ಏನೋ ಮಾಡಲು ಹೋಗಿ.. ಟ್ರ್ಯಾಕ್ಟರ್ ಸೀಜ್: ಜೀವನವಿಡಿ ನೆನಪಿನಲ್ಲಿಟ್ಟುಕೊಳ್ಳುವಷ್ಟು ಬಿತ್ತು ಭಾರೀ ದಂಡ

ಕೆಲವರಿಗೆ ನಾವು ಬೇರೆಯವರಿಗಿಂತ ಭಿನ್ನ ಎಂದು ತೋರಿಸಿಕೊಳ್ಳುವ ಚಾಳಿ ಇರುತ್ತದೆ. ಅದಕ್ಕಾಗಿ ತಮ್ಮದೇ ಶೈಲಿಯ ಉಡುಪು, ಹಾವ-ಭಾವವನ್ನು ರೂಢಿಸಿಕೊಂಡಿರುತ್ತಾರೆ. ಮತ್ತೆ ಹಲವು ಮಂದಿ ಬೇರೆಯವರನ್ನು ಆಕರ್ಷಿಸಲು ತಾವು ಬಳಸುವ ವಾಹನದಲ್ಲಿ ವಿವಿಧ ಮಾಡಿಫೈ ಮಾಡಿರುತ್ತಾರೆ. ಸದ್ಯ, ಅಂತಹದ್ದೇ ಕೆಲಸ ಮಾಡಿದ್ದ ಯುವಕನೊಬ್ಬ ಭಾರೀ ದಂಡ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾರ್ವಜನಿಕ ರಸ್ತೆಗಳಲ್ಲಿ ವಾಯು ಹಾಗೂ ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ವಾಹನ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಾರ್ಯದಲ್ಲಿ ಪಂಜಾಬ್ ಪೊಲೀಸರು ನಿರತರಾಗಿದ್ದಾರೆ. ಇದೀಗ, ಟ್ರಾಕ್ಟರ್ ಅನ್ನು ಮಾಡಿಫೈ ಮಾಡಿ, ಅದರಲ್ಲಿ 52 ಸ್ಪೀಕರ್ ಸೌಂಡ್ ಸಿಸ್ಟಮ್ ಅವಳಡಿಸಿದ ಯುವಕನ್ನು ತಮ್ಮ ವಶಕ್ಕೆ ಪಡೆದು, ಆತನ ಟ್ರಾಕ್ಟರ್ ಸೀಜ್ ಮಾಡಿ, ಭಾರೀ ಮೊತ್ತದ ದಂಡ ವಿಧಿಸಿದ್ದಾರೆ.

ಏನೋ ಮಾಡಲು ಹೋಗಿ.. ಟ್ರ್ಯಾಕ್ಟರ್ ಸೀಜ್: ಜೀವನವಿಡಿ ನೆನಪಿನಲ್ಲಿಟ್ಟುಕೊಳ್ಳುವಷ್ಟು ಬಿತ್ತು ಭಾರೀ ದಂಡ

ಅಷ್ಟಕ್ಕೂ ಈ ಘಟನೆ ಪಂಜಾಬ್‌ ರಾಜ್ಯದ ಖನ್ನಾ ಗ್ರಾಮದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಲು, ಹೆವಿ ಡ್ಯೂಟಿ ಟ್ರಕ್‌ ಎತ್ತರವನ್ನೇ ಮೀರಿಸುವಷ್ಟು (10-12 ಅಡಿ) ಸ್ಪೀಕರ್‌ ಮತ್ತು ಆಂಪ್ಲಿಫೈಯರ್‌ ಒಳಗೊಂಡ ಆಡಿಯೊ ಸಿಸ್ಟಮ್ ಟ್ರಾಕ್ಟರ್‌ನ ಹಿಂಭಾಗದಲ್ಲಿ ಯುವಕನೊಬ್ಬ ಅಳವಡಿಸಿದ್ದಾನೆ. ಎಲ್ಲೋ ದೂರದ ತನ್ನ ಜಮೀನಿನಲ್ಲಿ ಈ ರೀತಿಯಾಗಿ ಬದಲಾವಣೆ ಮಾಡಿದ್ದ ಟ್ರಾಕ್ಟರ್ ಚಲಾಯಿಸಿದ್ದರೆ, ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ.

