ಸನ್‌ರೂಫ್ ಇಲ್ಲದಕ್ಕೆ ರೂಫ್‌ಟಾಪ್ ಏರಿದ ಭೂಪ: ಮಾರುತಿ ಬ್ರೇಝಾದಲ್ಲಿ ಮಂಗನಾಟಕ್ಕೆ ಪೊಲೀಸರ ಅತಿಥಿ
ನಮ್ಮಲ್ಲಿ ಹಲವರಿಗೆ ಸಾಮಾನ್ಯ ಜ್ಞಾನ ಇಲ್ಲ ಎಂದರೆ ಒಂದು ಕ್ಷಣ ಕೋಪ ಬರಬಹುದು. ಆದರೆ ಸಾವಕಾಶವಾಗಿ ಕುಳಿತು ಈ ಕುರಿತಾಗಿ ಒಮ್ಮೆ ಕೊಂಚ ಆಲೋಚನೆ ಮಾಡಿದರೆ ಈ ಮಾತು ನಿಜ ಎಂದು ಎನಿಸುತ್ತದೆ. ಇದಕ್ಕೆ ನಮ್ಮಲ್ಲಿ ಹಲವರು ಮಾಡುವ ಮೂರ್ಖತನದ ಕಪಿಚೇಷ್ಟೆಗಳೇ ಉದಾಹರಣೆ.
ಇಲ್ಲೊಬ್ಬ ಮೂರ್ಖ ತನ್ನ ಜೀವವನ್ನೇ ಮುಡಿಪಾಗಿಟ್ಟುಕೊಂಡು ಕಪಿಚೇಷ್ಟೆ ಮಾಡಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೌದು, ಭೂಪ ಚಲಿಸುತ್ತಿರುವ ಕಾರಿನ ಮೇಲೆ ಕುಳಿತು ಮಜಾಮಾಡುತ್ತಿದ್ದುದನ್ನು ಹಿಂದಿನಿಂದ ಬರುತ್ತಿದ್ದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆದ ಕೂಡಲೇ ಪೊಲೀಸರು ಘಟನೆಯ ಬಗ್ಗೆ ಗಮನವನ್ನು ಹರಿಸಿದ್ದಾರೆ.

ವಿಡಿಯೋವನ್ನು ಗಮನಿಸಿದ ಪೊಲೀಸರು ವಾಹನದ ಮೇಲೆ ಕುಳಿತು ಕಪಿಚೇಷ್ಟೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಗೋವಾಗೆ ಪ್ರವಾಸಕ್ಕೆಂದು ಬಂದ ವ್ಯಕ್ತಿ ಈ ಕೃತ್ಯವನ್ನು ಎಸಗಿದ್ದಾನೆ ಎಂದು ತಿಳಿದು ಬಂದಿದೆ. ವಿಡಿಯೋದಲ್ಲಿ ಕಾಣುವಂತೆ ಮಾರುತಿ ಸುಜುಕಿ ಬ್ರೇಝಾ ಮೇಲೆ ಕುಳಿತು ಈ ಸಾಹಸವನ್ನು ಮಾಡಿದ್ದಾನೆ.
ನಮ್ಮಲ್ಲಿ ಈ ರೀತಿಯ ಮೂರ್ಖತನದ ಪರಮಾವಧಿಯ ಕೆಲಸವನ್ನು ಮಾಡುವವರು ಗಲ್ಲಿ ಗಲ್ಲಿಗೂ ಸಿಗುತ್ತಾರೆ. ವಿಧ್ಯಾಭ್ಯಾಸ ಮತ್ತು ಲೋಕಜ್ಞಾನ ಇಲ್ಲದಿರಿರುವುದೇ ಈ ಕೃತ್ಯಗಳನ್ನು ಎಸೆಯಲು ಇರುವ ಪ್ರಮುಖ ಕಾರಣ. ದೊರಕಿರುವ ಮಾಹಿತಿಗಳ ಪ್ರಕಾರ ಪ್ರಕರಣಕ್ಕೆ ಬಳಿಸಿರುವ ಕಾರು ತೆಲಂಗಾಣ ಮೂಲದಾಗಿದ್ದು, ಗೋವಾಗೆ ಪ್ರವಾಸಕ್ಕೆಂದು ಬಂದಿದ್ದರು ಎಂದು ತಿಳಿದು ಬಂದಿದೆ.

