಿ ಪೂರ್ವಾಭ್ಯಾಸ ನಡೆಸಿ, ಪ್ರಧಾನ ಮಂತ್ರಿಗಳ ಆಗಮನಕ್ಕೂ ಮುನ್ನ ತುರ್ತು ಲ್ಯಾಂಡಿಂಗ್ ಸ್ಟ್ರಿಪ್ ಅನ್ನು ಸಹ ಬಳಸಿದರು.

ಹರ್ಕ್ಯುಲಸ್ ಸಿ 130ಜೆ ಮಿಲಿಟರಿ ವಿಮಾನದ ಮೂಲಕ ಎಕ್ಸ್‌ಪ್ರೆಸ್‌ವೇಗೆ ಬಂದಿಳಿದ ಪ್ರಧಾನಿ

ವರದಿಗಳ ಪ್ರಕಾರ, ಈ ತುರ್ತು ಲ್ಯಾಂಡಿಂಗ್ ಸ್ಟ್ರಿಪ್ ಸುಮಾರು 3 ಕಿ.ಮೀ ಉದ್ದವಿದ್ದು, ದೊಡ್ಡ ವಿಮಾನಗಳು ಸೇರಿದಂತೆ ವಿವಿಧ ರೀತಿಯ ವಿಮಾನಗಳ ಲ್ಯಾಂಡಿಂಗ್ ಅನ್ನು ಸರಿ ಹೊಂದಿಸಲು ಸಮರ್ಥವಾಗಿದೆ. ಕೆಲವು ವರದಿಗಳ ಪ್ರಕಾರ, ಉತ್ತರ ಪ್ರದೇಶ ರಾಜ್ಯದಲ್ಲಿ ಈಗ ಮೂರು ತುರ್ತು ಲ್ಯಾಂಡಿಂಗ್ ಸ್ಟ್ರಿಪ್‌ಗಳಿವೆ. ಬೇರೆ ಯಾವುದೇ ರಾಜ್ಯವು ಇಷ್ಟು ಸಂಖ್ಯೆಯ ತುರ್ತು ಲ್ಯಾಂಡಿಂಗ್ ಸ್ಟ್ರಿಪ್‌ಗಳನ್ನು ಹೊಂದಿಲ್ಲ.

ಹರ್ಕ್ಯುಲಸ್ ಸಿ 130ಜೆ ಮಿಲಿಟರಿ ವಿಮಾನದ ಮೂಲಕ ಎಕ್ಸ್‌ಪ್ರೆಸ್‌ವೇಗೆ ಬಂದಿಳಿದ ಪ್ರಧಾನಿ

ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಘಾಜಿಪುರ ನವದೆಹಲಿಯಿಂದ ಉತ್ತರ ಪ್ರದೇಶ ರಾಜಧಾನಿ ಲಕ್ನೋ ನಡುವಿನ ಪ್ರಯಾಣದ ಸಮಯವನ್ನು ಸುಮಾರು 3.50 ಗಂಟೆಗಳಷ್ಟು ಕಡಿಮೆ ಮಾಡುತ್ತದೆ. ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಹಲವಾರು ಹೈಸ್ಪೀಡ್ ಎಕ್ಸ್‌ಪ್ರೆಸ್‌ವೇಗಳ ಇತ್ತೀಚಿನ ಆವೃತ್ತಿಯಾಗಿದ್ದು, ಇದು ಉತ್ತರ ಪ್ರದೇಶದ ಹಲವು ಪ್ರದೇಶಗಳನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.

