ರಾಜಕಾರಣಿಗೆ ಸ್ಪೆಷಲ್ ಕಾನೂನು ಇಲ್ಲ... 1 ಲಕ್ಷ ದಂಡ ವಿಧಿಸಿದ ಪೊಲೀಸ್ ಅಧಿಕಾರಿ!

ಇತ್ತೀಚಿನ ಘಟನೆಯೊಂದರಲ್ಲಿ ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಯುವ ಮೋರ್ಚಾ ನಾಯಕ ಚಂದ್ರಮಣಿ ಎಂಬವರಿಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಇಲ್ಲಿನ ಸುಂದರ್‌ ನಗರದಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾಗಿರುವ ಚಂದ್ರಮಣಿ, ಡಿಸೆಂಬರ್ 5, 2024 ರಂದು ತಮ್ಮ ವಾಹನ ಕಾನೂನು ಬಾಹಿರವಾಗಿ ಮಾಡಿಫೈಗೊಂಡಿದೆ ಎಂದು ಆರೋಪಿಸಿ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ರಾಜಕಾರಣಿಯಾದರೂ ಸಾಮಾನ್ಯರಿಗೆ ಇರುವ ಕಾನೂನಿನ ಅಡಿಯಲ್ಲೇ ಇರಬೇಕು. ಉಲ್ಲಂಘಿಸಿರುವ ನಿಯಮಗಳಿಗೆ ದಂಡ ಕಟ್ಟಲೇಬೇಕು ಎಂದು ಪೊಲೀಸರು ಹೇಳಿದ್ದಾರೆ.

ಬಿಜೆಪಿ ಯುವ ಮೋರ್ಚಾ ನಾಯಕ ಚಂದ್ರಮಣಿ ಮಹೀಂದ್ರಾ ಥಾರ್ ಹೊಂದಿದ್ದು, ಇದಕ್ಕೆ ಆಫ್ಟರ್ ಮಾರ್ಕೆಟ್ ಅಲಾಯ್ ವೀಲ್‌ಗಳು ಹಾಗೂ ಸರಿಯಾದ ವಾಹನ ದಾಖಲೆಗಳು ಇಲ್ಲದಿರುವುದು ಸೇರಿದಂತೆ ಅಮಾನ್ಯ ವಾಯುಮಾಲಿನ್ಯ ಪ್ರಮಾಣಪತ್ರಕ್ಕಾಗಿ ದಂಡ ವಿಧಿಸಲಾಗಿದೆ. ಸದ್ಯ ಈ ಘಟನೆಯು ಸ್ಥಳೀಯವಾಗಿ ಸಾರ್ವಜನಿಕರಲ್ಲಿ ಹೆಚ್ಚಿನ ಗಮನವನ್ನು ಸೆಳೆದಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿರುವ ವಾಹನದಲ್ಲಿ ಬಳಸಲಾದ ನಿಖರವಾದ ಮಾಡಿಫೈಗೊಳಿಸಿದ ವಿಶೇಷತೆಗಳ ಬಗ್ಗೆ ತಿಳಿದುಬಂದಿಲ್ಲ. ಆದರೆ ಇದರ ಮಾಡಿಫೈಡ್ ಅಲಾಯ್ ವೀಲ್‌ಗಳು ಎದ್ದು ಕಾಣುತ್ತಿವೆ. ಮತ್ತೊಂದೆಡೆ ಧನೋಟು ಪೊಲೀಸ್ ಠಾಣೆಯಲ್ಲಿ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಅವರ ವೈಯಕ್ತಿಕ ಸೇಡಿನ ಪ್ರಕರಣ ಎಂದು ಸಹ ಹೇಳಲಾಗುತ್ತಿದೆ.

