571 ಕಾನೂನು ಬಾಹಿರ ಸೈಲೆನ್ಸರ್ ನಾಶಪಡಿಸಿದ ಪೊಲೀಸ್: ವಾಟ್ಸ್ಯಾಪ್‌ನಲ್ಲೂ ದೂರು ನೀಡಬಹುದು!
ಯುವಕರು ತಮ್ಮ ಬೈಕ್‌ಗಳಿಗೆ ಹಲವಾರು ಮಾದರಿಯ ಶಬ್ದಗಳನ್ನು ಹೊರ ತರುವ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು, ಈ ಮೂಲಕ ಹೆದ್ದಾರಿಗಳಲ್ಲಿ ಶೋ ಆಫ್ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಈ ರೀತಿಯ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ಗಳನ್ನು ಬಳಸುವುದು ಕಾನೂನು ಬಾಹಿರವಾಗಿದ್ದರೂ, ಇದರ ಬಳಕೆ ಮಾತ್ರ ಎಗ್ಗಿಲ್ಲದೆ ಹೇರಳವಾಗಿ ನಡೆಯುತ್ತಿದೆ.
ಆದರೆ ಇತ್ತೀಚೆಗೆ ಭಾರತದಲ್ಲಿ ಕೆಲವು ದೊಡ್ಡ ದೊಡ್ಡ ನಗರಗಳಲ್ಲಿ ಪೊಲೀಸರು ಈ ರೀತಿಯಾಗಿ ಕಾನೂನು ಬಾಹಿರವಾಗಿ ತಮ್ಮ ಬೈಕ್‌ಗೆ ಎಕ್ಸಾಸ್ಟ್‌ಗಳನ್ನು ಅಳವಡಿಸುವುದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಪುಣೆ ನಗರದಲ್ಲಿ ಕಾನೂನು ಬಾಹಿರವಾಗಿ ತಮ್ಮ ಬೈಕ್‌ಗೆ ಎಕ್ಸಾಸ್ಟ್‌ಗಳನ್ನು ಅಳವಡಿಸಿದ ಬೈಕ್‌ಗಳನ್ನು ತಡೆಹಿಡಿದು ಬೈಕ್‌ನಿಂದ ಎಕ್ಸಾಸ್ಟ್‌ಗಳನ್ನು ಬಿಚ್ಚಿ ಅದರ ಮೇಲೆ ರೋಲಾರ್ ಅನ್ನು ಓಡಿಸಿ ನಾಶಪಡಿಸುವ ಮೂಲಕ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಹೌದು, ಮಾಹಿತಿಗಳ ಪ್ರಕಾರ ಪುಣೆ ನಗರವೊಂದರಲ್ಲೇ ಸುಮಾರು 571 ಕಾನೂನು ಬಾಹಿರವಾಗಿ ಬಳಸುತ್ತಿದ್ದ ಸೈಲೆನ್ಸರ್‌ಗಳನ್ನು ಬಿಚ್ಚಿ ನಾಶಪಡಿಸಲಾಗಿದ್ದು, ಈ ಸವಾರರ ಮೇಲೆ ದಂಡವನ್ನೂ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಅಧಿಕಾರಿಗಳು ಹೊಸ ಮೊಬೈಲ್ ವಾಟ್ಸಾಪ್ ಸಂಖ್ಯೆಯನ್ನೂ ನೀಡಿದ್ದು, ಇನ್ನು ಮುಂದೆ ಪುಣೆ ನಗರದಲ್ಲಿ ಈ ರೀತಿ ಯಾರಾದರೂ ಕಿವಿ ಗಡಚ್ಚಿಕ್ಕುವ ಶಬ್ದ ಬರುವ ಸೈಲೆನ್ಸರ್ ಬಳಸಿದರೆ ಈ ನಂಬರ್‌ಗೆ ವಾಟ್ಸಾಪ್ ನೀಡುವಂತೆಯೂ ಸೂಚಿಸಿದ್ದಾರೆ.