ಹರ್ಕ್ಯುಲಸ್ ಸಿ 130ಜೆ ಮಿಲಿಟರಿ ವಿಮಾನದ ಮೂಲಕ ಎಕ್ಸ್‌ಪ್ರೆಸ್‌ವೇಗೆ ಬಂದಿಳಿದ ಪ್ರಧಾನಿ

ಯಮುನಾ ಎಕ್ಸ್‌ಪ್ರೆಸ್‌ವೇ, ಆಗ್ರಾ - ಲಕ್ನೋ ಎಕ್ಸ್‌ಪ್ರೆಸ್‌ವೇ, ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ, ದೆಹಲಿ - ಮೀರತ್ ಎಕ್ಸ್‌ಪ್ರೆಸ್‌ವೇ ಹಾಗೂ ಮುಂಬರುವ ಗಂಗಾ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದಲ್ಲಿರುವ ಕೆಲವು ಪ್ರಮುಖ ವೇಗದ ಎಕ್ಸ್‌ಪ್ರೆಸ್‌ವೇಗಳಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಮಾನ ಇಳಿಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವಿವಿಧ ರಾಜ್ಯ ಸರ್ಕಾರಗಳು ಅಗತ್ಯವಿದ್ದಾಗ ತುರ್ತು ಲ್ಯಾಂಡಿಂಗ್ ಸ್ಟ್ರಿಪ್‌ಗಳನ್ನು ರಚಿಸಲು ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದೇ ರೀತಿಯ ಸಾಮರ್ಥ್ಯವನ್ನು ಪ್ರದರ್ಶಿಸಿವೆ.

ಹರ್ಕ್ಯುಲಸ್ ಸಿ 130ಜೆ ಮಿಲಿಟರಿ ವಿಮಾನದ ಮೂಲಕ ಎಕ್ಸ್‌ಪ್ರೆಸ್‌ವೇಗೆ ಬಂದಿಳಿದ ಪ್ರಧಾನಿ

2017ರಲ್ಲಿ ಮೊದಲ ಯುದ್ಧ ವಿಮಾನವು ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಇಳಿದಿತ್ತು. ರಾಜಸ್ಥಾನದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಹಾಗೂ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ರವರು ಇದೇ ಹರ್ಕ್ಯುಲಸ್ C130J ವಿಮಾನದಲ್ಲಿ ಬಾರ್ಮರ್‌ ಎಕ್ಸ್‌ಪ್ರೆಸ್‌ವೇನಲ್ಲಿ ಬಂದಿಳಿದಿದ್ದರು. ದೇಶದೆಲ್ಲೆಡೆ ಹಲವು ಎಕ್ಸ್ ಪ್ರೆಸ್ ವೇಗಳಿದ್ದರೂ ಅದರ ಉದ್ಘಾಟನೆಗೆ ಎಕ್ಸ್ ಪ್ರೆಸ್ ವೇಗೆ ಇಳಿಯುವ ಪರಿಪಾಠ ಇತ್ತೀಚೆಗೆ ಆರಂಭವಾಗಿದೆ.

ಹರ್ಕ್ಯುಲಸ್ ಸಿ 130ಜೆ ಮಿಲಿಟರಿ ವಿಮಾನದ ಮೂಲಕ ಎಕ್ಸ್‌ಪ್ರೆಸ್‌ವೇಗೆ ಬಂದಿಳಿದ ಪ್ರಧಾನಿ

ಪ್ರಧಾನ ಮಂತ್ರಿಯವರ ಲ್ಯಾಂಡಿಂಗ್ ನಂತರ 45 ನಿಮಿಷಗಳ ಕಾಲ ನಡೆದ ವೈಮಾನಿಕ ಪ್ರದರ್ಶನದಲ್ಲಿ ರಫೇಲ್, ಮಿರಾಜ್ ಹಾಗೂ ಸುಖೋಯ್‌ನಂತಹ ವಿವಿಧ ಯುದ್ಧ ವಿಮಾನಗಳು ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದ ಗಣ್ಯರಿಗಾಗಿ ವೈಮಾನಿಕ ಪ್ರದರ್ಶನ ನೀಡಿದವು.

