ಭಾರತದ ಮೊದಲ ಸೀಪ್ಲೇನ್ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಭಾರತದ ಮೊದಲ ಸೀಪ್ಲೇನ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಈ ಸೀಪ್ಲೇನ್ ಅಹಮದಾಬಾದ್ ರಿವರ್ ಫ್ರಂಟ್ ನಿಂದ ಕೆವಾಡಿಯಾಕ್ಕೆ ಸೇವೆಯನ್ನು ನೀಡಲಿದೆ. ಈ ಸೀಪ್ಲೇನ್ ದಿನಕ್ಕೆ ಎರಡು ಬಾರಿ ಹಾರಾಟ ನಡೆಸಲಿದೆ.

ಭಾರತದ ಮೊದಲ ಸೀಪ್ಲೇನ್ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಈ ಸೀಪ್ಲೇನ್ ಅನ್ನು ಸ್ಪೈಸ್ ಜೆಟ್ ಕಂಪನಿಯು ನಡೆಸಲಿದ್ದು, ಒಂದು ಕಡೆಯ ಪ್ರಯಾಣಕ್ಕೆ ರೂ.1,500 ನಿಗದಿಪಡಿಸಲಾಗಿದೆ. ಈ ಸೀಪ್ಲೇನ್ ಸೇವೆಯಿಂದಾಗಿ ಪ್ರಯಾಣಿಕರು ಕೇವಲ 30 ನಿಮಿಷಗಳಲ್ಲಿ ಅಹಮದಾಬಾದ್‌ನ ಸಬರಮತಿ ರಿವರ್ ಫ್ರಂಟ್‌ನಿಂದ ಏಕತಾ ಪ್ರತಿಮೆಯನ್ನು ತಲುಪಲು ಸಾಧ್ಯವಾಗಲಿದೆ.

ಭಾರತದ ಮೊದಲ ಸೀಪ್ಲೇನ್ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಅಕ್ಟೋಬರ್ 26ರಂದು ಮಾಲ್ಡೀವ್ಸ್ ನಿಂದ ಈ ಸೀಪ್ಲೇನ್ ಭಾರತಕ್ಕೆ ಆಗಮಿಸಿತ್ತು. ಗುಜರಾತ್ ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಸೀಪ್ಲೇನ್ ಯೋಜನೆಯನ್ನು ಆರಂಭಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಭಾರತದ ಮೊದಲ ಸೀಪ್ಲೇನ್ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಈ ಸೀಪ್ಲೇನ್ ಸೇವೆಗಾಗಿ ಸ್ಪೈಸ್ ಜೆಟ್ ಕಂಪನಿಯು 15 ಸೀಟುಗಳಿರುವ ಟ್ವಿನ್ ಒಟರ್ 300 ವಿಮಾನವನ್ನು ಬಳಸಲಿದೆ. ಈ ವಿಮಾನವು ವಿಶ್ವಾದ್ಯಂತ ಹೆಚ್ಚು ಬಳಕೆಯಾಗುತ್ತಿದೆ. ತನ್ನ ವಿನ್ಯಾಸ, ಪೇಲೋಡ್ ಸಾಮರ್ಥ್ಯ, ಶಾರ್ಟ್ ಟೇಕ್ ಆಫ್‌ಗೆ ಹೆಸರುವಾಸಿಯಾದ ಈ ವಿಮಾನವು ಸುರಕ್ಷಿತೆಗೂ ಆದ್ಯತೆ ನೀಡುತ್ತದೆ.

