ಸಿಸಿಟಿಯಲ್ಲಿ ಸೆರೆಯಾಯ್ತು ಪೆಟ್ರೋಲ್ ಬಂಕ್ ಶೂಟೌಟ್
ಆಘಾತಕಾರಿ ಘಟನೆಯೊಂದರಲ್ಲಿ ಪೆಟ್ರೋಲ್ ಬಂಕ್ ನಲ್ಲಿ ನಡೆದ ಸಿನೆಮಾ ಶೈಲಿಯ ಶೂಟೌಟ್ ಪ್ರಕರಣದಿಂದಾಗಿ ವ್ಯಕ್ತಿಯೋರ್ವ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
Also Read: ಮಲೇಷ್ಯಾದಲ್ಲಿ ಭೀಕರ ಬೈಕ್ ಅಪಘಾತ
ಗುರ್ಗಾಂವ್‌ನ ಪೆಟ್ರೋಲ್ ಸ್ಟೇಷನ್‌ನಿಂದ ವರದಿಯಾಗಿದ್ದು, ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಅಲ್ಲಿ ಆಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜಮೀನು ವ್ಯಾಪಾರಿ 32ರ ಹರೆಯದ ರಾಜ್ ಕುಮಾರ್ ಸೇತಿ ಅಲಿಯಾಸ್ ರಾಜು ಎಂಬವರೇ ಮೃತಪಟ್ಟ ವ್ಯಕ್ತಿ ಎಂಬುದು ತಿಳಿದು ಬಂದಿದೆ.

ನವೆಂಬರ್ 11ರಂದು ಮಂಗಳವಾರ ರಾತ್ರಿ ಪೆಟ್ರೋಲ್ ಬಂಕ್‌ಗೆ ಆಗಮಿಸಿದ್ದ ರಾಜ್ ಕುಮಾರ್ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು.

ಗುರ್ಗಾಂವ್ ಸೆಕ್ಟರ್ ಐದರ ಪಾಲಂ ವಿಹಾರ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ಗೆ ಏಕಾಏಕಿ ದಾಳಿಯನ್ನಿಟ್ಟಿದ್ದ ಬಂಧೂಕುಧಾರಿಗಳು ಸೇತಿ ಅವರನ್ನು ಹಿಂಬಾಲಿಸುತ್ತಾ ಗುಂಡಿನ ದಾಳಿ ನಡೆಸಿದ್ದರು.

ಪರಿಣಾಮ ರಾಜ್ ಕುಮಾರ್ ಸೇತಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಎಲ್ಲ ಹೃದಯ ವಿದ್ರಾವಕ ಘಟನೆಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಜ್ ಕುಮಾರ್ ಸೇತಿ ಜೊತೆಗಿದ್ದ ಸೋದರನ ಹೇಳಿಕೆಯ ಪ್ರಕಾರ, ಪೆಟ್ರೋಲ್ ಬಂಕ್ ಮಾಲಿಕನಿಗೆ ದೀಪಾವಳಿ ಗಿಫ್ಟ್ ನೀಡಲು ಆಗಮಿಸಿದ ವೇಳೆ ಆಕ್ರಮಣ ನಡೆದಿದೆ ಎಂದಿದ್ದಾರೆ.
ವೀಕ್ಷಿಸಿ ರೋಚಕ ವಿಡಿಯೋ


Click it and Unblock the Notifications