ಈ ಮೇಲೆ ತಿಳಿಸಿದಂತೆ ಈ ರೀತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುಂಚೆ ಹಲವು ಬಾರಿ ಈ ರೀತಿಯ ವಿಡಿಯೋಗಳನ್ನು ನಾವು ನೊಡಿದ್ದೇವೆ. ಬಹುಷಃ ವಿಡಿಯೋದಲ್ಲಿ ಕಾಣುತ್ತಿರುವ ಮಾರುತಿ ಬ್ರೇಝಾಗೆ ಸನ್ ರೂಫ್ ಇಲ್ಲದೇ ಇರುವ ಕಾರಣ ಈ ಉಪಾಯವನ್ನು ಮಾಡಿರಬಹುದು ಎಂದು ತಿಳಿದು ಬಂದಿದೆ. ಆದರೆ ಆತನ ಈ ಉಪಾಯವೇ ಅಪಾಯಕ್ಕೆ ದಾರಿ ಮಾಡಬಲ್ಲದು ಎಂದು ಆತನ ಅರಿವಿಗೆ ಬಂದಿರಲಿಲ್ಲ ಎಂದು ಕಾಣುತ್ತದೆ.
ಇನ್ನು ಈ ರೀತಿಯಾಗಿ ಕಾರಿನ ಮೇಲೆ ಯಾವುದೇ ರೀತಿಯ ರಕ್ಷಣೆ ಇಲ್ಲದೇ ಕುಳಿತುಕೊಳ್ಳುವುದರಿಂದ ಅಲ್ಲಿಂದ ಬೀಳುವ ಸಾಧ್ಯತೆಗಳು ಹೆಚ್ಚು. ಕಾರಿನ ಒಳಗಿರುವ ಡ್ರೈವರ್ ನೆನಪಿಲ್ಲದೇ ಒಂದೇ ಬಾರಿ ಆಕ್ಸಿಲರೇಷನ್ ಏನಾದರೂ ಕೊಟ್ಟರೆ ಮೇಲಿರುವ ವ್ಯಕ್ತಿ ರಸ್ತೆಗೆ ಬೀಳುವ ಸಾಧ್ಯತೆಗಳಿರುತ್ತವೆ. ಹೀಗೇನಾದರೂ ಬೀಳುವಾಗ ಹಿಂದೆಯಿಂದ ಬರುವ ವಾಹನವೇನಾದರೂ ಆತನ ಮೇಲೆ ಹರಿದರೆ ಪ್ರಾಣ ಪಕ್ಷಿ ಕ್ಷಣಮಾತ್ರದಲ್ಲಿ ಹಾರಿ ಹೋಗುವುದರಲ್ಲಿ ಎರಡು ಮಾತಿಲ್ಲ.
ಇನ್ನು ಈಗ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬ್ರೇಝಾ (Maruti Suzuki Brezza) ಕುರಿತಾಗಿ ಹೇಳುವುದಾದರೆ, ಹೋದ ವರ್ಷ ಮಾರುತಿ ಸುಜುಕಿ, ಸೇಲ್ ಮಾಡಿದ ಕಾರುಗಳಲ್ಲಿ ಬ್ರೆಝಾ ಎಸ್‌ಯುವಿ ಮೊದಲ ಸ್ಥಾನದಲ್ಲಿ ನಿಂತಿದ್ದು, ಒಟ್ಟು 1.70 ಲಕ್ಷ ಯುನಿಟ್ ಮಾರಾಟ ಮಾಡುವ ಮೂಲಕ ಹೊಸದೊಂದು ದಾಖಲೆ ಬರೆದಿದೆ.
5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಈ ಎಸ್‌ಯುವಿ, 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 103 PS ಗರಿಷ್ಠ ಪವರ್, 137 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 5 - ಸ್ವೀಡ್ ಮ್ಯಾನುವಲ್, 6 ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications