ಯರ್ರಾಬಿರ್ರಿ ಬೈಕ್‌ ಓಡಿಸಿ ನಡುರಸ್ತೆಯಲ್ಲಿ ಬಿದ್ದ ಯುವಕರು: ಇದನ್ನು ಪೊಲೀಸರೇ ಹೊಟ್ಟೆಹುಣ್ಣಾಗುವಂತೆ ಟ್ರೋಲ್‌ ಮಾಡಿದ್ದಾರೆ

ಸಾರ್ವಜನಿಕ ರಸ್ತೆಗಳಲ್ಲಿ ಕೆಲವು ಬೈಕರ್‌ಗಳು ಹೆಲ್ಮೆಟ್‌ ಸಹ ಹಾಕದೆ ಹಿಗ್ಗಾ ಮುಗ್ಗಾ ಬೈಕ್‌ಳನ್ನು ಓಡಿಸುತ್ತಿರುವ ವಿಡಿಯೋಗಳನ್ನು ನಾವು ಹಲವು ಬಾರಿ ನೊಡಿದ್ದೇವೆ. ಕಾರಣದಿಂದಾಗಿಯೇ ಹಲವು ಅಪಘಾತಗಳು ನಡೆಯುತ್ತಿದೆ. ಇಂತಹ ವ್ಯಕ್ತಿಗಳ ಅಥವಾ ಬೈಕ್‌ ಸವಾರರ ವಿರುದ್ದ ದಂಡ ಹಾಕುವುದನ್ನೂ ನಾವು ನೋಡಿದ್ದೇವೆ.

ಎರ್ರಾಬಿರ್ರಿ ವಾಹನಗಳನ್ನು ಓಡಿಸಿ, ಅಂತಹವರನ್ನು ಹಿಡಿದು ದಂಡ ಹಾಕುವುದು ಎಲ್ಲಾ ಹಳೇಯ ಸ್ಟೈಲ್‌. ರೀತಿ ಎಷ್ಟೇ ದಂಡ ಹಾಕಿದರೂ ಅದು ವರ್ಕೌಟ್‌ ಆಗುವುದಿಲ್ಲ ಎಂದು ಗೊತ್ತಾದ ಪೊಲೀಸ್‌ ಇಲಾಖೆ ಹೊಸ ಕ್ರಮಕ್ಕೆ ಮುಂದಾಗಿದೆ. ಹೌದು, ಇಲ್ಲೊಂದು ಪೊಲೀಸ್‌ ಇಲಾಕೆ ರೀತಿ ನಿಯಮಗಳನ್ನು ಮೀರಿದ ಚಾಲಕರನ್ನು (Bike Riders) ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡಿದ್ದಾರೆ.

Police Trolled Bike Riders

ನಂಬಲು ಕಷ್ಟವಾದರೂ ನೀವು ನಂಬಲೇ ಬೇಕು. ಕ್ರಮವನ್ನು ಕೈಗೊಂಡಿರುವುದು ಕೇರಳ ಪೊಲೀಸರು. ಇಲ್ಲಿನ ಮೋಟಾರ್‌ ವೆಹಿಕಲ್‌ ಡಿಪಾರ್ಟ್‌ಮೆಂಟ್‌ ಅವರು ಎಗ್ಗಿಲ್ಲದೇ ಬೈಕ್‌ ಓಡಿಸಿ ಬಿದ್ದ ಬೈಕರ್‌ಗಳನ್ನು ಟ್ರೋಲ್‌ ಮಾಡಿದ್ದಾರೆ. ಇದನ್ನು ಅವರು ತಮ್ಮ ಔದ್ಯೋಗಿಕ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು ವಿಡಿಯೋ ವೈರಲ್‌ ಆಗಿದೆ.

ಇನ್ನು ಕೇರಳ ಮೋಟಾರ್‌ ವೆಹಿಕಲ್‌ ಡಿಪಾರ್ಟ್‌ಮೆಂಟ್‌ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿರುವ ವಿಡಿಯೋದಲ್ಲಿ ಇಬ್ಬರು ಯುವಕರು ಹೆಲ್ಮೆಟ್‌ ಸಹ ಹಾಕದೇ ಕೆಟಿಎಂ ಆರ್‌ಸಿ ಬೈಕ್‌ನಲ್ಲಿ ಝಿಗ್ ಜ್ಯಾಗ್‌ ರೀತಿಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ತಮ್ಮ ಬೈಕ್‌ ಅನ್ನು ಓಡಿಸುತ್ತಿರುವುದನ್ನು ನಾವು ಕಾಣಬಹುದು.

Police Trolled Bike Riders

ಆದರೆ ಕೆಲವೇ ದೂರ ರೀತಿ ತಮಗೆ ಮನಸೋ ಇಚ್ಚೆ ಬೈಕ್‌ ಓಡಿಸಿಕೊಂಡು ಹೋದ ಯುವಕರು ಕೊನಗೆ ಬೈಕ್‌‌ ರಸ್ತೆಯಿಂದ ಬದಿಗೆ ಇಳಿದು ಸ್ಕಿಡ್‌ ಆಗಿ ಬಿದ್ದಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಇನ್ನು ವಿಡಿಯೋವನ್ನು ಪಕ್ಕದಲ್ಲೇ ಇನ್ನೊಂದು ಬೈಕ್‌ನಲ್ಲಿದ್ದ ಹಿಂಬದಿ ಸವಾರ ರೆಕಾರ್ಡ್‌ ಮಾಡಿಕೊಂಡಿದ್ದು ಶೇರ್‌ ಮಾಡಿದ್ದಾನೆ.

ರೋಡ್‌ನಲ್ಲಿ ಬೈಕ್‌ ಓಡಿಸುವ ಯುವಕರನ್ನು ನೋಡಿದರೆ ಕೆಲವರಿಗೆ ಗೌರವವೇ ಇಲ್ಲ. ಆದರೆ ನೀವು ಇಲ್ಲಿ ಗಮನಿಸಬೇಕಾದುದು ಏನೆಂದರೆ ಇಲ್ಲಿ ಯುವಕರು ಹಲವಾರು ಕೆಲಸಗಳನ್ನು ಒಟ್ಟಿಗೆ ಮಾಡಬೇಕಾಗುತ್ತದೆ. ಒಂದು ಕೈಯಲ್ಲಿ ಆಕ್ಸಿಲರೇಟರ್‌ ಇನ್ನೊಂದು ಕೈಯಲ್ಲಿ ಕ್ಲಚ್ ಎರಡನ್ನೂ ಒಂದೇ ಸಮಯದಲ್ಲಿ ಹಿಡಿಯಬೇಕಾಗುತ್ತದೆ.

ಜೊತೆಗೆ ಒಂದು ಕಣ್ಣು ರೋಡ್‌ ಮೇಲೂ ಇನ್ನೊಂದು ಕಣ್ಣು ಹುಡುಗಿಯರ ಮೇಲೂ ಇಡಬೇಕಾಗುತ್ತದೆ. ಇಷ್ಟೊಂದು ಕೆಲಸವನ್ನು ಒಂದೇ ಸಮಯದಲ್ಲಿ ಮಾಡಬೇಕಾದ ಅವರ ಕಷ್ಟವನ್ನು ನೀವು ಅರ್ಥಮಾಡಿಕೊಳ್ಳದೇ ಅವರನ್ನು ಅಗೌರವದಿಂದ ಕಾಣುತ್ತಿರುವುದು ಸರಿಯಲ್ಲ ಎಂದು ಪೊಲೀಸರು ಬೈಕರ್‌ಗಳನ್ನು ಇದೇ ಸಂಧರ್ಭದಲ್ಲಿ ವ್ಯಂಗ್ಯವಾಗಿ ಟ್ರೋಲ್‌ ಮಾಡಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, July 10, 2023, 11:06 [IST]
English summary
Police trolled bike riders performing stunts on public road
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+