ಕೇಸರಿ ಬಣ್ಣದ ನಂಬರ್‌ ಪ್ಲೇಟ್‌ನಲ್ಲಿ ‘ಯೋಗಿ ಸೇವಕ್‌’ ಎಂದು ಹಾಕಿದಕ್ಕೆ ದಂಡ ವಿಧಿಸಿ ತಾಕೀತು ಮಾಡಿದ ಪೊಲೀಸರು

ಭಾರತದಲ್ಲಿ ಟ್ರಾಫಿಕ್‌ ರೂಲ್ಸ್‌ಗಳನ್ನು ಬ್ರೇಕ್‌ ಮಾಡುವವರ ಸಂಖ್ಯೆಗೆ ಲೆಕ್ಕವಿಲ್ಲ. ದಿನ ಬೆಳಗಾದರೆ ಸಾಕು ಒಂದಿಲ್ಲೊಂದು ರೀತಿಯಲ್ಲಿ ಸಂಚಾರಿ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ವಾಹನಗಳನ್ನು ಚಲಾಯಿಸುತ್ತಾರೆ. ಹಲವು ಬಾರಿ ಪೊಲೀಸರು ಎಚ್ಚರಿಕೆ ನೀಡಿದರೂ ಯಾರು ಸಹ ಕ್ಯಾರೇ ಎನ್ನುವುದಿಲ್ಲ, ಮತ್ತೆ ಕೆಲವು ಬಾರಿ ಪೊಲೀಸರು ಸಹ ಅಷ್ಟಾಗಿ ಗಮನ ಹರಿಸುವುದಿಲ್ಲ.

ಇಲ್ಲೊಬ್ಬ ವ್ಯಕ್ತಿ ತನ್ನ ಬೈಕ್‌ನ ಹಿಂಭಾಗದ ನಂಬರ್‌ ಪ್ಲೇಟ್‌ನಲ್ಲಿ ಯೋಗಿ ಸೇವಕ್‌ ಎಂದು ಬರೆಸಿದಕ್ಕಾಗಿ ಪೊಲೀಸರು ಸುಮಾರು 6 ಸಾವಿರ ರೂಗಳನ್ನು ದಂಡವಾಗಿ ವಿಧಿಸಿದ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹೌದು, ಹಲವು ಸಂಧರ್ಭಗಳಲ್ಲಿ ಪೊಲೀಸರು ಇಂತಹ ಪ್ರಕರಣಗಳನ್ನು ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೆ ಪ್ರಕರಣದಲ್ಲಿ ಪೊಲೀಸರು ಸರಿಯಾದ ರೀತಿಯಲ್ಲಿ ಕ್ರಮ ಕೈಗೊಂಡಿದ್ದಾರೆ. ಇದೊಂದು ಅಪರೂಪದ ಘಟನೆಯಾಗಿದ್ದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ಕುರಿತಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ಕೇಸರಿ ಬಣ್ಣದ ನಂಬರ್‌ ಪ್ಲೇಟ್‌ನಲ್ಲಿ ‘ಯೋಗಿ ಸೇವಕ್‌’

ವರದಿಗಳ ಪ್ರಕಾರ ವ್ಯಕ್ತಿಯು ತನ್ನ ಸೂಪರ್‌ ಸ್ಪ್ಲೆಂಡರ್‌ ಬೈಕ್‌ನ ಹಿಂಭಾಗದ ನಂಬರ್‌ ಪ್ಲೇಟ್‌ನಲ್ಲಿ ಗಾಡಿ ಸಂಖ್ಯೆಯ ಮಧ್ಯೆ ಯೋಗಿ ಸೇವಕ್‌ ಎಂದು ಹಾಕಿಸಿಕೊಂಡಿದ್ದ. ಇನ್ನು ಅದರ ಜೊತೆಗೆ ನಂಬರ್‌ ಪ್ಲೇಟ್‌ಗೆ ಸಂಪೂರ್ಣವಾಗಿ ಕೇಸರಿ ಬಣ್ಣ ಬಳಿದಿದ್ದ. ಇದನ್ನು ಗಮನಿಸಿದರೆ ಆತ ರಾಜಕೀಯವಾಗಿ ಒಂದು ನಿರ್ಧಿಷ್ಟ ಪಕ್ಷದ ಹಿಂಬಾಲಕನಾಗಿದ್ದು, ಅದನ್ನು ಬಿಂಬಿಸಲು ರೀತಿಯಾಗಿ ನಂಬರ್‌ ಪ್ಲೇಟನ್ನು ಮಾರ್ಪಾಡು ಗೊಳಿಸಿರಬಹುದು ಎಂಬ ಸಂಶಯ ಮೂಡುತ್ತದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಯೋಗಿ ಜೀ ಎಂದು ಕರೆಯಲಾಗುತ್ತಿದ್ದು ಈತ ಅದಕ್ಕಾಗಿಯೇ ಯೋಗಿ ಸೇವಕ್‌ ಎಂದು ಹಾಕಿರಬಹುದು ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಅಡಳಿತ ನಡೆಸುತ್ತಿದ್ದು, ಕಾರಣಗಳಿಂದಾಗಿ ವ್ಯಕ್ತಿ ತನ್ನ ನಂಬರ್‌ ಪ್ಲೇಟ್‌ನ ಬಣ್ಣವನ್ನು ಬದಲಿಸಿದ್ದಾನೆ ಎಂದು ತಿಳಿದು ಬಂದಿದೆ. ಸುಮಾರು 8 ಸೆಕೆಂಡ್‌ಗಳಿರುವ ವಿಡಿಯೋ ಪ್ರಕಾರ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಬೈಕನ್ನು ಓಡಿಸುತ್ತಿದ್ದು, ಬೇರೊಬ್ಬ ವ್ಯಕ್ತಿ ಹಿಂಭಾಗದಿಂದ ಇದರ ವಿಡಿಯೋ ಮಾಡಿದ್ದಾನೆ.

