ಡಾಭಾ ಆಗಿ ಪರಿವರ್ತನೆಯಾದ ದುಬಾರಿ ಫಾರ್ಚುನರ್: ಈ ಕಾರು ಬೆಲೆಗೆ ಸಿಗುವುದು ಹೇಗೆ ಗೊತ್ತಾ?
ಕೆಲವು ವರ್ಷಗಳಿಂದ ಭಾರತದಲ್ಲಿ ಉದ್ಯಮ ಆರಂಭಿಸುವವರ ಸಂಖ್ಯೆ ಹೆಚ್ಚಾಗಿದೆ. ಅವರಲ್ಲಿ ಹೆಚ್ಚಿನವರು ತಮ್ಮ ವ್ಯವಹಾರವನ್ನು ಇತರರಿಂದ ಪ್ರತ್ಯೇಕಿಸಲು ನೋಡುತ್ತಿದ್ದಾರೆ. ಕೆಲವರು ಈಗಾಗಲೇ ವಿಭಿನ್ನ ಉದ್ಯಮ ಪ್ರಾರಂಭಿಸಿ ಭಾರೀ ಯಶಸ್ವಿಯನ್ನು ಕಂಡಿದ್ದಾರೆ. ಉದಾಹರಣೆಗೆ ಕೆಲವರು ಈಗಾಗಲೇ ನಮ್ಮ ನಗರದಲ್ಲಿ ವಿಭಿನ್ನವಾದ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ.
ವಿಭಿನ್ನ ರೆಸ್ಟೋರೆಂಟ್‌ಗಳನ್ನು ಪ್ರಾರಂಬಿಸಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರವನ್ನು ಪಡೆಯುತ್ತಾರೆ. ಇದೇ ರೀತಿ ಟೊಯೊಟಾ ಫಾರ್ಚುನರ್ ಎಸ್‍ಯುವಿಯನ್ನು ರೆಸ್ಟೋರೆಂಟ್ ಆಗಿ ಪರಿವರ್ತಿಸಿದ್ದಾರೆ. ವೈರಲ್ ಆದ ವೀಡಿಯೊದಲ್ಲಿ ವ್ಯಕ್ತಿಯೊಬ್ಬರು ಊಟ ಬಡಿಸುತ್ತಿರುವುದನ್ನು ತೋರಿಸುತ್ತದೆ. ಈ ವೀಡಿಯೊದಲ್ಲಿರುವುದು ಹಳೆಯ ಫಾರ್ಚುನರ್ ಆಗಿದೆ. ನಾವು ನೋಂದಣಿ ಸಂಖ್ಯೆ ಅಥವಾ ಮಾದರಿಯನ್ನು ಸರಿಯಾಗಿ ಕಾಣದ ಕಾರಣ, ಈ ವಾಹನದ ತಯಾರಿಕೆಯ ವರ್ಷದ ಬಗ್ಗೆ ನಮಗೆ ಮಾಹಿತಿ ಸಿಕ್ಕಿಲ್ಲ.

ಇನ್ನೋವಾ ಹೈಕ್ರಾಸ್ ಫಾರ್ಚುನರ್‌ಗಿಂತ ಹೆಚ್ಚು ಒರಟಾಗಿ ಕಾಣುವಂತೆ ಮರುರೂಪಿಸಿದೆ ಫಾರ್ಚೂನರ್ ವಾಹನದ ಬೂಟ್‌ನಲ್ಲಿ ಆಹಾರದಿಂದ ತುಂಬಿದ ಡ್ರಮ್‌ಗಳೊಂದಿಗೆ ರಸ್ತೆಬದಿಯಲ್ಲಿ ನಿಲ್ಲಿಸಲಾಗಿದೆ. ಕೆಲವು ವಿಭಿನ್ನ ಆಯ್ಕೆಗಳಿವೆ ಆದರೆ ವೀಡಿಯೊ ಕೇವಲ ಒಂದು ರೀತಿಯ ಆಹಾರವನ್ನು ತೋರಿಸುತ್ತದೆ. ಈ ಟೊಯೊಟಾ ಫಾರ್ಚುನರ್ (Toyota Fortuner) ರೆಸ್ಟೊರೆಂಟ್‌ನ ಸ್ಥಳವು ಪಂಜಾಬ್‌ನಲ್ಲಿರುವ ಸಾಧ್ಯತೆಯಿದೆ.
10 ವರ್ಷಗಳ ಡೀಸೆಲ್ ವಾಹನ ನಿಷೇಧ ಮತ್ತು 15 ವರ್ಷಗಳ ಹಳೆಯ ಪೆಟ್ರೋಲ್ ವಾಹನ ನಿಷೇಧದಿಂದಾಗಿ ದೆಹಲಿ-ಎನ್‌ಸಿಆರ್‌ನ ನಿವಾಸಿಗಳು ಅಂತಹ ಹಲವಾರು ವಾಹನಗಳನ್ನು ಮಾರಾಟ ಮಾಡಿದ್ದಾರೆ. ಅವುಗಳನ್ನ್ ದೆಹಲಿ-ಎನ್‌ಸಿಆರ್‌ನಲ್ಲಿ ಮರು-ನೋಂದಣಿ ಮಾಡಲು ಮತ್ತು ಬಳಸಲು ಸಾಧ್ಯವಿಲ್ಲದ ಕಾರಣ, ನೆರೆಯ ರಾಜ್ಯಗಳ ಜನರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

