ಮನೆಯಲ್ಲೇ 4WD ಎಲೆಕ್ಟ್ರಿಕ್ ಜೀಪ್ ತಯಾರಿ: ಹಳ್ಳಿ ಪ್ರತಿಭೆಗೆ ಮೆಚ್ಚಿ ಕೆಲಸ ಕೊಡಲು ರೆಡಿ ಎಂದ ಮಹೀಂದ್ರಾ

ಮಹೀಂದ್ರಾ & ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅವರು ಮಹೀಂದ್ರಾ ಕಂಪನಿಗೆ ಸಂಬಂಧಿಸಿದ ಚಿತ್ರಗಳು ಮತ್ತು ವೀಡಿಯೊಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

Recommended Video

Mahindra Scorpio Classic Launched | Price At Rs 11.99 Lakh | Scorpio Classic Vs Scorpio N In Kannada

ಅಲ್ಲದೇ ಸ್ಪೂರ್ತಿದಾಯಕ ವೀಡಿಯೊಗಳು ಮತ್ತು ಅಸಾಧಾರಣವಾಗಿರುವ ಏನನ್ನಾದರೂ ಸಾಧಿಸಿದ ಜನರ ಕಥೆಗಳನ್ನು ಸಹ ಹಂಚಿಕೊಳ್ಳುತ್ತಾರೆ. ಯಾವಾಗಲೂ ಆವಿಷ್ಕಾರಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ಇನ್ನಷ್ಟು ಮಂದಿಗೆ ತಲುಪಿಸಲು ಪ್ರಯತ್ನಿಸುತ್ತಿರುತ್ತಾರೆ.

ಮನೆಯಲ್ಲೇ 4WD ಎಲೆಕ್ಟ್ರಿಕ್ ಜೀಪ್ ತಯಾರಿ: ಹಳ್ಳಿ ಪ್ರತಿಭೆಗೆ ಕೆಲಸ ಕೊಡಲು ರೆಡಿ ಎಂದ ಮಹೀಂದ್ರಾ

ಈ ಕ್ರಮದಲ್ಲಿಯೇ ಇತ್ತೀಚೆಗಷ್ಟೇ ಮೆಕ್ಯಾನಿಕ್ ಒಬ್ಬರ ಎಲೆಕ್ಟ್ರಿಕ್ ಜೀಪ್ ನಿರ್ಮಿಸಿದ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿ ಇದೀಗ ಮಹೀಂದ್ರಾದ ಇಂಜಿನಿಯರಿಂಗ್ ಮುಖ್ಯಸ್ಥರು ಆ ಮೆಕ್ಯಾನಿಕ್ ಅನ್ನು ಸಂಪರ್ಕಿಸಿ ಕೆಲಸ ಕೊಡುವ ಹಂತಕ್ಕೆ ತಲುಪಿದೆ.

ಮನೆಯಲ್ಲೇ 4WD ಎಲೆಕ್ಟ್ರಿಕ್ ಜೀಪ್ ತಯಾರಿ: ಹಳ್ಳಿ ಪ್ರತಿಭೆಗೆ ಕೆಲಸ ಕೊಡಲು ರೆಡಿ ಎಂದ ಮಹೀಂದ್ರಾ

ಈ ಆವಿಷ್ಕಾರದ ಹಿಂದಿನ ವ್ಯಕ್ತಿಯ ಹೆಸರು ಗೌತಮ್, ಈತ ಹಳೆಯ ಕೆಟ್ಟುನಿಂತ ಜೀಪ್‌ವೊಂದನ್ನು ಎಲೆಕ್ಟ್ರಿಕ್ ಜೀಪ್ ಆಗಿ ಪರಿವರ್ತಿಸಿ ಮುಂಭಾಗದ ಚಕ್ರ ಮತ್ತು ಹಿಂದಿನ ಚಕ್ರವನ್ನು ಪ್ರತ್ಯೇಕವಾಗಿ ನಿಯಂತ್ರಿಸುವಂತೆ ಮೋಟಾರ್ ಅಳವಡಿಸಿದ್ದಾನೆ. ಈ ಬಗ್ಗೆ ತನ್ನ ವಿಡಿಯೋದಲ್ಲಿ ವಿವರಿಸಿ ಟ್ವಿಟ್ಟರ್‌ನಲ್ಲಿ ಮಹೀಂದ್ರಾ ಅವರನ್ನು ಟ್ಯಾಗ್ ಮಾಡಿದ್ದಾನೆ.

