ಲಾಕ್‌ಡೌನ್ ಉಲ್ಲಂಘನೆ: ಮಾಸ್ಕ್ ಧರಿಸದೇ ಹೊರಬಂದು ಶಿಕ್ಷೆ ಅನುಭವಿಸಿದ ಐಷಾರಾಮಿ ಕಾರು ಮಾಲೀಕ

ಕರೋನಾ ವೈರಸ್ ಹರಡದಂತೆ ತಡೆಯುವ ಸಲುವಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಪೊಲೀಸರು ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದಾರೆ. ಕೆಲವು ನಗರಗಳಲ್ಲಿ ಅಗತ್ಯ ಕಾರ್ಯಗಳಿಗಾಗಿ ಭಾಗಶಃ ವಿನಾಯಿತಿ ನೀಡಲಾಗಿದ್ದರೂ, ಜನರು ಮಾಸ್ಕ್ ಧರಿಸಿ ಮನೆಯಿಂದ ಹೊರಬರುವಂತೆ ಹೇಳಲಾಗುತ್ತಿದೆ.

ಲಾಕ್‌ಡೌನ್ ಉಲ್ಲಂಘನೆ: ಮಾಸ್ಕ್ ಧರಿಸದೇ ಹೊರಬಂದು ಶಿಕ್ಷೆ ಅನುಭವಿಸಿದ ಐಷಾರಾಮಿ ಕಾರು ಮಾಲೀಕ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಘಟನೆಯೊಂದರೆ ವೀಡಿಯೊವೊಂದು ವೈರಲ್ ಆಗಿದೆ. ಈ ವೀಡಿಯೊದಲ್ಲಿ ಮಾಸ್ಕ್ ಧರಿಸದೇ ಪೋರ್ಷೆ ಕಾರ್ ಅನ್ನು ಚಾಲನೆ ಮಾಡಿದ ಯುವಕನಿಗೆ ಸ್ಥಳದಲ್ಲಿದ್ದ ಪೊಲೀಸರು ಶಿಕ್ಷೆ ನೀಡಿದ್ದಾರೆ. ಇಂದೋರ್‌ನಲ್ಲಿ ಕರೋನಾ ವೈರಸ್ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಕಾರಣ ಮನೆಯಿಂದ ಹೊರಬರುವ ಮುನ್ನ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಲಾಕ್‌ಡೌನ್ ಉಲ್ಲಂಘನೆ: ಮಾಸ್ಕ್ ಧರಿಸದೇ ಹೊರಬಂದು ಶಿಕ್ಷೆ ಅನುಭವಿಸಿದ ಐಷಾರಾಮಿ ಕಾರು ಮಾಲೀಕ

ಪೋರ್ಷೆ 718 ಬಾಕ್ಸ್‌ಸ್ಟರ್ ಸ್ಪೋರ್ಟ್ಸ್ ಕಾರಿನಲ್ಲಿ, ಆ ಯುವಕ ಯಾವುದೇ ಕಾರಣವಿಲ್ಲದೆ ಸುತ್ತಾಡುತ್ತಿದ್ದ. ಸಿಕ್ಕಿಬಿದ್ದಾಗ ತನ್ನ ಬಳಿ ಪಾಸ್ ಇದೆ ಎಂದು ಹೇಳಿದ್ದಾನೆ. ಆದರೆ ಮಾಸ್ಕ್ ಧರಿಸದ ಕಾರಣ, ಪೊಲೀಸರು ಆತನನ್ನು ಕಾರಿನಿಂದ ಕೆಳಗಿಳಿಸಿ ಬಸ್ಕಿ ಹೊಡೆಸಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಉಲ್ಲಂಘನೆ: ಮಾಸ್ಕ್ ಧರಿಸದೇ ಹೊರಬಂದು ಶಿಕ್ಷೆ ಅನುಭವಿಸಿದ ಐಷಾರಾಮಿ ಕಾರು ಮಾಲೀಕ

ಪೋರ್ಷೆ 718 ಬಾಕ್ಸ್‌ಸ್ಟರ್ ಕಾರಿನ ಬೆಲೆ ಭಾರತದಲ್ಲಿ ಎಕ್ಸ್ ಶೋರೂಂ ದರದಂತೆ ರೂ.85.53 ಲಕ್ಷಗಳಾಗಿದೆ. ಈ ಕಾರು ತನ್ನ ಬಲಶಾಲಿಯಾದ ಎಂಜಿನ್ ಹಾಗೂ ಪರ್ಫಾಮೆನ್ಸ್‌ನಿಂದಾಗಿ ಜನಪ್ರಿಯವಾಗಿದೆ.

ಲಾಕ್‌ಡೌನ್ ಉಲ್ಲಂಘನೆ: ಮಾಸ್ಕ್ ಧರಿಸದೇ ಹೊರಬಂದು ಶಿಕ್ಷೆ ಅನುಭವಿಸಿದ ಐಷಾರಾಮಿ ಕಾರು ಮಾಲೀಕ

ಪೋರ್ಷೆ 718 ಬಾಕ್ಸ್‌ಸ್ಟರ್ ಕಾರಿನಲ್ಲಿ 2.0-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 300 ಬಿಹೆಚ್‌ಪಿ ಪವರ್ ಹಾಗೂ 380 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿ 7-ಸ್ಪೀಡ್ ಫಾಸ್ಟ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಈ ಕಾರಿನಲ್ಲಿರುವ 7-ಸ್ಪೀಡ್ ಗೇರ್‌ಬಾಕ್ಸ್ ವಿಶ್ವದ ಅತಿ ವೇಗದ ಗೇರ್‌ಬಾಕ್ಸ್ ಆಗಿದೆ. ಈ ಕಾರು ಕೇವಲ 4.5 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಕರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಲಾಕ್‌ಡೌನ್ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು.

ಲಾಕ್‌ಡೌನ್ ಉಲ್ಲಂಘನೆ: ಮಾಸ್ಕ್ ಧರಿಸದೇ ಹೊರಬಂದು ಶಿಕ್ಷೆ ಅನುಭವಿಸಿದ ಐಷಾರಾಮಿ ಕಾರು ಮಾಲೀಕ

ತೀರಾ ಅಗತ್ಯವಾದ ಕೆಲಸವಿಲ್ಲದಿದ್ದರೆ ಮನೆಯಿಂದ ಹೊರಬರದಿರಿ. ಕರೋನಾ ವೈರಸ್ ಸಾಂಕ್ರಾಮಿಕ ರೋಗವಾಗಿದ್ದು, ಉಸಿರಾಟದ ಮೂಲಕ ದೇಹದೊಳಗೆ ತಲುಪುತ್ತದೆ. ಈ ಕಾರಣಕ್ಕೆ ಮನೆಯಿಂದ ಹೊರಬರುವಾಗ ಫೇಸ್ ಮಾಸ್ಕ್ ಧರಿಸಿವುದು ಒಳ್ಳೆಯದು.

Article Published On: Monday, April 27, 2020, 15:15 [IST]
English summary
Porsche owner fined for not wearing mask during lockdown. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+