ಹಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ಪಿಗ್ಗಿ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?
ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಬಹುಬೇಡಿಕೆಯ ನಟಿಯರ ಸಾಲಿನಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಪಿಗ್ಗಿ ಹತ್ತಾರು ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಒಡತಿ ಕೂಡಾ ಹೌದು.
ತನ್ನ ನಟನಾ ಶೈಲಿಯ ಮೂಲಕ ಬಾಲಿವುಡ್‌ನಲ್ಲಿ ಮನೆಮಾತಾಗಿರುವ ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್‌ನಲ್ಲೂ ಬಹುಬೇಡಿಕೆಯ ನಟಿ ಎಂದ್ರೆ ತಪ್ಪಾಗಲಾರದು. ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಬಹುಬೇಡಿಕೆಯ ನಟಿಯರ ಸಾಲಿನಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಪಿಗ್ಗಿ ಹತ್ತಾರು ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಒಡತಿ ಕೂಡಾ ಹೌದು.

ಬಾಲಿವುಡ್ ನಟ-ನಟಿಯರು ಸಹಜವಾಗಿ ಐಷಾರಾಮಿ ಕಾರು, ಬೈಕ್‌ಗಳನ್ನು ಖರೀದಿಸುವುದು ಕಾಮನ್. ಆದ್ರೆ ಅದ್ಭುತ ನಟನೆಯ ಮೂಲಕ ಅತ್ಯಧಿಕ ಸಂಭಾವನೆ ಪಡೆಯುವ ಪ್ರಿಯಾಂಕಾ ಚೋಪ್ರಾ ಬಳಿ ಇರುವ ಐಷಾರಾಮಿ ಕಾರುಗಳ ಸಂಗ್ರಹ ಇತರೆ ಬಾಲಿವುಡ್ ನಟ-ನಟಿಯರಿಗಿಂತ ಹೆಚ್ಚು ಭಿನ್ನತೆ ಇದೆ ಎನ್ನಬಹುದು.

ಆಪ್ ರೋಡಿಂಗ್ ಕೌಶಲ್ಯದ ಕಾರುಗಲ ಜೊತೆಗೆ ಹೊಸ ಮಾದರಿಯ ಐಷಾರಾಮಿ ಕಾರುಗಳನ್ನು ಖರೀದಿಸಲು ಹೆಚ್ಚು ಆಸಕ್ತಿ ತೊರುವ ಪಿಗ್ಗಿ ಇದುವರೆಗೆ 20ಕ್ಕೂ ಹೆಚ್ಚು ಕಾರುಗಳನ್ನು ಖರೀದಿಸಿದ್ದು, ಅವುಗಳಲ್ಲಿ ಕೆಲವು ಆಯ್ದ ಕಾರುಗಳ ಮಾಹಿತಿಯನ್ನು ನೀಡಲಾಗಿದೆ.

ರೋಲ್ಸ್ ರಾಯ್ಸ್ ಘೊಸ್ಟ್
ಸದ್ಯ ಆಟೋ ಮೊಬೈಲ್ ಜಗತ್ತಿನಲ್ಲೇ ಅತಿ ದುಬಾರಿ ಐಷಾರಾಮಿ ಕಾರು ಎಂದೇ ಖ್ಯಾತಿಯಾಗಿರುವ ರೋಲ್ಸ್ ರಾಯ್ಸ್ ಘೊಸ್ಟ್ ಮಾದರಿಯನ್ನು ಖರೀದಿ ಮಾಡಿರುವ ಬಾಲಿವುಡ್ ನಟಿರಲ್ಲಿ ಪ್ರಿಯಾಂಕಾ ಚೋಪ್ರಾ ಮೊದಲಿಗರಾಗಿದ್ದು, ಈ ಕಾರಿನ ಬೆಲೆಯು ಭಾರತೀಯ ಮಾರುಕಟ್ಟೆಯ ಪ್ರಕಾರ 6 ರಿಂದ 8 ಕೊಟಿಗೂ ಅಧಿಕ ಎಂದು ಹೇಳಬಹುದು.

6.6-ಲೀಟರ್ ಟರ್ಬೋ ಚಾರ್ಜ್ಡ್ ವಿ12 ಎಂಜಿನ್ ಹೊಂದಿರುವ ರೋಲ್ಸ್ ರಾಯ್ಸ್ ಘೊಸ್ಟ್ ಕಾರು 563-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಕೇವಲ 4 ಸೇಕೆಂಡುಗಳಲ್ಲಿ 100 ಕಿಮಿ ವೇಗ ಚಲಿಸಬಲ್ಲದು.

ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್
ರೋಲ್ಸ್ ರಾಯ್ಸ್ ಜೊತೆ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಸಂಗ್ರಹ ಕೂಡಾ ಇದ್ದು, ಇದರ ಬೆಲೆಯು 1.30 ಕೋಟಿ. ಪಿಗ್ಗಿ ತುಂಬಾ ಇಷ್ಟಪಡುವ ಕಾರುಗಳಲ್ಲಿ ಇದು ಕೂಡಾ ಒಂದು.

ಪೋರ್ಷೆ ಕಯೆನಿ ಎಸ್‌ಯುವಿ
ಐಷಾರಾಮಿ ಎಸ್‌ಯುವಿ ಕಾರುಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಪೋರ್ಷೆ ಕಯೆನಿ ಕೂಡಾ ಪ್ರಿಯಾಂಕಾ ಚೋಪ್ರಾ ಬಳಿಯಿದ್ದು, ಇದರ ಬೆಲೆಯು ಸದ್ಯದ ಮಾರುಕಟ್ಟೆಯ ಪ್ರಕಾರ 1 ಕೋಟಿಗೂ ಅಧಿಕ. ಇದು 3.6-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, 300-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮರ್ಸಿಡಿಸ್ ಬೆಂಝ್ ಇ ಕ್ಲಾಸ್
ಎಸ್ ಕ್ಲಾಸ್ ಜೊತೆಗೆ ಇ ಕ್ಲಾಸ್ ಕಾರು ಮಾದರಿಯನ್ನು ಕೂಡಾ ಹೊಂದಿರುವ ಪ್ರಿಯಾಂಕಾ ಚೋಪ್ರಾ, ಸಂದರ್ಭಗಳಿಗೆ ಅನುಗುಣವಾಗಿ ಬೇರೆ ಬೇರೆ ಕಾರುಗಳನ್ನು ಬಳಕೆ ಮಾಡುವುದರಲ್ಲಿ ಜಾಣ್ಮೆ ಹೊಂದಿದ್ದಾರೆ.

ಬಿಎಂಡಬ್ಲ್ಯು 7 ಸೀರಿಸ್
ಸುರಕ್ಷಾ ದೃಷ್ಠಿಯಿಂದ ಬಳಕೆ ಮಾಡಬಹುದಾದ ಕಾರು ಮಾದರಿಗಳಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಸಾಕಷ್ಟು ಜನಪ್ರಿಯತೆ ಹೊಂದಿದ್ದು, ಈ ನಿಟ್ಟಿನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಕೂಡಾ 7 ಸೀರಿಸ್ ಮಾದರಿಯನ್ನು ಖರೀದಿ ಮಾಡಿದ್ದಾರೆ. ಇದರ ಬೆಲೆ 2 ಕೋಟಿಗೂ ಅಧಿಕವಿದ್ದು, ತುರ್ತುಪರಿಸ್ಥಿತಿಗಳಲ್ಲಿ ಪಾರಾಗಲು ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವುದೇ ಇದರ ವಿಶೇಷ.

ಹಾರ್ಲೆ ಡೇವಿಡ್ಸನ್
ಕೇವಲ ಐಷಾರಾಮಿ ಕಾರುಗಳ ಸಂಗ್ರಹವಷ್ಟೇ ಅಲ್ಲದೇ ಐಷಾರಾಮಿ ಬೈಕ್‍ಗಳ ಸಂಗ್ರವು ಪಿಗ್ಗಿ ಬಳಿಯಿದ್ದು, ಇದಕ್ಕಾಗಿಯೇ ಪ್ರತ್ಯೇಕ ಗ್ಯಾರೇಜ್ ಒಂದನ್ನು ಹೊಂದಿದ್ದಾರೆ. ಜೊತೆಗೆ ಆಪ್ ರೋಡಿಂಗ್ ಕೌಲಶ್ಯ ಪ್ರದರ್ಶನ ಮಾಡಬಹುದಾದ ಇನ್ನು ಹಲವು ಸ್ಪೋರ್ಟ್ ಕಾರು ಮತ್ತು ಬೈಕ್‌ಗಳು ಪಿಗ್ಗಿ ಲಗ್ಷುರಿ ಕಲೆಕ್ಷನ್‌ನಲ್ಲಿ ಸ್ಥಾನ ಪಡೆದಿವೆ.


Click it and Unblock the Notifications








