ಹೆದ್ದಾರಿಯಲ್ಲಿ ಹೊತ್ತಿ ಉರಿದ 'ಪಂಚ್' ಕಾರು: ಟಾಟಾದಿಂದ ಅಧಿಕೃತ ಹೇಳಿಕೆ

ಗುಜರಾತ್‌ನಲ್ಲಿ ಟಾಟಾದ ಪಂಚ್ ಎಸ್‌ಯುವಿ ಹೆದ್ದಾರಿ ಮಧ್ಯದಲ್ಲೇ ಹೊತ್ತಿ ಉರಿಯುವ ಮೂಲಕ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ತಿಂಗಳ ಹಿಂದೆಯಷ್ಟೇ ಈ ಕಾರನ್ನು ಖರೀದಿಸಿದ್ದ ವ್ಯಕ್ತಿ ಹಾಗೂ ಆತನ ಕುಟುಂಬ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಬಚಾವ್ ಆಗಿದೆ. ಈ ಘಟನೆ ಬಗ್ಗೆ ಟಾಟಾ ಮೋಟಾರ್ಸ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

'ಈ ದುರ್ಘಟನೆಯಲ್ಲಿ ಯಾವುದೇ ಹಾನಿಯಾಗದೇ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದು, ಗ್ರಾಹಕ ಹಾಗೂ ತನಿಖೆ ಸಂಸ್ಥೆಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು. ಜೊತೆಗೆ ಘಟನೆಗೆ ಕಾರಣ, ಅದರ ಸತ್ಯಸತ್ಯತೆ ತಿಳಿಯಲು ಪ್ರಯತ್ನಿಸುತ್ತವೆ. ನಮ್ಮ ವಾಹನಗಳು ಮತ್ತು ಅದರ ಬಳಕೆದಾರರ ಸುರಕ್ಷತೆಯು ಯಾವಾಗಲು ನಮ್ಮ ಮೊದಲ ಆದ್ಯತೆಯಾಗಿದೆ' ಎಂದು ಟಾಟಾ ಮೋಟಾರ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹೆದ್ದಾರಿಯಲ್ಲಿ ಹೊತ್ತಿ ಉರಿದ ಪಂಚ್ ಕಾರು: ಟಾಟಾದಿಂದ ಅಧಿಕೃತ ಹೇಳಿಕೆ

ಘಟನೆಯ ಹಿನ್ನೆಲೆ ನೋಡುವುದಾದರೆ, ಒಂದು ತಿಂಗಳ ಹಿಂದೆಯಷ್ಟೇ ಖರೀದಿಸಿದ್ದ ಹೊಚ್ಚ ಹೊಸ ಟಾಟಾ ಪಂಚ್ ಎಸ್‌ಯುವಿಯಲ್ಲಿ ಕುಟುಂಬವೊಂದು ಗುಜರಾತ್‌ ರಾಜ್ಯದ ಹೆದ್ದಾರಿಯೊಂದರಲ್ಲಿ ತೆರಳಬೇಕಾದರೆ, ಇದಕ್ಕಿದಂತೆ ಬೆಂಕಿ ಕಾಣಿಸಿಕೊಳ್ಳುತ್ತದೆ. ಪರಿಣಾಮ ಮಾಲೀಕ ಹಾಗೂ ಆತನ ಕುಟುಂಬಸ್ಥರು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕಾರು, ಬೆಂಕಿಯಲ್ಲಿ ಹೊತ್ತಿ ಉರಿದ ವಿಡಿಯೋ ಹಾಗೂ ಫೋಟೋಗಳು ಭಾರೀ ವೈರಲ್ ಆಗಿದ್ದವು.

ಪಂಚ್ ಮುಂಭಾಗದಲ್ಲಿ ಕಾಣಿಸಿಕೊಂಡ ಬೆಂಕಿ, ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ಕಾರನ್ನು ಆವರಿಸಿತು. ಅಗ್ನಿ ನಂದಿಸುವಲ್ಲಿ ಸಂಪೂರ್ಣ ಭಸ್ಮವಾಯಿತು ಎಂದು ಮಾಲೀಕ ಪ್ರಬಲ್ ಬೋರ್ಡಿಯಾ ತಿಳಿಸಿದ್ದರು. ಈ ಸಂಬಂಧ ಪ್ರಕರಣವನ್ನು ದಾಖಲಿಸಲಾಗುವುದು. ಇಂತಹ ಘಟನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮಾಡಿಸಬೇಕು. ಕಂಪನಿಯು ಆದಷ್ಟು ಬೇಗ ಉತ್ತರಿಸಲಿ ಎಂದು ಹೇಳಿದ್ದರು. ಕೆಲವೇ ಗಂಟೆಗಳಲ್ಲಿ ಈ ದುರ್ಘಟನೆಯು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಹೆದ್ದಾರಿಯಲ್ಲಿ ಹೊತ್ತಿ ಉರಿದ ಪಂಚ್ ಕಾರು: ಟಾಟಾದಿಂದ ಅಧಿಕೃತ ಹೇಳಿಕೆ

