ಜೋಳ, ಸೋಯಾಬೀನ್ ನೀಡಿ ಖರೀದಿಸಬಹುದು ಐಷಾರಾಮಿ ಟೊಯೊಟಾ ಫಾರ್ಚೂನರ್!

ಟೊಯೊಟಾ ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಭಾರತದಲ್ಲಿಯು ಕೂಡ ಟೊಯೊಟಾ ಕಂಪನಿಯು ಹಲವು ಕಾರುಗಳನ್ನು ಮಾರಾಟ ಮಾಡುತ್ತಿದೆ. ಇನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವು ಜನಪ್ರಿಯ ಕಾರುಗಳನ್ನು ಟೊಯೊಟಾ ಕಂಪನಿಯು ಮಾರಾಟ ಮಾಡುತ್ತಿದೆ.

ಜೋಳ, ಸೋಯಾಬೀನ್ ನೀಡಿ ಖರೀದಿಸಬಹುದು ಐಷಾರಾಮಿ ಟೊಯೊಟಾ ಫಾರ್ಚೂನರ್!

ಬ್ರೆಜಿಲ್‌ನಲ್ಲಿ ಟೊಯೊಟಾ ಕಂಪನಿಯು ಹೊಸ ಟೊಯೊಟಾ ಬಾರ್ಟರ್ ಎಂಬ ನೇರ ಮಾರಾಟ ಚಾನಲ್ ಅನ್ನು ಪ್ರಾರಂಭಿಸಿದೆ. ಟೊಯೊಟಾ ಬಾರ್ಟರ್ ಕೃಷಿ ಕ್ಷೇತ್ರದ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ. ಉಳಿದ ಗ್ರಾಹಕರು ಸಾಮಾನ್ಯವಾಗಿ ಟೊಯೊಟಾ ಡೀಲರ್ ಬಳಿಯಿಂದ ಕಾರುಗಳನ್ನು ಖರೀದಿಸಬೇಕಾಗಿದೆ, ಟೊಯೊಟಾ ಬ್ರೆಜಿಲ್‌ನಲ್ಲಿ ಪ್ರಸ್ತುತ ಕೃಷಿ ಉದ್ಯಮ ವಲಯದಲ್ಲಿ ತನ್ನ ನೇರ ಮಾರಾಟದಲ್ಲಿ ಶೇ.16 ರಷ್ಟು ಪಾಲು ಇದೆ ಎಂದು ಹೇಳಿಕೊಂಡಿದೆ.

ಜೋಳ, ಸೋಯಾಬೀನ್ ನೀಡಿ ಖರೀದಿಸಬಹುದು ಐಷಾರಾಮಿ ಟೊಯೊಟಾ ಫಾರ್ಚೂನರ್!

ಈ ಹೊಸ ಯೋಜನೆಯಿಂದ ಮತ್ತಷ್ಟು ಕೃಷಿಗರಿಗೆ ಸಹಾಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಟೊಯೊಟಾ ಬಾರ್ಟರ್ ಎಂದು ಕರೆಯಲ್ಪಡುವ ಈ ಯೋಜನೆಯಲ್ಲಿ ಗ್ರಾಹಕರಿಗೆ ಹೊಸ ವಾಹನ ಖರೀದಿಸಲು ಜೋಳ ಮತ್ತು ಸೋಯಾಬೀನ್ ಅನ್ನು ಪಾವತಿಸಲು ಅನುವು ಮಾಡಿಕೊಡುತ್ತದೆ.

ಜೋಳ, ಸೋಯಾಬೀನ್ ನೀಡಿ ಖರೀದಿಸಬಹುದು ಐಷಾರಾಮಿ ಟೊಯೊಟಾ ಫಾರ್ಚೂನರ್!

