ರಾಯಲ್ ಎನ್‌ಫೀಲ್ಡ್ ಬೈಕ್ ಸೈಲೆನ್ಸರ್​​​ನಿಂದ ತಯಾರಾಯ್ತು ಪಾಪ್ ಕಾರ್ನ್

ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭಾರತದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಹೊಂದಿವೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಜನಪ್ರಿಯವಾಗಿವೆ.

ರಾಯಲ್ ಎನ್‌ಫೀಲ್ಡ್ ಬೈಕ್ ಸೈಲೆನ್ಸರ್​​​ನಿಂದ ತಯಾರಾಯ್ತು ಪಾಪ್ ಕಾರ್ನ್

ರಾಯಲ್ ಎನ್‌ಫೀಲ್ಡ್ ಕಾರ್ಪೊರೇಟ್ ಬೈಕ್‌ಗಳನ್ನು ಟ್ರ್ಯಾಕ್ ರೇಸ್‌ಗಳಲ್ಲಿ ಸಹ ಬಳಸಲಾಗಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ವಿವಿಧ ಬಗೆಯಲ್ಲಿ ಮಾಡಿಫೈಗೊಳಿಸಲಾಗಿದೆ. ಈ ಬಗ್ಗೆ ಡ್ರೈವ್‌ಸ್ಪಾರ್ಕ್ ಕನ್ನಡದಲ್ಲಿ ಹಲವಾರು ಲೇಖನಗಳನ್ನು ಪ್ರಕಟಿಸಲಾಗಿದೆ. ಆದರೆ ಈಗ ಯೂಟ್ಯೂಬ್ ಚಾನೆಲ್ ನಲ್ಲಿ ವಿಭಿನ್ನವಾದ ವೀಡಿಯೊವೊಂದು ವೈರಲ್ ಆಗಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಸೈಲೆನ್ಸರ್​​​ನಿಂದ ತಯಾರಾಯ್ತು ಪಾಪ್ ಕಾರ್ನ್

ಪಾಪ್‌ಕಾರ್ನ್ ತಯಾರಿಸಲು ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಅನ್ನು ಬಳಸಲಾಗಿದೆ. ಇದು ರಾಯಲ್ ಎನ್‌ಫೀಲ್ಡ್ ಬೈಕಿನಿಂದ ಮಾಡಲಾದ ವಿಶಿಷ್ಟವಾದ ಸಂಶೋಧನೆಯಾಗಿದೆ. ಈ ವಿಡಿಯೋವನ್ನು ಸೋನು ಬ್ಲಾಕ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ ಲೋಡ್ ಮಾಡಲಾಗಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ರಾಯಲ್ ಎನ್‌ಫೀಲ್ಡ್ ಬೈಕ್ ಸೈಲೆನ್ಸರ್​​​ನಿಂದ ತಯಾರಾಯ್ತು ಪಾಪ್ ಕಾರ್ನ್

ಈ ವೀಡಿಯೊದಲ್ಲಿರುವ ಯುವಕ ತನ್ನ ಬುಲೆಟ್ 350 ಬೈಕಿನ ಸೈಲೆನ್ಸರ್ ಬಳಸಿ ಪಾಪ್‌ಕಾರ್ನ್ ತಯಾರಿಸುವ ವಿಧಾನವನ್ನು ವಿವರಿಸಿದ್ದಾನೆ. ಈ ವೀಡಿಯೊದಲ್ಲಿನ ಮಾಹಿತಿಯ ಪ್ರಕಾರ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಅನ್ನು ಮೊದಲು ಸ್ವಲ್ಪ ದೂರ ಚಾಲನೆ ಮಾಡಲಾಯಿತು.

ರಾಯಲ್ ಎನ್‌ಫೀಲ್ಡ್ ಬೈಕ್ ಸೈಲೆನ್ಸರ್​​​ನಿಂದ ತಯಾರಾಯ್ತು ಪಾಪ್ ಕಾರ್ನ್

ಇದರಿಂದಾಗಿ ಬೈಕಿನ ಸೈಲೆನ್ಸರ್ ಸ್ವಲ್ಪ ಬಿಸಿಯಾಗಿದೆ. ನಂತರ ಆತ ಒಣಗಿದ ಜೋಳವನ್ನು ತಂದು ಬೈಕಿನ ಸೈಲೆನ್ಸರ್ ಒಳಗೆ ಇಡುತ್ತಾನೆ. ಇದಕ್ಕೂ ಮೊದಲ ಆತ ಬೈಕ್ ಆಫ್ ಮಾಡುತ್ತಾನೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ರಾಯಲ್ ಎನ್‌ಫೀಲ್ಡ್ ಬೈಕ್ ಸೈಲೆನ್ಸರ್​​​ನಿಂದ ತಯಾರಾಯ್ತು ಪಾಪ್ ಕಾರ್ನ್

ಒಳಗಿನ ಗಾಳಿಯ ಒತ್ತಡವು ಒಣಗಿದ ಜೋಳವನ್ನು ಹೊರಗೆ ತಳ್ಳಬಾರದು ಎಂಬ ಕಾರಣಕ್ಕೆ ಬೈಕ್ ಆಫ್ ಮಾಡಲಾಗುತ್ತದೆ. ಒಣಗಿದ ಜೋಳವನ್ನು ಸೈಲೆನ್ಸರ್ ಗೆ ಹಾಕಿದ ನಂತರ, ಆತ ತನ್ನ ಸ್ನೇಹಿತನಿಗೆ ಬೈಕ್ ಸ್ಟಾರ್ಟ್ ಮಾಡಲು ಹೇಳುತ್ತಾನೆ.

ರಾಯಲ್ ಎನ್‌ಫೀಲ್ಡ್ ಬೈಕ್ ಸೈಲೆನ್ಸರ್​​​ನಿಂದ ತಯಾರಾಯ್ತು ಪಾಪ್ ಕಾರ್ನ್

ಬೈಕ್ ಸ್ಟಾರ್ಟ್ ಆದ ನಂತರ ಆತ ಸೈಲೆನ್ಸರ್ ಅನ್ನು ಕಪ್ಪು ಬಟ್ಟೆಯಿಂದ ಮುಚ್ಚುತ್ತಾನೆ. ನಂತರ ಬೈಕಿನ ಆಕ್ಸಲರೇಟರ್ ಅನ್ನು ಹೆಚ್ಚಿಸುತ್ತಾನೆ. ಕೆಲ ನಿಮಿಷಗಳ ನಂತರ ಆತ ಸೈಲೆನ್ಸರ್ ಗೆ ಮುಚ್ಚಿದ್ದ ಬಟ್ಟೆಯನ್ನು ತೆಗೆಯುತ್ತಾನೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸೈಲೆನ್ಸರ್ ಒಳಗಿನಿಂದ ಪಾಪ್ ಕಾರ್ನ್ ಸ್ಪ್ಲಾಶ್ ಹೊರಗೆ ಬರುತ್ತದೆ. ಒಣಗಿದ ಜೋಳ, ಪಾಪ್‌ಕಾರ್ನ್‌ ಆಗಿ ಬದಲಾಗಿರುತ್ತದೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿರುವ ಸೈಲೆನ್ಸರ್‌ಗಳು ಬೇಗ ಬಿಸಿಯಾಗುತ್ತವೆ. ಸ್ವಲ್ಪ ಹೊತ್ತು ಬೈಕ್ ಚಾಲನೆ ಮಾಡಿದರೂ ಸೈಲೆನ್ಸರ್‌ಗಳು ಹೆಚ್ಚು ಬಿಸಿಯಾಗುತ್ತವೆ.

ರಾಯಲ್ ಎನ್‌ಫೀಲ್ಡ್ ಬೈಕ್ ಸೈಲೆನ್ಸರ್​​​ನಿಂದ ತಯಾರಾಯ್ತು ಪಾಪ್ ಕಾರ್ನ್

ಬೈಕಿನ ಸೈಲೆನ್ಸರ್ ಬಳಸಿ ಪಾಪ್‌ಕಾರ್ನ್ ತಯಾರಿಸುವ ಯೋಜನೆ ಯಶಸ್ವಿಯಾಗಿರಬಹುದು. ಆದರೆ ಬೈಕ್‌ನ ಸೈಲೆನ್ಸರ್‌ನಲ್ಲಿ ತಯಾರಿಸಿದ ಪಾಪ್‌ಕಾರ್ನ್‌ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

Most Read Articles

Kannada
English summary
Popcorn made from Royal Enfield Bullet 350 bike silencer. Read in Kannada.
Story first published: Tuesday, September 1, 2020, 10:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X