51ನೇ ವಯಸ್ಸಿನಲ್ಲೂ ಸೈಕಲ್ಲೇ ಈ ಪೊಲೀಸಪ್ಪನ ಸಾರಥಿ

ಹಲವು ವರ್ಷಗಳ ಹಿಂದೆ ಸೈಕಲ್ ಗಳು ಜನರ ಜೀವನದ ಪ್ರಮುಖ ಭಾಗವಾಗಿದ್ದವು. ಬಹು ಸಂಖ್ಯೆಯ ಸಾರಿಗೆಗಾಗಿ ಸೈಕಲ್‌ಗಳನ್ನು ಅವಲಂಬಿಸಿದ್ದರು. ಬಹುತೇಕ ಎಲ್ಲರ ಮನೆಯಲ್ಲಿ ಸೈಕಲ್ ಗಳಿದ್ದವು. ಸೈಕಲ್ ಗಳು ಜನರ ಆರೋಗ್ಯವನ್ನು ಕಾಪಾಡುತ್ತಿದ್ದವು.

51ನೇ ವಯಸ್ಸಿನಲ್ಲೂ ಸೈಕಲ್ಲೇ ಈ ಪೊಲೀಸಪ್ಪನ ಸಾರಥಿ

ರೋಗಗಳಿಂದ ಹಾಗೂ ಖಿನ್ನತೆಯಿಂದ ಜನರನ್ನು ಕಾಪಾಡುತ್ತಿದ್ದವು. ಈಗ ಸೈಕಲ್ ಬದಲಿಗೆ ಬೈಕ್ ಗಳು ಬಂದಿವೆ. ಬೈಕ್ ಗಳು ಸಂಚಾರವನ್ನು ಸುಲಭವಾಗಿಸಿವೆ. ಜೊತೆಗೆ ದೇಹಕ್ಕೆ ಆರಾಮವನ್ನು ನೀಡುತ್ತವೆ. ಇದರ ಜೊತೆಗೆ ಅನೇಕ ರೋಗಗಳನ್ನು ಆಹ್ವಾನಿಸಿವೆ. ಈ ಆಧುನಿಕ ಯುಗದಲ್ಲೂ ಕೆಲವರು ಸೈಕಲ್ ಗಳನ್ನೇ ನೆಚ್ಚಿಕೊಂಡಿದ್ದಾರೆ. ಪ್ರತಿದಿನವು ತಮ್ಮ ಓಡಾಟಕ್ಕಾಗಿ ಸೈಕಲ್ ಗಳನ್ನೇ ಬಳಸುತ್ತಿದ್ದಾರೆ.

51ನೇ ವಯಸ್ಸಿನಲ್ಲೂ ಸೈಕಲ್ಲೇ ಈ ಪೊಲೀಸಪ್ಪನ ಸಾರಥಿ

ಸೈಕಲ್ ಬಳಕೆಯಿಂದಾಗಿ ಮೊದಲಿನಂತೆಯೇ ಆರೋಗ್ಯವಾಗಿದ್ದಾರೆ. ತಮಿಳುನಾಡಿನ 51 ವರ್ಷದ ಪೊಲೀಸ್ ಕಾನ್ಸ್ ಸ್ಟೇಬಲ್ ಒಬ್ಬರು ಕಚೇರಿಗೆ ಸೈಕಲ್ ನಲ್ಲಿಯೇ ಹೋಗುತ್ತಿದ್ದಾರೆ. ಶ್ರವಣನ್ ಎಂಬುವವರೇ ಈ ವಯಸ್ಸಿನಲ್ಲೂ ಸೈಕಲ್ ಸವಾರಿ ಮಾಡುತ್ತಿರುವವರು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

51ನೇ ವಯಸ್ಸಿನಲ್ಲೂ ಸೈಕಲ್ಲೇ ಈ ಪೊಲೀಸಪ್ಪನ ಸಾರಥಿ

ಅವರು 23 ವರ್ಷಗಳಿಂದ ಸೈಕಲ್ ಸವಾರಿ ಮಾಡುತ್ತಿದ್ದಾರೆ. ಪ್ರತಿದಿನ ಸೈಕಲ್ ಮೂಲಕವೇ ತಮ್ಮ ಕಚೇರಿಗೆ ಹೋಗುತ್ತಾರೆ. ಸೈಕಲ್ ಸವಾರಿಯಿಂದಾಗಿ ತಾವು ಸ್ಥೂಲಕಾಯವನ್ನು ಹೊಂದದೇ ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.

