ಸರಿಯಾಗಿ ಬಿತ್ತು ದಂಡ: ಸ್ಟಂಟ್ ಮಾಡಿದವನಿಗೆ ತಿಳಿಯದೆ ವೈರಲ್ ಆಯ್ತು ವಿಡಿಯೋ!

ಕಾರಿನಲ್ಲಿ ಸ್ಟಂಟ್‌ ಮಾಡುವುದು ತಪ್ಪೇನಲ್ಲ, ಎಲ್ಲರೂ ಮಾಡಲಾಗದ ಸಾಹಸಗಳನ್ನು ಕೆಲವರೇ ಮಾಡುವುದರಿಂದ ಇದು ಕೂಡ ಒಂದು ಕಲೆ. ಆದ್ರೆ ಸಾರ್ವಜನಿಕ ರಸ್ತೆಗಳಲ್ಲಿ ಮಾಡುವುದು ಅಪರಾದ ಎಂಬುದನ್ನು ಮರೆಯಬಾರದು. ಇತ್ತೀಚೆಗೆ ಹರಿಯಾಣದ ಚಾಲಕನೊಬ್ಬ ಹ್ಯುಂಡೈ ಕ್ರೆಟಾದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಮಾಡಿದ ಸ್ಟಂಟ್ ವಿಡಿಯೋ ವೈರಲ್ ಆಗಿ ಸರಿಯಾಗಿ ದಂಡ ಕಟ್ಟಿದ್ದಾನೆ.

ಕಾರಿನ ಮುಂಭಾಗದ ಎರಡು ಡೋರ್‌ಗಳನ್ನು ತೆರೆದು ಓಡಿಸುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇತ್ತೀಚೆಗೆ ಪೊಲೀಸರು ರೂ. 3,500 ದಂಡವನ್ನು ವಿಧಿಸಿದ್ದಾರೆ. ಇದು ತನಗೆ ಮತ್ತು ವಾಹನದ ಪ್ರಯಾಣಿಕರಿಗೆ ಅಪಾಯಕಾರಿ ಮಾತ್ರವಲ್ಲ, ತನ್ನ ಎದುರು ಬರುವ ವಾಹನಗಳಿಗೂ ಅಪಾಯವನ್ನುಂಟುಮಾಡುತ್ತದೆ. ಈ ಘಟನೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

police-fined-3-500-to-driver-who-did-stunt-by-opening-door-in-himachal-pradesh

ಹಿಮಾಚಲ ಪ್ರದೇಶದ ಗುಡ್ಡಗಾಡುಗಳಲ್ಲಿ ಬಾಗಿಲು ತೆರೆದು ಹ್ಯುಂಡೈ ಕ್ರೆಟಾವನ್ನು ಚಾಲನೆ ಮಾಡುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದ್ದು, ಅಲ್ಪಾವಧಿಯಲ್ಲಿಯೇ ವೈರಲ್ ಆಗಿದೆ. ಅದರಲ್ಲಿ, ಚಾಲಕನು ತನ್ನ ಬಾಗಿಲು ತೆರೆದು ಕಾರು ಓಡಿಸುವುದನ್ನು ನೋಡಬಹುದು, ಕಾರಿನಲ್ಲಿದ್ದ ಇತರ ಪ್ರಯಾಣಿಕರು ತೆರೆದ ಬಾಗಿಲಿನಿಂದ ಅಪಾಯಕಾರಿಯಾಗಿ ನೇತಾಡುತ್ತಿರುವುದನ್ನು ಕಾಣಬಹುದು.

ವೈರಲ್ ಆಗುತ್ತಿರುವ ವಿಡಿಯೋ ಸ್ಥಳೀಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ವಾಹನದ ಮಾಲೀಕನಿಗೆ ರೂ. 3,500 ದಂಡ ವಿಧಿಸಲಾಗಿದೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಇದು ತುಂಬಾ ಕಡಿಮೆ ಮೊತ್ತ ಎಂದು ಹೈಲೈಟ್ ಮಾಡಿದ್ದಾರೆ. ಇಂತಹ ನಾಟಕಗಳನ್ನು ಪ್ರಯತ್ನಿಸುವ ಯಾರಿಗಾದರೂ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