ಹೀಗೆ ವಿಡಿಯೋ ಮಾಡಿದ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದು ಇದು ಹಲವು ನೆಟ್ಟಿಗರ ಗಮನ ಸೆಳೆದಿದೆ. ಅಷ್ಟು ಮಾತ್ರವಲ್ಲದೆ ವಿಡಿಯೋವು ಉತ್ತರ ಪ್ರದೇಶದ ಪೊಲೀಸರ ಗಮನಕ್ಕೂ ಬಂದಿದ್ದು ಕೂಡಲೇ ಪೊಲೀಸರು ಆತನ ಮೇಲೆ ಕ್ರಮ ಕೈಗೊಂಡಿದ್ದಾರೆ. ವಾರಣಾಸಿಯ ಟ್ರಾಫಿಕ್‌ ಪೊಲೀಸ್‌ ವ್ಯಕ್ತಿಯನ್ನು ವಿಚಾರಣೆ ನಡೆಸಿ ಈತನ ಮೆಲೆ ಮೇಲೆ ಸುಮಾರು 6 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಉತ್ತರ ಪ್ರದೇಶ ಪೊಲೀಸರು ಪ್ರಕರಣವನ್ನು ಧೃಢೀಕರಿಸಿದ್ದು ನಂಬರ್‌ ಪ್ಲೇಟ್‌ ಮೇಲೆ ಯೋಗಿ ಸೇವಕ್‌ ಎಂದು ಬರೆದ ವ್ಯಕ್ತಿಯ ಮೇಲೆ ಸಂಚಾರಿ ನಿಯಮ ಉಲ್ಲಂಘಿಸಿದ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕುರಿತಾಗಿ ಪೋಸ್ಟ್‌ ಮಾಡಿದ ಉತ್ತರ ಪ್ರದೇಶ ಪೊಲೀಸರು, ಅದರಲ್ಲಿ ಟ್ರಾಫಿಕ್‌ ನಿಯಮಗಳನ್ನು ಗಾಳಿಗೆ ತೂರಿ ಬೈಕ್‌ ಸವಾರಿ ಮಾಡಿದ ವ್ಯಕ್ತಿಗೆ ಯಾವುದೇ ರೀತಿಯ ರಿಯಾಯಿತಿಯನ್ನು ಸಹ ನೀಡಿಲ್ಲ ಎಂದಿದ್ದಾರೆ.

ಇನ್ನು ದಂಡ ವಿಧಿಸಿದ ನಂತರ ಪೊಲೀಸರು ಆತನ ಬಳಿ ಈಗ ಇರುವ ನಂಬರ್‌ ಪ್ಲೇಟ್‌ ಬದಲಾಯಿಸಲು ತಾಕೀತು ಮಾಡಿದ್ದು, ಮತ್ತೊಮ್ಮೆ ಇದೇ ರೀತಿಯ ಪ್ರಕರಣ ಕಂಡು ಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಾಕೀತು ಮಾಡಿದ್ದಾರೆ. ಜನರು ತಮ್ಮ ಖಾಸಗಿ ವಾಹನಗಳಲ್ಲಿ ಬಿಳಿ ಬಣ್ಣದ ನಂಬರ್‌ ಪ್ಲೇಟನ್ನು ಬಳಸುತ್ತಿದ್ದು ಇದಕ್ಕಾಗಿ ಆಯಾ ಪ್ರದೇಶದ RTO ಗಳು ನಿರ್ಧರಿಸಿದ ಮಾನದಂಡವನ್ನು ಅನುಸರಿಸಬೇಕಾಗುತ್ತದೆ. ಆದರೆ ಜನರು ನಿಯಮಗಳನ್ನೆಲ್ಲಾ ಮೀರಿ ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿರುವುದು ಸೋಜಿಗವೇ ಸರಿ.

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ:

ಜನರು ತಮಗೆ ಇಷ್ಟಬದಂತೆ ನಂಬರ್‌ ಪ್ಲೇಟ್‌ಗಳನ್ನು ಬಳಸುವುದು ತಪ್ಪು. 2020 ಡಿಸೆಂಬರ್‌ 24 ರಂದು ಕುರಿತಾದ ಮಾನದಂಡವನ್ನು ಅಧಿಕಾರಿಗಳು ಜಾರಿಗೆ ತಂದಿದ್ದರು. ಬಗೆಗಿನ ಮೊದಲ ಪ್ರಕರಣ ಕಾನ್ಪುರದಲ್ಲಿ ದಾಖಲಾಗಿತ್ತು. ಅಂದು ನಿಯಮ ಉಲ್ಲಂಘಿಸಿದ ವ್ಯಕ್ತಿಗೆ 500 ರೂಪಾಯಿಗಳ ದಂಡವನ್ನು ವಿಧಿಸಲಾಗಿತ್ತು. ಸೆಕ್ಷನ್‌ 177 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ತಮಗಿಷ್ಟ ಬಂದಂತೆ ನಂಬರ್‌ ಪ್ಲೇಟ್‌ ಬದಲಾಯಿಸುವುದು ಕಾನೂನು ಬಾಹಿರ.

Article Published On: Thursday, February 23, 2023, 18:30 [IST]
English summary
Police issued challan to man for writing yogi sevak in number plate
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+