ಟ್ರಾಫಿಕ್ ನಿಯಮ ಉಲ್ಲಂಘನೆ: ಮಹಿಳೆಗೆ 1.36 ಲಕ್ಷ ರೂ. ದಂಡ, ಆದ್ರೆ ಸ್ಕೂಟರ್ ಬೆಲೆ 1 ಲಕ್ಷ!

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ, ಸ್ಥಳೀಯ ಪೊಲೀಸರು ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚುವುದು ಇನ್ನೂ ಸುಲಭವಾಗಿದೆ. ಇತ್ತೀಚೆಗೆ ನಿಯಮಿತವಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಹೋಂಡಾ ಆಕ್ಟಿವಾ ಹೊಂದಿರುವ ಮಹಿಳೆಯೊಬ್ಬರಿಗೆ ಪೊಲೀಸರು ತಡೆದು 1.36 ಲಕ್ಷ ರೂ.ಗಳ ದಂಡ ವಿಧಿಸಿದ್ದಾರೆ.

ಮಹಿಳೆಯ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮೂಲಗಳ ಪ್ರಕಾರ, ಈ ಮಹಿಳೆ ಸುಬ್ಬಯ್ಯನಪಾಳ್ಯ, ಬಾಣಸವಾಡಿಯ ಕಾಕ್ಸ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಲ್ಮೆಟ್ ಇಲ್ಲದೆ ಹೋಂಡಾ ಆಕ್ಟಿವಾದಲ್ಲಿ ಪ್ರಯಾಣಿಸುತ್ತಿದ್ದರು. ಕೆಲವೊಮ್ಮೆ ಏಕಾಂಗಿಯಾಗಿ ಮತ್ತು ಇನ್ನೂ ಕೆಲವೊಮ್ಮೆ ಹಿಂಬದಿ ಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿದ್ದರು. ರಸ್ತೆಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾವು ಬರೋಬ್ಬರಿ 207 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದನ್ನು ಸೆರೆಹಿಡಿದಿದೆ. ಹೆಚ್ಚಿನ ಚಿತ್ರಗಳಲ್ಲಿ ಅವರು ಹೆಲ್ಮೆಟ್ ಧರಿಸದೆ ಟ್ರಾಫಿಕ್ ಸಿಗ್ನಲ್‌ಗಳನ್ನು ಜಂಪ್ ಮಾಡಿರುವುದಲ್ಲದೇ ಹಲವೆಡೆ ರಸ್ತೆಯ ರಾಂಗ್ ಸೈಡ್‌ನಲ್ಲಿ ಸ್ಕೂಟರ್ ಸವಾರಿ ಮಾಡಿದ್ದಾರೆ.

police-fined-1-36-lakh-for-women-violated-traffic-rules-in-bangalore

ಅಲ್ಲದೇ ಹಲವಾರು ಬಾರಿ ಫೋನ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ. ಮಹಿಳೆ ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವುದನ್ನು ತಡೆಯಲು, ಪೊಲೀಸರು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಬೆಂಗಳೂರು ಸಂಚಾರ ಪೊಲೀಸರು ಮಹಿಳೆ ಸವಾರಿ ಮಾಡುವ ಹೋಂಡಾ ಆಕ್ಟಿವಾ ಸ್ಕೂಟರ್ ವಿರುದ್ಧ 207 ಉಲ್ಲಂಘನೆಗಳನ್ನು ಪತ್ತೆಹಚ್ಚಿ, 1.36 ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ. ಈ ಮೊತ್ತವು ಆಕೆಯ ಸ್ಕೂಟರ್ ಮೌಲ್ಯಕ್ಕಿಂತ ಹೆಚ್ಚಾಗಿದೆ.