ಆದರೆ, ಆ ಯುವಕ ಟ್ರಾಕ್ಟರ್‌ನಲ್ಲಿ ಅವಳಡಿಸಿದ್ದ ಆಡಿಯೊ ಸಿಸ್ಟಮ್ ನಿಂದ ಜೋರಾಗಿ ಮ್ಯೂಸಿಕ್ ಪ್ಲೇ ಮಾಡಿ, ಸಮೀಪದ ಶಾಲಾ-ಕಾಲೇಜುಗಳ ಪಾಠ ಪ್ರವಚನಗಳಿಗೂ ತೊಂದರೆ ಮಾಡಿದ್ದಾನೆ. ಜೊತೆಗೆ ಹೆಚ್ಚಿನ ಶಬ್ದ ಮಾಡುವ ಹಾರ್ನ್ ಕೂಡ ಟ್ರಾಕ್ಟರ್‌ನಲ್ಲಿತ್ತು. ಪೊಲೀಸರು, ಆತನನ್ನು ತಮ್ಮ ವಶಕ್ಕೆ ಪಡೆಯಲು ಮುಂದಾದಾಗ ಅತಿ ವೇಗದಲ್ಲಿ ಟ್ರಾಕ್ಟರ್‌ ಚಲಾಯಿಸಿಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದು, ಚೇಸ್ ಮಾಡಿ, ಕಡೆಗೂ ಆತನನ್ನು ವಶಕ್ಕೆ ಪಡೆದಿದ್ದಾರೆ.

ಆ ಬಳಿಕ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದು, ಟ್ರಾಕ್ಟರ್‌ ಚಲಾಯಿಸುತ್ತಿದ್ದ ಯುವಕನ ಮೇಲೆ ಈಗಾಗಲೇ ಆರು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಇನ್ಸೂರೆನ್ಸ್, ಪೊಲ್ಲ್ಯೂಷನ್ ಹಾಗೂ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಹೊಂದಿರದೇ ವಾಹನ ಚಲಾಯಿಸಿದ ಹಿನ್ನೆಲೆ, ಕೇಸ್ ಗಳು ದಾಖಲಾಗಿವೆ. ವಿವಿಧ ಪ್ರಕರಣಗಳಿಂದ ಟ್ರಾಕ್ಟರ್‌ ಮಾಲೀಕ ಸರಿ-ಸುಮಾರು ರೂ.1.5-2 ಲಕ್ಷ ದಂಡ ಕಟ್ಟಬೇಕಾಗದೆ.

ನೀವು ವಾಹನ ಮಾಡಿಫೈ ಮಾಡಬಹುದೇ?.. ಹೌದು, ಆದರೆ, ಮೂಲ ತಯಾರಕರು ಮಾಡಿರುವ ವಿನ್ಯಾಸಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಬರದಂತೆ, ಕೆಲವು ಬದಲಾವಣೆ ಮಾಡಬಹುದು. ಅದು ನಿಗದಿತ ಮಿತಿಗೆ ಒಳಪಟ್ಟಿರಬೇಕು. (ಕಲರ್ ಬದಲಾವಣೆ, ರೈನ್ ವೈಸರ್ಸ್ ಮತ್ತು ಬಂಪರ್ ಕಾರ್ನರ್ ಪ್ರೊಟೆಕ್ಟರ್‌ಗಳಂತಹ ಮಾರ್ಪಾಡು ಮಾಡಬಹುದು). RTO ಅನುಮತಿ ಪಡೆದು ಎಂಜಿನ್ ನಲ್ಲೂ ಕೆಲವು ಬದಲಾವಣೆ ಮಾಡಬಹುದು.

ಒಂದೊಮ್ಮೆ ಇವುಗಳನ್ನು ಬಿಟ್ಟು, ಬೇರೆ ಯಾವುದೇ ತರಹ ಮಾಡಿಫೈ ಮಾಡಿದರೆ, ಪ್ರತಿಯೊಂದು ಮಾರ್ಪಾಡಿಗೂ ರೂ.5,000 ದಂಡ ಅಥವಾ ಜೈಲು ಶಿಕ್ಷೆ ಅನುಭವಿಸಬೇಕು. ಇನ್ನು, ಪಂಜಾಬ್‌ನ ಈ ಘಟನೆಯಲ್ಲೂ ಯುವಕ ಬೇಗ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಗಳಿಸಲು ಹೋಗಿ, ಟ್ರ್ಯಾಕ್ಟರ್ ಮೇಲೆ ದೊಡ್ಡ ಗಾತ್ರದ ಸ್ವೀಕರ್ ಅಳವಡಿಸಿ, ಪೊಲೀಸರು ಅತಿಥಿಯಾಗಿದ್ದು, ಸರಿಯಾಗಿಯೇ ದಂಡ ಕಟ್ಟಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Monday, May 29, 2023, 11:37 [IST]
English summary
Instagrammer modifies tractor police seizes imposes fine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+