ಪ್ರತಿಪಕ್ಷ ನಾಯಕರ ಒತ್ತಡ ಮತ್ತು ಎಸ್ಎಚ್ಒ ಅವರೊಂದಿಗಿನ ಅವರ ಸಂಬಂಧವು ಹದಗೆಟ್ಟಿರುವುದು ಈ ದಂಡಗಳಿಗೆ ಕಾರಣವಾಗಿದೆ ಎಂದು ಚಂದ್ರಮಣಿ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದೃಢಪಡಿಸಿದ್ದು, ಈ ವಿಷಯದಲ್ಲಿ ಎಸ್ಎಚ್ಒ ತಪ್ಪಿತಸ್ಥರೆಂದು ಕಂಡುಬಂದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

police-officer-fines-politician-rs-1-lakh-in-himachal-pradesh

ಅಲಾಯ್ ವೀಲ್ ಕಾನೂನು ಬಾಹಿರವೇ?: ಭಾರತದಲ್ಲಿ, ನಿಮ್ಮ ಕಾರಿನಲ್ಲಿ ಅಲಾಯ್ ವೀಲ್ ಗಳನ್ನು ಹಾಕಿಸುವುದು ಕಾನೂನು ಬಾಹಿರವೇನಲ್ಲ. ಆದರೆ ನಿಯಮಗಳಿಗೆ ಒಳಪಟ್ಟಿರಬೇಕು, ಅಂದರೆ ಹೊಸ ಅಲಾಯ್ ವೀಲ್‌ಗಳು ವಾಹನದ ಕಂಪನಿ ನೀಡಿದ ಮ್ಯಾನುವಲ್‌ನಲ್ಲಿ ಶಿಫಾರಸು ಮಾಡಿದ ಗಾತ್ರ, ಅಗಲ ಮತ್ತು ಲೋಡ್ ರೇಟಿಂಗ್‌ಗೆ ಅನುಗುಣವಾಗಿರಬೇಕು. ಅಲ್ಲದೇ ಈ ಬಗ್ಗೆ ಕಂಪನಿಗಳು ಕೂಡ ಮೊದಲೇ ಮ್ಯಾನುವಲ್‌ನಲ್ಲಿ ವಿಶೆಷವಾಗಿ ಹೆಚ್ಚರಿಸಿರುತ್ತವೆ.

ಒಂದು ವೇಳೆ ಶಿಫಾರಸು ಮಾಡಿದ ಅಂಕಿಅಂಶಗಳಿಂದ ಭಿನ್ನವಾಗಿದ್ದರೆ, ಅವು ಸಂಭಾವ್ಯ ಅಸುರಕ್ಷತೆಯನ್ನು ಉಂಟುಮಾಡಿದರೆ, ವಾಹನದ ಡೈನಾಮಿಕ್ಸ್ ಅನ್ನು ವಿರೂಪಗೊಳಿಸಿದರೆ ಅವುಗಳನ್ನು ರಸ್ತೆ ಬಳಕೆಗೆ ಅನರ್ಹವೆಂದು ಪರಿಗಣಿಸಲಾಗುತ್ತದೆ. ಇಂತಹ ವಾಹನಗಳಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಪ್ರಯಾಣಿಸಿದರೆ, ಮಾಲೀಕರಿಗೆ ಕಾನೂನುಬಾಹಿರ ಮಾರ್ಪಾಡು ಮಾಡಿರುವುದರ ಅಡಿ ದಂಡ ವಿಧಿಸಬಹುದು.

ಇನ್ನು ಮಹೀಂದ್ರಾ ಥಾರ್ ಭಾರತದಲ್ಲಿ ಒಂದು ಪ್ರಮುಖ ವಾಹನವಾಗಿದ್ದು, ಇದನ್ನು ಹೆಚ್ಚಾಗಿ ಮಾಲೀಕರ ಆದ್ಯತೆಗಳಿಗೆ ಅನುಗುಣವಾಗಿ ಖರೀದಿಸಿ ಮಾಡಿಫೈಗೊಳಿಸುತ್ತಾರೆ. ದೇಶದ ಅನೇಕ ಭಾಗಗಳಲ್ಲಿ ಮಾಡಿಫೈಗೊಳಿಸಿದ ಹಲವು ಥಾರ್‌ಗಳನ್ನು ನಾವು ನೋಡಬಹುದು.
ತಮ್ಮ ವಾಹನಗಳನ್ನು ಮಾಡಿಫೈಗೊಳಿಸಿ ಖಾಸಗಿ ಸ್ಥಳದಲ್ಲಿ ಓಡಾಡಬಹುದು, ಆದರೆ ಯಾವುದೇ ಕಾರಣಕ್ಕೂ ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸುವಂತಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 13, 2025, 15:18 [IST]
English summary
Police officer fines politician rs 1 lakh in himachal pradesh
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+