ಹೈವೇಯಲ್ಲಿ ಚಾಲಕನಿಲ್ಲದೇ ಚಲಿಸಿದ ಪ್ರೀಮಿಯರ್ ಪದ್ಮಿನಿ ಕಾರು

ಕಳೆದ ಕೆಲವು ದಿನಗಳಿಂದ ಚಿಕ್ಕ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊ ನೋಡುಗರನ್ನು ಆಶ್ಚರ್ಯಚಕಿತರಾಗಿಸುತ್ತಿದೆ. ಚಾಲಕನ ಸೀಟಿನಲ್ಲಿ ಯಾರೂ ಇಲ್ಲದಿದ್ದರೂ ಕಾರು ಆಟೋಮ್ಯಾಟಿಕ್ ಆಗಿ ಚಲಿಸುತ್ತಿರುವುದೇ ಇದಕ್ಕೆ ಕಾರಣ.

ಹೈವೇಯಲ್ಲಿ ಚಾಲಕನಿಲ್ಲದೇ ಚಲಿಸಿದ ಪ್ರೀಮಿಯರ್ ಪದ್ಮಿನಿ ಕಾರು

ಈ ವೀಡಿಯೊದಲ್ಲಿ ಪ್ರೀಮಿಯರ್ ಪದ್ಮಿನಿ ಕಾರು ಚಾಲಕರಿಲ್ಲದೆ ಚಾಲನೆಯಾಗುತ್ತಿರುವುದನ್ನು ಕಾಣಬಹುದು. ಈ ಕಾರಿನ ಸಹ-ಚಾಲಕನ ಸೀಟಿನಲ್ಲಿ ಹಿರಿಯ ವ್ಯಕ್ತಿಯೊಬ್ಬರು ಕುಳಿತಿದ್ದಾರೆ. ಈ ವೀಡಿಯೊವನ್ನು ಟ್ಯಾಗೋರ್ ಚೆರ್ರಿ ತಮ್ಮ ಫೇಸ್‌ಬುಕ್ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ.ವ್ಯಕ್ತಿಯೊಬ್ಬರು ಕಾರಿನಲ್ಲಿ ಇರುವುದು ನಿಜವೇ ಆದರೂ ಅವರು ಚಾಲಕನ ಸೀಟಿನಲ್ಲಿಲ್ಲ.

ಹೈವೇಯಲ್ಲಿ ಚಾಲಕನಿಲ್ಲದೇ ಚಲಿಸಿದ ಪ್ರೀಮಿಯರ್ ಪದ್ಮಿನಿ ಕಾರು

ಬದಲಿಗೆ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದಾರೆ. ಈ ಕಾರು ಹೆದ್ದಾರಿಯೊಂದರಲ್ಲಿ ಸಾಗುವಾಗ ಈ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ. ಬೇರೊಂದು ಕಾರಿನಲ್ಲಿದ್ದವರು ಈ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೈವೇಯಲ್ಲಿ ಚಾಲಕನಿಲ್ಲದೇ ಚಲಿಸಿದ ಪ್ರೀಮಿಯರ್ ಪದ್ಮಿನಿ ಕಾರು

ಈ ವೀಡಿಯೊದಲ್ಲಿ ಪ್ರೀಮಿಯರ್ ಪದ್ಮಿನಿ ಕಾರು ಹೈವೇಯಲ್ಲಿನ ಲೇನ್ ಗಳನ್ನು ಬದಲಿಸಿ ಸಾಗುತ್ತಿರುವುದನ್ನು ಕಾಣಬಹುದು. ಈ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದವರು ಕುತೂಹಲಕ್ಕಾಗಿ ಪ್ರೀಮಿಯರ್ ಪದ್ಮಿನಿ ಕಾರನ್ನು ಓವರ್ ಟೇಕ್ ಮಾಡಿ ಕಾರಿನಲ್ಲಿ ಬೇರೆ ಯಾರಾದರೂ ಇದ್ದಾರೆಯೇ ಎಂದು ತಿಳಿಯಲು ಪ್ರಯತ್ನಿಸುತ್ತಾರೆ.

ಹೈವೇಯಲ್ಲಿ ಚಾಲಕನಿಲ್ಲದೇ ಚಲಿಸಿದ ಪ್ರೀಮಿಯರ್ ಪದ್ಮಿನಿ ಕಾರು

ಆದರೆ ಸಹ-ಚಾಲಕನ ಸೀಟಿನಲ್ಲಿ ಕುಳಿತ ವ್ಯಕ್ತಿಯನ್ನು ಹೊರತುಪಡಿಸಿ ಕಾರಿನಲ್ಲಿ ಬೇರೆ ಯಾರೂ ಇರಲಿಲ್ಲ. ಹಿಂದಿನ ಸಾಲಿನ ಸೀಟುಗಳು ಸಹ ಖಾಲಿಯಾಗಿವೆ. ಚಾಲಕರಿಲ್ಲದೆ ಸಾಗಿದ ಕಾರನ್ನು ತಮಿಳುನಾಡಿನಲ್ಲಿ ರಿಜಿಸ್ಟರ್ ಮಾಡಲಾಗಿದೆ ಎಂಬುದನ್ನು ನಂಬರ್ ಪ್ಲೇಟ್ ನಿಂದ ತಿಳಿಯಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೈವೇಯಲ್ಲಿ ಚಾಲಕನಿಲ್ಲದೇ ಚಲಿಸಿದ ಪ್ರೀಮಿಯರ್ ಪದ್ಮಿನಿ ಕಾರು

