ED ವಶವಾದ ನೀರವ್ ಮೋದಿ ಐಷಾರಾಮಿ ಕಾರ್ ಕಲೆಕ್ಷನ್...
ಪಿಎನ್ ಬ್ಯಾಂಕ್ ಗೆ ಬರೋಬ್ಬರಿ 11,400 ಕೋಟಿ ರೂಪಾಯಿ ವಂಚಿಸಿ ಸದ್ಯ ವಿದೇಶಿಯಲ್ಲಿರುವ ವಜ್ರದ ಉದ್ಯಮಿ ನೀರವ್ ಮೋದಿ ವಿರುದ್ಧ ತನಿಖೆ ತೀವ್ರಗೊಂಡಿದ್ದು, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರವ್ ಮೋದಿಗೆ ಇಡಿ ಇಲಾಖೆ ಮತ್ತೊಂದು ಶಾಕ್ ನೀಡಿದೆ.
ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ಬರೋಬ್ಬರಿ 11,400 ಕೋಟಿ ರೂಪಾಯಿ ವಂಚಿಸಿ ಸದ್ಯ ವಿದೇಶಿಯಲ್ಲಿರುವ ವಜ್ರದ ಉದ್ಯಮಿ ನೀರವ್ ಮೋದಿ ವಿರುದ್ಧ ತನಿಖೆ ತೀವ್ರಗೊಂಡಿದ್ದು, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರವ್ ಮೋದಿಗೆ ಇಡಿ ಇಲಾಖೆ ಮತ್ತೊಂದು ಶಾಕ್ ನೀಡಿದೆ.

ನೀರವ್ ಮೋದಿಗೆ ಸೇರಿದ ಕೋಟ್ಯಂತರ ರುಪಾಯಿ ಮೌಲ್ಯದ ಒಟ್ಟು 9 ಐಷಾರಾಮಿ ಕಾರುಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಮೆಹುಲ್ ಚೋಕ್ಸಿ ಒಡೆತನದ ಸಂಸ್ಥೆಗಳಿಗೆ ಸೇರಿದ 94.52 ಕೋಟಿ ರೂಪಾಯಿ ಮೌಲ್ಯದ ಷೇರು ಹಾಗೂ ಮ್ಯೂಚುವಲ್ ಫಂಡ್ ಗಳನ್ನು ಸಹ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

ಕಳೆದ ಗುರುವಾರ ನೀರವ್ ಮೋದಿ ಒಡೆತನದ ಜ್ಯುವೆಲ್ಲರಿ ಸ್ಟೋರ್‌ಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ವೇಳೆ ಸುಮಾರು 5,100 ಕೋಟಿ ರೂಪಾಯಿ ಮೌಲ್ಯದ ಬಂಗಾರ, ವಜ್ರ ಹಾಗೂ ಬೆಲೆಬಾಳುವ ಹರಳುಗಳನ್ನು ಜಪ್ತಿ ಮಾಡಿದ ಬೆನ್ನಲ್ಲೇ ಇದೀಗ 9 ಐಷಾರಾಮಿ ಕಾರುಗಳನ್ನು ಇಡಿ ಜಪ್ತಿ ಮಾಡಲಾಗಿದೆ.

ಇನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿರುವ ಕಾರುಗಳಲ್ಲಿ 1 ರೋಲ್ಸ್ ರಾಯ್ಸ್ ಘೋಸ್ಟ್, 1 ಪೋರ್ಷೆ ಪನಮೆರಾ, 2 ಮರ್ಸಿಡಿಸ್ ಬೆಂಝ್ ಜಿಎಲ್ 350 ಸಿಡಿಐಎಸ್, 3 ಹೋಂಡಾ ಕಾರುಗಳು, 1 ಟೊಯೋಟಾ ಫಾರ್ಚೂನರ್ ಮತ್ತು 1 ಟೊಯೊಟಾ ಇನ್ನೋವಾ ಕೂಡಾ ಸೇರಿದೆ.

ಜಪ್ತಿ ಮಾಡಲಾಗಿರುವ ರೋಲ್ಸ್ ರಾಯ್ಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ 7 ಕೋಟಿ ಮೌಲ್ಯ ಹೊಂದಿದ್ದು, ಭಾರತದಲ್ಲಿ ಕೆಲವೇ ಕೆಲವು ಉದ್ಯಮಿಗಳು ಮತ್ತು ಬಾಲಿವುಡ್ ನಟರ ಬಳಿ ಮಾತ್ರ ಈ ಕಾರುಗಳಿವೆ ಎನ್ನಬಹುದು.
image source : ANI

ಇನ್ನುಳಿದಂತೆ ಪೋರ್ಷೆ ಪನಮೆರಾ ಕಾರು ಕೂಡಾ 2.30 ಕೋಟಿ ಮೌಲ್ಯ ಹೊಂದಿದ್ದು, ಸೂಪರ್ ಕಾರು ಮಾದರಿಯಲ್ಲೇ ಇದು ಅತಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಇಂತಹ ದುಬಾರಿ ಕಾರುಗಳು ನೀರವ್ ಮೋದಿ ಕಾರ್ ಕಲೆಕ್ಷನ್‌ನಲ್ಲಿ ಸ್ಥಾನ ಪಡೆದಿದೆ.

ಇದಷ್ಟೇ ಅಲ್ಲದೇ ಮರ್ಸಿಡಿಸ್ ಬೆಂಝ್ ಜಿಎಲ್ 350 ಕಾರುಗಳು ತಲಾ 1 ಕೋಟಿ ಮೌಲ್ಯ ಹೊಂದಿದ್ದು, 1 ಹೋಂಡಾ ಸಿಟಿ, 1 ಹೋಂಡಾ ಅರ್ಕಾಡ್ ಮತ್ತೊಂದು ಹೋಂಡಾ ಸಿಆರ್‌ವಿ ಕೂಡಾ ನೀರವ್ ಮೋದಿ ಕಾರು ಸಂಗ್ರಹದಲ್ಲಿವು.

ಕೊನೆಯದಾಗಿ 38 ಲಕ್ಷ ಮೌಲ್ಯದ ಐಷಾರಾಮಿ ಎಸ್‌ಯುವಿ ಫಾರ್ಚೂನರ್ ಮತ್ತು 20 ಲಕ್ಷ ಮೌಲ್ಯದ ಇನೋವಾ ಕೂಡಾ ನೀರವ್ ಮೋದಿ ಬಳಿ ಇದ್ದು, ಬ್ಯಾಂಕ್ ವಂಚನೆ ಸಂಬಂಧಿಸಿ ತೀವ್ರ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ವಂಚಕನ ಜಾಡು ಭೇದಿಸುತ್ತಿದ್ದಾರೆ.
Source: Network 18


Click it and Unblock the Notifications