ಈ ಫಾರ್ಚುನರ್‌ನ ಮಾಡೆಲ್ ಮತ್ತು ಒಟ್ಟಾರೆ ಸ್ಥಿತಿಯ ಆಧಾರದ ಮೇಲೆ, ಇದು ಕೇವಲ ಒಂದೆರಡು ಲಕ್ಷದ ಬೆಲೆಗೆ ಖರೀದಿಸರಬಹುದು. ರಸ್ತೆಗಳಲ್ಲಿ ಹೀಗೆ ಕಡಿಮೆ ಬೆಲೆಗೆ ಖರೀದಿಸಿ ವಾಹನಗಳನ್ನು ರೆಸ್ಟೋರೆಂಟ್ ಆಗಿ ಮಾರ್ಪಾಡಿಸಿದ್ದಾರೆ. ಅವಗಳು ಸರ್ಕಾರದ ಪರಿಶೀಲನೆ ಮತ್ತು ತೆರಿಗೆಗಳನ್ನು ಪಾವತಿಸುವ ಅಗತ್ಯವಿಲ್ಲ. ಕಡಿಮೆ ವೆಚ್ಚದಲ್ಲಿ ರೆಸ್ಟೋರೆಂಟ್ ಪ್ರಾರಂಭಿಸಲು ಉತ್ತಮ ಮಾರ್ಗವಾಗಿದೆ.
ಇನ್ನು ಇತ್ತೀಚೆಗೆ ದೆಹಲಿಯ ವ್ಯಕ್ತಿಯೊಬ್ಬರು ತಮ್ಮ ಹೊಸ ಕಿಯಾ ಕಾರೆನ್ಸ್ (Kia Carens) ಕಾರಿನ ಹಿಂಭಾಗದಿಂದ ಹೋಮ್ ಮೇಡ್ ಫುಡ್ ಮಾರಾಟ ಮಾಡುತ್ತಿರುವ ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋವನ್ನು ಹರ್‌ಸಿಮ್ರಾನ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿರುವ ವ್ಲಾಗರ್ ತನ್ನ ಕಾರಿನ ಹಿಂಭಾಗದಿಂದ ಆಹಾರವನ್ನು ಮಾರಾಟ ಮಾಡುವ ವ್ಯಕ್ತಿಯು ಮಾತನಾಡಿದ್ದಾರೆ.

ಕಾರು ಮಾಲೀಕರು ವಾಸ್ತವವಾಗಿ ತಮ್ಮ ಕಿಯಾ ಕ್ಯಾರೆನ್ಸ್‌ನ ಹಿಂಭಾಗದಲ್ಲಿ ಹೋಮ್ ಮೇಡ್ ಫುಡ್ ಮಾರಾಟ ಮಾಡುತ್ತಿದ್ದಾರೆ. ತನ್ನ ಕಾರಿನ ಹಿಂಬದಿಯಿಂದ ಮಾರಾಟ ಮಾಡುವ ಎಲ್ಲಾ ಆಹಾರವು ಅವರ ಹೆಂಡತಿಯು ಅಡುಗೆ ಮಾಡಿರುವುದು. ಇವರು ಕಾರು ನಿಲ್ಲಿಸಿ ಮಾರಾಟ ಮಾಡುವ ನಿಖರವಾದ ಸ್ಥಳ ದೆಹಲಿಯಲ್ಲಿ ಎಲ್ಲಿ ಇರುವುದು ಎಂಬುವುದು ತಿಳಿದು ಬಂದಿಲ್ಲ. ಅವರು ಸಂಪೂರ್ಣ ವ್ಯವಹಾರವನ್ನು ಹೇಗೆ ಪ್ರಾರಂಭಿಸಿದರು ಅಥವಾ ಅದರ ಹಿಂದಿನ ಕಾರಣವನ್ನು ವೀಡಿಯೊದಲ್ಲಿ ಈ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ.
ಕಾರಿನ ಮಾಲೀಕರು ಈ ಕಿಯಾ ಕ್ಯಾರೆನ್ಸ್‌ನ ಮೂರನೇ ಸಾಲಿನ ಸೀಟುಗಳನ್ನು ಮಡಚುತ್ತಾರೆ ಮತ್ತು ಹಿಂಭಾಗದಿಂದ ಗ್ರಾಹಕರಿಗೆ ಆಹಾರವನ್ನು ಮಾರಾಟ ಮಾಡುತ್ತಾರೆ. ಕಿಯಾ ಕಾರು ಪ್ರೀಮಿಯಂ, ಪ್ರೆಸ್ಟಿಜ್, ಪ್ರೆಸ್ಟಿಜ್ ಪ್ಲಸ್, ಲಗ್ಷುರಿ ಮತ್ತು ಲಗ್ಷುರಿ ಪ್ಲಸ್ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಕಾರು ಖರೀದಿಗೆ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications