ಥಾರ್, ಫಾರ್ಚ್ಯೂನರ್ ಕಾರುಗಳಲ್ಲಿ ಸ್ಟಂಟ್ ಮಾಡಿ ವಿಡಿಯೋ: ಲೈಸೆನ್ಸ್ ಕ್ಯಾನ್ಸಲ್ ಮಾಡಿ ಪೊಲೀಸರಿಂದ ಶಾಕ್
ನಮ್ಮ ಭಾರತೀಯ ಹೆದ್ದಾರಿಗಳಲ್ಲಿ ಯಾವಾಗಲೂ ವಾಹನಗಳು ತುಂಬಿ ತುಳುಕುತ್ತಲೇ ಇರುತ್ತದೆ. ಇಂತಹ ಸಂಧರ್ಭಗಳಲ್ಲಿ ಅದೇ ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡುವವರಿಗೂ ಯಾವುದೇ ಕಮ್ಮಿಯಿಲ್ಲ. ಇದರಿಂದ ಅಪಘಾತಗಳಾಗುವ ಸಂಭವಗಳು ಅಧಿಕವಾಗಿದ್ದರೂ, ಈ ರೀತಿಯ ಶೋಕಿ ಮಾಡುವವರು ನಮ್ಮಲ್ಲಿ ಗಲ್ಲಿ ಗಲ್ಲಿಗೆ ಒಬ್ಬರಂತೆ ಸಿಗುತ್ತಾರೆ.
ಇಲ್ಲೊಂದು ಕಡೆ ಹೆದ್ದಾರಿಯಲ್ಲಿ ತಮ್ಮ ದುಬಾರಿ ಕಾರುಗಳಲ್ಲಿ ಸ್ಟಂಟ್ (Stunt) ಮಾಡುತ್ತಾ ಡ್ರೈವ್ ಮಾಡಿದವರನ್ನು ಪತ್ತೆ ಹಚ್ಚಿದ ಪೊಲೀಸರು ಸರಿಯಾದ ಕ್ರಮಗಳನ್ನು ಕೈಗೊಂಡು ಬುದ್ದಿ ಕಲಿಸಿದ ಘಟನೆಯೊಂದು ನಡೆದಿದೆ. ಚಂಡೀಘಡದ ಹೆದ್ದಾರಿಯಲ್ಲಿ ಇನ್ಟ್ಸಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿ ಲೈಕ್ ಗಿಟ್ಟಿಸಿಕೊಳ್ಳಲು ಹೋಗಿ ಯುವಕರು ಫಚೀತಿಗೆ ಸಿಲುಕಿದ್ದಾರೆ.

ಚಂಡೀಘಡದ ಸೆಕ್ಟರ್ ೪೮ ಎಂಬಲ್ಲಿ ಮಹೀಂದ್ರಾ ಥಾರ್ ಮತ್ತು ಟೊಯೊಟಾ ಫಾರ್ಚ್ಯೂನ ಕಾರಿನ ಮಾಲೀಕರಿಬ್ಬರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲು ತಮ್ಮ ಕಾರುಗಳಲ್ಲಿ ಸ್ಟಂಟ್ ಮಾಡಿ ಅದನ್ನು ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ ಬಳಿಕ ಅದನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಕಾಣುವಂತೆ ಯುವಕರು ತಮ್ಮ ಥಾರ್ ಮತ್ತು ಫಾರ್ಚ್ಯೂನರ್ ಕಾರುಗಳ ಡೋರ್ ನಿಂದ ಹೊರಗೆ ನೇತಾಡುತ್ತಾ ಚಲಿಸುತ್ತಿರುವ ಕಾರುಗಳಲ್ಲಿ ಸ್ಟಂಟ್ ಮಾಡಿದ್ದಾರೆ. ಮಾತ್ರವಲ್ಲದೇ ಜನನಿಬಿಡ ರಸ್ತೆಯಲ್ಲಿ ಲೇನ್‌ಗಳನ್ನು ಸಹ ಅನುಸರಿದೇ ಹಿಗ್ಗಾ ಮುಗ್ಗಾ ಕಾರುಗಳನ್ನು ಓಡಿಸಿ ಅದಕ್ಕೆ ಪಂಜಾಬಿ ಹಾಡನ್ನು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಇನ್ನು ವೈರಲ್ ಆದ ಈ ವಿಡಿಯೋವನ್ನು ಗಮನಿಸಿದ ಚಂಡೀಘಡದ ಪೊಲೀಸ್ ತಾವೇ ಖುದ್ದಾಗಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾರುಗಳ ನಂಬರ್ ಪ್ಲೇಟ್ ಅನ್ನು ಗಮನಿಸಿದ ಪೊಲೀಸ್ ಆ ಮೂಲಕವಾಗಿ ಸ್ಟಂಟ್ ಮಾಡಿದವರ ಅಡ್ರೆಸ್ ಅನ್ನು ಪತ್ತೆ ಹಚ್ಚಿದ್ದು, ಆಯಾ ವಾಹನಗಳ ಚಾಲಕರ ಚಾಲನಾ ಪರವಾನಿಗೆ/ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದು ಮಾಡಿದ್ದಾರೆ.
ಸ್ಟಂಟ್ ಮಾಡಿದ ಅಷ್ಟೂ ವಾಹನಗಳ ಮಾಲೀಕರ ಮೇಲೆಯೂ ಕ್ರಮ ಕೈಗೊಂಡ ಪೊಲೀಸ್ ಎಲ್ಲರ ಲೈಸೆನ್ಸ್ ಅನ್ನು ಸಹ ರದ್ದು ಮಾಡಿ ಆದೇಶ ಹೊರಡಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತಮಗಿಷ್ಟ ಬಂದಂತೆ ವಾಹನ ಚಲಾಯಿಸಿದ ಭೂಪರಿಗೆ ಪೊಲೀಸ್ ಸರಿಯಾದ ಪಾಠವನ್ನೇ ಕಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಸ್ಟಂಟ್ ಮಾಡುವುದನ್ನು ನಮ್ಮ ದೇಶದಲ್ಲಿ ನಿಷೇಧ ಮಾಡಲಾಗಿದ್ದು, ಈ ರೀತಿಯ ವರ್ತನೆಗಳನ್ನು ತೋರುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಕಳೆದ ವರ್ಷ ಮುಂಬೈನಲ್ಲಿ ನಡೆದ ಪ್ರಕರಣವೊಂದರಲ್ಲಿ ಅಪರಾಧಿಗೆ ಆರು ತಿಂಗಳುಗಳ ಕಾಲ ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗಿತ್ತು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications