ಸ್ಕೂಲ್‌ಬಸ್‌ ಡ್ರೈವರ್,‌ ಸಹಾಯಕರಿಗೆ ಪೊಲೀಸ್‌ ವೆರಿಫಿಕೇಷನ್‌ ಕಡ್ಡಾಯ: ಸರ್ಕಾರಕ್ಕೆ ಜೈ ಹೇಳಿ ನಿಟ್ಟುಸಿರು ಬಿಟ್ಟ ಪೋಷಕರು

ಹಲವಾರು ವರ್ಷಗಳಿಂದಲೂ ಶಾಲಾ ಮಕ್ಕಳು ಮನೆಯಿಂದ ಶಾಲೆಗೆ ಮತ್ತು ಶಾಲೆಯಿಂದ ಮನೆಗೆ ಬರಲು ಶಾಲಾ ವಾಹನಗಳನ್ನು ಅವಲಂಬಿಸುತ್ತಾ ಬಂದಿರುವುದನ್ನು ನಾವು ಕಂಡಿದ್ದೇವೆ. ಹಲವಾರು ಶಾಲೆಗಳಲ್ಲಿ ಅವರ ಸ್ವಂತ ವಾಹನಗಳು ಇರುತ್ತದೆ. ಇದರಲ್ಲಿ ಬಸ್‌ ಮತ್ತು ಇತರ ಮಾದರಿಯ ವಾಹನಗಳು ಸಹ ಒಳಗೊಂಡಿರುತ್ತವೆ.

ಇನ್ನು ಹಲವು ಬಾರಿ ಸರಿಯಾದ ಡ್ರೈವರ್‌ಗಳು ಸಿಗದೇ ಇದ್ದಾಗ, ಸಿಗುವ ಯಾವುದೋ ಒಂದು ಡ್ರೈವರ್‌ನ ಇಟ್ಟುಕೊಂಡು ವಾಹನ ಚಲಾಯಿಸಿ ಕೊನೆಗೆ ಅದು ಅಪಘಾತಕ್ಕೆ ಒಳಗಾಗಿ ಹಲವಾರು ಅಮಾಯಕ ಮಕ್ಕಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆಗಳು ನಮ್ಮ ಕಣ್ಣ ಮುಂದೆ ಇದೆ. ಮಾತ್ರವಲ್ಲದೇ ಪ್ರಯಾಣದ ವೇಳೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳೂ ನಡೆಯುತ್ತಿತ್ತು.

Police Varification Is Now Mandatory For School Bus Driver, Helper In Karnataka

ಈ ಕುರಿತಾಗಿ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕೂಗು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಇದೀಗ ಹಲವು ವರ್ಷಗಳ ಹಿಂದಿನ ಕೂಗನ್ನು ಕೇಳಿಸಕೊಂಡಿರುವ ಸರ್ಕಾರ ಈ ಕುರಿತಾಗಿ ಹೊಸ ಆದೇಶ ಒಂದನ್ನು ಹೊರಡಿಸಿದೆ. ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆ ಈ ಹೊಸ ಆದೇಶವನ್ನು ಹೊರಡಿಸಿದ್ದು ಕೂಡಲೇ ಜಾರಿಗೆ ತರುವಂತೆ ಸೂಚಿಸಿದೆ. ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆಯ ಈ ಆದೇಶ ಪೋಷಕರ ಮತ್ತು ಪಾಲಕರ ಮುಖದಲ್ಲಿ ಮಂದಹಾಸ ಮೂಡಿಸಿದ್ದು ಮುಕ್ತ ಕಂಠದಿಂದ ಶ್ಲಾಘನೆಗೆ ಒಳಗಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ ಇನ್ನು ಮುಂದೆ ಶಾಲಾ ಬಸ್‌ ಮತ್ತು ಇತರ ವಾಹನಗಳನ್ನು ಓಡಿಸುವ ಚಾಲಕರು ಮತ್ತು ಅವರ ಸಹಾಯಕರು ಕಡ್ಡಾಯವಾಗಿ ಪೊಲೀಸ್‌ ವೆರಿಫಿಕೇಶನ್‌ ಸರ್ಟಿಫಿಕೇಟ್‌ ಅನ್ನು ಹೊಂದಿರಬೇಕು ಎಂದು ಹೇಳಿದೆ. ಈ ಮೂಲಕ ಶಾಲಾ ಬಸ್‌ಗಳಲ್ಲಿ ಮತ್ತು ಇತರ ವಾಹನಗಳಲ್ಲಿ ಮಕ್ಕಳ ಮೇಲೆ ನಡೆಯುತ್ತಿದ್ದ ಕಿರುಕುಳ ಮತ್ತು ಇತರ ತೊಂದರೆಗಳನ್ನು ನಿಲ್ಲಿಸುವತ್ತ ಮುಖ ಮಾಡಿದೆ.