ಜೋಳ ಮತ್ತು ಸೋಯಾಬೀನ್ ಬೆಲೆ ವಾಹನದ ಬೆಲೆಯಷ್ಟೇ ಇರಬೇಕು. ಅಂದರೆ ವಾಹನದ ಬೆಲೆಯ ಮೌಲ್ಯದ ಜೋಳ ಮತ್ತು ಸೋಯಾಬೀನ್ ಅನ್ನು ನೀಡಬೇಕಾಗುತ್ತದೆ.ಟೊಯೊಟಾದ ಹಿಲುಕ್ಸ್ ಪಿಕಪ್ ಟ್ರಕ್, ಕೊರೊಲ್ಲಾ ಕ್ರಾಸ್ ಎಸ್‍ಯುವಿ ಮತ್ತು SW4 SV ನಂತಹ ಮಾದರಿಗಳನ್ನು ಈ ಯೋಜನೆಯಡಿ ಖರೀದಿಸಬಹುದು. SW4 ಮೂಲತಃ ಭಾರತದಲ್ಲಿ ಲಭ್ಯವಿರುವ ಟೊಯೋಟಾ ಫಾರ್ಚೂನರ್ ಆಗಿದೆ.

ಜೋಳ, ಸೋಯಾಬೀನ್ ನೀಡಿ ಖರೀದಿಸಬಹುದು ಐಷಾರಾಮಿ ಟೊಯೊಟಾ ಫಾರ್ಚೂನರ್!

ಇನ್ನು ಗ್ರಾಹಕರು ನೀಡುವ ಜೋಳ ಮತ್ತು ಸೋಯಾಬೀನ್ ಉತ್ತಮ ಗುಣಮಟ್ಟದದಿಂದ ಕೂಡಿರಬೇಕು. ಅಲ್ಲದೇ ಅವರು ಜೋಳ ಮತ್ತು ಸೋಯಾಬೀನ್ ಅನ್ನು ಯೋಗ್ಯ ಪ್ರದೇಶದಲ್ಲಿಯೇ ಬೆಳದಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಾರೆಟೊಯೊಟಾ ಬಾರ್ಟರ್ ನಂತಹ ಯೋಜನೆ ಟೊಯೊಟಾ ಕಂಪನಿಯ ಹೊಸ ಕಾರ್ಯಕ್ರಮವಲ್ಲ.

ಜೋಳ, ಸೋಯಾಬೀನ್ ನೀಡಿ ಖರೀದಿಸಬಹುದು ಐಷಾರಾಮಿ ಟೊಯೊಟಾ ಫಾರ್ಚೂನರ್!

ಇದನ್ನು ಮೊದಲು 2019 ರಲ್ಲಿ ಪ್ರಾಯೋಗಿಕ ಯೋಜನೆಯಾಗಿ ಪರಿಚಯಿಸಲಾಯಿತು. ಈಗ, ಕಾರು ತಯಾರಕರು ಈ ವಿಶಿಷ್ಟ ಮಾರಾಟ ವಿಧಾನವನ್ನು ಅಧಿಕೃತ ಮಾಡಿದ್ದಾರೆ. ಈ ಯೋಜನೆಯು ಬ್ರೆಜಿಲ್‌ನ ಬಹಿಯಾ, ಗೊಯಿಸ್, ಮ್ಯಾಟೊ ಗ್ರೊಸೊ, ಮಿನಾಸ್ ಗೆರೈಸ್, ಪಿಯೌ ಮತ್ತು ಟೊಕಾಂಟಿನ್ಸ್ ಎಂಬ ಆಯ್ದ ರಾಜ್ಯಗಳಲ್ಲಿ ಲಭ್ಯವಿದೆ. ವಾಹನ ತಯಾರಕರು ಇಡೀ ಬ್ರೇಜಿಲ್ ದೇಶಕ್ಕೆ ಸೇವೆಯನ್ನು ವಿಸ್ತರಿಸಲು ಯೋಜಿಸುತ್ತಿದ್ದಾರೆ.

ಜೋಳ, ಸೋಯಾಬೀನ್ ನೀಡಿ ಖರೀದಿಸಬಹುದು ಐಷಾರಾಮಿ ಟೊಯೊಟಾ ಫಾರ್ಚೂನರ್!

