ಖಾಸಗಿ ಜೆಟ್ ಖರೀದಿಸುವವರಿಗೆ ಸಿಗಲಿದೆ ಪೋರ್ಷೆ ಕಂಪನಿಯ ಈ ಕಾರು
ಬ್ರೆಜಿಲ್ ದೇಶದ ಎಂಬ್ರೇರ್ ಏರೋಸ್ಪೇಸ್ ಗ್ರೂಪ್ ಪೋರ್ಷೆ ಕಂಪನಿಯ ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಈ ಸಹಭಾಗಿತ್ವದಡಿಯಲ್ಲಿ ಎಂಬ್ರೇರ್ ಕಂಪನಿಯು ತನ್ನ ಫೆನಮ್ 300 ಇ ಸೀಮಿತ ಆವೃತ್ತಿಯ ಖಾಸಗಿ ಜೆಟ್‌ಗಳನ್ನು ಮಾರಾಟ ಮಾಡಲಿದೆ.

ಎಂಬ್ರೇರ್ ಕಂಪನಿಯ ಈ ಖಾಸಗಿ ಜೆಟ್‌ನ ಬೆಲೆ 10,992,000 ಅಮೆರಿಕನ್ ಡಾಲರ್ ಅಂದರೆ ಸುಮಾರು ರೂ.82 ಕೋಟಿಗಳಾಗಿದೆ. ಪೋರ್ಷೆ ಕಂಪನಿಯ 911 ಟರ್ಬೊ ಎಸ್ ಕಾರನ್ನು ಈ ಖಾಸಗಿ ಜೆಟ್‌ನೊಂದಿಗೆ ಜೋಡಿಸಲಾಗಿದೆ. ಟರ್ಬೋ ಎಸ್ ಕಾರನ್ನು ಈ ಜೆಟ್‌ನೊಂದಿಗೆ ನೀಡಲಾಗುತ್ತದೆ. ಈ ಬೆಲೆ ಖಾಸಗಿ ಜೆಟ್ ಹಾಗೂ ಕಾರನ್ನು ಒಳಗೊಂಡಿದೆ.

ಪೋರ್ಷೆಯ ಈ 911 ಟರ್ಬೊ ಎಸ್ ಕಾರು, ಫಿನೋಮ್ 300 ಇ ಜೆಟ್ ವ್ಯವಹಾರಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಈ ಕಾರು ದುಬಾರಿ ಬೆಲೆಯ ವಿಶೇಷ ಆವೃತ್ತಿಯ ಕಾರ್ ಆಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಜೆಟ್ ಹಾಗೂ ಕಾರಿನ ಜೋಡಿಯನ್ನು ಡ್ಯುಯೆಟ್ ಎಂದು ಹೆಸರಿಸಲಾಗಿದೆ. ಇವುಗಳನ್ನು ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಡ್ಯುಯೆಟ್‌ನ ಕೇವಲ 10 ಯೂನಿಟ್ ಗಳು ಮಾತ್ರ ಮಾರಾಟವಾಗುತ್ತವೆ.

ಇವುಗಳನ್ನು ಎಂಬ್ರೇರ್ ಕಂಪನಿಯ ಕಾರ್ಯನಿರ್ವಾಹಕ ಜೆಟ್ ವಿನ್ಯಾಸ ಹಾಗೂ ಮಾರುಕಟ್ಟೆ ವಿಭಾಗ ಮತ್ತು ಪೋರ್ಷೆ ಕಂಪನಿಯ ಎಕ್ಸ್‌ಕ್ಲೂಸಿವ್ ಮ್ಯಾನುಫ್ಯಾಕ್ಚರ್ ಸ್ಫೂರ್ತಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಎರಡೂ ವಾಹನಗಳಲ್ಲಿ ಡ್ಯುಯೆಟ್ ಲೋಗೋವನ್ನು ಬಳಸಲಾಗಿದೆ. ಎರಡೂ ವಾಹನಗಳ ಒಳಭಾಗದಲ್ಲಿ ಡ್ಯುಯೆಟ್ ಲೋಗೊಗಳನ್ನು ಕಾಣಬಹುದು. ಈ ವಿಶೇಷ 911 ಟರ್ಬೊ ಎಸ್ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರು ಈ ಖಾಸಗಿ ಜೆಟ್‌ಗೆ ಲಿಂಕ್ ಸ್ಥಾಪಿಸುತ್ತದೆ.

ಹೊಸ ತಲೆಮಾರಿನ ಪೋರ್ಷೆ 911 ಟರ್ಬೊ ಎಸ್ ಕಾರು ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಟವಾಗಿದ್ದು, ಆರಾಮದಾಯಕವಾಗಿದೆ. ಪೋರ್ಷೆ ಕಂಪನಿಯು ಈ ಕಾರಿನಲ್ಲಿ ಶಕ್ತಿಶಾಲಿಯಾದ 3.7-ಲೀಟರ್ ಬಾಕ್ಸರ್ ಎಂಜಿನ್ ಅಳವಡಿಸಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಎಂಜಿನ್ 631 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಸಹಭಾಗಿತ್ವದಲ್ಲಿ, ಪೋರ್ಷೆ ಕಂಪನಿಯು ಕೂಪೆಯನ್ನು ಮೊದಲ ಬಾರಿಗೆ ಗ್ಲೋಸ್ ಹಾಗೂ ಸ್ಯಾಟಿನ್-ಗ್ಲೋಸ್ ಬಣ್ಣದಲ್ಲಿ ಬಿಡುಗಡೆಗೊಳಿಸಿದೆ.

ಈ ಸ್ಪೋರ್ಟ್ಸ್ ಕಾರಿನ ಮೇಲ್ಭಾಗವು ಪ್ಲಾಟಿನಂ ಸಿಲ್ವರ್ ಮೆಟಾಲಿಕ್ ಬಣ್ಣವನ್ನು ಹೊಂದಿದ್ದರೆ, ಕೆಳಭಾಗವು ಜೆಟ್ ಗ್ರೇ ಮೆಟಾಲಿಕ್ ಬಣ್ಣವನ್ನು ಹೊಂದಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಕಾರಿನ ಬದಿಗಳಲ್ಲಿ ಹಾಗೂ ಡೋರುಗಳಲ್ಲಿ ಕ್ರೋಮ್ ಹಾಗೂ ಸ್ಪೀಡ್ ಬ್ಲೂ ಬಣ್ಣಗಳನ್ನು ಹೊಂದಿರುವ ಟ್ರಿಮ್ ಸ್ಟ್ರಿಪ್ ಗಳನ್ನು ಕಾಣಬಹುದು. ವಿಶೇಷವೆಂದರೆ ಈ ಕಾರಿನ ಎಲ್ಲಾ ಬಣ್ಣದ ಕೆಲಸಗಳನ್ನು ಕೈಯಿಂದ ಪೂರ್ಣಗೊಳಿಸಲಾಗಿದ್ದು, ಅವುಗಳನ್ನು ಜೆಟ್ ಹೆಂಟ್ ಪೇಂಟ್ ಮೂಲಕ ಮಾಡಲಾಗಿದೆ.


Click it and Unblock the Notifications