ರಸ್ತೆಗೆ ಅಡ್ಡ ಮಲಗಿ ವಾಹನ ತಡೆದ ಪೊಲೀಸಪ್ಪ..!

ಹೊಸ ಮೋಟಾರು ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾಗಿದೆ. ಈ ಹೊಸ ಕಾಯ್ದೆಯು ಜಾರಿಗೆ ಬಂದ ನಂತರ ವಾಹನ ಸವಾರರು ತಮಗೂ ಸಹ ಭಾರೀ ಪ್ರಮಾಣದ ದಂಡ ಬೀಳಬಹುದೆಂಬ ಭಯದಲ್ಲಿದ್ದಾರೆ.

ರಸ್ತೆಗೆ ಅಡ್ಡ ಮಲಗಿ ವಾಹನ ತಡೆದ ಪೊಲೀಸಪ್ಪ..!

ಎಲ್ಲಾ ದಾಖಲೆಗಳನ್ನು ಹೊಂದಿರುವ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸುವವರು ಸಹ ಭಯದಲ್ಲಿಯೇ ವಾಹನಗಳನ್ನು ಚಲಾಯಿಸುವಂತಾಗಿದೆ. ಬೈಕ್‍‍ವೊಂದನ್ನು ಅಡ್ಡಗಟ್ಟಲು ಪೊಲೀಸ್ ಅಧಿಕಾರಿಯೊಬ್ಬರು ಆ ಬೈಕಿಗೆ ಅಡ್ಡ ಮಲಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಸ್ತೆಗೆ ಅಡ್ಡ ಮಲಗಿ ವಾಹನ ತಡೆದ ಪೊಲೀಸಪ್ಪ..!

ಅಷ್ಟಕ್ಕೂ ಆ ಪೊಲೀಸ್ ಅಧಿಕಾರಿ ಸ್ಕೂಟರಿಗೆ ಅಡ್ಡವಾಗಿ ಮಲಗಿದ್ದೇಕೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಈ ವೀಡಿಯೊದಲ್ಲಿ ಕಾಣುವಂತೆ ಪೊಲೀಸ್ ಅಧಿಕಾರಿ ಖಾಲಿಯಿರುವ ರಸ್ತೆಯಲ್ಲಿ ಸ್ಕೂಟರ್‍‍ಗೆ ಅಡ್ಡಬಂದು ಮಲಗುತ್ತಾರೆ.

ರಸ್ತೆಗೆ ಅಡ್ಡ ಮಲಗಿ ವಾಹನ ತಡೆದ ಪೊಲೀಸಪ್ಪ..!

ಹೆಲ್ಮೆಟ್ ಇಲ್ಲದೇ ಸ್ಕೂಟರ್ ಸವಾರಿ ಮಾಡಿಕೊಂಡು ಬಂದ ಸವಾರ ಪೊಲೀಸ್ ಅಧಿಕಾರಿಯಿಂದ ತಪ್ಪಿಸಿಕೊಳ್ಳಲು ಸ್ಕೂಟರ್ ಅನ್ನು ಅತ್ತಿಂದಿತ್ತ ಚಾಲನೆ ಮಾಡುತ್ತಾನೆ. ಸ್ಕೂಟರ್ ಸವಾರ ತಪ್ಪಿಸಿಕೊಳ್ಳದಂತೆ ಆ ಪೊಲೀಸ್ ಅಧಿಕಾರಿಗೆ ಸ್ಕೂಟರಿಗೆ ಅಡ್ಡವಾಗಿ ಮಲಗುತ್ತಾರೆ.

ರಸ್ತೆಗೆ ಅಡ್ಡ ಮಲಗಿ ವಾಹನ ತಡೆದ ಪೊಲೀಸಪ್ಪ..!

ನಿಯಮಗಳನ್ನು ಉಲ್ಲಂಘಿಸುವವ ಸವಾರರನ್ನು ಅಡ್ಡಗಟ್ಟುವ ಪೊಲೀಸರು ಪ್ರತಿದಿನ ಈ ರೀತಿಯ ಸನ್ನಿವೇಶವನ್ನು ಎದುರಿಸುತ್ತಲೇ ಇರುತ್ತಾರೆ. ಇನ್ನೂ ಕೆಲವರು ಪೊಲೀಸರನ್ನು ನೋಡುತ್ತಲೇ ದೂರದಿಂದಲೇ ಯೂ ಟರ್ನ್ ತೆಗೆದುಕೊಂಡು ಪರಾರಿಯಾಗುತ್ತಾರೆ.

ರಸ್ತೆಗೆ ಅಡ್ಡ ಮಲಗಿ ವಾಹನ ತಡೆದ ಪೊಲೀಸಪ್ಪ..!

ಅಂದ ಹಾಗೆ ಈ ವೀಡಿಯೊವನ್ನು ತಮಾಷೆಗಾಗಿ ಎ‍ಎನ್‍ಎಸ್ ಎಂಟರ್‍‍ಟೇನ್‍‍ಮೆಂಟ್ ಎಂಬ ಯೂಟ್ಯೂಬ್ ಚಾನೆಲ್ ತಯಾರಿಸಿದೆ. ಎ‍‍ಎನ್‍ಎಸ್ ಎಂಟರ್‍‍ಟೇನ್‍‍ಮೆಂಟ್ ಚಾನೆಲ್ ಈ ರೀತಿಯ ವೀಡಿಯೊಗಳನ್ನು ಅಪ್‍‍ಲೋಡ್ ಮಾಡುತ್ತಲೇ ಇರುತ್ತದೆ.

