ಸರಿಯಾಗಿ ಸಿಕ್ಕಿಬಿದ್ದ... ಲಿಸ್ಟ್ ತೆಗೆದ್ರೆ 56,000 ರೂ. ಬಾಕಿ ದಂಡ: ಡಿಎಲ್ ಅಮಾನತು

ಬೆಂಗಳೂರಿನಲ್ಲಿ ಮೊದಲಿನಂತಲ್ಲದೆ ಈಗ ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ ಕಡಿಮೆಯಾಗಿದೆ. ನಗರದ ಪ್ರತಿಯೊಂದು ಪ್ರಮುಖ ರಸ್ತೆಗಳಲ್ಲಿ ಅತ್ಯಾಧುನಿಕ AI ಕ್ಯಾಮರಾಗಳನ್ನು ಅಳವಡಿಸಿದ್ದು, ನಿಯಮಗಳ ಉಲ್ಲಂಘನೆ ಮಾಡುವವರನ್ನು ಇದು ಪತ್ತೆ ಹಚ್ಚುತ್ತದೆ. ಈ AI ಕ್ಯಾಮರಾಗಳಿಂದ ಡೇಟಾವನ್ನು ಪಡೆದು ಕಂಟ್ರೋಲ್ ರೂಂನಿಂದ ದಂಡ ಹಾಕಲಾಗುತ್ತಿದೆ.

ಏನೇ ಹೇಳಿ ಪೊಲೀಸರು ರಸ್ತೆಗಿಳಿದು ಕಾರ್ಯಾಚರಣೆ ನಡೆಸುತ್ತಿದ್ದಾಗಲೇ ನಿಯಮಗಳ ಉಲ್ಲಂಘನೆ ನಿಯಂತ್ರಣದಲ್ಲಿತ್ತು. ರಸ್ತೆಗಳಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುವುದು, ಸಿಗ್ನಲ್ ಜಂಪ್, ತ್ರಿಬಲ್ ರೈಡಿಂಗ್‌ನಂತಹ ನಿಯಮಗಳ ಉಲ್ಲಂಘನೆ ಮಾಡಲು ಹೆದರುತ್ತಿದ್ದರು. ಸಿಕ್ಕಿಬಿದ್ದರೆ ದಂಡವನ್ನು ಸ್ಪಾಟ್‌ನಲ್ಲಿ ಕಟ್ಟುತಿದ್ದ ಕಾರಣ ಮೂಲೆಯಲ್ಲಿ ಪೊಲೀಸರಿರುವರೋ ಎಂದು ನಿಯಮಗಳನ್ನು ಪಾಲುಸುತ್ತಿದ್ದರು.

police-detain-rider-99-traffic-violations-rs-56k-pending-fine

ಆದ್ರೆ ಈಗ ಹಾಗಿಲ್ಲ, ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ ತೀರಾ ಕಡಿಮೆಯಾಗಿಬಿಟ್ಟಿದೆ. AI ಕ್ಯಾಮರಾಗಳನ್ನು ನಿರ್ಲಕ್ಷಿಸಿ ಮನಬಂದಂತೆ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂಬುದಕ್ಕೆ ಈತನೇ ಉತ್ತಮ ಉದಾಹರಣೆಯಾಗಿದ್ದಾನೆ. ಬರೋಬ್ಬರಿ 99 ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿ ನಗರದಲ್ಲಿ ರಾಜಾ ರೋಷವಾಗಿ ಓಡಾಡಿಕೊಂಡಿದ್ದಾನೆ. ಆದ್ರೆ ಈಗ ಸಾಮಾಜಿಕ ಜಾಲತಾಣದಿಂದ ಸಿಕ್ಕಿಬಿದ್ದಿದ್ದಾನೆ.

56,000 ರೂ. ದಂಡ ಪಾವತಿಸಬೇಕಿದೆ: ಬೆಂಗಳೂರಿನ ಸಂಚಾರಿ ಪೊಲೀಸರು 99 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ಬೈಕ್ ಸವಾರನನ್ನು ವಶಕ್ಕೆ ಪಡೆದಿದ್ದಾರೆ. ಈತನ ನಿಯಮಗಳ ಉಲ್ಲಂಘನೆಯಿಂದ ಪಾವತಿಸಬೇಕಾದ ದಂಡದ ಮೊತ್ತವು ಬರೋಬ್ಬರಿ 56,000 ರೂ. ಇದೆ. ಪದೆ ಪದೇ ಸಂಚಾರ ನಿಯಮ ಉಲ್ಲಂಘಿಸಿರುವ ಈತನ ವಿರುದ್ಧ ಈಗ ಎಫ್‌ಐಆರ್ ದಾಖಲಿಸಲಾಗಿದೆ.