ಮನೆಯಲ್ಲೇ 4WD ಎಲೆಕ್ಟ್ರಿಕ್ ಜೀಪ್ ತಯಾರಿ: ಹಳ್ಳಿ ಪ್ರತಿಭೆಗೆ ಕೆಲಸ ಕೊಡಲು ರೆಡಿ ಎಂದ ಮಹೀಂದ್ರಾ

ದಯವಿಟ್ಟು ನನಗೆ ಕೆಲಸ ಕೊಡಿ ಸರ್" ಎಂದು ಆನಂದ್ ಮಹೀಂದ್ರಾ ಅವರನ್ನು ಕೇಳಿಕೊಂಡಿದ್ದಾನೆ. ವೀಡಿಯೊವನ್ನು ನೋಡಿದ ಮಹೀಂದ್ರಾ ಅವರು, "ಇದಕ್ಕಾಗಿಯೇ ಭಾರತವು ಇವಿಗಳಲ್ಲಿ ಮುಂಚೂಣಿಯಲ್ಲಿದೆ ಎಂದು ನನಗೆ ಮನವರಿಕೆಯಾಗಿದೆ. ಕಾರುಗಳು ಮತ್ತು ತಂತ್ರಜ್ಞಾನದ ಬಗ್ಗೆ ಜನರ ಉತ್ಸಾಹ ಮತ್ತು ಗ್ಯಾರೇಜ್ 'ಟಿಂಕರಿಂಗ್' ಮೂಲಕ ಅವರ ನಾವೀನ್ಯತೆಯಿಂದಾಗಿ ಅಮೆರಿಕವು ಆಟೋಮೊಬೈಲ್‌ಗಳಲ್ಲಿ ಪ್ರಾಬಲ್ಯ ಸಾಧಿಸಿದೆ ಎಂದು ನಾನು ನಂಬುತ್ತೇನೆ. ಹಾಗಾಗಿ ಗೌತಮ್ ಅವರೊಂದಿಗೆ ಸಂಪರ್ಕ ಸಾಧಿಸಲು ಮಹೀಂದ್ರಾ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಆರ್ ವೇಲುಸಾಮಿ ಅವರಿಗೆ ಹೆಳಿದ್ದಾರೆ.

ಮನೆಯಲ್ಲೇ 4WD ಎಲೆಕ್ಟ್ರಿಕ್ ಜೀಪ್ ತಯಾರಿ: ಹಳ್ಳಿ ಪ್ರತಿಭೆಗೆ ಕೆಲಸ ಕೊಡಲು ರೆಡಿ ಎಂದ ಮಹೀಂದ್ರಾ

ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಗೌತಮ್ ಎಲೆಕ್ಟ್ರಿಕ್ ಜೀಪ್‌ನಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಬಹುದು. ಇದರಲ್ಲಿ ಕಾರಿನ ಸಂಪೂರ್ಣ ತಯಾರಿ ಪ್ರಕ್ರಿಯೆಯನ್ನು ತೋರಿಸುವುದಿಲ್ಲ ಆದರೆ, ಅವರು ಮೊದಲಿನಿಂದ ಪೂರ್ಣ ಗಾತ್ರದ ಎಲೆಕ್ಟ್ರಿಕ್ ಜೀಪ್ ಅನ್ನು ನಿರ್ಮಿಸಿರುವುದು ಕಂಡುಬರುತ್ತದೆ.

