ಐಷಾರಾಮಿ ಕಾರಿನ ಬದಲು ಸೈಕಲ್ ಸವಾರಿಗೆ ಆದ್ಯತೆ ನೀಡಿದ ನಟಿ

ಭಾರತದಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಬಹುತೇಕ ಮಧ್ಯಮ ವರ್ಗದ ಕುಟುಂಬಗಳು ಒಂದು ದ್ವಿಚಕ್ರ ವಾಹನವನ್ನು ಹೊಂದಿವೆ. ದ್ವಿಚಕ್ರ ವಾಹನಗಳು ಸಂಚಾರವನ್ನು ಸುಗಮಗೊಳಿಸಿದರೂ ಬೊಜ್ಜು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ.

ಐಷಾರಾಮಿ ಕಾರಿನ ಬದಲು ಸೈಕಲ್ ಸವಾರಿಗೆ ಆದ್ಯತೆ ನೀಡಿದ ನಟಿ

ಈ ಕಾರಣಕ್ಕೆ ಸೈಕಲ್'ಗಳ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ತಮಿಳುನಾಡಿನ ರೈಲ್ವೆ ಡಿಜಿಪಿ ಸಿಲೆಂದ್ರ ಬಾಬು ಹಾಗೂ ಅವರ ತಂಡ ಕೆಲವು ವಾರಗಳ ಹಿಂದೆ ಚೆನ್ನೈನಿಂದ ಧನುಷ್ಕೋಡಿಗೆ ಸೈಕಲ್ ಪ್ರವಾಸವನ್ನು ಹಮ್ಮಿಕೊಂಡಿತ್ತು. ಯುವಕರಲ್ಲಿ ಸೈಕಲ್ ಬಗ್ಗೆ ಜಾಗೃತಿ ಮೂಡಿಸಲು ಈ ಪ್ರವಾಸವನ್ನು ಕೈಗೊಳ್ಳಲಾಗಿತ್ತು.

ಐಷಾರಾಮಿ ಕಾರಿನ ಬದಲು ಸೈಕಲ್ ಸವಾರಿಗೆ ಆದ್ಯತೆ ನೀಡಿದ ನಟಿ

ಈಗ ಖ್ಯಾತ ನಟಿ ರಾಕುಲ್ ಪ್ರೀತ್ ಸಿಂಗ್ ಪ್ರತಿದಿನ ಶೂಟಿಂಗ್ ಸ್ಪಾಟ್‌ಗೆ ಸೈಕಲ್ ಮೂಲಕವೇ ಸಾಗುತ್ತಿದ್ದಾರೆ. ಈಗ ಅವರು ಮೇಡ್ ಎಂಬ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಸೇರಿದಂತೆ ಹಲವರು ತಾರೆಯರು ನಟಿಸುತ್ತಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಐಷಾರಾಮಿ ಕಾರಿನ ಬದಲು ಸೈಕಲ್ ಸವಾರಿಗೆ ಆದ್ಯತೆ ನೀಡಿದ ನಟಿ

ಸಾಮಾನ್ಯವಾಗಿ ಚಲನಚಿತ್ರ ನಟ, ನಟಿಯರು ಶೂಟಿಂಗ್ ನಡೆಯುವ ಸ್ಥಳಗಳಿಗೆ ಐಷಾರಾಮಿ ಕಾರುಗಳಲ್ಲಿ ತೆರಳುತ್ತಾರೆ. ಆದರೆ ರಾಕುಲ್ ಪ್ರೀತ್ ಸಿಂಗ್ ವಿಭಿನ್ನವಾಗಿ ಮೇಡ್ ಚಿತ್ರದ ಶೂಟಿಂಗ್ ಸ್ಪಾಟ್‌ಗೆ ಪ್ರತಿದಿನ ಸೈಕಲ್'ನಲ್ಲಿ ತೆರಳುತ್ತಿದ್ದಾರೆ.

ಐಷಾರಾಮಿ ಕಾರಿನ ಬದಲು ಸೈಕಲ್ ಸವಾರಿಗೆ ಆದ್ಯತೆ ನೀಡಿದ ನಟಿ

ಇದಕ್ಕಾಗಿ ರಾಕುಲ್ ಪ್ರೀತ್ ಸಿಂಗ್ ಪ್ರತಿದಿನ 12 ಕಿ.ಮೀ ಸೈಕಲ್ ಚಾಲನೆ ಮಾಡುತ್ತಿದ್ದಾರೆ. ರಾಕುಲ್ ಪ್ರೀತ್ ಸಿಂಗ್ ಸೈಕಲ್ ಸವಾರಿ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಐಷಾರಾಮಿ ಕಾರಿನ ಬದಲು ಸೈಕಲ್ ಸವಾರಿಗೆ ಆದ್ಯತೆ ನೀಡಿದ ನಟಿ

ರಾಕುಲ್ ಪ್ರೀತ್ ಸಿಂಗ್ ಅವರ ಅಭಿಮಾನಿಗಳು ಆ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ರಾಕುಲ್ ಪ್ರೀತ್ ಸಿಂಗ್ ಪ್ರತಿದಿನ ಸೈಕಲ್ ಸವಾರಿ ಮಾಡುತ್ತಿರುವ ಪ್ರದೇಶದಲ್ಲಿ ಜನದಟ್ಟಣೆ ಕಡಿಮೆಯಿದೆ. ಆದರೂ ಅವರ ಸುರಕ್ಷತೆಗಾಗಿ ಕಾರೊಂದು ಅವರ ಜೊತೆಗೆ ಸಾಗುತ್ತದೆ.

ಐಷಾರಾಮಿ ಕಾರಿನ ಬದಲು ಸೈಕಲ್ ಸವಾರಿಗೆ ಆದ್ಯತೆ ನೀಡಿದ ನಟಿ

ರಾಕುಲ್ ಪ್ರೀತ್ ಸಿಂಗ್ ಮೊದಲಿನಿಂದಲೂ ತಮ್ಮ ದೇಹವನ್ನು ಫಿಟ್ ಆಗಿಟ್ಟು ಕೊಳ್ಳಲು ಗಮನ ಹರಿಸಿದ್ದಾರೆ. ಇದರ ಭಾಗವಾಗಿಯೇ ಶೂಟಿಂಗ್ ಸ್ಪಾಟ್‌ಗೆ ಪ್ರತಿದಿನ ಸೈಕಲ್ ಮೂಲಕ ತೆರಳುತ್ತಿದ್ದಾರೆ. ಇದರಿಂದಾಗಿ ಸೈಕಲ್'ನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡುವುದು ಸುಳ್ಳಲ್ಲ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಐಷಾರಾಮಿ ಕಾರಿನ ಬದಲು ಸೈಕಲ್ ಸವಾರಿಗೆ ಆದ್ಯತೆ ನೀಡಿದ ನಟಿ

ವಾಹನಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಜನರು ಬೊಜ್ಜಿನಂತಹ ಸಮಸ್ಯೆಗಳಿಂದ ಮಾತ್ರವಲ್ಲದೆ ವಾಯುಮಾಲಿನ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕಾರಣಕ್ಕೆ ವಿಶ್ವದ ಹಲವು ದೇಶಗಳು ಎಲೆಕ್ಟ್ರಿಕ್ ವಾಹನ ಹಾಗೂ ಸೈಕಲ್‌ಗಳ ಬಳಕೆಗೆ ಉತ್ತೇಜನ ನೀಡುತ್ತಿವೆ.

ಐಷಾರಾಮಿ ಕಾರಿನ ಬದಲು ಸೈಕಲ್ ಸವಾರಿಗೆ ಆದ್ಯತೆ ನೀಡಿದ ನಟಿ

ಭಾರತದಲ್ಲಿಯೂ ವಾಯುಮಾಲಿನ್ಯದ ಸಮಸ್ಯೆಯನ್ನು ಕೊನೆಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ ಸೈಕಲ್‌ಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ. ಸರ್ಕಾರಗಳು ಇದರತ್ತ ಗಮನ ಹರಿಸಿದರೆ ಉತ್ತಮ.

Most Read Articles

Kannada
English summary
Popular actress Rakul Preet Singh using bicycle to reach shooting spot. Read in Kannada.
Story first published: Friday, January 15, 2021, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X