ಡ್ರೈವರ್ ಇಲ್ಲದೆ ಈ ಕಾರು ಹೇಗೆ ಚಲಿಸಿತು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಕಣ್ಣಿಗೆ ಕಾಣದಂತೆ ಯಾರಾದರೂ ಕಾರಿನ ಒಳಗೆ ಕುಳಿತು ಚಾಲನೆ ಮಾಡುತ್ತಿರಬಹುದು ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

ಹೈವೇಯಲ್ಲಿ ಚಾಲಕನಿಲ್ಲದೇ ಚಲಿಸಿದ ಪ್ರೀಮಿಯರ್ ಪದ್ಮಿನಿ ಕಾರು

ಡ್ರೈವರ್ ಇಲ್ಲದೆ ಕಾರು ಹೇಗೆ ಚಲಿಸಿತು ಎನ್ನುವುದನ್ನು ನೋಡುವುದಾದರೆ, ಸಾಮಾನ್ಯವಾಗಿ ಕಾರುಗಳಲ್ಲಿ ಆಕ್ಸಲರೇಟರ್, ಕ್ಲಚ್ ಹಾಗೂ ಬ್ರೇಕ್ ಗಳನ್ನು ಚಾಲಕರ ಸೀಟಿನ ಕೆಳಗೆ ನೀಡಲಾಗಿರುತ್ತದೆ. ಆದರೆ ಡ್ರೈವಿಂಗ್ ಸ್ಕೂಲ್ ಗಳಲ್ಲಿ ಸಹ-ಚಾಲಕನ ಸೀಟಿನ ಅಡಿಯಲ್ಲೂ ಪೆಡಲ್‌ಗಳನ್ನು ನೀಡಲಾಗಿರುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೈವೇಯಲ್ಲಿ ಚಾಲಕನಿಲ್ಲದೇ ಚಲಿಸಿದ ಪ್ರೀಮಿಯರ್ ಪದ್ಮಿನಿ ಕಾರು

ಹೊಸದಾಗಿ ಕಾರು ಕಲಿಯುವವರಿಗೆ ಕಾರನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಲ್ಲಿ ಸಹ-ಚಾಲಕನು ತನ್ನ ಸೀಟಿನ ಕೆಳಗಿರುವ ಪೆಡಲ್‌ಗಳನ್ನು ಬಳಸಿ ಕಾರನ್ನು ಕಂಟ್ರೋಲ್ ಮಾಡುತ್ತಾನೆ. ಈ ಕಾರಿನಲ್ಲಿಯೂ ಇದೇ ರೀತಿಯ ಪೆಡಲ್ ಗಳಿರುವ ಸಾಧ್ಯತೆಗಳಿವೆ.

ಹೈವೇಯಲ್ಲಿ ಚಾಲಕನಿಲ್ಲದೇ ಚಲಿಸಿದ ಪ್ರೀಮಿಯರ್ ಪದ್ಮಿನಿ ಕಾರು

ಇದರಿಂದ ಸಹ-ಚಾಲಕನ ಸೀಟಿನಲ್ಲಿದ್ದವರು ಆಕ್ಸಲರೇಟರ್, ಕ್ಲಚ್ ಹಾಗೂ ಬ್ರೇಕ್ ಗಳನ್ನು ಕಂಟ್ರೋಲ್ ಮಾಡಿರಬಹುದು. ಸಹ-ಚಾಲಕನ ಸೀಟಿನಲ್ಲಿದ್ದವರು ಕಾರಿನ ಸ್ಟೀಯರಿಂಗ್ ವ್ಹೀಲ್ ಅನ್ನು ಸಹ ಕಂಟ್ರೋಲ್ ಮಾಡಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ತಮ್ಮ ಬಲಗೈನಿಂದ ಅವರು ಸ್ಟೀಯರಿಂಗ್ ವ್ಹೀಲ್ ಅನ್ನು ಕಂಟ್ರೋಲ್ ಮಾಡಬಹುದು. ಆದರೆ ಸಹ ಚಾಲಕನ ಸೀಟಿನಲ್ಲಿರುವ ವ್ಯಕ್ತಿ ಏನೂ ತಿಳಿಯದವರಂತೆ ಸೈಲೆಂಟ್ ಆಗಿ ಕುಳಿತು ಇದು ಯಾವುದೋ ಮ್ಯಾಜಿಕ್ ಎಂಬಂತೆ ವರ್ತಿಸಿದ್ದಾರೆ.

ಹೈವೇಯಲ್ಲಿ ಚಾಲಕನಿಲ್ಲದೇ ಚಲಿಸಿದ ಪ್ರೀಮಿಯರ್ ಪದ್ಮಿನಿ ಕಾರು

ಮ್ಯಾಜಿಕ್ ಮಾಡುವ ಜನರು ಸಹ ಶಾಂತವಾಗಿ ತಂತ್ರಗಳನ್ನು ಪ್ರದರ್ಶಿಸುತ್ತಾರೆ. ಈ ಪ್ರೀಮಿಯರ್ ಪದ್ಮಿನಿ ಕಾರಿನ ಸಹ-ಚಾಲಕನ ಸೀಟಿನಲ್ಲಿ ಕುಳಿತಿರುವ ವ್ಯಕ್ತಿಯು ಬಹುತೇಕ ಇದೇ ಕೆಲಸವನ್ನು ಮಾಡಿರುವ ಸಾಧ್ಯತೆಗಳಿವೆ. ಆದರೆ ಈ ರೀತಿಯ ಕೆಲಸಗಳು ಅಪಘಾತಗಳಿಗೆ ಕಾರಣವಾಗುತ್ತವೆ ಎಂಬುದನ್ನು ನೆನಪಿನಲ್ಲಿಡಬೇಕು.

Most Read Articles
 

Kannada
English summary
Premier Padmini moves without driver on national highway. Read in Kannada.
Story first published: Tuesday, October 13, 2020, 17:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X