ಇದೇ ಮೊದಲೇನಲ್ಲ: ಬೆಂಗಳೂರಿನಲ್ಲಿ ಈ ರೀತಿಯ ಪ್ರಕರಣಗಳು ಇದೇ ಮೊದಲೇನಲ್ಲ. ಸಂಚಾರ ನಿಯಮ ಉಲ್ಲಂಘನೆಗಳು ಬೆಂಗಳೂರಿನಲ್ಲಿ ಅತ್ಯಂತ ಸಾಮಾನ್ಯವಾಗಿದೆ. ಪೊಲೀಸರು ಇತ್ತೀಚೆಗೆ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಕಳೆದ ತಿಂಗಳು ಬೆಂಗಳೂರಿನ ಸುಧಾಮ ನಗರದ ಹೋಂಡಾ ಆಕ್ಟಿವಾ ಸವಾರರೊಬ್ಬರು 3.04 ಲಕ್ಷ ರೂ.ಗಳ ದಂಡವನ್ನು ಹಾಕಿಸಿಕೊಂಡಿದ್ದರು.

police-fined-1-36-lakh-for-women-violated-traffic-rules-in-bangalore

ನಿಯಮ ಉಲ್ಲಂಘಿಸಿ ದಂಡವನ್ನು ಪಾವತಿಸಲು ವಿಫಲವಾದರೆ ಪೊಲೀಸರು ವಾಹನವನ್ನು ವಶಪಡಿಸಿಕೊಳ್ಳುವುದಲ್ಲದೆ, ಅವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಉತ್ತರ ಪ್ರದೇಶದಲ್ಲೂ ಇದೇ ರೀತಿಯ ಪ್ರಕರಣಗಳು ಹಲವು ದಾಖಲಾಗಿವೆ. ಅಲ್ಲಿಯೂ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಇಬ್ಬರು ಯುವತಿಯರು ಸ್ಟಂಟ್ ಮಾಡಿದ ವೀಡಿಯೊ ವೈರಲ್ ಆದ ನಂತರ ಪೊಲೀಸರು 80,000 ರೂ. ದಂಡ ವಿಧಿಸಿದ್ದರು. ಇದು ರಸ್ತೆಯಲ್ಲಿ ಅತ್ಯಂತ ಬೇಜವಾಬ್ದಾರಿಯುತ ನಡವಳಿಕೆಯಾಗಿದೆ, ನೀವು ನಿಮ್ಮ ಪ್ರಾಣವನ್ನು ಮಾತ್ರವಲ್ಲದೆ ಇತರ ಮುಗ್ಧ ರಸ್ತೆ ಬಳಕೆದಾರರ ಜೀವಕ್ಕೂ ಅಪಾಯ ತಂದೊಡ್ಡುವುದಾಗಿದೆ. ವರದಿಗಳ ಪ್ರಕಾರ, ಸ್ಕೂಟರ್ ಮತ್ತು ಯುವತಿಯರನ್ನು ಪೊಲೀಸರು ಪತ್ತೆಹಚ್ಚಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಅತ್ಯಂತ ಅಪಾಯಕಾರಿ: ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವುದು ಅತ್ಯಂತ ಅಪಾಯಕಾರಿ ಮತ್ತು ಕಾನೂನುಬಾಹಿರ. ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸುವುದರ ಹಿಂದಿನ ಮೂಲ ಕಲ್ಪನೆಯೆಂದರೆ ಅಪಘಾತದ ಸಂದರ್ಭದಲ್ಲಿ ನಿಮ್ಮ ತಲೆಯನ್ನು ಗಾಯಗಳಿಂದ ರಕ್ಷಿಸುವುದು. ಅಂತೆಯೇ, ಟ್ರಾಫಿಕ್ ಸಿಗ್ನಲ್‌ಗಳನ್ನು ಜಂಪ್ ಮಾಡುವುದು ಮತ್ತು ರಸ್ತೆಯ ರಾಂಗ್ ಸೈಡ್ ನಲ್ಲಿ ಸವಾರಿ ಮಾಡುವುದು ಸಹ ಅಪಾಯಕಾರಿ.

ಸದ್ಯ ದೇಶದ ಎಲ್ಲಾ ಭಾಗಗಳಲ್ಲಿಯೂ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಇದನ್ನು ಪಾಲಿಸುವುದು ತೀರಾ ಕಡಿಮೆ ಜನ, ದೊಡ್ಡ ದೊಡ್ಡ ನಗರಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆಯಾದರೂ ಸಿಟಿಯನ್ನು ದಾಟುತ್ತಿದ್ದಂತೆ ಇದ್ಯಾವುದು ಕಾಣುವುದಿಲ್ಲ. ಈ ಬಗ್ಗೆಯೂ ಪೊಲೀಸರು ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ಕುರಿತ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, April 14, 2024, 8:30 [IST]
English summary
Police fined 1 36 lakh for women violated traffic rules in bangalore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+