ಭಾರತದ ಮೊದಲ ಸೀಪ್ಲೇನ್ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಈ ವಿಮಾನವನ್ನು ನಿಯಮಿತ ನಿರ್ವಹಣೆ, ಕೂಲಂಕುಷ ಪರೀಕ್ಷೆ, ಹೊಸ ಸೀಟುಗಳು, ಜೊತೆಗೆ ವಾಯು ಯೋಗ್ಯತೆ ವಿಮರ್ಶೆ ಪ್ರಮಾಣಪತ್ರದೊಂದಿಗೆ ಪರಿಚಯಿಸಲಾಗಿದೆ. ಈ ಸೀಪ್ಲೇನ್ ಹಾರಲು ಬೇಕಾದ ಎಲ್ಲಾ ನಿಯಮ ಹಾಗೂ ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಭಾರತದ ಮೊದಲ ಸೀಪ್ಲೇನ್ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಅಪಘಾತ ರಹಿತ ಇತಿಹಾಸದಿಂದಾಗಿ ಈ ಸೀಪ್ಲೇನ್ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ಈ ವಿಮಾನವನ್ನು ಭಾರತಕ್ಕೆ ತರುವ ಬಗ್ಗೆ ಬಹಳ ದಿನಗಳಿಂದ ಮಾತುಕತೆ ನಡೆದಿತ್ತು. ಪ್ರಧಾನಿ ಮೋದಿ ಕೆಲ ದಿನಗಳ ಹಿಂದೆ ಸಬರಮತಿ ರಿವರ್ ಫ್ರಂಟ್‌ನಲ್ಲಿ ಹಾರಾಟ ನಡೆಸಿದ್ದರು. ಈಗ ಈ ವಿಮಾನವನ್ನು ಸಾರ್ವಜನಿಕರ ಸೇವೆಗೆ ನೀಡಲಾಗಿದೆ.

ಭಾರತದ ಮೊದಲ ಸೀಪ್ಲೇನ್ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಈ ವಿಮಾನವು ಸುಲಭವಾಗಿ ಟೇಕ್‌ಆಫ್ ಹಾಗೂ ಲ್ಯಾಂಡಿಂಗ್ ಆಗುತ್ತದೆ. ಲ್ಯಾಂಡಿಂಗ್ ಸ್ಟ್ರಿಪ್ ಅಥವಾ ರನ್‌ವೇ ಇಲ್ಲದೇ ಬಳಕೆಯಾಗುವುದು ಈ ಸೀಪ್ಲೇನ್‌ನ ವೈಶಿಷ್ಟ್ಯ. ಈ ಸೀಪ್ಲೇನ್ ಕಡಿಮೆ ವೆಚ್ಚದ ವಿಮಾನ ಸೇವೆಯನ್ನು ನೀಡುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಭಾರತದ ಮೊದಲ ಸೀಪ್ಲೇನ್ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಸ್ಪೈಸ್ ಜೆಟ್ ಕಂಪನಿಯು ಫ್ಲೈಟ್ ಸ್ಕೀಮ್ ಅಡಿಯಲ್ಲಿ 18 ಸೀಪ್ಲೇನ್ ಮಾರ್ಗಗಳನ್ನು ನಿಗದಿಪಡಿಸಿದೆ. ಫ್ಲೈಟ್ ಸ್ಕೀಮ್ ಯೋಜನೆಯಡಿಯಲ್ಲಿ ಕೊನೆಯ ಮೈಲಿವರೆಗೂ ಸಂಪರ್ಕ ಸಾಧಿಸಲು ಇದೊಂದು ಯಶಸ್ವಿ ಹೆಜ್ಜೆಯಾಗಿದೆ. ಈ ಯೋಜನೆಯು ಪ್ರಯಾಣಿಕರಿಗೂ ರಿಯಾಯಿತಿಯನ್ನು ನೀಡುತ್ತದೆ.

ಭಾರತದ ಮೊದಲ ಸೀಪ್ಲೇನ್ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಮುಂದಿನ ದಿನಗಳಲ್ಲಿ ಸೀಪ್ಲೇನ್ ಈಶಾನ್ಯ ಭಾರತ, ಉತ್ತರಾಖಂಡ, ಉತ್ತರ ಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಅಂಡಮಾನ್, ಲಕ್ಷದ್ವೀಪ ಹಾಗೂ ಭಾರತದ ಇತರ ಕರಾವಳಿ ಪ್ರದೇಶಗಳಲ್ಲಿ ಹಾರಾಟ ನಡೆಸುವ ಸಾಧ್ಯತೆಗಳಿವೆ.

Most Read Articles

Kannada
English summary
PM Narendra Modi launches India's first seaplane service. Read in Kannada.
Story first published: Saturday, October 31, 2020, 16:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X