ಟಾಟಾದ ಪಂಚ್ ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಎಸ್‌ಯುವಿಯಾಗಿದೆ. ಆಕರ್ಷಕ ವಿನ್ಯಾಸದಿಂದ ಪ್ರತಿಯೊಬ್ಬ ಗ್ರಾಹಕರನ್ನು ಸೆಳೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಜೊತೆಗೆ ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯಾಧುನಿಕವಾಗಿದ್ದು, ಗ್ಲೋಬಲ್ NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿರುವುದು ವಿಶೇಷವಾಗಿದೆ. ಆದರೆ, ಅಗ್ನಿ ಅವಘಡಕ್ಕೆ ತುತ್ತಾಗಿರುವುದು ದುರದೃಷ್ಟವೇ ಸರಿ ಎನ್ನಲಾಗಿದೆ.

ಈ ಪಂಚ್ ಕಾರಿನ ಕುರಿತಂತೆ ಮತ್ತಷ್ಟು ವಿಚಾರಗಳ ಬಗ್ಗೆ ಮಾತನಾಡುವುದಾದರೆ, ಇದ್ದು, 5 ಆಸನಗಳ ಆಯ್ಕೆ ವ್ಯವಸ್ಥೆ ಹೊಂದಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್, 86 PS ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಡಿಫಾಗರ್ಸ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಹಾಗೂ ರೇರ್ ವ್ಯೂ ಕ್ಯಾಮೆರಾ ಪಡೆದಿದೆ.

ಏನೇ ಆಗಲಿ, ಟಾಟಾ ಪಂಚ್ ಕಾರು ಹೊತ್ತಿ ಉರಿಯುವ ಮೂಲಕ ಭಾರೀ ಸುದ್ದಿಯಾಗಿತ್ತು. ಇದೀಗ, ಕಂಪನಿಯು ಅಧಿಕೃತ ಹೇಳಿಕೆ ನೀಡಿದ್ದು, ತನಿಖೆಯಿಂದ ಘಟನೆ ಕುರಿತಂತೆ ಸತ್ಯ ಸತ್ಯತೆ ತಿಳಿಯಲಿದೆ. ಆವರೆಗೆ ಈ ಪ್ರಕರಣ ಸಂಬಂಧ ಹಲವಾರು ಮಂದಿ ತಮಗೆ ತೋಚಿದ ಹೇಳಿಕೆಯನ್ನು ನೀಡಬಹುದು. ಆದರೆ, ಅವೆಲ್ಲವೂ ಉಹಾಪೋಹಗಳಷ್ಟೇ. ಕೆಲವೇ ದಿನಗಳಲ್ಲಿ ಎಲ್ಲ ಮಾಹಿತಿ ಹೊರಬರಲಿದ್ದು, ಅಲ್ಲಿಯವರೆಗೆ ಕಾಯಬೇಕು.

ವಾಹನಗಳಲ್ಲಿ ಬೆಂಕಿ ಅವಘಡಗಳು ನಡೆದಾಗ ತೆಗೆದುಕೊಳ್ಳಬೇಕಾದ ಮುನ್ನೆಚರಿಕೆಗಳೇನು: ಮೊದಲಿಗೆ ಇಗ್ನಿಷನ್ ಆಫ್ ಮಾಡಬೇಕು. ತಕ್ಷಣ ಕಾರಿನಿಂದ ಇಳಿದು ದೂರ ಹೋಗಿ, ಸಣ್ಣ ಪ್ರಮಾಣದಲ್ಲಿ ಬೆಂಕಿಯ ಜ್ವಾಲೆ ಇದ್ದರೆ, ನಿಮ್ಮ ವಾಹನದಲ್ಲಿರುವ ಅಗ್ನಿ ನಿರೋಧಕ ಸಾಧನ(fire extinguisher)ದಲ್ಲಿ ಅದನ್ನು ನಂದಿಸಲು ಪ್ರಯತ್ನಿಸಿ, ಇಲ್ಲವೇ ತಕ್ಷಣ ಅಗ್ನಿಶಾಮಕ/ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಬಾನೆಟ್ ಹಾಗೂ ಬೂಟ್ ತೆರೆಯಬೇಡಿ. ಸಂಬಂಧಿಸಿದ ಸರ್ವಿಸ್ ಸೆಂಟರ್/ ವಿಮಾ ಕಂಪನಿಯನ್ನು ಸಂಪರ್ಕಿಸಿರಿ.

Article Published On: Tuesday, April 4, 2023, 13:30 [IST]
English summary
Punch car caught fire on highway official statement from tata details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+