Police Varification Is Now Mandatory For School Bus Driver, Helper In Karnataka

ಶಾಲಾ ಮಕ್ಕಳ ಮೇಲೆ ವಾಹನಗಳಲ್ಲಿ ನಡೆಯುತ್ತಿದ್ದ ಶೋಷಣೆ ಮತ್ತು ಕಿರುಕುಳವನ್ನು ನಿಯಂತ್ರಿಸಲು ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೇಲೆ ತಿಳಿಸಿದಂತೆ, ಬಸ್‌ನ ಚಾಲಕರು ಮತ್ತು ಸಹಾಯಕರು ಪೊಲೀಸ್‌ ವೇರಿಫಿಕೇಷನ್‌ ನಡೆಸಿದ ಬಳಿಕ ಸಿಗುವ ಪ್ರಮಾಣ ಪತ್ರವನ್ನು ಸ್ಟೂಡೆಂಟ್‌ ಅಚಿವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಈ ಕುರಿತಾಗಿ ಶಾಲಾ ಮ್ಯಾನೇಜ್‌ಮೆಂಟ್‌ಗಳಿಗೆ ಸೂಚನೆ ನೀಡಲಾಗಿದ್ದು, ಕಟ್ಟುನಿಟ್ಟಾಗಿ ಈ ನಿಯಮವನ್ನು ಪಾಲಿಸಬೇಕು ಎಂದು ಸಹ ತಿಳಿಸಲಾಗಿದೆ. ಇನ್ನು ಈ ಸರ್ಟಿಫಿಕೇಟ್‌ಗಳನ್ನು ಎರಡು ವರ್ಷಗಳಿಗೆ ಒಂದು ಬಾರಿ ರಿನೀವಲ್‌ ಸಹ ಮಾಡಿಸಬೇಕು ಎಂದು ಸೂಚಿಸಿದೆ. ನಾವು ಈ ಆದೇಶವನ್ನು ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಹೊರಡಿಸಿದ್ದು, ಕಡ್ಡಾಯವಾಗಿ ಶಾಲಾ ಮ್ಯಾನೇಜ್‌ಮೆಂಟ್‌ಗಳು ಇದನ್ನು ಪಾಲಿಸಬೇಕು. ಸಹಾಯಕರಾಗಿ ಮಹೀಳೆಯರನ್ನೇ ನೇಮಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಸರ್ಕಾರದ ಈ ಆದೇಶವನ್ನು ಎರಡೂ ಕೈಯಿಂದ ಸ್ವಾಗತಿಸಿರುವ ಖಾಸಗಿ ಶಾಲೆಗಳು, ಈ ಸರ್ಟಿಫಿಕೇಟ್‌ ಅನ್ನು ಉಚಿತವಾಗಿ ನೀಡುವಂತೆ ಸರ್ಕಾರವನ್ನು ಕೋರಿದ್ದಾರೆ ಎಂದು ಸಹ ತಿಳಿದು ಬಂದಿದೆ. ಮಾಹಿತಿಗಳ ಪ್ರಕಾರ ಸದ್ಯಕ್ಕೆ ಈ ಕೆಲವನ್ನು ಮಾಡುತ್ತಿರುವವರು ಎರಡು ತಿಂಗಳ ಬಳಿಕ ಕೆಲಸದಿಂದ ಹೊರಬಂದು ಈ ಸರ್ಟಿಫಿಕೇಟ್ ಅನ್ನು ಪಡೆಯಬಹುದಾಗಿದೆ ಎಂದು ತಿಳಿದುಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 8, 2024, 11:47 [IST]
English summary
Police verification is not mandatory for school bus driver helper in karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+