ಹೆದ್ದಾರಿಯ ರಾಂಗ್‌ಸೈಡಲ್ಲಿ ಬಂದ ಪೊಲೀಸ್‌ ಕಾರು: ಪೊಲೀಸರ ಪುಂಡಾಟಕ್ಕೆ ಕಡಿವಾಣ ಹಾಕಿದ ಚಾಲಕ

ಭಾರತದಲ್ಲಿ ಟ್ರಾಫಿಕ್‌ ರೂಲ್ಸ್‌ಗಳನ್ನು ಉಲ್ಲಂಘಿಸುತ್ತಿರುವುದಕ್ಕೆ ಯಾವುದೇ ಕಮ್ಮಿಯಿಲ್ಲ. ಪ್ರತಿಯೊಂದು ಬಾರಿಯೂ ರೀತಿ ಸಾರ್ವಜನಿಕರು ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದಾಗ ಪೊಲೀಸರು ಅಂತಹವರ ಮೇಲೆ ದಂಡ ವಿಧಿಸಿ ಕಳಿಸುವುದು ವಾಡಿಕೆ. ಪೊಲೀಸರು ಏನೇ ಕ್ರಮ ಕೈಗೊಂಡರೂ ನಮ್ಮಲ್ಲಿ ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸುವುದನ್ನು ನಿಯಂತ್ರಣಕ್ಕೆ ತರಲಾಗುತ್ತಿಲ್ಲ.

ಇದು ದೇಶದೆಲ್ಲೆಡೆ ಇರುವ ವಾಡಿಕೆ. ಸಾರ್ವಜನಿಕರು ನಿಯಮಗಳನ್ನು ಮೀರಿದಾಗ ಪೊಲೀಸರು ಅಂತಹವರಿಗೆ ಶಿಕ್ಷೆಗೆ ಒಳಪಡಿಸುದು ಅಥವಾ ದಂಡ ವಿಧಿಸುವುದು ಸಾಧಾರಣವಾಗಿರುವ ವಿಷಯವಾದರೆ, ಇಲ್ಲೊಂದು ಕಡೆ ಸಾರ್ವಜನಿಕರನ್ನು ತಿದ್ದಿ ಬುದ್ದಿ ಹೇಳಬೇಕಾದ ಪೊಲಿಸ್, ಟ್ರಾಫಿಕ್‌ ನಿಯಮಗಳನ್ನು ಗಾಳಿಗೆ ತೂರಿ, ತಮ್ಮಿಷ್ಟಕ್ಕೆ ಟ್ರಾಫಿಕ್‌ ನಿಯಮಗಳನ್ನು ಮೀರಿರುವ ಘಟನೆ ನಡೆದಿದೆ.

Police Car Came on Wrong Side

ಹೌದು, ಹರ್ಯಾಣ ಪೊಲೀಸರು ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ತಾವು ನಿಯಮದ ಹದ್ದನ್ನು ಮೀರಿದ್ದಾರೆ. ತಮ್ಮ ಟೊಯೋಟಾ ಇನ್ನೋವಾ ಪೊಲೀಸ್‌ ಕಾರಿನಲ್ಲಿದ್ದ (Police Car) ಹರ್ಯಾಣ ಪೊಲೀಸ್‌ ಗಸ್ತು ತಿರುಗುತ್ತಾ ವನ್‌ ವೇ ನಲ್ಲಿ ರಾಂಗ್‌ ಸೈಡ್‌ನಲ್ಲಿ ಬಂದು ಇನ್ನೊಂದು ಗಾಡಿಗೆ ಸ್ವಲ್ಪದರಲ್ಲೇ ಗುದ್ದುವುದರಲ್ಲಿದ್ದರು.