ಪುಣೆ ನ್ಯೂಸ್9 ಎಂಬ ಇನ್ಸ್ಟಾಗ್ರಾಂ ಪೇಜ್ ಒಂದರಲ್ಲಿ ಇದರ ಸಂಪೂರ್ಣ ವಿಡಿಯೋವನ್ನು ಹರಿಬಿಟ್ಟಿದ್ದು, ಹಲವು ನೆಟ್ಟಿಗರು ಇದಕ್ಕೆ ಪೂರಕವಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಅನ್ನು ಬಳಸಿದ ಬೈಕ್‌ಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಪೊಲೀಸ್, ಮೈದಾನ ವೊಂದರಲ್ಲಿ ಈ ಬೈಕ್‌ಗಳನ್ನು ಸಾಲಾಗಿ ನಿಲ್ಲಿಸಿದ್ದಾರೆ. ಹಲವು ಮೆಕ್ಯಾನಿಕ್‌ಗಳು ಈ ಬೈಕ್‌ಗಳಿಂದ ಎಕ್ಸಾಸ್ಟ್‌ಗಳನ್ನು ಬಿಚ್ಚುತ್ತಿರುವುದನ್ನೂ ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.
ವಿಡಿಯೋವನ್ನು ಗಮನಿಸಿದಾಗ ನಮಗೆ ಕಂಡುಬರುವ ಮತ್ತೊಂದು ವಿಷಯವೆಂದರೆ ಇಲ್ಲಿ ವಶಕ್ಕೆ ಪಡೆದುಕೊಂಡಿರುವ ಬೈಕ್‌ಗಳೆಲ್ಲವೂ ರಾಯಲ್ ಎನ್‌ಫೀಲ್ಡ್ ಕಂಪನಿಯದ್ದಾಗಿವೆ. ಹೌದು ಪುಣೆ ನಗರದಲ್ಲಿ ಹೆಚ್ಚಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಈ ಕಾನೂನು ಬಾಹಿರ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ಎಲ್ಲರಿಗೂ ತೊಂದರೆಯಾಗುವ ರೀತಿಯಲ್ಲಿ ಶಬ್ದ ಮಾಡಿಕೊಂಡು ಬೈಕ್ ರೈಡ್ ಮಾಡುತ್ತಾರೆ.
ಈ ರೀತಿ ಬೈಕ್‌ಗಳಿಂದ ಸೈಲೆನ್ಸರ್ಗಳನ್ನು ಹೊರ ತೆಗೆದು ಸುಮಾರು 571 ಸೈಲೆನ್ಸರ್‌ಗಳನ್ನು ಸಲಾಜಿ ಜೋಡಿಸಿಟ್ಟು ಅದರ ಮೇಲೆ ದೊಡ್ಡದಾದ ರೋಲಾರ್ ಅನ್ನು ಹರಿಸುತ್ತಿರುವುದನ್ನು ಕಾಣಬಹುದಾಗಿದೆ. ಇನ್ನು ಇದನ್ನು ಬಳಸಿದ ಸವಾರರ ಮೇಲೂ ಕ್ರಮ ಕೈಗೊಂಡಿರುವ ಪೊಲೀಸರು, ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಿ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರು ಈ ರೀತಿಯ ಕ್ರಮಗಳನ್ನು ಕರ್ನಾಟಕದಲ್ಲಿಯೂ ತೆಗೆದುಕೊಂಡಿರುವುದನ್ನು ನಾವು ಈ ಹಿಂದೆ ಕಂಡಿದ್ದೇವೆ. ಮುಖ್ಯವಾಗಿ ಪೊಲೀಸರು ಪರಿಸರ ಮಾಲಿನ್ಯ, ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟಲೋಸ್ಕರ ಈ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳು ಬೈಕ್‌ನಲ್ಲಿ ಅಳವಡಿಸಿದ ಮೇಲೆ ಎಂಜಿನ್ ಸದ್ದು ಹೆಚ್ಚಾಗಿ ಓಡಿಸುವವರು ಒಂದು ರೀತಿ ಖುಷಿಯನ್ನು ಅನುಭವಿಸಿದರೂ ಇತರರಿಗೆ ಇದರಿಂದ ಕಿರಿಕಿರಿ ಆಗುವುದು ಖಂಡಿತಾ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications