ಐಷಾರಾಮಿ ಕಾರಿಗೆ ಹಾನಿಯುಂಟು ಮಾಡಿದ ತೌಕ್ತೆ ಚಂಡಮಾರುತ

ತೌಕ್ತೆ ಚಂಡಮಾರುತವು ಕರಾವಳಿ ಪ್ರದೇಶಗಳಲ್ಲಿ ಹೆಚ್ಚು ಹಾನಿಯನ್ನುಂಟು ಮಾಡುತ್ತಿದೆ. ಪ್ರತಿ ಗಂಟೆಗೆ 108 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ಈ ಚಂಡಮಾರುತದಿಂದ ಅಪಾರ ಪ್ರಮಾಣದ ನಷ್ಟವುಂಟಾಗಿದೆ.

ಐಷಾರಾಮಿ ಕಾರಿಗೆ ಹಾನಿಯುಂಟು ಮಾಡಿದ ತೌಕ್ತೆ ಚಂಡಮಾರುತ

ಈ ಚಂಡಮಾರುತದಿಂದ ಪೋರ್ಷೆ 718 ಬಾಕ್ಸ್‌ಟರ್ ಐಷಾರಾಮಿ ಕಾರು ಸಹ ಹಾನಿಗೊಳಗಾದ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಈ ಕಾರಿನ ಮಾಲೀಕರಾದ ಡಾ. ರುಶೀಂದ್ರ ಸಿನ್ಹಾ ಮಾಹಿತಿ ನೀಡಿದ್ದಾರೆ. ಈ ಪೋರ್ಷೆ ಕಾರಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜೊತೆಗೆ ಈ ಕಾರಿನ ವೀಡಿಯೊವನ್ನು ಸಹ ಪೋಸ್ಟ್ ಮಾಡಲಾಗಿದೆ.

ಐಷಾರಾಮಿ ಕಾರಿಗೆ ಹಾನಿಯುಂಟು ಮಾಡಿದ ತೌಕ್ತೆ ಚಂಡಮಾರುತ

ಈ ವೀಡಿಯೊದಲ್ಲಿ ರುಶೀಂದ್ರ ಘಟನೆಯ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಅವರು ತಮ್ಮ ಕಾರ್ ಅನ್ನು ಕಾಂಪ್ಲೆಕ್ಸ್‌ನಲ್ಲಿ ನಿಲ್ಲಿಸಿದ್ದರು. ಅವರು ಹಿಂದಿನ ದಿನ ಕಾರ್ ಅನ್ನು ಬಳಸಿರಲಿಲ್ಲ. ರಾತ್ರಿ ಅವರಿಗೆ ಕರೆ ಮಾಡಿದ ಸೆಕ್ಯೂರಿಟಿ ಗಾರ್ಡ್ ಮಳೆಯಲ್ಲಿ ಕಾರು ನೆನೆಯುತ್ತಿದೆ ಎಂದು ಹೇಳಿದ್ದಾನೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಐಷಾರಾಮಿ ಕಾರಿಗೆ ಹಾನಿಯುಂಟು ಮಾಡಿದ ತೌಕ್ತೆ ಚಂಡಮಾರುತ

ಅವರು ಕೆಳಗೆ ಬರಲು ರೆಡಿಯಾಗುತ್ತಿರುವಾಗ ಮತ್ತೊಂದು ಕರೆ ಬಂದಿದೆ. ಆ ಕರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಬೇಗನೇ ಬರುವಂತೆ ತಿಳಿಸಿದ್ದಾನೆ. ರುಶೀಂದ್ರ ಕಾರಿನ ಕೀಯನ್ನು ಡ್ರೈವರ್'ಗೆ ನೀಡಿ ಕಾರ್ ಅನ್ನು ಪರೀಕ್ಷಿಸುವಂತೆ ಹೇಳಿದ್ದಾರೆ.

ಐಷಾರಾಮಿ ಕಾರಿಗೆ ಹಾನಿಯುಂಟು ಮಾಡಿದ ತೌಕ್ತೆ ಚಂಡಮಾರುತ

ಅವರು ಚಾಲಕನನ್ನು ಹಿಂಬಾಲಿಸಿ ಕೆಳಗಡೆ ಬಂದಾಗ ಕನ್ವರ್ಟಬಲ್ ರೂಫ್ ಹಾರಿ ಹೋಗಿ ಕಾರು ನೀರಿನಲ್ಲಿ ತೇಲಾಡುತ್ತಿತ್ತು. ಗಾಳಿಯಿಂದ ರೂಫ್ ಹಾರಿ ಹೋಯಿತು ಎಂದು ಸೆಕ್ಯೂರಿಟಿ ಗಾರ್ಡ್ ಹೇಳಿದ್ದಾನೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಐಷಾರಾಮಿ ಕಾರಿಗೆ ಹಾನಿಯುಂಟು ಮಾಡಿದ ತೌಕ್ತೆ ಚಂಡಮಾರುತ

ಕಾರು ಚಾಲಕ ಕಾರನ್ನು ಆನ್ ಮಾಡುತ್ತಿದ್ದಂತೆ ಪೋರ್ಷೆ ಕಾರು ಕಟ್ಟಡದ ಪಿಲ್ಲರ್'ಗೆ ಡಿಕ್ಕಿ ಹೊಡೆದಿದೆ ಎಂದು ರುಶೀಂದ್ರ ಹೇಳಿದ್ದಾರೆ. ಇದರಿಂದ ಕಾರಿನ ಮುಂಭಾಗದ ತುದಿಯು ಪೂರ್ತಿಯಾಗಿ ಹಾನಿಯಾಗಿದೆ.

ಐಷಾರಾಮಿ ಕಾರಿಗೆ ಹಾನಿಯುಂಟು ಮಾಡಿದ ತೌಕ್ತೆ ಚಂಡಮಾರುತ

ಈ ಘಟನೆ ಹೇಗೆ ಸಂಭವಿಸಿತು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಆದರೆ ಘಟನೆ ಸಂಭವಿಸಿದಾಗ ಕಾರಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಿಸ್ಟಂ ಫಾಲ್ಟ್ ದೋಷವನ್ನು ತೋರಿಸುತ್ತಿತ್ತು ಎಂದು ರುಶೀಂದ್ರ ಹೇಳಿಕೊಂಡಿದ್ದಾರೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಐಷಾರಾಮಿ ಕಾರಿಗೆ ಹಾನಿಯುಂಟು ಮಾಡಿದ ತೌಕ್ತೆ ಚಂಡಮಾರುತ

ಘಟನೆ ನಡೆದಾಗ ತಾನು ಕಾರಿನ ಪಕ್ಕದಲ್ಲಿ ನಿಂತಿದ್ದೆ ಎಂದು ಅವರು ಹೇಳಿದ್ದಾರೆ. ಡ್ರೈವರ್ ಕೀಯನ್ನು ತಿರುಗಿಸಿದ ನಂತರ ಕಾರು ಇದ್ದಕ್ಕಿದಂತೆ ಮುಂದೆ ಸಾಗಿದೆ.ಇದೊಂದು ವಿಚಿತ್ರವಾದ ಘಟನೆಯಾಗಿದ್ದು, ವಿಶ್ವದಲ್ಲಿ ಈ ರೀತಿ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಐಷಾರಾಮಿ ಕಾರಿಗೆ ಹಾನಿಯುಂಟು ಮಾಡಿದ ತೌಕ್ತೆ ಚಂಡಮಾರುತ

ಹೆಚ್ಚಿನ ಗಾಳಿಯಿಂದಾಗಿ ಕಾರಿನ ರೂಫ್ ಹಾರಿ ಹೋಗಿದೆ. ಭಾರೀ ಮಳೆಯಾಗುತ್ತಿರುವುದರಿಂದ ನೀರು ಕಾರಿನೊಳಗೆ ಪ್ರವೇಶಿಸಿದೆ ಎಂದು ರುಶೀಂದ್ರ ಹೇಳಿಕೊಂಡಿದ್ದಾರೆ. ಇದು ಸಿಸ್ಟಂ ಅಸಮರ್ಪಕ ನಿರ್ವಹಣೆಗೆ ಕಾರಣವಾಗಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಕಾರಿಗೆ ಹಾನಿಯಾಗಿರುವ ಕಾರಣ ವಿಮೆ ಪಡೆಯಲು ಅವರು ವಿಮಾ ಕಂಪನಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಿಮಾ ಕಂಪನಿಯು ಅವರ ಹಕ್ಕುಗಳನ್ನು ಪರಿಶೀಲಿಸಿಅಂತಿಮ ವರದಿ ಸಲ್ಲಿಸಲಿದೆ.

ಐಷಾರಾಮಿ ಕಾರಿಗೆ ಹಾನಿಯುಂಟು ಮಾಡಿದ ತೌಕ್ತೆ ಚಂಡಮಾರುತ

ಈ ಪ್ರಕ್ರಿಯೆ ಪೂರ್ಣವಾಗಲು ಹಲವಾರು ದಿನಗಳು ಬೇಕಾಗುತ್ತವೆ. ಸದ್ಯಕ್ಕೆ ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿಲ್ಲ. ಆದರೆ ಆ ದೃಶ್ಯಗಳನ್ನು ಪಡೆಯಲು ತಾವು ಪ್ರಯತ್ನಿಸುತ್ತಿರುವುದಾಗಿ ರುಶೀಂದ್ರ ಹೇಳಿದ್ದಾರೆ.

Most Read Articles

Kannada
English summary
Porsche 718 Boxster damaged due to Tauktae cyclone. Read in Kannada.
Story first published: Wednesday, May 19, 2021, 12:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X