ಹರ್ಕ್ಯುಲಸ್ ಸಿ 130ಜೆ ಮಿಲಿಟರಿ ವಿಮಾನದ ಮೂಲಕ ಎಕ್ಸ್‌ಪ್ರೆಸ್‌ವೇಗೆ ಬಂದಿಳಿದ ಪ್ರಧಾನಿ

ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಸಹ ಆಗ್ರಾ - ಲಖನೌ ಎಕ್ಸ್‌ಪ್ರೆಸ್‌ವೇಯಂತೆ ಭಾರತೀಯ ವಾಯುಪಡೆಯ ವಿಮಾನಗಳಿಗೆ ತುರ್ತು ರನ್‌ವೇ ಆಗಿ ಬಳಸಲ್ಪಡುತ್ತದೆ. ಸುಲ್ತಾನ್‌ಪುರದ ಸಮೀಪವಿರುವ ಈ ಎಕ್ಸ್‌ಪ್ರೆಸ್‌ವೇನಲ್ಲಿ 3.3 ಕಿಮೀ ಉದ್ದದ ಏರ್ ಸ್ಟ್ರಿಪ್ ಅನ್ನು ಸಹ ನಿರ್ಮಿಸಲಾಗಿದೆ ಎಂಬುದು ಗಮನಾರ್ಹ.

ಹರ್ಕ್ಯುಲಸ್ ಸಿ 130ಜೆ ಮಿಲಿಟರಿ ವಿಮಾನದ ಮೂಲಕ ಎಕ್ಸ್‌ಪ್ರೆಸ್‌ವೇಗೆ ಬಂದಿಳಿದ ಪ್ರಧಾನಿ

ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ಪ್ರಯಾಣಿಕರು ಆರಂಭದಲ್ಲಿ ಯಾವುದೇ ಟೋಲ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಈ ಎಕ್ಸ್‌ಪ್ರೆಸ್‌ವೇಯಿಂದ ಕೇಂದ್ರ ಸರ್ಕಾರವು ಪ್ರತಿ ವರ್ಷ ರೂ. 202 ಕೋಟಿ ಟೋಲ್ ಶುಲ್ಕ ಸಂಗ್ರಹಿಸಲಿದೆ.

ಹರ್ಕ್ಯುಲಸ್ ಸಿ 130ಜೆ ಮಿಲಿಟರಿ ವಿಮಾನದ ಮೂಲಕ ಎಕ್ಸ್‌ಪ್ರೆಸ್‌ವೇಗೆ ಬಂದಿಳಿದ ಪ್ರಧಾನಿ

ಪ್ರತಿ ಕಿ.ಮೀಗೆ ಟೋಲ್ ದರ ಹಾಗೂ ಟೋಲ್ ಶುಲ್ಕವನ್ನು ಈ ಎಕ್ಸ್ ಪ್ರೆಸ್ ವೇಯ ಎರಡೂ ಬದಿಗಳಲ್ಲಿ ವಿಧಿಸಲಾಗುತ್ತದೆ. ಈ ಎಕ್ಸ್ ಪ್ರೆಸ್ ವೇಯಲ್ಲಿ ಲಕ್ನೋ - ಆಗ್ರಾ ಎಕ್ಸ್‌ಪ್ರೆಸ್‌ವೇದಷ್ಟೇ ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ. ಹೊಸದಾಗಿ ನಿರ್ಮಾಣವಾಗಿರುವ ಈ ಎಕ್ಸ್ ಪ್ರೆಸ್ ವೇ ಮೂಲಕ ಪ್ರತಿ ನಿತ್ಯ 15 ರಿಂದ 20 ಸಾವಿರ ವಾಹನಗಳು ಸಂಚರಿಸಲಿದ್ದು, ಕ್ರಮೇಣ ವಾಹನಗಳ ಸಂಖ್ಯೆ ಹೆಚ್ಚಾಗಲಿದೆ.

Most Read Articles

Kannada
English summary
Pm narendra modi lands on purvanchal expressway through hercules c130j plane details
Story first published: Friday, November 19, 2021, 10:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X