ನಿಯಮವನ್ನು ಎತ್ತಿ ಹಿಡಿಯಬೇಕಾದೆ ಪೊಲೀಸರೇ, ರಾಂಗ್‌ ಸೈಡ್‌ನಲ್ಲಿ ಬಂದು ಇತರರ ಪ್ರಾಣಕ್ಕೆ ಕಂಟಕವಾಗುವುದರಲ್ಲಿ ಕೂದಲೆಳೆ ಅಂತರದಲ್ಲಿ ಕೊಂಚವೇ ತಪ್ಪಿಸೊಕೊಂಡಿದ್ದಾರೆ. ಹೆದ್ದಾರಿಯಲ್ಲಿ ನಡೆಯಬೇಕಾಗಿದ್ದ ದೊಡ್ಡ ಅನಾತವೊಂದು ತಪ್ಪಿದಂತಾಗಿದೆ. ಇನ್ನು ಇದಕ್ಕೆ ಸಂಭಂಧಿಸಿದಂತೆ ವಿಡಿಯೋ, ಕಾರಿನ ಡ್ಯಾಶ್‌ ಕ್ಯಾಮೆರಾದಲ್ಲಿ ಸರೆಯಾಗಿದೆ ಎಂದು ತಿಳಿದು ಬಂದಿದೆ.

Police Car Came on Wrong Side

ಇನ್ನು ಸರಿದಾರಿಯಲ್ಲಿ ಹೋಗುತ್ತಿದ್ದ ಕಾರಿನ ಡ್ಯಾಶ್‌ ಕ್ಯಾಮೆರಾದಿಂದ ಕಾರು NH8 ರಲ್ಲಿ ಸಾಗುತ್ತಿದೆ ಏಂದು ತಿಳಿದು ಬರುತ್ತದೆ. ಇದೇ. ಸಂಧರ್ಭದಲ್ಲಿ ಎದುರುಗಡೆಯಿಂದ ವನ್‌ವೇ ನಲ್ಲಿ ಸಾಗುತ್ತಿರುವಾಗ ಹರ್ಯಾಣ ಪೊಲೀಸ್‌ರ ಕಾರೊಂದು ಎದುರುಗಡೆಯಿಂದ ಸಡನ್‌ ಆಗಿ ಬಂದಿದೆ. ಇದರಿಂದ ಕಕ್ಕಾಬಿಕ್ಕಿಯಾದ ಕಾರಿನ ಚಾಲಕ ಸರಿಯಾದ ಸಮಯಕ್ಕೆ ಬ್ರೇಕ್‌ ಹಾಕಿದ್ದಾನೆ.

ರೀತಿ ಸಮಯೋಚಿತ ಪೊಲೀಸ್‌ ಕಾರಿಗೆ ಗುದ್ದುವದರಿಂದ ತಪ್ಪಿಸಿಕೊಂಡಿದ್ದಾನೆ. ನಂತರದಲ್ಲಿ ಪೊಲೀಸರ ಬಳಿ ಆತ ನೀವು ರೀತಿ ರಾಂಗ್ ಸೈಡ್‌ನಲ್ಲಿ ಬಂದರೆ ಆಕ್ಸಿಡೆಂಟ್‌ ಆಗುವುದಿಲ್ಲವೇ, ನನ್ನ ಕಾರಿನಲ್ಲಿ ಕ್ಯಾಮೆರಾ ಇದೆ. ಅದರಲ್ಲಿ ಎಲ್ಲವೂ ಸೆರೆಯಾಗಿದೆ ಎಂದು ಇದೇ ಸಂಧರ್ಭದಲ್ಲಿ ಆತ ಪೊಲೀಸರ ಬಳಿ ಹೇಳುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ವಿಡಿಯೋದಲ್ಲಿ ಕಾಣುವಂತೆ ಹೆದ್ದಾರಿಯಲ್ಲಿ ಸಾಧಾರಣಕ್ಕಿಂತ ಹೆಚ್ಚು ವಾಹನಗಳು ಚಲಿಸುತ್ತಿದ್ದು, ಸಂಧರ್ಭದಲ್ಲಿ ಪೊಲೀಸರು ರೀತಿ ಬೇಜವಾಬ್ದಾರಿಯಿಂದ ವರ್ತಿಸಿರುವುದು ಯೋಚನೆ ಮಾಡುವಂತೆ ಮಾಡಿದೆ. ವಿಡಿಯೋವನ್ನು ಆತ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದು, ನಿತಿನ್‌ ಗಡ್ಕರಿ ಅವರು ಇದರತ್ತ ಗಮನ ಹರಿಸುವಂತೆ ಮನವಿ ಮಾಡಿಕೊಂಡಿದ್ದಾನೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, July 17, 2023, 15:46 [IST]
English summary
Police car came on wrong side in a highway on nh8
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+