ಮನೆಯಲ್ಲೇ 4WD ಎಲೆಕ್ಟ್ರಿಕ್ ಜೀಪ್ ತಯಾರಿ: ಹಳ್ಳಿ ಪ್ರತಿಭೆಗೆ ಕೆಲಸ ಕೊಡಲು ರೆಡಿ ಎಂದ ಮಹೀಂದ್ರಾ

ಈ ಎಲೆಕ್ಟ್ರಿಕ್ ಜೀಪ್‌ನ ಪ್ರಮುಖ ಆಕರ್ಷಣೆಯೆಂದರೆ ಇದು 4WD ಜೀಪ್ ಮತ್ತು ಜೀಪ್‌ನ ಮುಂಭಾಗ ಮತ್ತು ಹಿಂಭಾಗದ ಚಕ್ರಗಳನ್ನು ಪ್ರತ್ಯೇಕವಾಗಿ ನಿಯಂತ್ರಿಸುವುದಾಗಿದೆ. ಅದೇ ವೈಶಿಷ್ಟ್ಯವನ್ನು ಈ ವೀಡಿಯೊದಲ್ಲೂ ಪ್ರದರ್ಶಿಸಲಾಗಿದೆ. ವೀಡಿಯೊದಲ್ಲಿ ಗೌತಮ್ ಫ್ರಂಟ್ ವೀಲ್ ಡ್ರೈವ್‌ನಲ್ಲಿ ಕಾರನ್ನು ಪ್ರಾರಂಭಿಸಿ ಸ್ವಲ್ಪ ಸಮಯದ ನಂತರ, ಆತ 4WD ಗೆ ಬದಲಾಯಿಸುವುದನ್ನು ನೋಡಬಹುದು.

ಮನೆಯಲ್ಲೇ 4WD ಎಲೆಕ್ಟ್ರಿಕ್ ಜೀಪ್ ತಯಾರಿ: ಹಳ್ಳಿ ಪ್ರತಿಭೆಗೆ ಕೆಲಸ ಕೊಡಲು ರೆಡಿ ಎಂದ ಮಹೀಂದ್ರಾ

ಗೌತಮ್ ತಯಾರಿಸಿದ ಜೀಪ್‌ನ ತಾಂತ್ರಿಕ ವಿವರಣೆಯನ್ನು ಅವರ ಟ್ವೀಟ್‌ನಲ್ಲಿ ಉಲ್ಲೇಖಿಸಿಲ್ಲ. ಈ ಎಸ್‌ಯುವಿ ತುಂಬಾ ವಿಶಾಲವಾಗಿ ಕಾಣುತ್ತಿದ್ದು, ಕ್ಲಾಸಿಕ್ ಮಹೀಂದ್ರಾ ಜೀಪ್ ವಿನ್ಯಾಸವನ್ನು ಹೊಂದಿದೆ. ಈ ಜೀಪ್ 4WD ವ್ಯವಸ್ಥೆಯನ್ನು ಪಡೆಯುವುದರಿಂದ, ಸರಿಯಾದ ಮಾರ್ಪಾಡುಗಳೊಂದಿಗೆ ಸುಲಭವಾಗಿ ಆಫ್-ರೋಡಿಂಗ್ ಮಾಡಬಹುದು.