police-detain-rider-99-traffic-violations-rs-56k-pending-fine

ಸೊಷಿಯಲ್ ಮೀಡಿಯಾದಲ್ಲಿ ಸಿಕ್ಕಿಬಿದ್ದ: ಸಾಮಾಜಿಕ ಮಾಧ್ಯಮ ಬಳಕೆದಾರರಾದ ಪ್ರಸನ್ನ ಕುಮಾರ್, ವೇಗಾ ಸಿಟಿ ಜಂಕ್ಷನ್ ಬಳಿ ಟ್ರಾಫಿಕ್ ನಿಯಮಗಳಿಗೆ ವಿರುದ್ಧವಾಗಿ ಬೈಕ್ ಸವಾರಿ ಮಾಡುತ್ತಿದ್ದುದನ್ನು ಸೆರೆಹಿಡಿದು ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರನ್ನು ಟ್ಯಾಗ್ ಮಾಡಿದ್ದರು.

ಇಲ್ಲಿಗೆ ಸುಮ್ಮನಿರದೇ KA 05 EM 1946 ನೋಂದಣಿ ಸಂಖ್ಯೆ ಹೊಂದಿರುವ ಬೈಕ್ ಒಟ್ಟು 99 ಉಲ್ಲಂಘನೆಗಳನ್ನು ಮಾಡಿದೆ. ಇತ್ತೀಚಿನ ಘಟನೆ ಸೇರಿ ಈಗ 100ನೇ ಉಲ್ಲಂಘನೆಯಾಗಿದೆ. ಎಂದು @PrassannakumarR ಟ್ವಿಟರ್‌ನಲ್ಲಿ ವಾಹನದ ವ್ಯಾಪಕವಾದ ಉಲ್ಲಂಘನೆಗಳ ಪಟ್ಟಿಯನ್ನು ಹಂಚಿಕೊಂಡು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬೆಂಗಳೂರು ಸಂಚಾರ ಪೊಲೀಸರು, ಸಂಚಾರ ಉಲ್ಲಂಘನೆಯನ್ನು ವರದಿ ಮಾಡಿದ ಪ್ರಸನ್ನ ಕುಮಾರ್‌ ಅವರಿಗೆ ಶ್ಲಾಘಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಇದೇ ರೀತಿಯ ಘಟನೆಗಳನ್ನು ವರದಿ ಮಾಡಲು ಸಾರ್ವಜನಿಕರನ್ನು ಉತ್ತೇಜಿಸಿದರು. ಇನ್ನು ಪದೇ ಪದೆ ನಿಯಮಗಳನ್ನು ಉಲ್ಲಂಘಿಸಿದ ಬೈಕ್ ಸವಾರನನ್ನು ವಶಕ್ಕೆ ಪಡೆದು ಆತನ ವಾಹನ ಪರವಾನಗಿ ಅಮಾನತುಗೊಳಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಘಟನೆಯು ಟ್ರಾಫಿಕ್ ನಿಯಮಗಳ ಉಲ್ಲಂಘನೆಗಳನ್ನು ಪರಿಹರಿಸುವಲ್ಲಿ ಸಾಮಾಜಿಕ ಮಾಧ್ಯಮದ ಪಾತ್ರವನ್ನು ಒತ್ತಿಹೇಳುತ್ತದೆ. ನಗರದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಯನ್ನು ತಡೆಯುವಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರ ತ್ವರಿತ ಕ್ರಮವನ್ನು ತೋರಿಸಿದೆ. ನಾವು ಕೂಡ ಕೇವಲ ಟ್ರಾಫಿಕ್ ನಿಯಮಗಳು ಮಾತ್ರವಲ್ಲದೇ ಯಾವುದೇ ನಿಯಮಗಳ ಉಲ್ಲಂಘನೆಯಾಗಲಿ ವಿಡಿಯೋ ರೆಕಾರ್ಡ್ ಮಾಡುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬಹುದು.

ಸಾಮಾಜಿಕ ಜಾಲತಾನದಲ್ಲಿ ಸರ್ವರೂ ಕಾಣುವುದರಿಂದ ಅಧಿಕಾರಿಗಳಿಂದ ನಾವು ಬಯಸುವ ಪ್ರತಿಕ್ರಿಯೆ ವೇಗವಾಗಿರುತ್ತದೆ. ಹಾಗಾಗಿ ನಮಗೆ ಸ್ಥಳಿಯವಾಗಿ ನ್ಯಾಯ ಸಿಗದಿದ್ದಾಗ ಸಾಕ್ಷ್ಯಗಳ ಸಮೇತ ಸಾಮಾಜಿಕ ಜಾಲತಾಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನವನ್ನು ಸೆಳೆಯಬಹುದು. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ, ಡ್ರೈವ್‌ಸ್ಪಾರ್ಕ್‌ನೊಂದಿಗೆ ಸಂಪರ್ಕದಲ್ಲಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, September 28, 2023, 17:09 [IST]
English summary
Police detain rider 99 traffic violations rs 56k pending fine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+