ಇನ್ನು ಟೊಯೊಟಾ ಕಂಪನಿಯು ಭಾರತದಲ್ಲಿ2021ರ ಜುಲೈ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ಕಳೆದ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 13,105 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಜೋಳ, ಸೋಯಾಬೀನ್ ನೀಡಿ ಖರೀದಿಸಬಹುದು ಐಷಾರಾಮಿ ಟೊಯೊಟಾ ಫಾರ್ಚೂನರ್!

ಟೊಯೊಟಾ ಕಂಪನಿಯು ಈ ವರ್ಷದ ಜೂನ್ ತಿಂಗಳಿನಲ್ಲಿ 8801 ಯುನಿಟ್ ಗಳನ್ನು ಮಾರಾಟಗೊಳಿಸಿತ್ತು. ಇದು ಜುಲೈನಿಂದ ಮಾರಾಟ ಸಂಖ್ಯೆಗೆ ಹೋಲಿಸಿದರೆ 4,304 ಯುನಿಟ್‌ಗಳು ಕಡಿಮೆಯಾಗಿದೆ. ಇದು ಮಾಸಿಕ ಮಾರಾಟದಲ್ಲಿ ಶೇ.49 ರಷ್ಟು ಬೆಳವಣಿಗೆಯನ್ನು ಸಾಧಿಸುತ್ತದೆ.

ಜೋಳ, ಸೋಯಾಬೀನ್ ನೀಡಿ ಖರೀದಿಸಬಹುದು ಐಷಾರಾಮಿ ಟೊಯೊಟಾ ಫಾರ್ಚೂನರ್!

ಇನ್ನು ಕಳೆದ ವರ್ಷದ ಜುಲೈ ತಿಂಗಳಿನಲ್ಲಿ 5,386 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು 2021ರ ಜುಲೈ ತಿಂಗಳ ಮಾರಾಟದ ಅಂಕಿಅಂಶಗಳಿಗಿಂತ 7719 ಯುನಿಟ್‌ಗಳಷ್ಟು ಕಡಿಮೆಯಾಗಿದೆ. ಇದು ವರ್ಷದಿಂದ ವರ್ಷಕ್ಕೆ ಶೇ.143 ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ಪೂರ್ಣ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.

ಜೋಳ, ಸೋಯಾಬೀನ್ ನೀಡಿ ಖರೀದಿಸಬಹುದು ಐಷಾರಾಮಿ ಟೊಯೊಟಾ ಫಾರ್ಚೂನರ್!

ಟೊಯೊಟಾ ಇತ್ತೀಚೆಗೆ ತನ್ನ ಫಾರ್ಚೂನರ್ ಎಸ್‍ಯುವಿಯ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಪೂರ್ಣ ಗಾತ್ರದ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ದೀರ್ಘಕಾಲದಿಂದ ಅಗ್ರಸ್ಥಾನದಲ್ಲಿದೆ.ಈ ಫಾರ್ಚೂನರ್ ಎಸ್‍ಯುವಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಜೋಳ, ಸೋಯಾಬೀನ್ ನೀಡಿ ಖರೀದಿಸಬಹುದು ಐಷಾರಾಮಿ ಟೊಯೊಟಾ ಫಾರ್ಚೂನರ್!

ಈ ಎಸ್‍ಯುವಿ 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.7-ಲೀಟರ್ ಪೆಟ್ರೋಲ್ ಎಂಜಿನ್ 166 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಜೋಳ, ಸೋಯಾಬೀನ್ ನೀಡಿ ಖರೀದಿಸಬಹುದು ಐಷಾರಾಮಿ ಟೊಯೊಟಾ ಫಾರ್ಚೂನರ್!

ಇನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾದ ಡೀಸೆಲ್ ಎಂಜಿನ್ 177 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಆರು-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್ ಬಾಕ್ಸ್ ಜೋಡಿಸಲಾದ ಯುನಿಟ್ 201 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Most Read Articles

Kannada
English summary
Purchase toyota suv in exchange for corn and soybean in brazil details
Story first published: Friday, August 6, 2021, 20:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X