ಮನೆಯಲ್ಲೇ 4WD ಎಲೆಕ್ಟ್ರಿಕ್ ಜೀಪ್ ತಯಾರಿ: ಹಳ್ಳಿ ಪ್ರತಿಭೆಗೆ ಕೆಲಸ ಕೊಡಲು ರೆಡಿ ಎಂದ ಮಹೀಂದ್ರಾ

ಇದು ಓಪನ್ ಟಾಪ್ ಜೀಪ್ ಆಗಿದ್ದು, ಗೌತಮ್ ಜೀಪ್ ಅನ್ನು ಕಿರಿದಾದ ರಸ್ತೆಗಳ ಮೂಲಕ ವೀಡಿಯೊ ಕ್ಲಿಪ್‌ನ ಕೊನೆಯಲ್ಲಿ ಓಡಿಸುವುದನ್ನು ಕಾಣಬಹುದು. ಗೌತಮ್ ಹೆಚ್ಚುವರಿಯಾಗಿ ಜೀಪ್‌ನಲ್ಲಿ ಎರಡು ಮೋಟಾರ್‌ಗಳನ್ನು ಹೊಂದಿಸಿದ್ದಾನೆ, ಒಂದು ಮುಂಭಾಗದ ಚಕ್ರಗಳಿಗೆ ಮತ್ತು ಇನ್ನೊಂದು ಹಿಂಭಾಗಕ್ಕೆ ಅಳವಡಿಸಿದ್ದಾನೆ. ಆತ ಡ್ಯಾಶ್‌ಬೋರ್ಡ್‌ನಲ್ಲಿನ ಸ್ವಿಚ್ ಅನ್ನು ಬಳಸಿಕೊಂಡು ಹಿಂದಿನ ಮೋಟರ್‌ಗೆ ಪವರ್ ಸಪ್ಲೈ ಸಕ್ರಿಯಗೊಳಿಸುವಂತೆ ಡಿಸೈನ್ ಮಾಡಿದ್ದಾನೆ.

ಮನೆಯಲ್ಲೇ 4WD ಎಲೆಕ್ಟ್ರಿಕ್ ಜೀಪ್ ತಯಾರಿ: ಹಳ್ಳಿ ಪ್ರತಿಭೆಗೆ ಕೆಲಸ ಕೊಡಲು ರೆಡಿ ಎಂದ ಮಹೀಂದ್ರಾ

ಭಾರತದಲ್ಲಿ ಎಲೆಕ್ಟ್ರಿಕ್ ಜೀಪ್ ನಿರ್ಮಿಸುತ್ತಿರುವುದನ್ನು ನಾವು ನೋಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ನಿರ್ಮಿಸಲಾದ ಹೆಚ್ಚಿನ ಎಲೆಕ್ಟ್ರಿಕ್ ಜೀಪ್‌ಗಳು ಮಕ್ಕಳಿಗಾಗಿ ಮೀಸಲಾದ ಆವೃತ್ತಿಗಳಾಗಿವೆ, ಅಲ್ಲದೇ ಅವು 2WD ಆವೃತ್ತಿಗಳಾಗಿವೆ. ಕೇರಳದ ರಾಕೇಶ್ ಬಾಬು ಎಂಬಾತ ತಮ್ಮ ಕಾರ್ಯಾಗಾರದಲ್ಲಿ ಫೋಕ್ಸ್‌ವ್ಯಾಗನ್ ಬೀಟಲ್‌ನ ಮಿನಿಯೇಚರ್ ಆವೃತ್ತಿಯನ್ನು ನಿರ್ಮಿಸಿ ಅಂತರ್ಜಾಲದಲ್ಲಿ ಜನಪ್ರಿಯವಾಗಿದ್ದರು.

ಮನೆಯಲ್ಲೇ 4WD ಎಲೆಕ್ಟ್ರಿಕ್ ಜೀಪ್ ತಯಾರಿ: ಹಳ್ಳಿ ಪ್ರತಿಭೆಗೆ ಕೆಲಸ ಕೊಡಲು ರೆಡಿ ಎಂದ ಮಹೀಂದ್ರಾ