51ನೇ ವಯಸ್ಸಿನಲ್ಲೂ ಸೈಕಲ್ಲೇ ಈ ಪೊಲೀಸಪ್ಪನ ಸಾರಥಿ

ತಮ್ಮ ಅನೇಕ ಸಹೋದ್ಯೋಗಿಗಳು ಮಧುಮೇಹ ಹಾಗೂ ಸ್ಥೂಲಕಾಯದಿಂದ ಬಳಲುತ್ತಿದ್ದಾರೆಂದು ಶ್ರವಣನ್ ಹೇಳುತ್ತಾರೆ. ನಂದಂಬಕ್ಕಂ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರವಣನ್ ಪ್ರತಿದಿನ ಸುಮಾರು 40 ಕಿ.ಮೀ ಸೈಕಲ್ ಸವಾರಿ ಮಾಡುತ್ತಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

51ನೇ ವಯಸ್ಸಿನಲ್ಲೂ ಸೈಕಲ್ಲೇ ಈ ಪೊಲೀಸಪ್ಪನ ಸಾರಥಿ

ಯಾರನ್ನಾದರೂ ಭೇಟಿ ಮಾಡಲು ಸೈಕಲ್ ಮೂಲಕವೇ ಹೋಗುವುದಾಗಿ ಹೇಳಿದ್ದಾರೆ. ಅವರಿಂದ ಸ್ಫೂರ್ತಿ ಪಡೆದ ಅನೇಕರು ಸೈಕಲ್ ಸವಾರಿಯನ್ನು ಆರಂಭಿಸಿದ್ದಾರೆ. ಹಿಂದಿನ ಕಾಲದ ಪೊಲೀಸರು ಸೈಕಲ್‌ಗಳನ್ನು ಮಾತ್ರ ಬಳಸುತ್ತಿದ್ದರು.

51ನೇ ವಯಸ್ಸಿನಲ್ಲೂ ಸೈಕಲ್ಲೇ ಈ ಪೊಲೀಸಪ್ಪನ ಸಾರಥಿ

ಪೊಲೀಸರು ಸೈಕಲ್ ಗಳನ್ನು ಬಳಸುತ್ತಿದ್ದಾಗ ಅವರ ದೇಹವು ಆರೋಗ್ಯಕರವಾಗಿತ್ತು. ಆದರೆ ಈಗ ಆ ರೀತಿಯ ಪರಿಸ್ಥಿತಿಯಿಲ್ಲ ಎಂದು ಶ್ರವಣನ್ ಹೇಳುತ್ತಾರೆ. ಸೈಕಲ್ ತುಳಿಯುವುದರಿಂದ ಒಳ್ಳೆಯ ನಿದ್ರೆ ಮಾಡುತ್ತಿರುವುದಾಗಿ ಹೇಳುತ್ತಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

51ನೇ ವಯಸ್ಸಿನಲ್ಲೂ ಸೈಕಲ್ಲೇ ಈ ಪೊಲೀಸಪ್ಪನ ಸಾರಥಿ

ಜೊತೆಗೆ ಸೈಕಲ್ ನಿಂದ ಯಾವುದೇ ರೀತಿಯ ಮಾಲಿನ್ಯ ಉಂಟಾಗುವುದಿಲ್ಲ. ತಾವು ಎಂದಿಗೂ ಬೈಕು ಖರೀದಿಸಿಲ್ಲ. ಇದಕ್ಕಾಗಿ ತಮ್ಮ ಸ್ನೇಹಿತರು ತಮ್ಮನ್ನು ಹೀಯಾಳಿಸಿದರೆಂದು ಅವರು ಹೇಳುತ್ತಾರೆ. ಸೈಕಲ್ ಬಳಕೆಯಿಂದಾಗಿ ಕಾಯಿಲೆಗಳಿಂದ ದೂರವಾಗಿದ್ದೇನೆ ಎಂದು ಸಹ ಹೇಳಿದ್ದಾರೆ.

Most Read Articles

Kannada
English summary
Police Constable rides bicycle 51 kms daily to keep him fit. Read in Kannada.
Story first published: Friday, July 3, 2020, 15:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X