ರಸ್ತೆಗೆ ಅಡ್ಡ ಮಲಗಿ ವಾಹನ ತಡೆದ ಪೊಲೀಸಪ್ಪ..!

ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಯಂತೆ ಯೂನಿಫಾರಂ ಧರಿಸಿ, ತನ್ನ ಮುಂದೆ ಹಾದು ಹೋಗುತ್ತಿರುವ ವಾಹನಗಳನ್ನು ತಡೆಯುತ್ತಿದ್ದಾನೆ. ಹಲವು ವಾಹನ ಸವಾರರು ಈ ವ್ಯಕ್ತಿಯನ್ನೆ ನಿಜವಾದ ಪೊಲೀಸ್ ಎಂದು ನಂಬಿ ತಮ್ಮ ವಾಹನಗಳನ್ನು ಯೂಟರ್ನ್ ಮಾಡಿ ವಾಪಸ್ ಹೋಗುತ್ತಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ರಸ್ತೆಗೆ ಅಡ್ಡ ಮಲಗಿ ವಾಹನ ತಡೆದ ಪೊಲೀಸಪ್ಪ..!

ಈ ವೀಡಿಯೊವನ್ನು ತಮಾಷೆಗಾಗಿ ಮಾಡಲಾಗಿದ್ದರೂ, ಜನರು ಹೊಸ ಕಾಯ್ದೆಯಲ್ಲಿನ ದಂಡಕ್ಕೆ ಹೆದರಿ ನಿಯಮಗಳನ್ನು ಪಾಲಿಸುತ್ತಿರುವುದನ್ನು ಕಾಣಬಹುದು. ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತಂದಾಗಿನಿಂದ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ರಸ್ತೆಗೆ ಅಡ್ಡ ಮಲಗಿ ವಾಹನ ತಡೆದ ಪೊಲೀಸಪ್ಪ..!

ದೇಶಾದ್ಯಂತ ಹಲವು ಜನರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಿರುವ ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಕೋಟ್ಯಾಂತರ ವಾಹನಗಳಿದ್ದು, ಪ್ರತಿ ತಿಂಗಳು ಲಕ್ಷಾಂತರ ವಾಹನಗಳು ರಸ್ತೆಗಳಿಯುತ್ತವೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಒಂದೇ ಒಂದು ಬಾರಿಯ ಸಂಚಾರಿ ನಿಯಮ ಉಲ್ಲಂಘನೆಯಿಂದಾಗಿ, ಭಾರೀ ಪ್ರಮಾಣದ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಗಳಿವೆ. ಹೆಚ್ಚು ವಾಹನಗಳನ್ನು ಹೊಂದಿರುವ ಭಾರತದಲ್ಲಿ ಹೆಚ್ಚಿನ ಪ್ರಮಾಣದ ರಸ್ತೆ ಅಪಘಾತಗಳೂ ಸಹ ಉಂಟಾಗುತ್ತಿವೆ.

ರಸ್ತೆಗೆ ಅಡ್ಡ ಮಲಗಿ ವಾಹನ ತಡೆದ ಪೊಲೀಸಪ್ಪ..!

ಭಾರತದಲ್ಲಿ ಪ್ರತಿ ವರ್ಷ ಸಂಭವಿಸುವ ರಸ್ತೆ ಅಪಘಾತಗಳಿಂದಾಗಿ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜನರು ಭಾರೀ ಪ್ರಮಾಣದ ದಂಡಕ್ಕೆ ಹೆದರಿಯಾದರೂ ಸಂಚಾರಿ ನಿಯಮಗಳನ್ನು ಪಾಲಿಸಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿದೆ.

ರಸ್ತೆಗೆ ಅಡ್ಡ ಮಲಗಿ ವಾಹನ ತಡೆದ ಪೊಲೀಸಪ್ಪ..!

ಇದರಿಂದಾಗಿ ರಸ್ತೆ ಅಪಘಾತಗಳ ಸಂಖ್ಯೆಯು ಕಡಿಮೆಯಾಗಲಿದೆ ಎಂಬುದು ಕೇಂದ್ರ ಸರ್ಕಾರದ ಮುಂದಾಲೋಚನೆ. ಆದರೂ ಅನೇಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಲೇ ಇರುತ್ತಾರೆ. ಪೊಲೀಸರು ಕಣ್ಣಿಗೆ ಬಿದ್ದಾಗ ಮಾತ್ರ ಸಂಚಾರಿ ನಿಯಮಗಳನ್ನು ಪಾಲಿಸುತ್ತಾರೆ. ಜನರ ಈ ಮನಸ್ಥಿತಿ ಬದಲಾಗಿ, ಪೊಲೀಸರು ಇರಲಿ, ಬಿಡಲಿ ಸಂಚಾರಿ ನಿಯಮಗಳನ್ನು ಪಾಲಿಸುವಂತಾಗಬೇಕು.

Source: ANS Entertainment/YouTube

Most Read Articles

Kannada
English summary
Cop lies down in front of escaping scooter rider - Read in Kannada
Story first published: Saturday, October 5, 2019, 14:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X