police-fined-3-500-to-driver-who-did-stunt-by-opening-door-in-himachal-pradesh

ಈ ದಂಡ ಸರಿಯಾಗಿಯೇ ಇದೆ ಆದ್ರೆ ಕೊನೆಯಲ್ಲಿ ಇನ್ನೊಂದು ಸೊನ್ನೆಯನ್ನು ಸೇರಿಸಿದ್ದರೇ ಇನ್ನೂ ಉತ್ತಮವಾಗಿರುತ್ತಿತ್ತು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಕಮೆಂಟ್ ಮಾಡಿ ಇಂತಹ ಸಾಹಸಗಳನ್ನು ಯಾರೂ ಪ್ರಯತ್ನಿಸದಂತೆ ಕಾರನ್ನು ವಶಪಡಿಸಿಕೊಂಡು ಮತ್ತು ಚಾಲಕನ ಡಿಎಲ್ ತಾತ್ಕಾಲಿಕವಾಗಿ ವಜಾಗೊಳಿಸಬಹುದಿತ್ತು ಎಂದರೆ, ಇನ್ನೊಬ್ಬ ಕ್ರೆಟಾವನ್ನು ಖರೀದಿಸಬಲ್ಲ ಯಾರಾದರೂ ಈ ಅತ್ಯಲ್ಪ ಪೆನಾಲ್ಟಿ ಮೊತ್ತವನ್ನು ಸುಲಭವಾಗಿ ಪಾವತಿಸಬಹುದು ಎಂದಿದ್ದಾನೆ.

ಇತ್ತೀಚಿನ ದಿನಗಳಲ್ಲಿ (ಶೀತದ ಸೀಸನ್) ಸಾವಿರಾರು ಪ್ರವಾಸಿಗರು ಹಿಮಾಚಲ ಪ್ರದೇಶದ ಬೆಟ್ಟಗಳಿಗೆ ತೆರಳುತ್ತಾರೆ. ಇದು ಆ ರಾಜ್ಯದ ಆರ್ಥಿಕತೆಗೆ ಒಳ್ಳೆಯ ಸುದ್ದಿಯಾಗಿದ್ದರೂ, ಇದು ಮನಾಲಿ ಮತ್ತು ಶಿಮ್ಲಾ ಸೇರಿದಂತೆ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮತ್ತು ಸುತ್ತಮುತ್ತಲಿನ ಬೃಹತ್ ಟ್ರಾಫಿಕ್ ಜಾಮ್ ಮತ್ತು ಇಂತಹ ಅಹಿತಕರ ಘಟನೆಗಳಿಗೆ ಕಾರಣವಾಗಿದೆ.

ಟ್ರಾಫಿಕ್‌ ನೆಪವುಂಟಾಗಿ ವಾಹನ ಸವಾರರು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಎದುರಾಗಿದೆ. ಹೆಚ್ಚುವರಿಯಾಗಿ, ಸಂಚಾರ ನಿಯಮಗಳ ಉಲ್ಲಂಘನೆಗಳೂ ವರದಿಯಾಗಿವೆ. ಥಾರ್ ಚಾಲಕನೊಬ್ಬ ಇತ್ತೀಚೆಗೆ ತನ್ನ ಎಸ್‌ಯುವಿಯನ್ನು ಕುಲು ಬಳಿಯ ಸ್ಥಳೀಯ ನದಿಯಲ್ಲಿ ಓಡಿಸಿದ್ದ. ಈ ವೀಡಿಯೊ ವೈರಲ್ ಆದ ನಂತರ ದಂಡ ವಿಧಿಸಲಾಯಿತು. ಆದ್ರೂ ಇಂತಹ ಘಟನೆಗಳು ಪದೆ ಪದೇ ನಡೆಯುತ್ತಿವೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಹಿಮಾಚಲ ಪ್ರದೇಶ ಪೊಲೀಸರು, ರಸ್ತೆ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ಶೀಘ್ರ ಮತ್ತು ಕಠಿಣ ಕ್ರಮವನ್ನು ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಅವರು ಸ್ಥಳೀಯರಾಗಿರಲಿ ಅಥವಾ ಇತರ ರಾಜ್ಯಗಳಿರಲಿ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಇನ್ಮುಂದೆ ಅಲ್ಲಿಗೆ ತೆರಳುವ ಪ್ರವಾಸಿಗರು ಎಚ್ಚರ ವಹಿಸಬೇಕಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, December 28, 2023, 8:30 [IST]
English summary
Police fined 3 500 to driver who did stunt by opening door in himachal pradesh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+