ಬಯೋ-ಸಿಎನ್‌ಜಿ ಮೂಲಕ ಚಲಿಸಲಿವೆ ಈ ಸಾರಿಗೆ ಸಂಸ್ಥೆಯ ಬಸ್ಸುಗಳು
ಭಾರತದ ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರವು ಹೆಚ್ಚಾಗಿರುವ ಕಾರಣಕ್ಕೆ ವಾಯುಮಾಲಿನ್ಯದ ಸಮಸ್ಯೆ ಹೆಚ್ಚಾಗಿದೆ. ಈ ಕಾರಣಕ್ಕೆ ಪೆಟ್ರೋಲ್, ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಸಿಎನ್‌ಜಿ ವಾಹನಗಳ ಬಳಕೆಯೂ ಹೆಚ್ಚುತ್ತಿದೆ. ಅದರಲ್ಲೂ ಸಿಎನ್‌ಜಿ ಆಧಾರಿತ ಬಸ್‌ಗಳ ಸಂಚಾರಕ್ಕೆ ಸರ್ಕಾರವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಹೆಚ್ಚಿನ ಸಂಖ್ಯೆಯ ಬಯೋ-ಸಿಎನ್‌ಜಿ ಬಸ್‌ಗಳು ಸಂಚಾರ ನಡೆಸಲಿವೆ.

ಅಕ್ಟೋಬರ್ 20ರಿಂದ ಪುಣೆಯಲ್ಲಿ 20 ಬಸ್ಸುಗಳು ಬಯೋ-ಸಿಎನ್‌ಜಿಯೊಂದಿಗೆ ಸಂಚಾರ ನಡೆಸಲಿವೆ ಎಂದು ಘೋಷಿಸಲಾಗಿದೆ. ಈ ಇಂಧನವನ್ನು ವಿವಿಧ ರೆಸ್ಟೋರೆಂಟ್‌ಗಳಿಂದ ಸಂಗ್ರಹಿಸಿದ ಆಹಾರ ತ್ಯಾಜ್ಯದಿಂದ ತಯಾರಿಸಲಾಗಿದೆ ಎಂಬುದು ಗಮನಾರ್ಹ.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಸರ್ಕಾರದ ಈ ಕ್ರಮಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಪುಣೆಯ ಪಿಎಂಪಿಎಂಎಲ್ (ಪುಣೆ ಮಹಾನಗರ ಪರಿವಾಹನ್ ಮಹಮಂಡಲ್ ಲಿಮಿಟೆಡ್) ಕಂಪನಿಯ 20 ಬಸ್ಸುಗಳನ್ನು ಬಯೋ-ಸಿಎನ್ ಜಿ ಇಂಧನದ ಮೂಲಕ ಚಾಲನೆ ಮಾಡಲಾಗುವುದು.

ಪಿಎಂಪಿಎಂಎಲ್ ಪುಣೆ ಮೂಲದ ಸಾರಿಗೆ ಸಂಸ್ಥೆಯಾಗಿದೆ. ಸಿಎನ್‌ಜಿ ಹಾಗೂ ಬಯೋ-ಸಿಎನ್‌ಜಿ ಎರಡೂ ಬೇರೆ ಬೇರೆಯಾಗಿವೆ ಎಂಬುದು ಗಮನಾರ್ಹ. ಇದನ್ನು ಸಿಪಿಜಿ (ಸಂಕುಚಿತ ಜೈವಿಕ ಅನಿಲ) ಎಂದೂ ಕರೆಯಲಾಗುತ್ತದೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಬಯೋ-ಸಿಎನ್‌ಜಿ ಮೂಲಕ ಬಸ್‌ಗಳನ್ನು ಚಾಲನೆ ಮಾಡುವ ಪರೀಕ್ಷೆಗಳು ಈಗಾಗಲೇ ಪೂರ್ಣಗೊಂಡಿದೆ. ಈ ಇಂಧನವನ್ನು ಇಂಡಿಯನ್ ಆಯಿಲ್ ಪೂರೈಸಲಿದೆ ಎಂದು ಪಿಎಂಪಿಎಂಎಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಪುಣೆಯ ತಲೆಗಾಂವ್ ಪ್ರದೇಶದಲ್ಲಿ ಜೈವಿಕ ಸಿಎನ್‌ಜಿ ಇಂಧನ ತುಂಬುವ ಕೇಂದ್ರವಿದೆ. ಪಿಎಂಪಿಎಂಎಲ್‌ನ ಪೊಸಾರಿ ಡಿಪೋದಿಂದ ತಲೆಗಾಂವ್‌ಗೆ ಹೋಗುವ ಬಸ್‌ಗಳು ಈ ಇಂಧನದ ಮೂಲಕ ಚಲಿಸುತ್ತವೆ. ನಿಕಿಟಿಯ ಬಳಿ ಮತ್ತೊಂದು ಪೆಟ್ರೋಲ್ ಬಂಕ್ ಇನ್ನು ಮೂರು ತಿಂಗಳಲ್ಲಿ ಕಾರ್ಯನಿರ್ವಹಿಸಲಿದೆ. ಪರಿಸರ ಸ್ನೇಹಿ ಪರ್ಯಾಯ ಇಂಧನಗಳನ್ನು ಬಳಸಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬಯೋ-ಸಿಎನ್‌ಜಿ ಬಳಸಿ ಬಸ್‌ಗಳನ್ನು 2 ಬಾರಿ ಪರೀಕ್ಷೆ ಮಾಡಲಾಗಿದೆ. ಮುಂದಿನ ಜನವರಿಯೊಳಗೆ ಒಟ್ಟು 100 ಬಸ್ಸುಗಳು ಈ ಪರ್ಯಾಯ ಇಂಧನದ ಮೂಲಕ ಚಲಿಸುವ ಸಾಧ್ಯತೆಗಳಿವೆ. ಈ ಬಸ್ಸುಗಳು ಸಾಮಾನ್ಯ ಸಿಎನ್‌ಜಿಗೆ ಬದಲಾಗಿ ಬಯೋ ಸಿಎನ್‌ಜಿಯಲ್ಲಿ ಚಲಿಸಲಿವೆ.

ಸಿಎನ್‌ಜಿ ಹಾಗೂ ಬಯೋ-ಸಿಎನ್‌ಜಿ ಇಂಧನಗಳ ಬೆಲೆ ಬಹುತೇಕ ಒಂದೇ ಆಗಿರುತ್ತದೆ. ಸಿಎನ್‌ಜಿ ಚಾಲಿತ ವಾಹನಗಳು ದೇಶಾದ್ಯಂತ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಅದರಲ್ಲೂ ಸಿಎನ್‌ಜಿ ಚಾಲಿತ ಕಾರುಗಳು ಜನರ ಗಮನ ಸೆಳೆಯುತ್ತಿವೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸಿಎನ್‌ಜಿ ಇಂಧನದ ಮೂಲಕ ಚಲಿಸುವ ವಾಹನಗಳು ಪೆಟ್ರೋಲ್, ಡೀಸೆಲ್ ವಾಹನಗಳಂತೆ ಪರಿಸರವನ್ನು ಕಲುಷಿತಗೊಳಿಸುವುದಿಲ್ಲ. ಸಿಎನ್‌ಜಿ ಪರಿಸರ ಸ್ನೇಹಿ ಇಂಧನವಾಗಿದೆ. ಸಿಎನ್‌ಜಿ ಮೂಲಕ ವಾಹನಗಳನ್ನು ಚಾಲನೆ ಮಾಡುವ ವೆಚ್ಚವು ಪೆಟ್ರೋಲ್, ಡೀಸೆಲ್ ಚಾಲನಾ ವೆಚ್ಚಕ್ಕಿಂತ ಕಡಿಮೆಯಾಗಿದೆ.
ಗಮನಿಸಿ: ಈ ಫೋಟೋಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.


Click it and Unblock the Notifications