ಮಿನಿಯೇಚರ್ ಬೀಟಲ್ ನಂತರ, ಅವರು ಮಿನಿಯೇಚರ್ ಯಮಹಾ RX100, ಮಹೀಂದ್ರಾ ಜೀಪ್‌ನ ಮಿನಿಯೇಚರ್ ಎಲೆಕ್ಟ್ರಿಕ್ ಆವೃತ್ತಿ ಮತ್ತು ಇನ್ನೂ ಹಲವನ್ನು ನಿರ್ಮಿಸಿದ್ದರು. ಇವು ಮಕ್ಕಳಿಗಾಗಿ ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿರುವ ಶೆಲ್ಬಿ ಮಿನಿಯೇಚರ್ ಆವೃತ್ತಿಯನ್ನು ಸಹ ನಿರ್ಮಿಸಿದ್ದರು.

ಮನೆಯಲ್ಲೇ 4WD ಎಲೆಕ್ಟ್ರಿಕ್ ಜೀಪ್ ತಯಾರಿ: ಹಳ್ಳಿ ಪ್ರತಿಭೆಗೆ ಕೆಲಸ ಕೊಡಲು ರೆಡಿ ಎಂದ ಮಹೀಂದ್ರಾ

ಇನ್ನು ಆನಂದ್ ಮಹೀಂದ್ರಾ ಅವರ ವಿಷಯಕ್ಕೆ ಬಂದರೆ, ಈ ಹಿಂದೆ ಇದೇ ರೀತಿಯ ಫಾರ್ಮುಲಾ 1 ಕಾರಿನಂತೆ ಹೊಸ ವಿನ್ಯಾಸದ ಸಣ್ಣ ಕಾರೊಂದನ್ನು ವ್ಯಕ್ತಿಯೊಬ್ಬ ಹಾಲಿನ ಕಂಟೈನರ್‌ಗಳನ್ನು ಸಾಗಿಸಲು ತಾಯಾರಿಸಿದ್ದ. ಈ ವಿಡಿಯೋವನ್ನು ಕಂಡು ಮಹೀಂದ್ರಾ ಅವರು ಫಿದಾ ಆಗಿದ್ದರು. ಸ್ವತಃ ಮಹೀಂದ್ರಾ ಅವರೇ ವಿಡಿಯೋವನ್ನು ಹಂಚಿಕೊಂಡಿದ್ದರು.

ಮನೆಯಲ್ಲೇ 4WD ಎಲೆಕ್ಟ್ರಿಕ್ ಜೀಪ್ ತಯಾರಿ: ಹಳ್ಳಿ ಪ್ರತಿಭೆಗೆ ಕೆಲಸ ಕೊಡಲು ರೆಡಿ ಎಂದ ಮಹೀಂದ್ರಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ದೇಶದಲ್ಲಿ ಹಲವು ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗದೇ ಕತ್ತಲಲ್ಲೇ ಉಳಿಯುತ್ತಿದ್ದಾರೆ. ಇಂದಿನ ಟೆಕ್ನಾಲಜಿ ಯುಗದಲ್ಲಿ ಪ್ರತಿಭೆಗಳು ಮುನ್ನಲೆಗೆ ಬರುವುದು ತುಂಬಾ ಸುಲಭ. ಯಾವುದೇ ವ್ಯಕ್ತಿಗೆ ಟ್ಯಾಲೆಂಟ್ ಇದ್ದರೇ ಸಾಮಾಜಿಕ ಜಾಲತಾಣದ ಮೂಲಕ ತಮ್ಮನ್ನು ತಾವು ಗುರ್ತಿಸಿಕೊಳ್ಳುವಂತೆ ಮಾಡಿಕೊಳ್ಳಬಹುದು. ಇನ್ನು ಎಲೆಕ್ಟ್ರಿಕ್ ಜೀಪ್ ತಯಾರಿಸಿದ ಗೌತಮ್ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಆವಿಷ್ಕಾರಗಳನ್ನು ಮಾಡಬೇಕು.

Most Read Articles

Kannada
English summary
Preparation of 4WD electric jeep at home Anand Mahidra says he is ready to give work to village tale
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X